ಶೀರ್ಷಿಕೆ : ಒಂದು ಸ್ನೇಹದ ಕಥೆ.
ರಂಗೇನಹಳ್ಳಿ ಎಂಬ ಊರಿನಲ್ಲಿ ರಂಗಸ್ಥಳ ಎಂಬ ಒಂದು ಸಂಸ್ಥೆ ಇತ್ತು. ಈ ಸಂಸ್ಥೆಯಲ್ಲಿ ಅನೇಕ ರಂಗಭೂಮಿ ಕಾರ್ಮಿಕರು ಕೆಲಸ ನಿರ್ವಹಣೆ ಮಾಡುತ್ತಿದ್ದರು. ಇದರಲ್ಲಿ ಮೂರು ಜನ ತುಂಬಾ ಆತ್ಮೀಯ ಗೆಳೆಯರು ಇದ್ದರು. ಅವರ ಹೆಸರು ವಸುಂಧರಾ, ನಿರಂಜನ್, ಚಿರಂತನ ಎಂದು.
ಈ ವಸುಂಧರಾ ಮತ್ತು ನಿರಂಜನ್ ತುಂಬಾ ತುಂಬಾ ಆತ್ಮೀಯರು. ಹೇಗಂತೀರಾ? ಇವರಿಬ್ಬರೂ ಹುಟ್ಟಿದಾಗಿನಿಂದ ಸ್ನೇಹಿತರು. ಈ ಚಿರಂತನ ಹೇಗೆ ಫ್ರೆಂಡ್ ಆದದ್ದು ಅಂತ ಹೇಳ್ತೀನಿ ಕೇಳಿ ಅಲ್ಲಲ್ಲ ಓದಿ ಆಯ್ತಾ.
ಚಿರಂತನಾಳಿಗೆ ಕಥೆ ಬರೆಯೋದು ಅಂದರೆ ತುಂಬಾ ಇಷ್ಟ. ಅವಳು ಮೂಲತಃ ಕಥೆಗಾರ್ತಿ ಏನಲ್ಲ. ಅವಳಿಗೆ ಬೇರೆಯವರ ಕಥೆ ಬರೆದದ್ದನ್ನು ಓದುತ್ತಾ ಓದುತ್ತಾ ಹವ್ಯಾಸಿ ಕಥೆಗಾರ್ತಿ ಆದಳು. ಈ ಕಥೆ ಬರೆಯಲು ಅವಳಿಗೆ ಈ ರಂಗಸ್ಥಳದಲ್ಲಿ ಅವಕಾಶ ದೊರೆಯಿತು. ಏಕೆಂದರೆ ಇಲ್ಲಿ ಅನೇಕ ನಾಟಕಗಳನ್ನು ಪ್ರದರ್ಶನ ಮಾಡುತಿದ್ದರು. ಜೊತೆಗೆ ಈ ಕಿರುಚಿತ್ರ ಪ್ರದರ್ಶನ ಕೂಡ ಮಾಡುತಿದ್ದರು. ಆದ್ದರಿಂದ ಚಿರಂತನಾಳ ಪರಿಚಯದವರು ಕರೆದು ಕೊಂಡು ಬಂದು ಇಲ್ಲಿ ಸೇರಿಸಿದ್ದರು.
ಇನ್ನು ಈ ವಸುಂಧರಾ ನಿರಂಜನ್ ಏನು ಮಾಡ್ತಾ ಇದ್ದರು ಇಲ್ಲಿ ಎಂಬುದಕ್ಕೆ ಉತ್ತರ ಇಲ್ಲಿದೆ ಓದಿ. ವಸುಂಧರಾ ಗೆ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ. ಆದ್ದರಿಂದ ಅವರು ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಈ ರಂಗಸ್ಥಳದಲ್ಲಿ ನಡೆಯುವ ಪ್ರತಿಯೊಂದು ನಾಟಕಗಳಿಗೆ ಬೇಕಾದ ಚಿತ್ರಗಳನ್ನು ಬಿಡಿಸುವುದು. ಮತ್ತೆ ಅಲ್ಲಿನ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಚಿತ್ರಕಲೆ ಹೇಳಿಕೊಡುತ್ತಿದ್ದರು.
