ಯಾಂತ್ರೀಕೃತ ಬದುಕು
ರಸ್ತೆ-ರಸ್ತೆಗಳೆಲ್ಲಾ ಕಿಕ್ಕಿರಿದು ನಿಂತಿವೆ ಲೋಹದ ವಾಹಕಗಳು
ಅಷ್ಟೇ ಸಾಕೇ ನೀರಲ್ಲೂ, ಗಾಳಿಯಲ್ಲೂ, ಎಲ್ಲೆಲ್ಲೂ!
ಈಗಷ್ಟೇ ನಿರ್ವಾತದಲ್ಲೂ ಸಂಚರಿಸಲು ಸಿದ್ಧವಾಗಿದ್ದೆವೆ
ವಿಚಿತ್ರ ಬಂಗಿಗಳ ನೃತ್ಯ ನಮ್ಮೀ ಪಾಡಾಗಿದೆ
ಎಲ್ಲರೂ ಓಡುತ್ತಿದ್ದಾರೆ, ಎಲ್ಲಿಗೆಂದು ತಿಳಿಯುತ್ತಿಲ್ಲ!
ಕೆಲವರು ಮೊಬೈಲ್ ಹಿಡಿದು, ಮತ್ತೂ ಹಲವಾರು ಸಿಕ್ಕ ಸಿಕ್ಕ ಹಾದಿಗಳ ಬಡಿದು
ಇಲ್ಲಿ ವಾಕಿಂಗ್ಗೆ ಬರುವುದು ಯಂತ್ರದಲ್ಲೆ..
ಮೂತ್ರ ವಿಸರ್ಜನೆಗೆ ಸಾಗುವುದು ಯಂತ್ರದ ತಂತ್ರದಲ್ಲೆ..
ಕೆಲಸವಿಲ್ಲದೇ ನಮ್ಮದೇ ದೇಹದ ಒಂದೊಂದೇ ಅಂಗಗಳು ನಶಿಸುತಿಲ್ಲವೆ??
ಮೂಳೆಗಳು ಸವೆಯುತ್ತಾ..
ಕರುಳುಗಳು ನೆಲವನ್ನೆ ಅಪ್ಪುವಂತೆ ಬೊಜ್ಜು ಬೆಳೆಸುತ್ತಾ.. ಕಿಡ್ನಿ-ಲಿವರುಗಳು ತಮ್ಮ ಕಾಯಕದಲ್ಲೆ ದ್ವಂದ್ವವಾಗುತಿಲ್ಲವೆ?
ಹೃದಯ ಯಾವಾಗ ನಿಲ್ಲುವುದೊ ಬಡಿಯಲು..
ಅಯ್ಯೋ ಅದನ್ನು ಬಡಿಸಲು ಇಂದು ಯಂತ್ರಗಳು ಬಂದಿವೆ ಬಿಡಿ!
ಆ ಯಂತ್ರ ಕೆಟ್ಟರೆ ಎತ್ತ ಸಾಗಬೆಕಿದೆ ನಾವು?
ಸ್ಮಶಾನದ ಹಾದಿಯ ಬಿಟ್ಟು!!
ನಮ್ಮದೇ ಹಿರಿಯ ತಲೆಗಳು ಬಿತ್ತಿ ಬೆಳೆಸಿದ ಯೋಗಗಳ ಮರೆತುಬಿಟ್ಟೆವಾ ನಾವು?
ಸೈಕಲಿನಲ್ಲೆ ಸಾವಿರ ಮೈಲಿ ಹೊಡೆದ ಆ ರಮ್ಯತೆಯ
ಇತಿಹಾಸ ಮುಚ್ಚಿಹಾಕುತಿರುವೆವಾ ನಾವು??
ತಿರುಗಿ ಒಮ್ಮೆ ನೋಡಿ..
ದೇಹದ ಒಂದೊಂದು ಅಂಗ ಬದುಕಲು
ಒಂದೊಂದು ಯಂತ್ರ ಬರುವ ಮುನ್ನ,
ಓಡೋಣ ಬನ್ನಿ ಪ್ರತಿದಿನವೂ..
ಕಾಲುಗಳು ತತ್ತರಿಸುವವರೆಗೂ..
ಯೋಗ-ಯಾಗಗಳ ಸಿದ್ಧಿಯ ಪಡೆದು
ಹಾರೋಣ, ಈಜೋಣ, ಧ್ಯಾನ ಚಿತ್ತದಿ ಅಲೋಚಿಸೊಣ
ಮತ್ತೊಬ್ಬ ಬುದ್ಧ ಹುಟ್ಟಿ ಬರಲಾರ
ನಮ್ಮೆಲ್ಲರ ಒಳಗೆ ಅವನನ್ನ ಸಾಕಿ ಬೆಳೆಸೋಣ.
ರೋಹಿತ್ ಜಿ
(ಐಎಎಸ್ ವಿಧ್ಯಾರ್ಥಿ)
ಸುಂದರ, ಕವನ
ಪ್ರತ್ಯುತ್ತರಅಳಿಸಿ