ಸಮಯಕ್ಕೂ ಬಡತನ ಬಂತಪ್ಪಾ
ಉಸಿರುಗಟ್ಟಿ..
ಸಾಯುವುದೊಂದೇ ಬಾಕಿ!
ಸಾಯುವುದಿನ್ನೆಲ್ಲಿ?
ಅದಾಗಲೇ ನಾವೆಲ್ಲ ಸತ್ತಿದ್ದೇವಲ್ಲಾ..
ಬೆಳದಿಂಗಳೆಂದರೇನು?
ಸೂರ್ಯೋದಯದ ಸೊಬಗೇನು?
ಸ್ವಚ್ಚಂದ ಗಾಳಿಯ ಗಂಧ
ಬಿಸಿಲು ಮಳೆಯ ಪರಿಮಳ
ಮಿಂಚುಳದ ನಗೆಯಾಟ
ಸಿಡಿಲು-ಗುಡುಗುಗಳ ಕೂಗು
ಯಾವುದರ ಸ್ಪರ್ಶವಿಲ್ಲದೆ
ಯಂತ್ರವಾಗುತ್ತಿದ್ದೇವಲ್ಲಾ..
ಎರಡು ಬೆಳರಳಿನಿಂದಲೇ ಸಂಬಂಧ
ಸಂಸಾರದ ನಡಿಗೆಯೂ ಅಲ್ಲೇ..
ವಿಚ್ಚೇದನವೂ ಅಲ್ಲೇ..
ಮಕ್ಕಳು, ತಂದೆ-ತಾಯಿಯ ಒಡನಾಟವಿಲ್ಲ
ನಾಲ್ಕು ಗೋಡೆಗಳ ಮಧ್ಯೆ ಸಿಲುಕಿ
ಒಂಟಿತನವನು ಸದಾ ಶಪಿಸುತ್ತಾ..
ಯಮನ ಆಗಮನಕ್ಕಾಗಿ ಕಾಯುತ್ತೇವೆ
ಇಲ್ಲಾ, ನಾವೇ ಹೋಗುತ್ತೇವೆ
ಬಣ್ಣ ಬಣ್ಣದ ಸೂಟು
ಇಂಪೋರ್ಟೆಡ್ ಬೂಟು
ಕಣ್ಣಿಗೆ ಕಪ್ಪು
ಕಿವಿಗೆ ಬೀಗ
ಆದರೂ ನಮ್ಮದು ಬೆತ್ತಲೆ ದೇಹ
ಬೀದಿಯಲ್ಲಿನ ಬೆಕ್ಕುಗಳು
ಕಿತ್ತು ತಿನ್ನುವ ಕಾಗೆಗಳು
ಎಲ್ಲವೂ ಸ್ವತಂತ್ರ ಪಡೆದುಕೊಂಡಿವೆ
ಮನುಷ್ಯನೊಬ್ಬನೇ ಇನ್ನು ಅಲೆಯುತ್ತಿದ್ದಾನೆ
ಅದೇನು ತಿನ್ನುತ್ತಾನೋ..
ಅದೇನು ಮಾಡುತ್ತಾನೋ..
ಬಿಡುವೇ ಇಲ್ಲದೆ
ಸಮಯದ ಬಡತನದಿಂದ
ಉಸಿರಾಡಲು ಕೂಡ
ಒದ್ದಾಡುತ್ತಿದ್ದಾನೆ
ಆಗಲೇ ಒಮ್ಮೆ ಸತ್ತಿದ್ದಾನೆ
ಮುಕ್ತಿಗಾಗಿ ಹಪಾಹಪಿಸುತ್ತಿದ್ದಾನೆ
ಎರಡೇ ದಿನಕ್ಕೆ
ಎಲ್ಲಾ ಸಂಬಂಧಗಳು ಸುಸ್ತು
ಗೊಂಬೆಗಳು ಮಕ್ಕಳ ಗೆಳೆಯರು
ನಾಯಿಮರಿಗಳೇ ತಂದೆ-ತಾಯಿಗಳು
ಮೊಬೈಲ್ ಗುರುವಾಗಿದ್ದಾನೆ
ಜಗತ್ತು ಮತ್ತೆ ಚಪ್ಪಟ್ಟೆಯಾಗಿದೆ
ಕಣ್ಣು ಕಾಣದೆ ಪಾತಾಳಕ್ಕಿಳಿಯುತ್ತಿದ್ದಾರೆ
ಎಲ್ಲರೂ ಮಾಯವಾಗಿದ್ದಾರೆ
#ಅನಂತ ಕುಣಿಗಲ್
ಉಸಿರುಗಟ್ಟಿ..
