ವಿಷಯಕ್ಕೆ ಹೋಗಿ

ಬ್ರಹ್ಮಚರ್ಯವೋ? ಗೃಹಸ್ಥನೋ? - ಲೆಕ್ಕಾಚಾರ ಅಂಕಣ - ಅನಂತ ಕುಣಿಗಲ್


"ಜೀವನದಲ್ಲಿ ಬ್ರಹ್ಮಚರ್ಯವೋ..? ಅಥವಾ ಗೃಹಸ್ಥನೋ..?"

     ಈ ರೀತಿಯ ಒಂದು ಪ್ರಶ್ನೆಗೆ ನೇರವಾಗಿ ಉತ್ತರಿಸುವುದು ತುಂಬ ಕಠಿಣ. ಉತ್ತರಿಸುವಾಗಲೂ ಕೂಡ ತುಂಬ ಎಚ್ಚರಿಕೆ ಇಂದ ಇರಬೇಕಾಗುತ್ತದೆ. ಒಬ್ಬೊಬ್ಬರಿಂದ ಒಂದೊಂದು ಅಭಿಪ್ರಾಯಗಳು ಹೊರಬರುತ್ತವೆ. ಯಾವುದು ಸಮರ್ಥ ಎನ್ನುವುದಕ್ಕೆ ಅವರ ಬಳಿ ಸ್ವ-ಅನುಭವಗಳ ಸಾಲು ಸಾಲು ಕಾರಣಗಳಿರಬಹುದು. ಅಂತೆಯೇ ನಾನೂ ಕೂಡ ನನಗೆ ತೋಚಿದ್ದನ್ನು ಇಲ್ಲಿ ಹೇಳಬಲ್ಲೆ.

