ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆ ನಾಲ್ಕು ಕೈಗಳು - ಕವಿತೆ - ಅನಂತ ಕುಣಿಗಲ್

                      (ಚಿತ್ರ ಕೃಪೆ : ಗೂಗಲ್) ಆ ನಾಲ್ಕು ಕೈಗಳು ಬೇರೆ ಆವ ಅವಕಾಶವೂ ಇಲ್ಲದೆ ಕಣ್ಣೀರಿನೊಂದಿಗೆ ಸುಮ್ಮನೆ ಆಕಾಶ ನೋಡುತ್ತಿದ್ದೆ ಚಿಕ್ಕಂದಿನಲ್ಲಿ ಚುಕ್ಕಿ ಎಣಿಸುತ್ತಿದ್ದೆ ಈಗ ಆ ಚುಕ್ಕಿಗಳು ಕಾಣೆಯಾಗಿವೆ ಚಿಕ್ಕ ಕಣ್ಗಳಿಗೆ ಚಂದ್ರ ದೊಡ್ಡದಾಗಿದ್ದ ಇಂದು ಆತನ ಬೆಳಕು ಸಾಲದಾಗಿದೆ ಮರಗಿಡಗಳೂ ನಿಶಬ್ಧವಾಗಿವೆ ಒಳಗೊಳಗೆ ಅತ್ತು ಕಣ್ಣೀರ ನುಂಗುತ್ತಿವೆ ನನ್ನ ಅಸಹಾಯಕತೆಯ ನೋಡಿ ಕಲ್ಲು-ಮಣ್ಣು ನನಗೆ ಹಾಸಿಗೆಯಾಗಿವೆ ಮುಡಿಯ ಮಲ್ಲಿಗೆ ಬಾಡಿದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದುದರ ಫಲವಾಗಿ ಸುಗಂಧ ಸೂಸಬೇಕಾದ ಮೈಯಿಂದ ಬಿಸಿ ಬೆವರು ಶಾಂತವಾಗಿ ಹರಿಯುತ್ತಿದೆ ಆ ನಾಲ್ಕು ಬಾಯಿಗಳ ದುರ್ನಾತ ನನ್ನ ಮೂಗನ್ನೇ ಕೊಳೆಯುವಂತೆ ಮಾಡಿ ಕೈಗಳೆರಡು ನನ್ನ ರಟ್ಟೆಯನ್ನು ಬಲವಾಗಿ ಹಿಡಿದಿವೆ ಕೊಸರಲು ಆಗುತ್ತಿಲ್ಲ ಒಣಗಿದ ಗಂಟಲನ್ನು ಎಂಜಲಿನಿಂದ ತಣಿಸುತ್ತಿದ್ದಾರೆ ಕಿವಿಗಳಿಗೆ ಅವರ ಶ್ರಮ ನಿರಂತರವಾಗಿ ಕೇಳಿಸುತ್ತಿದೆ ಕೊರಳನ್ನು ಯಾಕೆ ಬಿಟ್ಟಿದ್ದಾರೋ.. ಜೀವಂತ ಇರಬೇಕಲ್ಲಾ.. ತೃಷೆ ತೀರುವವರೆಗೆ! ಎದೆಗಳೆರಡನ್ನೂ ಹೀರಿದ್ದಾರೆ ಇನ್ನೇನು ಉಳಿದಿಲ್ಲ ಅಲ್ಲಿ ಇನ್ಯಾವುದೋ ಕೈಗಳು ಕಾಲನ್ನು ಅಗಲಿಸಿ ಹಿಡಿದಿವೆ ನನ್ನ ಮೇಲೆ ಬಿದ್ದಿರುವ ನಾಲ್ಕು ಜನರೇ ನನಗೆ ವಸ್ತ್ರವಾಗಿದ್ದಾರೆ ಇಂಚಿಂಚೂ ಬಿಡದೆ ಕಚ್ಚಿ ರಕ್ತದ ರುಚಿ ನೋಡುತ್ತಿದ್ದಾರ...

ಅವ್ವ ಪುಸ್ತಕಾಲಯ ಸಮಿತಿ ಸದಸ್ಯರ ಅಂತಿಮ ಆಯ್ಕೆ ಪಟ್ಟಿ - ಅವ್ವ ಪುಸ್ತಕಾಲಯ

2020 ರ ಕೋವಿಡ್ ಕಾರಣದ ಲಾಕ್ಡೌನ್ ಇಂದಾಗಿ ಸಾಹಿತ್ಯಾಸಕ್ತರ ಕ್ರಿಯಾಶೀಲತೆಯನ್ನು ಉದ್ದೀಪನಗೊಳಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ " ಅವ್ವ ಪುಸ್ತಕಾಲಯ "  ತಂಡದ ಇದುವರೆಗಿನ ಬರಹಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತಿಳಿಯಲು  avvapustakaalaya.blogspot.com  ಗೆ ಭೇಟಿ ನೀಡಬಹುದು. ಮತ್ತು, ಅವ್ವ ಪುಸ್ತಕಾಲಯಕ್ಕೆ ಸಂಬಂಧಿಸಿದ ವಿಚಾರಣೆಗಾಗಿ  avvapustakaalaya@gmail.com  ಗೆ ಬರೆಯಬಹುದು. ಈವರೆಗೆ ಕನ್ನಡ ಕಲರವ (ಸಾಹಿತ್ಯಾಸಕ್ತ ಒಡನಾಡಿಗಳ ತಂಡ) ಮತ್ತು ಅವ್ವ ಪುಸ್ತಕಾಲಯ ಎರಡು ತಂಡಗಳ ಸಹಯೋಗದಲ್ಲಿ ಹಲವಾರು ಸಾಹಿತ್ಯಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದೇವೆ. 1. ಕ್ಲಬ್ ಹೌಸ್ ನಲ್ಲಿ ಅವ್ವ ಪುಸ್ತಕಾಲಯ ಸಾಹಿತ್ಯಾಸಕ್ತರ ಸಮಾಗಮ ಸರಣಿ - ಹರಟೆ & ವಿಚಾರ ವಿನಿಮಯ ಕಾರ್ಯಕ್ರಮ https://bit.ly/3jvgos8 2. ಕನ್ನಡ ಕಲರವ ಸ್ಪರ್ಧೆಗಳು (ಮೂರು ತಿಂಗಳಿಗೊಮ್ಮೆ ನಡೆಯುವ ಸಾಹಿತ್ಯ ಸ್ಪರ್ಧೆಗಳು) https://bit.ly/3zyDgwD 3. ಕನ್ನಡ ಕಲರವ ವಾರ್ಷಿಕೋತ್ಸವ ಸ್ಪರ್ಧೆಗಳು 4. ಅವ್ವ ಪ್ರಶಸ್ತಿ https://bit.ly/3gLjiHv 5. ಕನ್ನಡ ಕಲರವ ಇತರ ಸಾಹಿತ್ಯ ಚಟುವಟಿಕೆಗಳು ಈ ಮೇಲಿನ ಎಲ್ಲಾ ಕಾರ್ಯಕ್ರಮಗಳು ತಪ್ಪದೆ ಯಶಸ್ವಿಯಾಗಲು ಕಾರಣಕರ್ತರಾದ ಎಲ್ಲಾ ಸಾಹಿತ್ಯಾಸಕ್ತರಿಗೂ ಅವ್ವ ಪುಸ್ತಕಾಲಯ ಧನ್ಯವಾದಗಳನ್ನು ತಿಳಿಸಲು ಇಚ್ಚಿಸಿದೆ. ಇನ್ನು ಮುಂದೆಯೂ ನಿ...

