ವಿಷಯಕ್ಕೆ ಹೋಗಿ

ಭಾವ ಸಂಗಮ - ಯಾಶಿ ಕವಿತೆ - ಅನಂತ ಕುಣಿಗಲ್

ಭಾವಸಂಗಮ

ನಾ ನೋಡಿದ ಬೆಳದಿಂಗಳು
ನಿನ್ನಯ ಕಣ್ಣ ಬಿಂಬ
ನವಿರೇಳಿಸೋ ಆ ನಗುವಿಗೆ
ಸದಾ ನಾ ರೋಮಾಂಚನ
ಸಿಗಬಾರದೆ ಕನಸಿನ ಹಿಡಿತಕ್ಕೆ
ಉಳಿಸಲು ಈ ಬಡ ಜೀವವ?

ಮತ್ತೆ ಮತ್ತೆ ಶುರುವಾಗಿದೆ
ಹಾಳಾದ ವಿರಹದ ಹಾಡು
ಸಾಕು ಸಾಕಾಗಿದೆ ಸೋತು
ಯಾರಿಗೇಳಲಿ ನನ್ನಯ ಪಾಡು
ಹಾಯಾಗಿದೆ ಎಲ್ಲವೂ..
ಆಮಂತ್ರಣ ಸಿಕ್ಕ ಮೇಲೆ
ಬದುಕು ಇನ್ನೂ ಬೇಕೆನಿಸಿದೆ
ಚಡಪಡಿಕೆ ಎಂದರೆ
ನಿನ್ನಯ ಹೊರತು ಬೇರೇನಿಲ್ಲ
ಆ ಹೊಸ ಅಧ್ಯಾಯಕ್ಕೆ
ನಿನ್ನದೇ ಹೆಸರಿದೆ ಮುನ್ನುಡಿಯಲ್ಲಿ
ನನ್ನ ತುಟಿಗಳ ತುಡಿತಗಳ ಕಲೆಗಳು
ಅಲ್ಲಲ್ಲಿ ಮೂಡಿವೆ

ಒಮ್ಮೆ ಗ್ರಹಿಸಿ ಸಹಕರಿಸಿಬಿಡು
ಓ ನನ್ನ ನಲ್ಲೆ..
ನೀನಿರುವ ವಿಳಾಸ ತಿಳಿಸಿಬಿಡು
ಬಂದು ಅಪ್ಪುವೆ
ಉಳಿಸದೆ ಬಾಕಿ ಮೊತ್ತವ ತೀರಿಸುವೆ
ಹಿಂದೆಂದೂ ಆಗದ ಸ್ವರ್ಶ ಸಿಗಲಿದೆ
ಅದಕ್ಕಾಗಿ ನಾ ಕಾರುತ್ತಿರುವೆ.

#ಅನಂತ ಕುಣಿಗಲ್ 

ಕಾಮೆಂಟ್‌ಗಳು