ಮೊದಲಿಗೆ ಬ್ರಹ್ಮಚರ್ಯದ ಬಗ್ಗೆ ಮಾತನಾಡುವುದಾದರೆ, ಬ್ರಹ್ಮಚರ್ಯ ಎಂದರೇನು?? ಸ್ಲಖಿಸದೆ ಇರುವುದೇ?? ಮದುವೆಯಾಗದಿರುವುದೇ?? ಮಕ್ಕಳನ್ನು ಮಾಡಿಕೊಳ್ಳದಿರುವುದೇ?? ಅಥವಾ ಒಬ್ಬಂಟಿಯಾಗಿ ಸ್ವತಂತ್ರ ನಿರ್ಧಾರಗಳೊಂದಿಗೆ ಇದ್ದುಬಿಡುವುದೇ?? ಹೀಗೆ ನಾನಾ ಉತ್ತರಗಳು ಕಾಡುವುದುಂಟು.
ಒಬ್ಬಂಟಿಯಾಗಿರುವುದು ಎಂದು ತೆಗೆದುಕೊಳ್ಳುವುದಾದರೆ, ಯಾವುದೇ ಅನುಬಂಧಗಳ ಒತ್ತಡಗಳಿಲ್ಲದೆ, ಕುಟುಂಬದ ಜವಾಬ್ದಾರಿಗಳಿಲ್ಲದೆ, ಏಕಮುಖ ನಿರ್ಧಾರದೊಂದಿಗೆ ನಮಗನಿಸಿದ್ದನ್ನು ನಾವು ಮಾಡುತ್ತಾ ಹೋಗಬಹುದು. ಇದರಿಂದ ಬಹುಶಃ ಸಾಧನೆಯ ಗುರಿಯನ್ನು ಸ್ವಲ್ಪಬೇಗ ತಲುಪಬಹುದೇನೋ.. ಇದು ಗಂಡಸರ ವಿಷ್ಯದಲ್ಲಾದರೆ, ಹೆಂಗಸರ ವಿಷ್ಯದಲ್ಲಿ.. ಅದೂ ನಮ್ಮ ದೇಶದಲ್ಲಿ ಬ್ರಹ್ಮಚರ್ಯ ಅನ್ನೋದು ಅಷ್ಟು ಸುಲಭದ ಮಾತಲ್ಲ. ಒಂಟಿ ಹೆಣ್ಣು, ಮರದ ಮೇಲಿನ ಹಣ್ಣಿಂದ್ಹಂಗೆ. ಅದು ತೊಟ್ಟು ಕಳಚಿ ಬೀಳುವಷ್ಟರಲ್ಲಿ ಹಿಡಿದು ಪೋಷಿಸುವವರೊಬ್ಬರ ಆಸರೆ ಖಂಡಿತ ಬೇಕಾಗುತ್ತದೆ.
ಮರ್ಯಾದೆ, ನಾಚಿಕೆಗಳಿಗೆ ಅಂಜಿ ಜೀವನ ನಡೆಸುವ ಜನರಿರು ಮತ್ತು ವಿಚಾರಯುತ, ಸುಸಂಸ್ಕೃತ ಹಾಗೂ ಸುಸಂಬದ್ಧವಾದ ಆಚರಣೆಗಳ ಮೂಲಕ ಬದುಕು ಕಟ್ಟಿಕೊಂಡಿರುವವರ ದೇಶ ನಮ್ಮದು. ಬ್ರಹ್ಮಚರ್ಯೆಯನ್ನು ಎಲ್ಲಿಯವರೆಗೂ ಕಾಪಾಡಿಕೊಳ್ಳಬಹುದು?? ಒಂದು ಕ್ಷಣಕ್ಕೆ ನೂರಾರು ರೀತಿ ಯೋಚಿಸುವ ನಮ್ಮ ಮನಸ್ಸಿಗೆ ಯಾವುದೇ ಕಡಿವಾಣ ಇಲ್ಲ. ಒಂದಷ್ಟು ದಿನ ಯೋಗ, ಧ್ಯಾನದಿಂದ ಏಕಾಗ್ರತೆಯನ್ನು ನಿಗ್ರಹಿಸಿದ್ದೇ ಆದರೂ ಕೂಡ ಒಂದಲ್ಲಾ ಒಂದು ಚಿಕ್ಕ ಕಾರಣಕ್ಕಾಗಿಯೋ ನಮ್ಮ ಮನಸ್ಸು ಚಂಚಲವಾಗಿ, ಈಗಾಗಲೇ ತೆಗೆದುಕೊಂಡ ನಿರ್ಧಾರದ ವಿರುದ್ಧವಾಗಿ ಯೋಚಿಸುವಂತೆ ಪ್ರೇರೇಪಿಸಬಲ್ಲುದು. ಒಂದು ಲೋಟ ಹಾಲನ್ನು ಒಂದೇ ಹನಿ ಹುಳಿಯು ಹಾಳು ಮಾಡಬಲ್ಲದು. ಹಾಗೆಯೇ ಎಷ್ಟೇ ವರ್ಷ ಬ್ರಹ್ಮಚರ್ಯೆಯನ್ನು ಕಾಪಾಡಿಕೊಂಡು ಬಂದರೂ ಕೂಡ, ಒಂದು ಕ್ಷಣದ ವಿಲಕ್ಷಣ ಯೋಚನೆ ನಮ್ಮ ಅಲ್ಲಿಯವರೆಗಿನ ಪ್ರಯತ್ನವನ್ನು ಹಾಳುಮಾಡಿದಂತೆಯೇ ಅರ್ಥ. ಆಗ ಒಂಟಿತನಕ್ಕೆ ಬ್ರೇಕ್ ಬೇಕು ಎನಿಸದೆ ಇರಲಾರದು.


