ವಿಷಯಕ್ಕೆ ಹೋಗಿ

ಅವ್ವ ಪುಸ್ತಕಾಲಯ ಸಮಿತಿ ಸದಸ್ಯರ ಅಂತಿಮ ಆಯ್ಕೆ ಪಟ್ಟಿ - ಅವ್ವ ಪುಸ್ತಕಾಲಯ

2020 ರ ಕೋವಿಡ್ ಕಾರಣದ ಲಾಕ್ಡೌನ್ ಇಂದಾಗಿ ಸಾಹಿತ್ಯಾಸಕ್ತರ ಕ್ರಿಯಾಶೀಲತೆಯನ್ನು ಉದ್ದೀಪನಗೊಳಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ "ಅವ್ವ ಪುಸ್ತಕಾಲಯ

ತಂಡದ ಇದುವರೆಗಿನ ಬರಹಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತಿಳಿಯಲು avvapustakaalaya.blogspot.com ಗೆ ಭೇಟಿ ನೀಡಬಹುದು.
ಮತ್ತು, ಅವ್ವ ಪುಸ್ತಕಾಲಯಕ್ಕೆ ಸಂಬಂಧಿಸಿದ ವಿಚಾರಣೆಗಾಗಿ avvapustakaalaya@gmail.com ಗೆ ಬರೆಯಬಹುದು.

ಈವರೆಗೆ ಕನ್ನಡ ಕಲರವ (ಸಾಹಿತ್ಯಾಸಕ್ತ ಒಡನಾಡಿಗಳ ತಂಡ) ಮತ್ತು ಅವ್ವ ಪುಸ್ತಕಾಲಯ ಎರಡು ತಂಡಗಳ ಸಹಯೋಗದಲ್ಲಿ ಹಲವಾರು ಸಾಹಿತ್ಯಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದೇವೆ.

1. ಕ್ಲಬ್ ಹೌಸ್ ನಲ್ಲಿ ಅವ್ವ ಪುಸ್ತಕಾಲಯ ಸಾಹಿತ್ಯಾಸಕ್ತರ ಸಮಾಗಮ ಸರಣಿ - ಹರಟೆ & ವಿಚಾರ ವಿನಿಮಯ ಕಾರ್ಯಕ್ರಮ

2. ಕನ್ನಡ ಕಲರವ ಸ್ಪರ್ಧೆಗಳು (ಮೂರು ತಿಂಗಳಿಗೊಮ್ಮೆ ನಡೆಯುವ ಸಾಹಿತ್ಯ ಸ್ಪರ್ಧೆಗಳು)

3. ಕನ್ನಡ ಕಲರವ ವಾರ್ಷಿಕೋತ್ಸವ ಸ್ಪರ್ಧೆಗಳು

4. ಅವ್ವ ಪ್ರಶಸ್ತಿ

5. ಕನ್ನಡ ಕಲರವ ಇತರ ಸಾಹಿತ್ಯ ಚಟುವಟಿಕೆಗಳು

ಈ ಮೇಲಿನ ಎಲ್ಲಾ ಕಾರ್ಯಕ್ರಮಗಳು ತಪ್ಪದೆ ಯಶಸ್ವಿಯಾಗಲು ಕಾರಣಕರ್ತರಾದ ಎಲ್ಲಾ ಸಾಹಿತ್ಯಾಸಕ್ತರಿಗೂ ಅವ್ವ ಪುಸ್ತಕಾಲಯ ಧನ್ಯವಾದಗಳನ್ನು ತಿಳಿಸಲು ಇಚ್ಚಿಸಿದೆ. ಇನ್ನು ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಅವ್ವ ಪುಸ್ತಕಾಲಯ ಬಯಸುತ್ತದೆ.



