ನನ್ನ ಶವಯಾತ್ರೆಯ ಕನಸು
ನಾನು ಎಪ್ಪತ್ತನ್ನು ದಾಟುವುದಿಲ್ಲ ಬಿಡಿ!
ಹೌದು, ಅಷ್ಟೊಂದು ಭರವಸೆ
ನನ್ನ ಮೇಲೆ
ಹಾಗೂ ನನ್ನಂಥವರ ಮೇಲೆ
ನಮ್ಮ ಜೀವನ ಶೈಲಿಯೇ ಹಾಗೆ..
ತಿನ್ನುವುದು ಕುಡಿಯುವುದಾದರೂ ಏನನ್ನು?
ರೆಫ್ರಿಜರೇಟಿನಲ್ಲಿ ಶೇಖರಿಸಿಟ್ಟ ಆಹಾರ
ಚರಂಡಿ-ಮೋರಿಗಳಿಂದ ಬೀಸುವ ಗಾಳಿ
ಈ ಕಣ್ಣುಗಳು ಅದೆಷ್ಟು ಪಾಪಿಗಳು
ದಿನವೂ ಹಿಂಸಿಸಲ್ಪಡುತ್ತವೆ
ನೋಡಬಾರದ್ದನ್ನೆಲ್ಲ ನೋಡುತ್ತಾ..
ಕಿವಿಗಳು ಏನೇನೋ ಆಲಿಸುತ್ತವೆ
ಬಾಯಿಗಳಿಗಂತು ಬಿಡುವೇ ಇಲ್ಲ
ಒಂದು ಜೋಡಿ ಲಾಳ ಹೊಡೆಸಬೇಕು
ಕಾಲುಗಳಿಗೆ ಮತ್ತು ಕೈಗಳಿಗೆ
ಶುದ್ಧವಾದ ಕೆಲಸಗಳು ಸಿಗಬೇಕು
ಮನಸ್ಸಿಗೆ ಮಿದುಳಿಗೆ
ಒಳಿನ್ನೇ ಯೋಚಿಸುವಂತಹ ಬುದ್ದಿ ಬರಬೇಕು
ಈಗ ಮೂಗಿಗೆ ಮಾಸ್ಕ್ ಬಂದು
ಅದು ಸ್ವಲ್ಪ ಸುಧಾರಿಸಿದೆ
ನಾನು ಎಪ್ಪತ್ತನ್ನು ದಾಟುವುದಿಲ್ಲ ಬಿಡಿ!
ಹೌದು, ಅಷ್ಟೊಂದು ಭರವಸೆ
ನನ್ನ ಮೇಲೆ
ಹಾಗೂ ನನ್ನಂಥವರ ಮೇಲೆ
ನಮ್ಮ ಜೀವನ ಶೈಲಿಯೇ ಹಾಗೆ..
ತಿನ್ನುವುದು ಕುಡಿಯುವುದಾದರೂ ಏನನ್ನು?
ರೆಫ್ರಿಜರೇಟಿನಲ್ಲಿ ಶೇಖರಿಸಿಟ್ಟ ಆಹಾರ
ಚರಂಡಿ-ಮೋರಿಗಳಿಂದ ಬೀಸುವ ಗಾಳಿ
ಈ ಕಣ್ಣುಗಳು ಅದೆಷ್ಟು ಪಾಪಿಗಳು
ದಿನವೂ ಹಿಂಸಿಸಲ್ಪಡುತ್ತವೆ
ನೋಡಬಾರದ್ದನ್ನೆಲ್ಲ ನೋಡುತ್ತಾ..
ಕಿವಿಗಳು ಏನೇನೋ ಆಲಿಸುತ್ತವೆ
ಬಾಯಿಗಳಿಗಂತು ಬಿಡುವೇ ಇಲ್ಲ
ಒಂದು ಜೋಡಿ ಲಾಳ ಹೊಡೆಸಬೇಕು
ಕಾಲುಗಳಿಗೆ ಮತ್ತು ಕೈಗಳಿಗೆ
ಶುದ್ಧವಾದ ಕೆಲಸಗಳು ಸಿಗಬೇಕು
ಮನಸ್ಸಿಗೆ ಮಿದುಳಿಗೆ
ಒಳಿನ್ನೇ ಯೋಚಿಸುವಂತಹ ಬುದ್ದಿ ಬರಬೇಕು
ಈಗ ಮೂಗಿಗೆ ಮಾಸ್ಕ್ ಬಂದು
ಅದು ಸ್ವಲ್ಪ ಸುಧಾರಿಸಿದೆ
ಇಷ್ಟೆಲ್ಲಾ ಕೊಳಕಿನಿಂದ
ಶತಮಾನ ಕಳೆಯುವುದೇ ಲೇಸು
ಆದರೂ ಇದ್ದಷ್ಟು ದಿನ
ನೆಮ್ಮದಿಯಿಂದ ಬಾಳಿದರಷ್ಟೇ ಸಾಕು
ಇನ್ನೇನು ಬೇಕು??