     ಗೃಹಸ್ಥನಾದರೆ, ಕುಟುಂಬದೊಂದಿಗೆ ಕೆಲವು ಹಿಡಿತಗಳಿಗೆ ಒಳಗಾಗಿ, ಮಾದರಿ ಜೀವನ ಶೈಲಿಯಲ್ಲಿ ದಿನ ಕಳೆಯುವುದು. ಇಲ್ಲಿ ಕೆಲವು ವಿಷಯಗಳಿಗೆ ನಿರ್ಬಂಧವಿದ್ದರೂ ಕೂಡ, ಒಂಟಿತನ ಕಾಡುವುದಿಲ್ಲ. ಸಹಕಾರಕ್ಕಾಗಿ ಸಂಬಂಧ ಎನ್ನುವುದು ಸ್ವಲ್ಪ ದಿನದ ಮಟ್ಟಿಗಾದರೂ ಇದ್ದೇ ಇರುತ್ತದೆ. ಸರಿ-ತಪ್ಪುಗಳನ್ನು ತಿದ್ದಲು ಹಿರಿಯರು ಜೊತೆಯಲ್ಲೇ ಇರುತ್ತಾರೆ. ಕನಸ್ಸುಗಳು ಹೆಚ್ಚು, ಪ್ರಯತ್ನ ಹಾಗೂ ಫಲಿತಾಂಶಗಳು ಕಡಿಮೆ.  ಇಲ್ಲಿ ಎಲ್ಲ ಇದ್ದೂ ಕೂಡ ಇಲ್ಲದಂತೆ ಹೊಂದಿಕೊಂಡು ಜೀವನ ಸಾಗಿಸುತ್ತಿರುತ್ತೇವೆ. ಕುಟುಂಬದ ಜವಾಬ್ದಾರಿಗಳು ದಿನ ಕಳೆದಂತೆ ಒತ್ತಡಗಳಾಗುತ್ತಾಹೋಗುತ್ತವೆ. ಇದರಿಂದ ಮಾನಸಿಕ ನೆಮ್ಮದಿ ಕ್ರಮೇಣ ಕುಂದುತ್ತಾಹೋಗುತ್ತದೆ. ಮಕ್ಕಳನ್ನು ಓದಿಸಿ, ಮದುವೆ ಮಾಡಿದರೆ ಅಲ್ಲಿಗೆ ಜವಾಬ್ದಾರಿ ತೀರುವುದಿಲ್ಲ. ನಾವು ಸಾಯುವವರೆಗೂ ನಮ್ಮ ಬೀಜಗಳನ್ನು ಕಾಪಿಡಿಕೊಳ್ಳುವ ಹೊಣೆ ನಮ್ಮದಾಗಿರುತ್ತದೆ. ಆದರೆ ವಯಸ್ಸಾದಂತೆ ನಮ್ಮ ಕೈಲಿದ್ದ ಕುಟುಂಬದ ಹಿಡಿತವೂ ಕಡಿಮೆಯಾಗುತ್ತಾಹೋಗುತ್ತದೆ. ಆಗ ಒಂಟಿಯಾಗಿರಬೇಕೆನಿಸುತ್ತದೆ.

ಎರಡನ್ನೂ ಹೋಲಿಕೆ ಮಾಡಿ ಹೇಳುವುದಾದರೆ, ಮನುಷ್ಯ ಭಾವಜೀವಿ ಮತ್ತು ಸಂಘಜೀವಿ ಕೂಡ. ಆತನ ಭಾವನೆಗಳಿಗೆ ಸ್ಪಂದಿಸುವ ಯಾರಾದರೂ ಜೊತೆಯಲ್ಲಿ ಅರ್ಥಮಾಡಿಕೊಂಡು ಇದ್ದರೆ ಚೆಂದ ಎನಿಸುತ್ತದೆ. ಗಂಡಿಗೆ ಹೆಣ್ಣು ಅಥವಾ ಹೆಣ್ಣಿಗೆ ಗಂಡೇ ಆಗಬೇಕೆಂದೇನಿಲ್ಲ. ಗಂಡು-ಗಂಡು ಮತ್ತು ಹೆಣ್ಣು-ಹೆಣ್ಣು ಕೂಡ ಭಾವನೆಗಳಿಗೆ ಸ್ಪಂದಿಸಬಹುದು. ಆದರೆ ಇಂಥಾ ಸಂಬಂಧಗಳು ಅನೇಕ ಬಾರಿ ಕೆಟ್ಟ ಚಾಳಿಗಳಿಗೆ ಬಲಿಯಾಗುವುದುಂಟು. ಕುಟುಂಬ ಮಾಡಿಕೊಂಡಾಕ್ಷಣದಿಂದ ನಮ್ಮ ಸ್ವಸ್ವಾತಂತ್ರ್ಯ ಮುಗಿದೇಹೋಗಬಹುದು. ಆದರೆ, ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಬೇಕು-ಬೇಡಗಳನ್ನು ಸಮಾಲೋಚಿಸಿ, ಸರಿಯಾದ ಅರ್ಥಪೂರ್ಣ ನಿರ್ಣಯಗಳೊಂದಿಗೆ ಟಿಪಿಕಲ್ ಜೀವನ ನಡೆಸುವುದು ಸೂಕ್ತ. ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಆಗದಿದ್ದಮೇಲೆ, ಜೀವ ವಿಕಾಸದಲ್ಲಿ ಒಂದೇ ಲಿಂಗ ಇರಬೇಕಿತ್ತು. ಆದ್ದರಿಂದ ನನ್ನ ಬೆಂಬಲ ಸಾಂಸಾರಿಕನಿಗೆ.


