(ಚಿತ್ರ ಕೃಪೆ : ಗೂಗಲ್)
ಆ ನಾಲ್ಕು ಕೈಗಳು
ಬೇರೆ ಆವ ಅವಕಾಶವೂ ಇಲ್ಲದೆ
ಕಣ್ಣೀರಿನೊಂದಿಗೆ
ಸುಮ್ಮನೆ ಆಕಾಶ ನೋಡುತ್ತಿದ್ದೆ
ಚಿಕ್ಕಂದಿನಲ್ಲಿ ಚುಕ್ಕಿ ಎಣಿಸುತ್ತಿದ್ದೆ
ಈಗ ಆ ಚುಕ್ಕಿಗಳು ಕಾಣೆಯಾಗಿವೆ
ಚಿಕ್ಕ ಕಣ್ಗಳಿಗೆ ಚಂದ್ರ ದೊಡ್ಡದಾಗಿದ್ದ
ಇಂದು ಆತನ ಬೆಳಕು ಸಾಲದಾಗಿದೆ
ಮರಗಿಡಗಳೂ ನಿಶಬ್ಧವಾಗಿವೆ
ಒಳಗೊಳಗೆ ಅತ್ತು ಕಣ್ಣೀರ ನುಂಗುತ್ತಿವೆ
ನನ್ನ ಅಸಹಾಯಕತೆಯ ನೋಡಿ
ಕಲ್ಲು-ಮಣ್ಣು ನನಗೆ ಹಾಸಿಗೆಯಾಗಿವೆ
ಮುಡಿಯ ಮಲ್ಲಿಗೆ ಬಾಡಿದೆ
ಬೇರೆ ಆವ ಅವಕಾಶವೂ ಇಲ್ಲದೆ
ಕಣ್ಣೀರಿನೊಂದಿಗೆ
ಸುಮ್ಮನೆ ಆಕಾಶ ನೋಡುತ್ತಿದ್ದೆ
ಚಿಕ್ಕಂದಿನಲ್ಲಿ ಚುಕ್ಕಿ ಎಣಿಸುತ್ತಿದ್ದೆ
ಈಗ ಆ ಚುಕ್ಕಿಗಳು ಕಾಣೆಯಾಗಿವೆ
ಚಿಕ್ಕ ಕಣ್ಗಳಿಗೆ ಚಂದ್ರ ದೊಡ್ಡದಾಗಿದ್ದ
ಇಂದು ಆತನ ಬೆಳಕು ಸಾಲದಾಗಿದೆ
ಮರಗಿಡಗಳೂ ನಿಶಬ್ಧವಾಗಿವೆ
ಒಳಗೊಳಗೆ ಅತ್ತು ಕಣ್ಣೀರ ನುಂಗುತ್ತಿವೆ
ನನ್ನ ಅಸಹಾಯಕತೆಯ ನೋಡಿ
ಕಲ್ಲು-ಮಣ್ಣು ನನಗೆ ಹಾಸಿಗೆಯಾಗಿವೆ
ಮುಡಿಯ ಮಲ್ಲಿಗೆ ಬಾಡಿದೆ
ತಪ್ಪಿಸಿಕೊಳ್ಳಲು ಪ್ರಯತ್ನಿಸಿದುದರ ಫಲವಾಗಿ
ಸುಗಂಧ ಸೂಸಬೇಕಾದ ಮೈಯಿಂದ
ಬಿಸಿ ಬೆವರು ಶಾಂತವಾಗಿ ಹರಿಯುತ್ತಿದೆ
ಆ ನಾಲ್ಕು ಬಾಯಿಗಳ ದುರ್ನಾತ
ನನ್ನ ಮೂಗನ್ನೇ ಕೊಳೆಯುವಂತೆ ಮಾಡಿ
ಕೈಗಳೆರಡು ನನ್ನ ರಟ್ಟೆಯನ್ನು ಬಲವಾಗಿ ಹಿಡಿದಿವೆ
ಕೊಸರಲು ಆಗುತ್ತಿಲ್ಲ
ಒಣಗಿದ ಗಂಟಲನ್ನು ಎಂಜಲಿನಿಂದ ತಣಿಸುತ್ತಿದ್ದಾರೆ
ಕಿವಿಗಳಿಗೆ ಅವರ ಶ್ರಮ ನಿರಂತರವಾಗಿ ಕೇಳಿಸುತ್ತಿದೆ
ಕೊರಳನ್ನು ಯಾಕೆ ಬಿಟ್ಟಿದ್ದಾರೋ..
ಜೀವಂತ ಇರಬೇಕಲ್ಲಾ.. ತೃಷೆ ತೀರುವವರೆಗೆ!
ಎದೆಗಳೆರಡನ್ನೂ ಹೀರಿದ್ದಾರೆ
ಇನ್ನೇನು ಉಳಿದಿಲ್ಲ ಅಲ್ಲಿ
ಇನ್ಯಾವುದೋ ಕೈಗಳು
ಕಾಲನ್ನು ಅಗಲಿಸಿ ಹಿಡಿದಿವೆ
ನನ್ನ ಮೇಲೆ ಬಿದ್ದಿರುವ ನಾಲ್ಕು ಜನರೇ
ನನಗೆ ವಸ್ತ್ರವಾಗಿದ್ದಾರೆ
ಇಂಚಿಂಚೂ ಬಿಡದೆ ಕಚ್ಚಿ
ರಕ್ತದ ರುಚಿ ನೋಡುತ್ತಿದ್ದಾರೆ
ಚೂಪಾದ ಮೂರನೆ ಕೈಗಳಿಂದ
ನನ್ನ ಒಡಲನ್ನು ಒಬ್ಬರಂತೆ ಒಬ್ಬರು
ಎಡೆಬಿಡದಂತೆ ಸೀಳುತ್ತಿದ್ದಾರೆ
ಆ ರಕ್ತವೂ ಕೂಡ ಅವರನ್ನು ತಣಿಸಲಿಲ್ಲ
ಹಣ್ಣನ್ನು ತಿನ್ನುವುದಲ್ಲದೆ,
ಬೀಜವನ್ನೂ ಜಜ್ಜುತ್ತಿದ್ದಾರೆ
ಸಾಯಲು ಬಿಡದೆ..