ಬೇಕು!!
ನನಗಂತೂ ಪುಸ್ತಕಗಳು ಬೇಕೇ ಬೇಕು
ಸಾವಿನಿಂದಾಗಿ ಸತ್ತಾಗ
ಅಥವಾ ಶಾಪದಿಂದ ಸತ್ತಾಗ
ಮುಕ್ತಿಗಾಗಿ ನನಗೆ ಪುಸ್ತಕಗಳು ಬೇಕು
ಹೆಚ್ಚು ತಲೆಕೆಡಿಸಿಕೊಳ್ಳಬೇಡಿ..
ನಾ ಓದಿದ ಪುಸ್ತಕಗಳು ಸಿಗುವವರೆಗೂ..
ನನ್ನ ನಿರ್ಜೀವ ದೇಹ ಮಣ್ಣು ಸೇರುವುದೇ ಬೇಡ
ಅಲ್ಲಿಯವರೆಗೂ ನೊಣ ಹತ್ತದ ಹಾಗೆ ನೋಡಿಕೊಂಡರೆ ಸಾಕು!
ನನ್ನ ಪುಸ್ತಕಗಳು ಹೊರಗಿನ ಕೇರಿಯಿಂದ
ಮೇಲಿನ ಕೇರಿಯ ದಾಟಿ ನಂತರ ಸ್ಮಶಾನಕ್ಕೆ
ಪಲ್ಲಕ್ಕಿಯ ಮೆರವಣಿಗೆ ಬರಲಿ..
ಎಲ್ಲರಿಗೂ ತೋರಿಸಿ.. ಎಲ್ಲರೂ ನೋಡಲಿ
ಹಾಗೇ ಅರಿಯಲಿ..
ನನ್ನ ಸಂತೋಷವ ಮತ್ತು ಸಂಪಾದನೆಯ
ಇಷ್ಟು ದಿನ ಜೊತೆಗಿದ್ದು
ಈಗ ಅವುಗಳನ್ನು ಬಿಟ್ಟು
ನಾನೊಬ್ಬನೇ ಹೋಗುವುದಾದರು ಹೇಗೆ?
ಸತ್ತ ಮೇಲೂ ಸಾಯುವುದೇನಾದರೂ ಇದ್ದರೆ
ಅದೂ ಪುಸ್ತಕಗಳೊಟ್ಟಿಗೆಯೇ ಆಗಲಿ..
ಅದಕ್ಕಾಗಿ 10×10×10 ಅಡಿಯ ಗುಂಡಿ ತೆಗೆದು
ಮೆರೆವಣಿಗೆ ಮುಗಿದ ಒಂದೊಂದೇ ಪುಸ್ತಕಗಳಿಂದ
ನನ್ನ ದೇಹವನ್ನು ಪೂರ್ತಿ ಮುಚ್ಚಿ
ಜೊತೆಗೆ,
ನನ್ನ ಪುಸ್ತಕಗಳು ಸದಾ ಹಸಿರಾಗಿರುವಂತೆ
ಫ್ಯಾರಾಫಿನ್ ಲೇಪಿಸಿ
ಯಾರೂ ಕದಿಯದ ಹಾಗೆ
ಸುತ್ತಲೂ ಏಳು ಗೋಡೆ ಕಟ್ಟಿಸಿ
ಒಂದು ಗ್ರಂಥಾಲಯ ನಿರ್ಮಿಸಿ
ಯಾವ ಕಾಲಕ್ಕೆ ಗೋರಿ ಅಗೆದರೂ..
ಪುಸ್ತಕಗಳು ಹಾಡುತ್ತಿರಬೇಕು..
ನನ್ನ ಮೂಳೆ ಸವೆದರೂ.. ಕಿವಿಗಳು ಮಾತ್ರ ಕೇಳುತ್ತಿರಬೇಕು!
ಅನಂತ ಕುಣಿಗಲ್
ಯುವಬರಹಗಾರ & ರಂಗಕಲಾವಿದ
ಕವನದ ವಾಚನವನ್ನು ಆಲಿಸಲು
ಇಲ್ಲಿ ಕ್ಲಿಕ್ ಮಾಡಿ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