ನಾನು ಹಣ್ಣಲ್ಲ ಹೆಣ್ಣು! - ಕವಿತೆ - ಆನಂದ ಎಂ ಅರಿಕೆರೆ

ನಾನು ಹಣ್ಣಲ್ಲ ಹೆಣ್ಣು! ಹೇ ಕಾಮಪಿಶಾಚಿಗಳಾ ನಾನು ಹಣ್ಣಲ್ಲ ಹೆಣ್ಣು ಕಣ್ರೋ ದೈವ ಸ್ವರೂಪ ಕಾಣಿರೋ, ಕೂಸುಗಳಿಗೆ ಜನ್ಮವಿತ್ತುವ ತಾಯಿ ಅರಿಯಿರೋ. ಮೊಗ್ಗುಡೆದು ಹಣ್ಣಾಗುವ ಮುಂಚೆಯೇ ಹಣ್ಣಿನಂತೆ ಹರಿದು ಹಂಚಿಕೊಂಡಿರಲ್ಲೋ, ನಾನಿನ್ನೂ ಬಾಲೆ ಎಂಬುದನ್ನೇ ಮರೆತುಬಿಟ್ಟಿರಲ್ಲೋ. ಮಾನ ಉಳಿಸಿಕೊಳ್ಳಲು ನರಳಾಡುತ್ತಿದ್ದ ನರಳಾಟ ನಿಮ್ಮ ಮಾನವೀಯತೆಯ ಕದ ತಟ್ಟಲಿಲ್ಲವೇ, ನಿಮ್ಮೆಲ್ಲ ಸ್ತ್ರೀ ಬಂಧುಬಳಗ ನಿಮ್ಮೆದೆಯ ಭಾವದಲ್ಲಿ ಬರಲಿಲ್ಲವೇ?? ಪರಿಪರಿಯಾಗಿ ಬೇಡಿಕೊಂಡರೂ ಪರಿತಪಿಸಲಿಲ್ಲ ನಿಮ್ಮ ಮೃಗ ಮನಸುಗಳಲ್ರೋ, ನನ್ನ ರಕ್ತ ಸ್ರಾವದಲ್ಲಿ ದಾಹ ತೀರಿಸಿಕೊಂಡಿರಲ್ಲೋ, ಆ ರಕ್ತ ವಿಷವಾಗಿ ನಿಮ್ಮ ಅಂತ್ಯ ಕಾಣಲಿಲ್ಲವಲ್ರೋ,  ಥೂ ಪಾಪಿಗಳ, ಕಾಮಮೃಗೀಗಳಾ, ಮನಗಾಣಿರೋ ನಾನು ಹಣ್ಣಲ್ಲ ಹೆಣ್ಣು ಕಣ್ರೋ, ನಾನು ಹಣ್ಣಲ್ಲ ಹೆಣ್ಣು ಕಣ್ರೋ..              ಆನಂದ ಎಂ ಅರಿಕೆರೆ,  ಚಿಕ್ಕಬಳ್ಳಾಪುರ

ಬ್ರಹ್ಮಚರ್ಯವೋ? ಗೃಹಸ್ಥನೋ? - ಲೆಕ್ಕಾಚಾರ ಅಂಕಣ - ಅನಂತ ಕುಣಿಗಲ್

" ಜೀವನದಲ್ಲಿ ಬ್ರಹ್ಮಚರ್ಯವೋ..? ಅಥವಾ ಗೃಹಸ್ಥನೋ..? "      ಈ ರೀತಿಯ ಒಂದು ಪ್ರಶ್ನೆಗೆ ನೇರವಾಗಿ ಉತ್ತರಿಸುವುದು ತುಂಬ ಕಠಿಣ. ಉತ್ತರಿಸುವಾಗಲೂ ಕೂಡ ತುಂಬ ಎಚ್ಚರಿಕೆ ಇಂದ ಇರಬೇಕಾಗುತ್ತದೆ. ಒಬ್ಬೊಬ್ಬರಿಂದ ಒಂದೊಂದು ಅಭಿಪ್ರಾಯಗಳು ಹೊರಬರುತ್ತವೆ. ಯಾವುದು ಸಮರ್ಥ ಎನ್ನುವುದಕ್ಕೆ ಅವರ ಬಳಿ ಸ್ವ-ಅನುಭವಗಳ ಸಾಲು ಸಾಲು ಕಾರಣಗಳಿರಬಹುದು. ಅಂತೆಯೇ ನಾನೂ ಕೂಡ ನನಗೆ ತೋಚಿದ್ದನ್ನು ಇಲ್ಲಿ ಹೇಳಬಲ್ಲೆ. ಮೊದಲಿಗೆ ಬ್ರಹ್ಮಚರ್ಯದ ಬಗ್ಗೆ ಮಾತನಾಡುವುದಾದರೆ, ಬ್ರಹ್ಮಚರ್ಯ ಎಂದರೇನು?? ಸ್ಲಖಿಸದೆ ಇರುವುದೇ?? ಮದುವೆಯಾಗದಿರುವುದೇ?? ಮಕ್ಕಳನ್ನು ಮಾಡಿಕೊಳ್ಳದಿರುವುದೇ?? ಅಥವಾ ಒಬ್ಬಂಟಿಯಾಗಿ ಸ್ವತಂತ್ರ ನಿರ್ಧಾರಗಳೊಂದಿಗೆ ಇದ್ದುಬಿಡುವುದೇ?? ಹೀಗೆ ನಾನಾ ಉತ್ತರಗಳು ಕಾಡುವುದುಂಟು. ಒಬ್ಬಂಟಿಯಾಗಿರುವುದು ಎಂದು ತೆಗೆದುಕೊಳ್ಳುವುದಾದರೆ, ಯಾವುದೇ ಅನುಬಂಧಗಳ ಒತ್ತಡಗಳಿಲ್ಲದೆ, ಕುಟುಂಬದ ಜವಾಬ್ದಾರಿಗಳಿಲ್ಲದೆ, ಏಕಮುಖ ನಿರ್ಧಾರದೊಂದಿಗೆ ನಮಗನಿಸಿದ್ದನ್ನು ನಾವು ಮಾಡುತ್ತಾ ಹೋಗಬಹುದು. ಇದರಿಂದ ಬಹುಶಃ ಸಾಧನೆಯ ಗುರಿಯನ್ನು ಸ್ವಲ್ಪಬೇಗ ತಲುಪಬಹುದೇನೋ.. ಇದು ಗಂಡಸರ ವಿಷ್ಯದಲ್ಲಾದರೆ, ಹೆಂಗಸರ ವಿಷ್ಯದಲ್ಲಿ.. ಅದೂ ನಮ್ಮ ದೇಶದಲ್ಲಿ ಬ್ರಹ್ಮಚರ್ಯ ಅನ್ನೋದು ಅಷ್ಟು ಸುಲಭದ ಮಾತಲ್ಲ. ಒಂಟಿ ಹೆಣ್ಣು, ಮರದ ಮೇಲಿನ ಹಣ್ಣಿಂದ್ಹಂಗೆ. ಅದು ತೊಟ್ಟು ಕಳಚಿ ಬೀಳುವಷ್ಟರಲ್ಲಿ ಹಿಡಿದು ಪೋಷಿಸುವವರೊಬ್ಬರ ಆಸರೆ ಖಂಡಿತ ಬೇಕಾಗುತ್ತ...