ಸವಿಯುತ್ತಿದ್ದಾರೆ ಬೆಳವಣಿಗೆಯೇ ಇಲ್ಲದ
ಎಳೆ ಮರದ ನಾರ ಕತ್ತರಿಸುತ್ತಿದ್ದಾರೆ
ಇನ್ನಾವ ದಾರಿಯೂ ಇಲ್ಲ
ನಾಳೆಯಿಂದ ನಿಮಗೆ ನಾ ಕಾಣುವುದಿಲ್ಲ
ಕೊನೆಯ ಕೋರಿಕೆ ಒಂದೇ..
ಆ ನಾಲ್ಕು ಕೈಗಳಿಗಳಿಗೆ ಇಲ್ಲಿಂದ ಸಡಿಲಗೊಂಡಮೇಲೆ
ಅವರ ಅಕ್ಕ-ತಂಗಿಯರು ನೆನಪಾಗದಿರಲಿ!!
ನಾ ಆಕಾಶ ನೋಡುತ್ತಾ.. ಸುಮ್ಮನೆ ಮಲಗುತ್ತೇನೆ!
#ಅನಂತ
ಸುಗಂಧ ಸೂಸಬೇಕಾದ ಮೈಯಿಂದ
ಬಿಸಿ ಬೆವರು ಶಾಂತವಾಗಿ ಹರಿಯುತ್ತಿದೆ
ಆ ನಾಲ್ಕು ಬಾಯಿಗಳ ದುರ್ನಾತ
ನನ್ನ ಮೂಗನ್ನೇ ಕೊಳೆಯುವಂತೆ ಮಾಡಿ
ಕೈಗಳೆರಡು ನನ್ನ ರಟ್ಟೆಯನ್ನು ಬಲವಾಗಿ ಹಿಡಿದಿವೆ
ಕೊಸರಲು ಆಗುತ್ತಿಲ್ಲ
ಒಣಗಿದ ಗಂಟಲನ್ನು ಎಂಜಲಿನಿಂದ ತಣಿಸುತ್ತಿದ್ದಾರೆ
ಕಿವಿಗಳಿಗೆ ಅವರ ಶ್ರಮ ನಿರಂತರವಾಗಿ ಕೇಳಿಸುತ್ತಿದೆ
ಕೊರಳನ್ನು ಯಾಕೆ ಬಿಟ್ಟಿದ್ದಾರೋ..
ಜೀವಂತ ಇರಬೇಕಲ್ಲಾ.. ತೃಷೆ ತೀರುವವರೆಗೆ!
ಎದೆಗಳೆರಡನ್ನೂ ಹೀರಿದ್ದಾರೆ
ಇನ್ನೇನು ಉಳಿದಿಲ್ಲ ಅಲ್ಲಿ
ಇನ್ಯಾವುದೋ ಕೈಗಳು
ಕಾಲನ್ನು ಅಗಲಿಸಿ ಹಿಡಿದಿವೆ
ನನ್ನ ಮೇಲೆ ಬಿದ್ದಿರುವ ನಾಲ್ಕು ಜನರೇ
ನನಗೆ ವಸ್ತ್ರವಾಗಿದ್ದಾರೆ
ಇಂಚಿಂಚೂ ಬಿಡದೆ ಕಚ್ಚಿ
ರಕ್ತದ ರುಚಿ ನೋಡುತ್ತಿದ್ದಾರೆ
ಚೂಪಾದ ಮೂರನೆ ಕೈಗಳಿಂದ
ನನ್ನ ಒಡಲನ್ನು ಒಬ್ಬರಂತೆ ಒಬ್ಬರು
ಎಡೆಬಿಡದಂತೆ ಸೀಳುತ್ತಿದ್ದಾರೆ
ಆ ರಕ್ತವೂ ಕೂಡ ಅವರನ್ನು ತಣಿಸಲಿಲ್ಲ
ಹಣ್ಣನ್ನು ತಿನ್ನುವುದಲ್ಲದೆ,
ಬೀಜವನ್ನೂ ಜಜ್ಜುತ್ತಿದ್ದಾರೆ
ಸಾಯಲು ಬಿಡದೆ..
ಸವಿಯುತ್ತಿದ್ದಾರೆ ಬೆಳವಣಿಗೆಯೇ ಇಲ್ಲದ
ಎಳೆ ಮರದ ನಾರ ಕತ್ತರಿಸುತ್ತಿದ್ದಾರೆ
ಇನ್ನಾವ ದಾರಿಯೂ ಇಲ್ಲ
ನಾಳೆಯಿಂದ ನಿಮಗೆ ನಾ ಕಾಣುವುದಿಲ್ಲ
ಕೊನೆಯ ಕೋರಿಕೆ ಒಂದೇ..
ಆ ನಾಲ್ಕು ಕೈಗಳಿಗಳಿಗೆ ಇಲ್ಲಿಂದ ಸಡಿಲಗೊಂಡಮೇಲೆ
ಅವರ ಅಕ್ಕ-ತಂಗಿಯರು ನೆನಪಾಗದಿರಲಿ!!
ನಾ ಆಕಾಶ ನೋಡುತ್ತಾ.. ಸುಮ್ಮನೆ ಮಲಗುತ್ತೇನೆ!
#ಅನಂತ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