ಹಾಗಿದ್ದಾಗ ತೃತೀಯ ಲಿಂಗಿಗಳ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಅವರಿಗೂ ಒಂದು ಬದುಕಿದೆ. ಅವರು ಗಂಡು-ಹೆಣ್ಣನ್ನು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. SWAG (secretly we are gay) ಮತ್ತು LGBTQ ( https://www.timeout.com/london/nightlife/the-best-gay-clubs-in-london ) ನಂತಹ ಹಲವಾರು ತಂಡಗಳ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಇಲ್ಲಿ ಯಾರು ಯಾರನ್ನು ಬೇಕಾದರೂ ಬಯಸಬಹುದು. ಆದರೆ ಎರಡೂ ಕಡೆಯಿಂದ ಒಪ್ಪಿಗೆ ಇದ್ದಾಗ ಮಾತ್ರ ಮುಂದುವರೆಯಬಹುದು. ಇದು ಕಾಮತೃಷೆಯ ಮಾತು.
ಮನುಷ್ಯನ ಜೀವನದಲ್ಲಿ ಕಾಮತೃಷೆಯೂ ಕೂಡ ಪ್ರಮುಖವಾದದ್ದು. ಕೆಲವರು ಮೂಗುಮುರಿಯಬಹುದು. ಇನ್ನೂ ಕೆಲವರು ಬಾಯಿಬಿಡದಿರಬಹುದು. ಮತ್ತೆ ಕೆಲವರು ನಾಲ್ಕು ಗೋಡೆಗಳಿಗೆ ಸಂಬಂಧಿಸಿದ್ದು ಎಂದು ಪ್ರತಿಪಾದಿಸಬಹುದು. ಎಲ್ಲದರ ಗುರಿ ಒಂದೇ ಆಗಿರುತ್ತದೆ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ.
ಕಾಮತೃಷೆ ಎಂದಾಗ ಅತ್ಯಾಚಾರದ ಪ್ರಕರಣಗಳು ಕಾಣುತ್ತವೆ. ಅತ್ಯಾಚಾರವೆಂಬುದು ಅಪರಾಧ. ಇಷ್ಟವಿಲ್ಲದೆ, ಹಸಿವಾಗದೆ ಊಟವನ್ನೂ ಮಾಡದ ನಾವುಗಳು ಕಾಮದ ದೃಷ್ಠಿಯಲ್ಲಿ ಇಬ್ಬರ ಹಸಿವುಗಳ ಬಗ್ಗೆ ಯೋಚಿಸಿ ಮುಂದುವರೆಯಬೇಕಾಗುತ್ತದೆ. ಹೀಗೆ ಮಾತನಾಡುತ್ತಾ ಹೋದರೆ ಒಂದಕ್ಕೆ ಒಂದು ವಿಷಯವೆಂಬಂತೆ ಲೇಖನ ದೊಡ್ಡದಾಗುತ್ತಾಹೋಗುತ್ತದೆಯೇ ಹೊರತು ಮೇಲಿನ ಪ್ರಶ್ನೆಗೆ ನಿಖರವಾದ ಉತ್ತರ ಸಿಗುವುದು ಕಷ್ಟ.