ನನ್ನ ಶವಯಾತ್ರೆಯ ಕನಸು - ಕವಿತೆ - ಅನಂತ ಕುಣಿಗಲ್

ನನ್ನ ಶವಯಾತ್ರೆಯ ಕನಸು ನಾನು ಎಪ್ಪತ್ತನ್ನು ದಾಟುವುದಿಲ್ಲ ಬಿಡಿ! ಹೌದು, ಅಷ್ಟೊಂದು ಭರವಸೆ ನನ್ನ ಮೇಲೆ ಹಾಗೂ ನನ್ನಂಥವರ ಮೇಲೆ ನಮ್ಮ ಜೀವನ ಶೈಲಿಯೇ ಹಾಗೆ.. ತಿನ್ನುವುದು ಕುಡಿಯುವುದಾದರೂ ಏನನ್ನು? ರೆಫ್ರಿಜರೇಟಿನಲ್ಲಿ ಶೇಖರಿಸಿಟ್ಟ ಆಹಾರ ಚರಂಡಿ-ಮೋರಿಗಳಿಂದ ಬೀಸುವ ಗಾಳಿ ಈ ಕಣ್ಣುಗಳು ಅದೆಷ್ಟು ಪಾಪಿಗಳು ದಿನವೂ ಹಿಂಸಿಸಲ್ಪಡುತ್ತವೆ ನೋಡಬಾರದ್ದನ್ನೆಲ್ಲ ನೋಡುತ್ತಾ.. ಕಿವಿಗಳು ಏನೇನೋ ಆಲಿಸುತ್ತವೆ ಬಾಯಿಗಳಿಗಂತು ಬಿಡುವೇ ಇಲ್ಲ ಒಂದು ಜೋಡಿ ಲಾಳ ಹೊಡೆಸಬೇಕು ಕಾಲುಗಳಿಗೆ ಮತ್ತು ಕೈಗಳಿಗೆ ಶುದ್ಧವಾದ ಕೆಲಸಗಳು ಸಿಗಬೇಕು ಮನಸ್ಸಿಗೆ ಮಿದುಳಿಗೆ ಒಳಿನ್ನೇ ಯೋಚಿಸುವಂತಹ ಬುದ್ದಿ ಬರಬೇಕು ಈಗ ಮೂಗಿಗೆ ಮಾಸ್ಕ್ ಬಂದು ಅದು ಸ್ವಲ್ಪ ಸುಧಾರಿಸಿದೆ ಇಷ್ಟೆಲ್ಲಾ ಕೊಳಕಿನಿಂದ ಶತಮಾನ ಕಳೆಯುವುದೇ ಲೇಸು ಆದರೂ ಇದ್ದಷ್ಟು ದಿನ ನೆಮ್ಮದಿಯಿಂದ ಬಾಳಿದರಷ್ಟೇ ಸಾಕು ಇನ್ನೇನು ಬೇಕು?? ಬೇಕು!! ನನಗಂತೂ ಪುಸ್ತಕಗಳು ಬೇಕೇ ಬೇಕು ಸಾವಿನಿಂದಾಗಿ ಸತ್ತಾಗ ಅಥವಾ ಶಾಪದಿಂದ ಸತ್ತಾಗ ಮುಕ್ತಿಗಾಗಿ ನನಗೆ ಪುಸ್ತಕಗಳು ಬೇಕು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.. ನಾ ಓದಿದ ಪುಸ್ತಕಗಳು ಸಿಗುವವರೆಗೂ.. ನನ್ನ ನಿರ್ಜೀವ ದೇಹ ಮಣ್ಣು ಸೇರುವುದೇ ಬೇಡ ಅಲ್ಲಿಯವರೆಗೂ ನೊಣ ಹತ್ತದ ಹಾಗೆ ನೋಡಿಕೊಂಡರೆ ಸಾಕು! ನನ್ನ ಪುಸ್ತಕಗಳು ಹೊರಗಿನ ಕೇರಿಯಿಂದ ಮೇಲಿನ ಕೇರಿಯ ದಾಟಿ ನಂತರ ಸ್ಮಶಾನಕ್ಕೆ ಪಲ್ಲಕ್ಕಿಯ ಮೆರವ...

ಭಾವ ಸಂಗಮ - ಯಾಶಿ ಕವಿತೆ - ಅನಂತ ಕುಣಿಗಲ್

ಭಾವಸಂಗಮ ನಾ ನೋಡಿದ ಬೆಳದಿಂಗಳು ನಿನ್ನಯ ಕಣ್ಣ ಬಿಂಬ ನವಿರೇಳಿಸೋ ಆ ನಗುವಿಗೆ ಸದಾ ನಾ ರೋಮಾಂಚನ ಸಿಗಬಾರದೆ ಕನಸಿನ ಹಿಡಿತಕ್ಕೆ ಉಳಿಸಲು ಈ ಬಡ ಜೀವವ? ಮತ್ತೆ ಮತ್ತೆ ಶುರುವಾಗಿದೆ ಹಾಳಾದ ವಿರಹದ ಹಾಡು ಸಾಕು ಸಾಕಾಗಿದೆ ಸೋತು ಯಾರಿಗೇಳಲಿ ನನ್ನಯ ಪಾಡು ಹಾಯಾಗಿದೆ ಎಲ್ಲವೂ.. ಆಮಂತ್ರಣ ಸಿಕ್ಕ ಮೇಲೆ ಬದುಕು ಇನ್ನೂ ಬೇಕೆನಿಸಿದೆ ಚಡಪಡಿಕೆ ಎಂದರೆ ನಿನ್ನಯ ಹೊರತು ಬೇರೇನಿಲ್ಲ ಆ ಹೊಸ ಅಧ್ಯಾಯಕ್ಕೆ ನಿನ್ನದೇ ಹೆಸರಿದೆ ಮುನ್ನುಡಿಯಲ್ಲಿ ನನ್ನ ತುಟಿಗಳ ತುಡಿತಗಳ ಕಲೆಗಳು ಅಲ್ಲಲ್ಲಿ ಮೂಡಿವೆ ಒಮ್ಮೆ ಗ್ರಹಿಸಿ ಸಹಕರಿಸಿಬಿಡು ಓ ನನ್ನ ನಲ್ಲೆ.. ನೀನಿರುವ ವಿಳಾಸ ತಿಳಿಸಿಬಿಡು ಬಂದು ಅಪ್ಪುವೆ ಉಳಿಸದೆ ಬಾಕಿ ಮೊತ್ತವ ತೀರಿಸುವೆ ಹಿಂದೆಂದೂ ಆಗದ ಸ್ವರ್ಶ ಸಿಗಲಿದೆ ಅದಕ್ಕಾಗಿ ನಾ ಕಾರುತ್ತಿರುವೆ. # ಅನಂತ ಕುಣಿಗಲ್  ananthangowda97@gmail.com

ನಾನು ಹೊರಗಿನವನು - ಕವಿತೆ - ದೀಕ್ಷಿತ್ ಕುಮಾರ್

    ನಾನು ಹೊರಗಿನವನು (ಸ್ಮಶಾನದಲ್ಲಿ ಮೂಡಿದ ಕವಿತೆ) ಭೂಮಿ ಗರ್ಭದಲ್ಲಿ ಕೊರಡುಗಟ್ಟುವಂಥ  ಚಳಿಯಲ್ಲಿ; ಭೂತ ಕಾಲದ ಆತ್ಮೀಯರು ಸುಟ್ಟು ಕರಕಲಾಗಿ ಮತ್ತು ಒಂದಷ್ಟು ಮಂದಿ ಮಣ್ಣ ಹೊದ್ದು ಮಲಗಿದ್ದಾರೆ;  ದಿರಿಸಿನ ಗೊಡವೆಯಿಲ್ಲದೆ ಬೆತ್ತಲಾಗಿ ಮತ್ತು ನಿಶ್ಚೇಷ್ಟಿತವಾಗಿ! ಮತ್ತೆ ಸೇರಿರುವ ಖುಷಿಯಲ್ಲಿ ಲೋಕಾಭಿರಾಮವಾಗಿ ಮಾತಿಗಿಳಿದಿದ್ದಾರೆ; ಊಳಿಡುತ್ತಾ,ಆಕಳಿಸುತ್ತಾ  ಮಗ್ಗಲು ಬದಲಿಸಿದ್ದಾರೆ; ಬದುಕಿದ್ದಾಗ ಸಿಗದ ಈರ್ಷ್ಯೆಗಾಗಿ  ಹಪ ಹಪಿಸಿದ್ದಾರೆ; ಮುಖವಾಡ ಧರಿಸುವ ಜನರಿಗೆ ಪ್ರವೇಶ ನಿರಾಕರಿಸಿ  ಅಷ್ಟ ದಿಗ್ಭಂಧನ ಹೂಡಿದ್ದಾರೆ! ಗೆಲ್ಲುವ ಮತ್ತು ದುಡಿಯುವ ಹರಕತ್ತು ಅವರಲ್ಲಿಲ್ಲ ಈಗ; ಹೆಣ ಎಂಬ ಹೆಸರು ಬಂದಾಯ್ತು! ಇನ್ನು ನಿರುಮ್ಮುಳವಾಗಿ ಉಸಿರಾಡ್ತಾರೆ; ತಾಯಿ ಮೊಗವ ಕಾಣದ  ಹಾಲು ಗಲ್ಲದ ಮಕ್ಕಳು ಖಿಲ್ಲೆನ್ನುತ್ತಿವೆ ನೆರೆ ಕೂದಲಿನ ಮುದುಕ ಮುದುಕಿಯರು ಕ್ಯಾಕರಿಸುತ್ತಿದ್ದಾರೆ; ಪ್ರಾಯದಲ್ಲಿಯೇ ಕಮರಿ ಹೋದ ಜೀವಗಳು ಕೊರಗುತ್ತಿವೆ ನೇಣು ಬಿಗಿದುಕೊಂಡ ಭಗ್ನ  ಪ್ರೇಮಿ ಬಿಕ್ಕುತ್ತಿದ್ದಾನೆ; ಆದರೆ ತುಸುವಾದರೂ ಕೇಳಬಾರದೆ? ಇದೇನಾ ಸ್ಮಶಾನ ಮೌನ ಅಂದ್ರೆ? ನನ್ನದೇ ಮನೆಯಲ್ಲಿ ಸಿಗದ, ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸುವ  ಸೌಧದಲ್ಲೂ ಕಾಣದ ಶಾಂತಿ ಇಲ್ಲಿದೆ! ಬಣ್ಣ ಬಣ್ಣದ ಮಾತುಗಳನ್ನಾಡುವ  ಜನ ಇಲ್ಲಿಲ್ಲವಲ್ಲ ಅದಕ್ಕಿರಬಹುದ? ಇಲ್ಲಿಯ ಜನರ ನಾಲಿಗೆಯೂ  ಸತ್ತು...

