ಯಾರ ಸ್ವಾತಂತ್ರ್ಯ ?
ಬಂತಪ್ಪ ಸ್ವಾತಂತ್ರ್ಯ
ಆಗಷ್ಟ್ ಹದಿನೈದರ ಸ್ವಾತಂತ್ರ್ಯ
47ರ ಮಧ್ಯ ರಾತ್ರಿಯ ಸ್ವಾತಂತ್ರ್ಯ
ಭೂಮಿ ನುಂಗುವರ ಪಾಲಿಗೆ ಬಂತು
ಅನುದಾನ ತಿನ್ನುವರ ನಾಲ್ಗೆಗೆ ಬಂತು
ಸುಳ್ಳು ಬುರುಕರ ಪಾಲಿಗೆ ಬಂತು
ಆಗಷ್ಟ್ ಹದಿನೈದರ ಸ್ವಾತಂತ್ರ್ಯ
ಕಾಳ ಧನಿಕರ ಜೇಬಿಗೆ ಬಂತು
ಬಡವರ ಕೊರಳಿಗೆ ಉರುಳೆ ಆಯ್ತು
ಹೆಣ್ಣು ಮಕ್ಕಳ ಕಣ್ಣೀರಾಯ್ತು
47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ
ಧರ್ಮಗಳ ನಡುವಿನ ಕಂದರವಾಯ್ತು
ಜಾತಿಯ ಆಳದ ಬೇರು ಬಿಟ್ಟಾಯ್ತು
ಮಾನವ ಧರ್ಮವ ಮರೆಯಿಸಿ ಬಿಟ್ಟಿತು
ಆಗಷ್ಟ್ 15ರ ಸ್ವಾತಂತ್ರ್ಯ
ಸಮಾನ ಆರೋಗ್ಯ ತರಲೇ ಇಲ್ಲ
ಸಮಾನ ಶಿಕ್ಷಣ ಕೊಡಿಸಲೇ ಇಲ್ಲ
ಸಮಾನ ಸಂಪತ್ತು ಹಂಚಲೇ ಇಲ್ಲ
47ರ ಮಧ್ಯರಾತ್ರಿಯ ಸ್ವಾತಂತ್ರ್ಯ
ಜಾತಿಯ ಸೋಂಕು ತೊಲಗಲೇ ಇಲ್ಲ
ಅಸಮಾನತೆಯ ನೀಗಿಸಲಿಲ್ಲ
ಹಸಿದವರತ್ತ ಸರಿಯಲೂ ಇಲ್ಲ
ಆಗಷ್ಟ್ 15ರ ಸ್ವಾತಂತ್ರ್ಯ
ಸುಳ್ಳು ಬುರುಕರ ಪಾಲಿಗೆ ಬಂತೆ
ಕೋಮುವಾದಿಗಳ ಬಾಯಿಗೆ ಬಂತೆ
ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ
47ರ ಸ್ವಾತಂತ್ರ್ಯ
ಕಾಲಿನ ಕೋಳವು ಮುರಿಯಲು ಇಲ್ಲ
ಜೀತದ ದುಡಿಮೆಯು ನಿಲ್ಲಲೇ ಇಲ್ಲ
ದಣಿಗಳ ದನಿಯು ಕುಗ್ಗಲೇ ಇಲ್ಲ
ಬಡವನ ಬವಣೆ ತಗ್ಗಿಸಲಿಲ್ಲ
47ರ ಸ್ವಾತಂತ್ರ್ಯ
ಸಿಕ್ಕ ಲಿ ಸರ್ವರಿಗೂ ಸಮಪಾಲು
ಸಿಕ್ಕಲಿ ಸರ್ವರಿಗೂ ಸಮಬಾಳು
ಸಿಕ್ಕಲಿ ಸರ್ವರಿಗೂ ಬ್ರಾತೃತ್ವ
ಮೆರೆಯಲಿ ಮೊರೆಯಲಿ ಭಾರತತ್ವ
ಅರ್ಥ ಪೂರ್ಣವಾಗಲಿ ಸ್ವಾತಂತ್ರ್ಯ
47ರ ಸ್ವಾತಂತ್ರ್ಯ ಆಗಷ್ಟ್ ಹದಿನೈದರ ಸ್ವಾತಂತ್ರ್ಯ
ಚಂದ್ರಪ್ಪ ಬೆಲವತ್ತ
ಪ್ರಾಧ್ಯಾಪಕರು, ಪ್ರಾಣಿಶಾಸ್ತ್ರ ವಿಭಾಗ
ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