ಆದರೆ, ನಿಖರ ಅಭಿಪ್ರಾಯಗಳಂತು ಸಿಕ್ಕೇ ಸಿಗುತ್ತವೆ.
ನಮಗೆ 18 ಮತ್ತು 21 ವಯಸ್ಸು ಮದುವೆಯಾಗಲು ಸೂಕ್ತವೆಂಬುದು ಗೊತ್ತು. ಈಗೆಲ್ಲ 25-35 ವಯಸ್ಸಿಗೆ ಸೆಟಲ್ ಆಗಿ ಮದುವೆಯಾಗುತ್ತಿರುವುದರಿಂದ ಹೀಗೆ ಹೇಳುತ್ತಿದ್ದೇನೆ. ಮದುವೆಯವರೆಗೂ ಬ್ರಹ್ಮಚಾರಿಯಾಗಿಯೇ ಬಂದಿರುತ್ತೇವೆ. ಅದರ ನಂತರ ಸಂಸಾರವನ್ನೂ ಅನುಭವಿಸಿ ನೋಡಿಯೇಬಿಡೋಣ. ಮನುಷ್ಯ ಎಂದಮೇಲೆ ಸ್ವಾಭಾವಿಕವಾದ ಎಲ್ಲ ಅನುಭವಗಳನ್ನು ಪಡೆಯದೆ ಮಣ್ಣಾದರೆ ಅದು ನಿರರ್ಥಕವಾಗುತ್ತದೆ.
ಒಂದು ಮಗುವಿಗೆ ತಂದೆ ಮುಖ್ಯವೋ ಅಥವಾ ತಾಯಿ ಮುಖ್ಯವೋ ಎನ್ನುವುದಕ್ಕಿಂತ ಪೋಷಣೆ ಮುಖ್ಯವಾಗುತ್ತದೆ. ಹಾಗೆಯೇ ಮನುಷ್ಯನಿಗೆ ಬ್ರಹ್ಮಚರ್ಯವೋ ಅಥವಾ ಗೃಹಸ್ಥನೋ ಎಂಬುದಕ್ಕಿಂತ ಆತನ ಭವಿಷ್ಯದ ಯೋಜನೆಗಳೇನು, ಅವನಿಗೆ ಅವಶ್ಯಕವಾದದ್ದು ಯಾವುದು ಎಂಬುದರ ಮೇಲೆ ಮೇಲಿನ ಪ್ರಶ್ನೆಗೆ ತಾತ್ಕಾಲಿಕ ಉತ್ತರ ಸಿಗಬಹುದು.

ನನಗಂತೂ ಸಂಸಾರದಲ್ಲಿಯೇ ಹೆಚ್ಚು ನಂಬಿಕೆ.
ಮಾತುಗಳಲ್ಲಿ ತಪ್ಪು ಕಂಡರೆ ಕ್ಷಮೆಯಿರಲಿ. ಈಮೇಲಿನ ಎಲ್ಲವೂ ನನ್ನ ವಯಕ್ತಿಕ ಅಭಿಪ್ರಾಯ.
ಕೆಲವು ವಿಯಷಯಗಳ ಬಗ್ಗೆ ಮಾತನಾಡಲು ಅನುಭವವೇ ಬೇಕಾಗಿಲ್ಲ. ಅದರ ಬಗ್ಗೆ ಬಲ್ಲಮೂಲಗಳಿಂದ ತಿಳಿದುಕೊಂಡಿದ್ದರೆ ಸಾಕು.
ಹಾಗಾಗಿ, ಯಾವುದೇ ವಾಕ್ಯ ಸಂಬಂಧಿತ ತಪ್ಪು ತಿಳಿಯುವ ಅವಶ್ಯವಿಲ್ಲ.

- ಅನಂತ ಕುಣಿಗಲ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...