ಇಳಿಸಂಜೆಯಲಿ ಮರೆಯಾದ ಕಿರಣ - ಲೇಖನ - ನಂದಾದೀಪ

ಕಾಫಿ ಆಯ್ತಾ.. ಎನ್ನುತ್ತಲೇ ಇಳಿಸಂಜೆಯಲಿ ಮರೆಯಾದ ಕಿರಣ ಎದೆಯ ಗೂಡಿನಲಿ ಭಾವನೆಯ ದೀಪ ಹೊತ್ತಿಸಿ, ಒಲವಿನ ಕಿರಣವ ಎಲ್ಲೆಡೆ ಹರಡಿ ತಮ್ಮ ಸತ್ಕಾರ್ಯದ, ಸವಿ ಮಾತಿನಲೆ ಎಲ್ಲರ ಮನದಲಿ ತಮ್ಮದೇ ಆದ ಸ್ಥಾನ ಗಳಿಸಿಕೊಂಡ ಕವಿ, ಲೇಖಕ, ಚಿತ್ರಕಲಾವಿದ, ಕಾದಂಬರಿಕಾರರು ಕಿರಣ ದೇಸಾಯಿಯವರು.. ಇವರು 17-07-1981ರಲ್ಲಿ ಬೆಳಗಾವಿಯ ಕಿತ್ತೂರಿನಲ್ಲಿ ಜನಿಸಿದರಾದರು.. ಬೆಳೆದಿದ್ದು ಮಾತ್ರ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ.. ತಂದೆ ಭಾಳಸಾಹೇಬ ದೇಸಾಯಿ, ತಾಯಿ ಲಕ್ಷ್ಮಿಬಾಯಿ ದೇಸಾಯಿ.. ವಿದ್ಯಾ ಪ್ರಸಾರಕ ಸಮಿತಿಯ C S ಬೆಂಬಳಗಿ ಕಲಾ ಕಾಲೇಜು, ರಾಮದುರ್ಗದಲ್ಲಿ ಬಿ. ಎ, ಬಿ. ಎಡ್ ವ್ಯಾಸಂಗ ಮಾಡಿರುವ ಇವರು.. ಎಂ. ಎ( ಇತಿಹಾಸ) ಪದವಿಯನ್ನು ಪೂರೈಸುವುದರಲ್ಲಿದ್ದರು! ತಮ್ಮ ಕಾಲೇಜಿನ ದಿನಗಳಲ್ಲೇ ಕವನ, ಚುಟುಕು ಬರೆಯುವ ಹವ್ಯಾಸವಿದ್ದ ಇವರು ಚಿತ್ರಕಲೆಯಲ್ಲಿ ನಿಪುಣರಾಗಿ ಹೆಸರು ಪಡೆದಿದ್ದರು.. ಬರೆಯುವ ಹವ್ಯಾಸವನ್ನು ಹಾಗೆ ಮುಂದುವರೆಸಿಕೊಂಡು ಬಂದಿದ್ದ ಇವರು ಒಂದು ಖಾಸಗಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದು ಕೆಲವು ದಿನದ ನಂತರ ತಮ್ಮ ಕರ್ತವ್ಯವನ್ನು ತ್ಯಜಿಸಿ ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡಿದರು.. ಎಷ್ಟೋ ಆಶ್ರಮಗಳಿಗೆ ತಮಗಾದ ಸಹಾಯ ಮಾಡಿ.. ಕೆಲವು ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡವರು.. ಅವರೂರಿನ ಶಾಲೆಗಳಿಗೆ ನಿರ್ದೇಶಕರಾಗಿ ಅಲ್ಲಿನ ಮಕ್ಕಳಿಗೆ ಪ್ರೇರಣಾ ತರಗತಿಗಳನ್ನು ನಡೆಸಿದ...

ಸಮಯಕ್ಕೂ ಬಡತನ ಬಂತಪ್ಪಾ - ಕವಿತೆ - ಅನಂತ ಕುಣಿಗಲ್

ಸಮಯಕ್ಕೂ ಬಡತನ ಬಂತಪ್ಪಾ ಉಸಿರುಗಟ್ಟಿ.. ಸಾಯುವುದೊಂದೇ ಬಾಕಿ! ಸಾಯುವುದಿನ್ನೆಲ್ಲಿ? ಅದಾಗಲೇ ನಾವೆಲ್ಲ ಸತ್ತಿದ್ದೇವಲ್ಲಾ.. ಬೆಳದಿಂಗಳೆಂದರೇನು? ಸೂರ್ಯೋದಯದ ಸೊಬಗೇನು? ಸ್ವಚ್ಚಂದ ಗಾಳಿಯ ಗಂಧ ಬಿಸಿಲು ಮಳೆಯ ಪರಿಮಳ ಮಿಂಚುಳದ ನಗೆಯಾಟ ಸಿಡಿಲು-ಗುಡುಗುಗಳ ಕೂಗು ಯಾವುದರ ಸ್ಪರ್ಶವಿಲ್ಲದೆ ಯಂತ್ರವಾಗುತ್ತಿದ್ದೇವಲ್ಲಾ.. ಎರಡು ಬೆಳರಳಿನಿಂದಲೇ ಸಂಬಂಧ ಸಂಸಾರದ ನಡಿಗೆಯೂ ಅಲ್ಲೇ.. ವಿಚ್ಚೇದನವೂ ಅಲ್ಲೇ.. ಮಕ್ಕಳು, ತಂದೆ-ತಾಯಿಯ ಒಡನಾಟವಿಲ್ಲ ನಾಲ್ಕು ಗೋಡೆಗಳ ಮಧ್ಯೆ ಸಿಲುಕಿ ಒಂಟಿತನವನು ಸದಾ ಶಪಿಸುತ್ತಾ.. ಯಮನ ಆಗಮನಕ್ಕಾಗಿ ಕಾಯುತ್ತೇವೆ ಇಲ್ಲಾ, ನಾವೇ ಹೋಗುತ್ತೇವೆ ಬಣ್ಣ ಬಣ್ಣದ ಸೂಟು ಇಂಪೋರ್ಟೆಡ್ ಬೂಟು ಕಣ್ಣಿಗೆ ಕಪ್ಪು ಕಿವಿಗೆ ಬೀಗ ಆದರೂ ನಮ್ಮದು ಬೆತ್ತಲೆ ದೇಹ ಬೀದಿಯಲ್ಲಿನ ಬೆಕ್ಕುಗಳು ಕಿತ್ತು ತಿನ್ನುವ ಕಾಗೆಗಳು ಎಲ್ಲವೂ ಸ್ವತಂತ್ರ ಪಡೆದುಕೊಂಡಿವೆ ಮನುಷ್ಯನೊಬ್ಬನೇ ಇನ್ನು ಅಲೆಯುತ್ತಿದ್ದಾನೆ ಅದೇನು ತಿನ್ನುತ್ತಾನೋ.. ಅದೇನು ಮಾಡುತ್ತಾನೋ.. ಬಿಡುವೇ ಇಲ್ಲದೆ ಸಮಯದ ಬಡತನದಿಂದ ಉಸಿರಾಡಲು ಕೂಡ ಒದ್ದಾಡುತ್ತಿದ್ದಾನೆ ಆಗಲೇ ಒಮ್ಮೆ ಸತ್ತಿದ್ದಾನೆ ಮುಕ್ತಿಗಾಗಿ ಹಪಾಹಪಿಸುತ್ತಿದ್ದಾನೆ ಎರಡೇ ದಿನಕ್ಕೆ ಎಲ್ಲಾ ಸಂಬಂಧಗಳು ಸುಸ್ತು ಗೊಂಬೆಗಳು ಮಕ್ಕಳ ಗೆಳೆಯರು ನಾಯಿಮರಿಗಳೇ ತಂದೆ-ತಾಯಿಗಳು ಮೊಬೈಲ್ ಗುರುವಾಗಿದ್ದಾನೆ ಜಗತ್ತು ಮತ್ತೆ ಚಪ್ಪಟ್ಟೆಯಾಗಿದೆ ಕಣ್ಣು ಕಾಣದೆ ಪಾತ...