ಸಾಯುವುದೊಂದೇ ಬಾಕಿ!
ಸಾಯುವುದಿನ್ನೆಲ್ಲಿ?
ಅದಾಗಲೇ ನಾವೆಲ್ಲ ಸತ್ತಿದ್ದೇವಲ್ಲಾ..
ಬೆಳದಿಂಗಳೆಂದರೇನು?
ಸೂರ್ಯೋದಯದ ಸೊಬಗೇನು?
ಸ್ವಚ್ಚಂದ ಗಾಳಿಯ ಗಂಧ
ಬಿಸಿಲು ಮಳೆಯ ಪರಿಮಳ
ಮಿಂಚುಳದ ನಗೆಯಾಟ
ಸಿಡಿಲು-ಗುಡುಗುಗಳ ಕೂಗು
ಯಾವುದರ ಸ್ಪರ್ಶವಿಲ್ಲದೆ
ಯಂತ್ರವಾಗುತ್ತಿದ್ದೇವಲ್ಲಾ..
ಎರಡು ಬೆಳರಳಿನಿಂದಲೇ ಸಂಬಂಧ
ಸಂಸಾರದ ನಡಿಗೆಯೂ ಅಲ್ಲೇ..
ವಿಚ್ಚೇದನವೂ ಅಲ್ಲೇ..
ಮಕ್ಕಳು, ತಂದೆ-ತಾಯಿಯ ಒಡನಾಟವಿಲ್ಲ
ನಾಲ್ಕು ಗೋಡೆಗಳ ಮಧ್ಯೆ ಸಿಲುಕಿ
ಒಂಟಿತನವನು ಸದಾ ಶಪಿಸುತ್ತಾ..
ಯಮನ ಆಗಮನಕ್ಕಾಗಿ ಕಾಯುತ್ತೇವೆ
ಇಲ್ಲಾ, ನಾವೇ ಹೋಗುತ್ತೇವೆ
ಬಣ್ಣ ಬಣ್ಣದ ಸೂಟು
ಇಂಪೋರ್ಟೆಡ್ ಬೂಟು
ಕಣ್ಣಿಗೆ ಕಪ್ಪು
ಕಿವಿಗೆ ಬೀಗ
ಆದರೂ ನಮ್ಮದು ಬೆತ್ತಲೆ ದೇಹ
ಬೀದಿಯಲ್ಲಿನ ಬೆಕ್ಕುಗಳು
ಕಿತ್ತು ತಿನ್ನುವ ಕಾಗೆಗಳು
ಎಲ್ಲವೂ ಸ್ವತಂತ್ರ ಪಡೆದುಕೊಂಡಿವೆ
ಮನುಷ್ಯನೊಬ್ಬನೇ ಇನ್ನು ಅಲೆಯುತ್ತಿದ್ದಾನೆ
ಅದೇನು ತಿನ್ನುತ್ತಾನೋ..
ಅದೇನು ಮಾಡುತ್ತಾನೋ..
ಬಿಡುವೇ ಇಲ್ಲದೆ
ಸಮಯದ ಬಡತನದಿಂದ
ಉಸಿರಾಡಲು ಕೂಡ
ಒದ್ದಾಡುತ್ತಿದ್ದಾನೆ
ಆಗಲೇ ಒಮ್ಮೆ ಸತ್ತಿದ್ದಾನೆ
ಮುಕ್ತಿಗಾಗಿ ಹಪಾಹಪಿಸುತ್ತಿದ್ದಾನೆ
ಎರಡೇ ದಿನಕ್ಕೆ
ಎಲ್ಲಾ ಸಂಬಂಧಗಳು ಸುಸ್ತು
ಗೊಂಬೆಗಳು ಮಕ್ಕಳ ಗೆಳೆಯರು
ನಾಯಿಮರಿಗಳೇ ತಂದೆ-ತಾಯಿಗಳು
ಮೊಬೈಲ್ ಗುರುವಾಗಿದ್ದಾನೆ
ಜಗತ್ತು ಮತ್ತೆ ಚಪ್ಪಟ್ಟೆಯಾಗಿದೆ
ಕಣ್ಣು ಕಾಣದೆ ಪಾತಾಳಕ್ಕಿಳಿಯುತ್ತಿದ್ದಾರೆ
ಎಲ್ಲರೂ ಮಾಯವಾಗಿದ್ದಾರೆ
#ಅನಂತ ಕುಣಿಗಲ್
ತುಂಬಾ ಚೆನ್ನಾಗಿದೆ ಅಣ್ಣ
ಪ್ರತ್ಯುತ್ತರಅಳಿಸಿ