ಕುಣಿಗಲ್ ತಾಲ್ಲೂಕಿನ ರೈತ 'ಶ್ರೀಮಾನ್ ಲೇ. ನರಸಯ್ಯ' ಅವರ ಸ್ಮರಣಾರ್ಥ ರೂಪುಗೊಂಡಿರುವ ತಂಡ "ಅವ್ವ ಪುಸ್ತಕಾಲಯ" ಸಮಿತಿ ಸದಸ್ಯರ ಅಂತಿಮ ಆಯ್ಕೆಯಲ್ಲಿ ಸ್ಥಾನ ಪಡೆದ ಯುವಬರಹಗಾರರ ಪಟ್ಟಿ ಇಂತಿದೆ.


ಅಧ್ಯಕ್ಷರು : ಶ್ರೀಮತಿ ಗೌರಮ್ಮ

ಉಪಾಧ್ಯಕ್ಷರು : ನಾರಾಯಣ್ ಕೆ ಎನ್

ವ್ಯವಸ್ಥಾಪಕರು & ಕಾರ್ಯದರ್ಶಿಗಳು : ಅನಂತ (ಯುವಬರಹಗಾರ, ರಂಗಕಲಾವಿದ & ಸಹಾಯಕ ನಿರ್ದೇಶಕ)



ಸಂಚಾಲಕರು & ನಿರ್ವಾಹಕರು :
1. ವಿಕ್ರಮ್ ಬಿ ಕೆ (ಯುವಬರಹಗಾರರು, ನಿರ್ಮಾಪಕರು)
2. ದೀಕ್ಷಿತ್ ಕುಮಾರ್ (ಯುವಬರಹಗಾರ, ನಿರೂಪಕ & ವಾಗ್ಮಿ)


ಸದಸ್ಯರು :

1. ರೂಪಾ ರಾಣಿ ಟಿ ಆರ್ (ವಕೀಲರು, ಬೆಂಗಳೂರು)

2. ಸಂತೋಷ್ ಕುಮಾರ್ ಸಿ (ನಟ, ರಾಮನಗರ)

3. ಶ್ರೀಮತಿ ಪರಿಮಳ ಸಿ ಸಪ್ನಪ್ರಿಯ (ಕವಯಿತ್ರಿ, ಮೈಸೂರು)

4. ಮದನ್ ಕುಮಾರ್ (ದೈಹಿಕ ಶಿಕ್ಷಕರು, ಮಂಡ್ಯ)

5. ಅಂಜಲಿ ದೇರಾಜೆ (ಯುವ ಬರಹಗಾರ್ತಿ, ದಕ್ಷಿಣ ಕನ್ನಡ)

6. ರಂಜಿತ್ ಕುಮಾರ್ (ಯುವಬರಹಗಾರ, ಚಿಕ್ಕಬಳ್ಳಾಪುರ)

7. ಮಾನಸ ಪೆರ್ಲಾ (ಯುವಬರಹಗಾರ್ತಿ, ದಕ್ಷಿಣ ಕನ್ನಡ)

8. ಶ್ವೇತಾ ಪಿ ಜೈನ್ (ಯುವ ಬರಹಗಾರ್ತಿ, ಶೃಂಗೇರಿ)

9. ಶಿವಕುಮಾರ್ (ಯುವ ಬರಹಗಾರ, ಬೆಂಗಳೂರು)
10. ಚೇತನ ವಿ ರಾಜ್ (ಯುವಬರಹಗಾರ್ತಿ)


11. ಭೂಮಿಕಾ ಎನ್ ತಳವಾರ್

ಎಲ್ಲರಿಗೂ ಶುಭಾಷಯಗಳು..💐
ಕನ್ನಡ ಸಾಹಿತ್ಯ ಬೆಳೆಸುವಲ್ಲಿ ನಿಮ್ಮ ಪಾತ್ರದ ಜವಾಬ್ದಾರಿ ಹೆಚ್ಚಾಗಿದೆ. ನಿಮ್ಮ ನಿರಂತರ ಸಾಹಿತ್ಯ ಸೇವೆಗಾಗಿ ಅವ್ವ ಪುಸ್ತಕಾಲಯವು ನಿಮ್ಮನ್ನು ಅಭಿನಂದಿಸಲಾಗಿದೆ.

- ಅವ್ವ ಪುಸ್ತಕಾಲಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...