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...

ವಜ್ರೋತ್ಸವದಾ ಸ್ವಾತಂತ್ರ್ಯ - ಕವಿತೆ - ರೋಹಿತ್ ಜಿ

ವಜ್ರೋತ್ಸವದಾ ಸ್ವಾತಂತ್ರ್ಯ ಎಲ್ಲೆಲ್ಲಿಹುದು? ಹೇಗೆಲ್ಲಾಇಹುದು? ವಾಜ್ರೋತ್ಸವ ವಯಸಿನ ಸ್ವಾತಂತ್ರ್ಯ! ವಜ್ರಕ್ಕಿಂತ ಹರಿತವಾಗಿಹುದು ನಾಡಿಗೆ-ಗಾಡಿಗೆ ಈ ಸ್ವಾತಂತ್ರ್ಯ! ಅಧಿಕಾರದಾ ಅತ್ಯಧಿಕ ದಾಹಕೆ ದೇಶದ ಪ್ರಾಂತ್ಯವ ಹೊಡೆಯುವ ಸ್ವಾತಂತ್ರ್ಯ. ಧರ್ಮ-ಧರ್ಮಗಳ ಕೋಮುಸಂಘರ್ಷದಿ ಮಾನವ ಧರ್ಮವ ಕೊಲ್ಲುವ ಸ್ವಾತಂತ್ರ. ಮಂದಿರ, ಮಸೀದಿ, ಚರ್ಚ್ಗಳ ಒಡೆದು ಹುದುಗಿಹ ಇತಿಹಾಸ ಕೆದಕುವ ಸ್ವಾತಂತ್ರ್ಯ. ದೈವ-ದೆವ್ವಗಳ, ಭಯ-ಭಕ್ತಿ ಮೌಢ್ಯ ಭಾವದಲಿ ವಿಜ್ಞಾನವನ್ನೆ ದಹಿಸುವ ಸ್ವಾತಂತ್ರ್ಯ. |೧| ನೋಟಿನ ನೆರಿಗೆಯ ಮೈ-ಮಾಟಕೆ ಬಿದ್ದು ವೋಟನು ಒತ್ತಿ ತೂರಾಡುವ ಸ್ವಾತಂತ್ರ್ಯ. ಬ್ಯಾಂಕಲೆ ಖಾತೆ ಇಲ್ಲದ ಜನಗಳ ಮತಬ್ಯಾಂಕನು ಮಾಡಿ ಆಳುವ ಸ್ವಾತಂತ್ರ್ಯ. ಜಾತಿ, ಮತ, ಸಿದ್ಧಾಂತಗಳ ಕಚ್ಚಾಟದಿ ಬಿದ್ದು ಅಭಿವೃದ್ಧಿಗೆ ಸಮಾಧಿ ಕಟ್ಟುವ ಸ್ವಾತಂತ್ರ್ಯ. ಕೊಲೆಪಾತಕನೂ, ಕಿಡಿಗೇಡಿ, ಅತ್ಯಾಚಾರಿಗಳ ನಾಯಕನ ಮಾಡಿ ಮೆರೆಸುವ ಸ್ವಾತಂತ್ರ್ಯ.  | ೨| ಹಗಲು-ರಾತ್ರಿ, ಹಾದಿ-ಬೀದಿಗಳ ಭಿನ್ನವೇ ಇಲ್ಲದೆ ಹೆಣ್ಣನು ಕಿತ್ತು ಕೆಡವಿ ತಿಂದು ತೇಗುವ ಸ್ವಾತಂತ್ರ್ಯ. ಧರ್ಮ, ಲಿಂಗ , ಜಾತಿ , ಅಂತಸ್ತುಗಳ ಗೋಡೆಯ ಕಟ್ಟಿ ಪ್ರೇಮದ ಪಕ್ಷಿಗಳ ಸದೆಬಡಿಯುವ ಸ್ವಾತಂತ್ರ್ಯ. ಮದಿರೆ, ಮಾದಕ, ಮದ್ಯದ ಮಡುವಲೆ ಜೀವ-ಜೀವನ ಮರೆಯುವ ಸ್ವಾತಂತ್ರ್ಯ. ಸರ್ವಾಂಗಗಳೂ ಸಂತೃಪ್ತವಾಗಿ ಕಣ್ಕುಕ್ಕುವ ಹಾಗೆ ಉಡುಗೆ-ತೊಡುಗೆಯ ಧರಿಸುವ ಸ್ವಾತಂತ್ರ. |೩| ಪೆನ್ನನು ಹಿಡಿದು ಸತ್ಯವ ನುಡಿಯುವ ತಲೆಗ...

ಅಷ್ಟದಿಗ್ಭಂಧನ - ಕವಿತೆ - ಅನಂತ ಕುಣಿಗಲ್

ಅಷ್ಟದಿಗ್ಭಂಧನ ಅದೆಷ್ಟೋ ದಿನಗಳಿಂದ ಯಾರಿಗೂ ಕಾಣಿಸಿಕೊಳ್ಳದೆ ಸ್ವಯಿಚ್ಚೆಯಿಂದ ಬಂಧಿತರಾಗಿ ಕತ್ತಲ್ಲನ್ನೇ ಅಪ್ಪಿ ಮುದ್ದಾಡಿದ ನಮಗೆ ಅಪರೂಪಕ್ಕೆ ಕಂಡ ಬೆಳಕು ಕಣ್ಕುಕ್ಕಿತ್ತಲ್ಲ! ಮಾಸ್ಕ್ ಮೇಲೆ ಮಾಸ್ಕ್ ಧರಿಸಿ ವಾಹಗಳನ್ನು ಬೀದಿಯಿಂದ ಬಿಡಿಸಿ ಹಸು ಕರುಗಳು ನಿರ್ಭೀತಿಯಿಂದ ಓಡಾಡುವ ಹಾಗೆ ಏರ್ಪಡಿಸಿ ಕೈಗಳಿಗೆ ಮೊಬೈಲ್ ಕೊಟ್ಟು ಹೊಟ್ಟೆಗೆ ಪಿಜ್ಜಾ-ಬರ್ಗರ್ ಇಟ್ಟು ಅಲರಾಂ ಹೊಡೆತಕ್ಕೆ ಎಚ್ಚರವಾಗುವ ನಮ್ಮಯ ಅಸಹಾಯಕ ಸ್ಥಿತಿ ಯಾರಿಗೂ ಬಾರದಿರಲಿ! ಒಮ್ಮೆ ಜೋರಾಗಿ ಗಾಳಿ ಬೀಸಿದಾಗ ಹೋಗಿದ ಜೀವ ಮತ್ತೆ ಬಂದಂತಾಗುತ್ತದೆ ಅಷ್ಟು ಉಸಿರುಗಟ್ಟೆದ್ದೇವೆ ನಾವೆಲ್ಲರೂ.. ನಾಲ್ಕು ಗೋಡೆಗಳ ಗಬೆಯಲ್ಲಿ ಮೂಳೆಯೂ ತುಕ್ಕಿಡಿಯುವಂತೆ ಕೊಳೆತು ನಾರುತ್ತಿದ್ದೇವೆ ಮೂಗು ಮುಚ್ಚಿಕೊಂಡು ಭಯದಿಂದ ಮೌನವಾಗಿ ನಿಂತಿದ್ದೇವೆ! ದಿನವೂ ಅದೇ ವಿಚಾರಗಳು ಕೊಂಕು ನುಡಿಯುವುದೊಂದೇ ವಿಶೇಷ ಬಸ್ಸಿನ ಹಿಂದೆ ಓಡುವ ಜನಕೆ ಬಸ್ಸೇ ಪ್ರಪಂಚ ಹಾಗಾದರೆ ಬಸ್ಸಿನ ಮುಂದೆ ಓಡುವವರು? ಹೆಗಲಿನಲ್ಲಿ ಸಾವ ಕಟ್ಟಿಕೊಂಡವರು! ಧೈರ್ಯವಿದ್ದವರಿಗೆ ಬೆದರಿಕೆ ಬಾಯ್ಬಿಟ್ಟರೆ ಬಾಂಬು ಬಿಡದಿದ್ದರೆ ರಕ್ತಾಘಾತ ಸಂಕಟ ಏನಾಗಿದೆ ಈ ಜಗಕೆ ಆಗಬೇಕಾದ್ದೇನೂ ಆಗುತ್ತಿಲ್ಲ ಬೆಲೆ ಏರಿಕೆ ಮತ್ತು ಜನಸಂಖ್ಯಾಸ್ಟೋಟ ಇದಲ್ಲವೇ ನಮ್ಮ ಪ್ರಗತಿ? ಎಲ್ಲಿಯ ದೇವರು? ಎಲ್ಲಿಯ ತಂತ್ರಜ್ಞಾನ ಇನ್ನೆಲ್ಲಿಯ ವಿಜ್ಞಾನ? ಸಾಯುವವನಿಗೆ ಎಲ್ಲವೂ ಶೂನ್ಯ ಆಡಳಿತವೊಂದೇ ಸಾಕು...

ಯಾಂತ್ರೀಕೃತ ಬದುಕು - ಕವಿತೆ - ರೋಹಿತ್ ಜಿ

ಯಾಂತ್ರೀಕೃತ ಬದುಕು ರಸ್ತೆ-ರಸ್ತೆಗಳೆಲ್ಲಾ ಕಿಕ್ಕಿರಿದು ನಿಂತಿವೆ ಲೋಹದ ವಾಹಕಗಳು ಅಷ್ಟೇ ಸಾಕೇ ನೀರಲ್ಲೂ, ಗಾಳಿಯಲ್ಲೂ, ಎಲ್ಲೆಲ್ಲೂ! ಈಗಷ್ಟೇ ನಿರ್ವಾತದಲ್ಲೂ ಸಂಚರಿಸಲು ಸಿದ್ಧವಾಗಿದ್ದೆವೆ ವಿಚಿತ್ರ ಬಂಗಿಗಳ ನೃತ್ಯ ನಮ್ಮೀ ಪಾಡಾಗಿದೆ ಎಲ್ಲರೂ ಓಡುತ್ತಿದ್ದಾರೆ, ಎಲ್ಲಿಗೆಂದು ತಿಳಿಯುತ್ತಿಲ್ಲ! ಕೆಲವರು ಮೊಬೈಲ್ ಹಿಡಿದು, ಮತ್ತೂ ಹಲವಾರು ಸಿಕ್ಕ ಸಿಕ್ಕ ಹಾದಿಗಳ ಬಡಿದು ಇಲ್ಲಿ ವಾಕಿಂಗ್ಗೆ ಬರುವುದು ಯಂತ್ರದಲ್ಲೆ.. ಮೂತ್ರ ವಿಸರ್ಜನೆಗೆ ಸಾಗುವುದು ಯಂತ್ರದ ತಂತ್ರದಲ್ಲೆ.. ಕೆಲಸವಿಲ್ಲದೇ ನಮ್ಮದೇ ದೇಹದ ಒಂದೊಂದೇ ಅಂಗಗಳು ನಶಿಸುತಿಲ್ಲವೆ?? ಮೂಳೆಗಳು ಸವೆಯುತ್ತಾ.. ಕರುಳುಗಳು ನೆಲವನ್ನೆ ಅಪ್ಪುವಂತೆ ಬೊಜ್ಜು ಬೆಳೆಸುತ್ತಾ.. ಕಿಡ್ನಿ-ಲಿವರುಗಳು ತಮ್ಮ ಕಾಯಕದಲ್ಲೆ ದ್ವಂದ್ವವಾಗುತಿಲ್ಲವೆ? ಹೃದಯ ಯಾವಾಗ ನಿಲ್ಲುವುದೊ ಬಡಿಯಲು.. ಅಯ್ಯೋ ಅದನ್ನು ಬಡಿಸಲು ಇಂದು ಯಂತ್ರಗಳು ಬಂದಿವೆ ಬಿಡಿ! ಆ ಯಂತ್ರ ಕೆಟ್ಟರೆ ಎತ್ತ ಸಾಗಬೆಕಿದೆ ನಾವು? ಸ್ಮಶಾನದ ಹಾದಿಯ ಬಿಟ್ಟು!! ನಮ್ಮದೇ ಹಿರಿಯ ತಲೆಗಳು ಬಿತ್ತಿ ಬೆಳೆಸಿದ ಯೋಗಗಳ ಮರೆತುಬಿಟ್ಟೆವಾ ನಾವು? ಸೈಕಲಿನಲ್ಲೆ ಸಾವಿರ ಮೈಲಿ ಹೊಡೆದ ಆ ರಮ್ಯತೆಯ ಇತಿಹಾಸ ಮುಚ್ಚಿಹಾಕುತಿರುವೆವಾ ನಾವು?? ತಿರುಗಿ ಒಮ್ಮೆ ನೋಡಿ.. ದೇಹದ ಒಂದೊಂದು ಅಂಗ ಬದುಕಲು ಒಂದೊಂದು ಯಂತ್ರ ಬರುವ ಮುನ್ನ, ಓಡೋಣ ಬನ್ನಿ ಪ್ರತಿದಿನವೂ.. ಕಾಲುಗಳು ತತ್ತರಿಸುವವರೆಗೂ.. ಯೋಗ-ಯಾಗಗಳ ಸಿದ್ಧಿಯ ಪಡೆದು ಹಾರೋಣ, ಈಜೋಣ, ಧ್ಯಾನ ಚ...

ಅವ್ವ ಪುಸ್ತಕಾಲಯ - ಸಿನೆಮಾ ಆಗಬೇಕಾದ ಹೊತ್ತಿಗೆಗಳು

     ಆಗಸ್ಟ್ 8 ರಂದು ನಡೆದ ಅವ್ವ ಪುಸ್ತಕಾಲಯ ದ ನಾಲ್ಕನೇ ಸಾಹಿತ್ಯಾಸಕ್ತರ ಕ್ಲಬ್ ಹೌಸ್ ಕಾರ್ಯಕ್ರಮದ ಚರ್ಚೆಯಲ್ಲಿ ಸಿಕ್ಕ ಸಿನೆಮಾ ಆಗಬೇಕಾದ ಹೊತ್ತಿಗೆಗಳನ್ನು ಕನ್ನಡ ಚಲನ ಚಿತ್ರ ನಿರ್ದೇಶಕರಾದ ಪ್ರವೀಣ್ ಕುಮಾರ್ ಜಿ ಹಾಗೂ ಯುವಬರಹಗಾರರಾದ ಅನಂತ ಕುಣಿಗಲ್ ಅವರು ಈ ಕೆಳಗಿನಂತೆ ಪಟ್ಟಿಮಾಡಿದ್ದಾರೆ. ನೀವು ಓದಿದ ಯಾವ ಕತೆ/ಕಾದಂಬರಿ/ನಾಟಕ ಸಿನಿಮಾ ಆಗಬಹುದು? (ಕ್ಲಬ್ ಹೌಸ್ ಮಾತುಕತೆ - ಅವ್ವ ಪುಸ್ತಕಾಲಯ / 08-08-2021) 1) ಇಜಿಯಾ- ಪೂರ್ಣಿಮಾ ಮಾಳಗಿಮನಿ 2) ಯಾನ - ಎಸ್.ಎಲ್ ಭೈರಪ್ಪ 3) ಸಾರ್ಥ - ಎಸ್.ಎಲ್ ಭೈರಪ್ಪ 4) ಅನ್ವೇಷಣೆ- ಎಸ್.ಎಲ್ ಭೈರಪ್ಪ 5) ಹೇಳಿ ಹೋಗು ಕಾರಣ - ರವಿ ಬೆಳೆಗೆರೆ 6) ರಂಗಣ್ಣನ ಕನಸಿನ ದಿನಗಳು  7) ಬೇನಾಲಿಮ್ - ಸಂತೋಷ್ ಕುಮಾರ್ ಮೆಹಂದಳೆ 8) ಹಾಂಟೆಡ್ ಹೊಸ ಮನೆ- ರಮೇಶ್ ಶೆಟ್ಟಿಗಾರ್ 9) ಹುಲಿ‌ ಪತ್ರಿಕೆ - ಅನುಷ್ ಶೆಟ್ಟಿ 10) ಕರಿಸಿರಿಯಾನ - ಕೆ.ಎನ್ ಗಣೇಶಯ್ಯ 11) ಏಳು ರೊಟ್ಟಿಗಳು - ಕೆ‌.ಎನ್ ಗಣೇಶಯ್ಯ 12) ಮಹಾ ಬ್ರಾಹ್ಮಣ - ದೇವುಡು 13) ಹೆಣಗಾಟ- ರಾಜು ಗಡ್ಡಿ 14) ರಕ್ಕಸ ತಂಗಡಿ - ಗಿರೀಶ್ ಕಾರ್ನಾಡ್ 15) ಅವನತಿ - ತೇಜಸ್ವಿ 16) ನಿಗೂಢ ಮನುಷ್ಯರು - ತೇಜಸ್ವಿ 17) ಮಹಾ ಪಲಾಯನ - ತೇಜಸ್ವಿ  18) ಪ್ರಶ್ನೆ - ಅನಂತಮೂರ್ತಿ 19) ಅಣು - ಕೇಶವ ರೆಡ್ಡಿ ಹಂದ್ರಾಳ್ 29) ನಡುವೆ ಸುಳಿವ ಹೆಣ್ಣು (ಮಂಜಮ್ಮ ಜೋಗತಿ) -      ...

ಉರಿದು ಹಗುರಾಗುವ ಬಯಕೆ - ಕವಿತೆ - ಸಿದ್ಧುಮೂರ್ತಿ

ಉರಿದು ಹಗುರಾಗುವ ಬಯಕೆ.. ಹೆಪ್ಪಾಗಿದೆ ದಣಿದು ಒಸರಿದ ಪಸೆಯ ಜೊತೆ ಒಡಲ ನೋವ ಕಲಸಿದ ಬದುಕು. ಮುಪ್ಪೆರಗಿ ಕುಂದಲು ಬಲಹೀನ ತೋಳು ಅದರುವ ಹೆಜ್ಜೆ,ಬೆದರು ಬೊಂಬೆ ಮದ್ದಿಲ್ಲದ ಗಾಯದ ಮನಕೆ ವಜ್ಜಾಗಿದೆ ಬದುಕು ..! ಸುಡುವ ಕಿಚ್ಚಿಗೆ ಉರಿದು ಹಗುರಾಗುವ ಬಯಕೆ ಬಳಲಿ ಕೈಚೆಲ್ಲಿ ಉರುಳೊಳಗೆ ಜೋತು ಕರುಳ ನೋವಿಗೆ ಮೂಡಿದ ಸೋತ ನೆರಿಗೆಯ ಅಚ್ಚು ಹಣೆಯ ಮೇಲೆ ಉಸಿರು ಬಿಗಿದ ಮೇಲೆ ಕಾಣುವ ಸಜ್ಜು. ಹಸನು ನೆಲದ ತೆನೆಯ ದಕ್ಕದ ಕಾಳಿನ ತುತ್ತು ಬದುಕ ನೆಲೆಯ ಕುತ್ತು ಒಸರುವ ಕಂಬನಿಯ ಬಿಂದು  ಆಳುವ ನೀತಿಯ ಕೊಡುಗೆಯಿಂದು. ಬಿಕ್ಕುವ ಎದೆಗೆ ಹನಿ ಗುಟುಕು, ಭರವಸೆ ಬಸಿದ ಹುಸಿಯು..!! ನಂಬಿಕೆಯ  ಇಂಬಿನೊಳಗೆ ಸುಖವಾಗಿ ತಲೆಯೊರಗಿ ಮೆಲು ಹಾಸಿಗೆಯ ಗಾಢ ನಿದಿರೆಯ ಕಾಯಕ‌, ಗೆದ್ದು ಬಂದವರದು. ಕಟ್ಟಿದ ಕನಸಿನ ರೆಕ್ಕೆ ಮುಗಿಲೆತ್ತರ ಹಾರಲು ಇನ್ನೂ, ಬಲಿಯದ ಕೂಸು.!! ನಿತ್ಯ ನಿರೀಕ್ಷೆಗಳ ವೇದನೆ ಉಳಿದ ಜೀವದ ಯಾತನೆ..., ನ್ಯಾಯ ಸಮ್ಮತಿಗಳಿಲ್ಲ ಸಾಂತ್ವನದ ದನಿಗಳಿಲ್ಲ ಕಸಿವ ಎದೆಯ ಕನಸುಗಳೇ ಹೂಡುವ ಬಂಡವಾಳ, ಹಸಿವಿನುದರದ ಬದುಕೇ ದಾಳ.!! ಮೂಡದ ಒಮ್ಮತಗಳು ನಡುವೆ ಹಗೆಯ ಹಗೇವು ಹಸಿ ಬಿಸಿ ನೆತ್ತರಿನ ಕಲೆಗಳು ಸದ್ಯ  ಗದ್ದುಗೆಯ ಅಚ್ಚುಗಳು. ಸದ್ದುಗದ್ದಲದ ಅಬದ್ದ ನಿಲುವುಗಳಲಿ ಹುರುಳಿಲ್ಲದ ನೀತಿಯ ಕಟ್ಟುಪಾಡು ಜಾತೀಯತೆಯ ಜಾಡು ಸ್ವಾರ್ಥಗಳ ಬೀಡು...!!! ಸಿದ್ದು ಮೂರ್ತಿ , ತುಮಕೂರು

ಮಂಗಳಮುಖಿ ನಾನು, ಮೃತ್ಯುಸಖಿಯಲ್ಲ! - ಕವಿತೆ - ದೀಕ್ಷಿತ್ ನಾಯರ್

ಮಂಗಳಮುಖಿ ನಾನು ಮೃತ್ಯುಸಖಿಯಲ್ಲ ( ಆತ್ಮೀಯರಾದ ರಾಧಿಕಾ ರವರ ಜೀವನಾಧಾರಿತ ) ಕಪಟವ ಅರಿಯದವಳು ನನ್ನಮ್ಮ; ಆಕೆಯ ಪ್ರಾರ್ಥನೆಗೆ ಮನಸೋತು ನನ್ನನ್ನು ಮಡಿಲಿಗಿರಿಸಿದ್ದ ಆ ದೇವ! "ವಂಶವ ಬೆಳಗುವ ಕುವರನಿವನೋ" ಎಂದು ಬೀಗುತ್ತಾ ಇಡೀ ಊರಿಗೆ ಸಿಹಿಯ ಹಂಚಿದ್ದನಂತೆ ನನ್ನ ಮಾವ ಎಲ್ಲ ಶಿಶುವಿನಂತೆ ತೆವಳಿದೆ ಕಾರಿದೆ, ಗುಡುಗು,ಸಿಡಿಲು ಮಿಂಚುಗಳಿಗೆ ತತ್ತರಿಸುತ್ತಿದ್ದೆ ಅಮ್ಮನ ಗೊಗ್ಗರು ದನಿಯ ಲಾಲಿ ಹಾಡಿಗೂ ಖಿಲ್ಲೆನ್ನುತ್ತಿದೆ ನಡಿಗೆಯಲ್ಲಿ ವ್ಯತ್ಯಾಸವಿರಲಿಲ್ಲ ದನಿಯೂ ಲಯ ಬದ್ಧವಾಗಿತ್ತು ಆದರೆ ಹನ್ನೆರಡು ದಾಟುವ  ವೇಳೆಗೆ ಮಾಂಸಲಗಳು ದಷ್ಠ ಪುಷ್ಟವಾಗಿ ಬೆಳೆದು ಬಿಟ್ಟಿತ್ತು ಕಾಡಿಗೆ,ಕುಂಕುಮ,ಬಳೆ ಮತ್ತು ಸರಗಳೆಂದರೆ  ಅದೆಂತಹದ್ದೋ ಮೋಹ ದಿಢೀರ್ ಬದಲಾವಣೆಗೆ  ಖಿನ್ನತೆಯಂತೂ ಕಾಡಲಿಲ್ಲ ಆದರೆ ಸಂಗಡಿಗರ ಮಾತಿಗೆ ಇಬ್ಬನಿ ಏಟಿಗೆ ತತ್ತರಿಸಿ ಹೋದ ಹೂವಿನ ಪಕಳೆಯಂತಾಗಿದ್ದೆ ಪೋಷಕರು ಗರ ಬಡಿದು ಗಂವ್ವೆನ್ನುತ್ತಿದ್ದ ಕತ್ತಲೆ ಕೋಣೆಗೆ ದೂಡಿ ಬಿಟ್ಟಿದ್ದರು ಗಂಡಸ್ತನ ತೋರಿಸುವ  ಆ ಭಾಗದ ನಿಮಿರುವಿಕೆಯು ನಿಂತು ಹೋಗಿತ್ತು ದಿನ ಕಳೆದಂತೆ ರಸ್ತೆಗಿಳಿದು ಬಿಟ್ಟೆ ಕೈ ತಟ್ಟುತ್ತಾ;  ಬಸ್ಸಿನಲ್ಲಿ ಒತ್ತರಿಸಿದರು, ಸೆರಗಿನೊಳಗೆ ಕೈ ತೂರಿಸಿದರು, ಕೋಜ,ಮಾಮ,ಮಂಗಳಮುಖಿ  ಎಂದರು ಹೌದು  ಆದರೆ ನಾನು ಮೃತ್ಯು ಸಖಿಯಲ್ಲ ಗಂಡಸಂತೆ ಹಣ್ಣಿನ ಬೆನ್ನ ಮೇಲೆ ಶೃಂಗಾರದ ಚಿತ್ರ ಬಿಡಿಸಲಾಗಲಿಲ್ಲ ಹೆಣ್ಣಿನ ಸ್ಥಾನಮಾನವೂ...

ಒಂದು ಸ್ನೇಹದ ಕಥೆ - ಕಥೆ - ಚೈತ್ರ ಗೋವರ್ಧನ್

ಶೀರ್ಷಿಕೆ : ಒಂದು ಸ್ನೇಹದ ಕಥೆ. ರಂಗೇನಹಳ್ಳಿ ಎಂಬ ಊರಿನಲ್ಲಿ ರಂಗಸ್ಥಳ ಎಂಬ ಒಂದು ಸಂಸ್ಥೆ ಇತ್ತು. ಈ ಸಂಸ್ಥೆಯಲ್ಲಿ ಅನೇಕ ರಂಗಭೂಮಿ ಕಾರ್ಮಿಕರು ಕೆಲಸ ನಿರ್ವಹಣೆ ಮಾಡುತ್ತಿದ್ದರು. ಇದರಲ್ಲಿ ಮೂರು ಜನ ತುಂಬಾ ಆತ್ಮೀಯ ಗೆಳೆಯರು ಇದ್ದರು. ಅವರ ಹೆಸರು ವಸುಂಧರಾ, ನಿರಂಜನ್, ಚಿರಂತನ ಎಂದು. ಈ ವಸುಂಧರಾ ಮತ್ತು ನಿರಂಜನ್ ತುಂಬಾ ತುಂಬಾ ಆತ್ಮೀಯರು. ಹೇಗಂತೀರಾ? ಇವರಿಬ್ಬರೂ ಹುಟ್ಟಿದಾಗಿನಿಂದ ಸ್ನೇಹಿತರು. ಈ ಚಿರಂತನ ಹೇಗೆ ಫ್ರೆಂಡ್ ಆದದ್ದು ಅಂತ ಹೇಳ್ತೀನಿ ಕೇಳಿ ಅಲ್ಲಲ್ಲ ಓದಿ ಆಯ್ತಾ.  ಚಿರಂತನಾಳಿಗೆ ಕಥೆ ಬರೆಯೋದು ಅಂದರೆ ತುಂಬಾ ಇಷ್ಟ. ಅವಳು ಮೂಲತಃ ಕಥೆಗಾರ್ತಿ ಏನಲ್ಲ. ಅವಳಿಗೆ ಬೇರೆಯವರ ಕಥೆ ಬರೆದದ್ದನ್ನು ಓದುತ್ತಾ ಓದುತ್ತಾ ಹವ್ಯಾಸಿ ಕಥೆಗಾರ್ತಿ ಆದಳು. ಈ ಕಥೆ ಬರೆಯಲು ಅವಳಿಗೆ ಈ ರಂಗಸ್ಥಳದಲ್ಲಿ ಅವಕಾಶ ದೊರೆಯಿತು. ಏಕೆಂದರೆ ಇಲ್ಲಿ ಅನೇಕ ನಾಟಕಗಳನ್ನು ಪ್ರದರ್ಶನ ಮಾಡುತಿದ್ದರು. ಜೊತೆಗೆ ಈ ಕಿರುಚಿತ್ರ ಪ್ರದರ್ಶನ ಕೂಡ ಮಾಡುತಿದ್ದರು. ಆದ್ದರಿಂದ ಚಿರಂತನಾಳ ಪರಿಚಯದವರು ಕರೆದು ಕೊಂಡು ಬಂದು ಇಲ್ಲಿ ಸೇರಿಸಿದ್ದರು. ಇನ್ನು ಈ ವಸುಂಧರಾ ನಿರಂಜನ್ ಏನು ಮಾಡ್ತಾ ಇದ್ದರು ಇಲ್ಲಿ ಎಂಬುದಕ್ಕೆ ಉತ್ತರ ಇಲ್ಲಿದೆ ಓದಿ. ವಸುಂಧರಾ ಗೆ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ. ಆದ್ದರಿಂದ ಅವರು ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಈ ರಂಗಸ್ಥಳದಲ್ಲಿ ನಡೆಯುವ ಪ್ರತಿಯೊಂದು ನಾಟಕಗಳಿಗೆ ಬೇಕಾದ ಚಿತ್ರಗಳನ್ನು ಬಿಡಿಸುವುದ...

ಗೆಳೆಯರು - ಗೆಳೆತನ ದಿನದ ಕವಿತೆ - ಅನಂತ ಕುಣಿಗಲ್

"ನನ್ನ ಮಿಡಲ್ ಕ್ಲಾಸ್ ಬದುಕಿನುದ್ದಕ್ಕೂ ಜೊತೆಯಾಗಿ ಕಾಡಿ, ಕಾಡಿಸಿಕೊಂಡು, ನೊಂದು, ಅತ್ತು, ನನಗಾಗಿ ಪರದಾಡಿದ ನನ್ನೆಲ್ಲಾ ಜೀವಾತ್ಮಗಳಿಗೆ ಈ ಕವಿತೆ ಧನ್ಯತಾ ಭಾವದಿಂದ ಅರ್ಪಣೆ. ಎಲ್ಲರಿಗೂ ಗೆಳೆತನ ದಿನದ ಶುಭಾಷಯಗಳು" ಗೆಳೆಯರು ಗೆಳೆಯರು ಜೊತೆಗಿರುವರು ಕೀಟಲೆಯ ಬಯಸುತ್ತಾ ಕಾಲೆಳೆಯುವರು ನೋವಾದರೆ ಮುಲಾಮಾಗುವರು ಸದಾ ನಗಿಸುವರು ಮಲಗಲು ಬಿಡರು ಮಧ್ಯರಾತ್ರಿ ಹರಟಿಸುವರು ಉಣ್ಣಲು ಬಿಡರು ಮಿಕ್ಕಿದ್ದ ಉಣ್ಣಿಸುವರು ವಾಂತಿಯಾದರೆ ಗಾಬರಿಯಾಗುವರು ಆಗಲೂ ಮೇಲೆ ಹತ್ತಿ ಕುಣಿವರು ಗೆಳೆಯರು.. ನನ್ನ ಗೆಳೆಯರು ಲಿಂಗ, ಜಾತಿ, ಧರ್ಮಗಳ ಅಂತರವಿಲ್ಲದೆ ಎಲ್ಲರೂ ಸೇರುವರು ಜೊತೆಗೆ ಸೋಲುವರು ಗೆಲುವ ಸಂಭ್ರಮಿಸಿ ಜೀವನ ತೋರುವರು ಜೀವಕ್ಕೆ ಜೀವವಾಗಿ ದೇಹಕ್ಕೆ ಆತ್ಮವಾಗಿ ಬಿಡದಂತೆ ಕಾಡುವರು ಲೆಕ್ಕಾಚಾರದ ಬದುಕು ನೋಡು ಒಮ್ಮೆ ಇಣುಕಿ ಮನದ ಬಯಲಿನಲ್ಲಿ ಕಣ್ತುಂಬುವುದು ಕೊನೆಗೆ ಇನ್ನಿಲ್ಲವಾದರೆ ಗೆಳೆಯರು ನಶ್ವರ ಈ ಭುವಿಯು ಅಲ್ಲಿಗೆ ಅದುವೇ ಅಂತ್ಯವು ಬೇಡುವರು ಯಾವಾಗಲೂ ತುಡಿತಗಳ ಅರ್ಥೈಸಿಕೊಂಡು ಬೆನ್ನಾಗಿ ಬೆಂಡಾಗಿ ಬಾಡುವರು ತುಳಿಸಿಕೊಂಡು ದಾರಿಯಾಗುವರು ಮರೆಯಲು ಬಿಡರು ಅರಿಯಲು ಬಿಡರು ಗೆಳೆಯರು.. ನನ್ನ ಗೆಳೆಯರು             ಅನಂತ ಕುಣಿಗಲ್ ಯುವ ಬರಹಗಾರ & ರಂಗಕಲಾವಿದ ananthangowda97@gmail.com