ಇನ್ನು ನಿರಂಜನ್ ಗೆ ಏನು ಕೆಲಸ ಇಲ್ಲಿ ಎಂದರೆ, ತಮ್ಮ ಆತ್ಮೀಯ ಗೆಳತಿ ವಸುಂಧರಾಳಿಗೆ ಚಿತ್ರ ಬಿಡಿಸಲು ಬೇಕಾದ ಮಾಹಿತಿ ಮತ್ತು ಚಿತ್ರಗಳನ್ನು ಸಂಗ್ರಹಿಸಿ ಅಗತ್ಯ ವಸ್ತುಗಳನ್ನು ಪೂರೈಸುವುದು ಇವರ ದಿನ ನಿತ್ಯ ಕಾಯಕ.
ಹೀಗೆ ಒಂದು ದಿನ ಚಿರಂತನ ರಂಗಸ್ಥಳದಲ್ಲಿ ಓಡಾಡುತ್ತಿದ್ದ ವೇಳೆ ವಸುಂಧರಾ ಬಿಡಿಸಿದ ಒಂದು ಚಿತ್ರ ಕಣ್ಣಿಗೆ ಬಿತ್ತು. ಆ ಚಿತ್ರದ ಬಗ್ಗೆ ಒಂದು ಕಥೆ ಬರೆದು ಅಲ್ಲಿನ ರಂಗಕಲಾವಿದರ ಬಳಿ ಕಿರುಚಿತ್ರ ನಿರ್ಮಾಣ ಮಾಡಿ ಪ್ರದರ್ಶನ ಮಾಡಿಸಿದಳು ಚಿರಂತನ. ಇದನ್ನು ಕಂಡ ನಿರಂಜನ್ ಮತ್ತು ವಸುಂಧರಾ, ಚಿರಂತನ ಬಳಿ ಬಂದು ಸ್ನೇಹ ಹಸ್ತ ಚಾಚಿದರು.
ಮೊದಲೇ ಸ್ನೇಹ ಜೀವಿ ಆಗಿದ್ದ ಚಿರಂತನಾಳಿಗೆ ಒಲ್ಲೆ ಎಂದು ಹೇಳಲು ಮನಸ್ಸಾಗಲಿಲ್ಲ. ಹೀಗೆ ಮೂರು ಜನ ಕೂಡ ಆತ್ಮೀಯರಲ್ಲಿ ಆತ್ಮೀಯರಾದರು. ವಸುಂಧರಾಳನ್ನು ವರು ಎಂದು, ನಿರಂಜನನ್ನು ನಿರು ಎಂದು ಕರೆಯಲು ಶುರು ಮಾಡಿದಳು. ಅವರಿಬ್ಬರೂ ಚಿರಂತನಾಳನ್ನು ಚಿರು ಎನ್ನಲು ಶುರು ಮಾಡಿದರು.
ಮೂರು ಜನರು ರಂಗಸ್ಥಳದಲ್ಲಿ ಭೇಟಿ ಮಾಡಿ ದಿನನಿತ್ಯ ತಮ್ಮ ಆಗುಹೋಗುಗಳನ್ನು ಹಂಚಿಕೊಳ್ಳುತ್ತಾ ತಮ್ಮ ಜೀವನ ನಡೆಸುತ್ತಿದ್ದರು. ಅಷ್ಟು ಆತ್ಮೀಯ ಸ್ನೇಹಿತರಾದರು ಒಬ್ಬರಿಗೊಬ್ಬರು ಮೊಬೈಲ್ ನಂಬರ್ ಪಡೆದಿರಲಿಲ್ಲ. ಏನಿದ್ದರೂ ರಂಗಸ್ಥಳದಲ್ಲಿ ಭೇಟಿ ಅಷ್ಟೇ ಇದ್ದದ್ದು.
ಒಂದು ದಿನ ಈ ಚಿರಂತನ ವಸುಂಧರಾ ಮತ್ತು ನಿರಂಜನ್ ಗೆ ತನ್ನ ಮೊಬೈಲ್ ನಂಬರ್ ಕೊಟ್ಟು ಈ ನಂಬರ್ ಗೆ ಫೋನ್ ಅಥವಾ ಮೆಸೇಜ್ ಮಾಡಿ ಎಂದು ಹೇಳಿದಳು. ಚಿರಂತನಾಳ ಮಾತಿಗೆ ಬೆಲೆ ಕೊಟ್ಟು ನಿರು ಮತ್ತು ವರು, ಚಿರು ಗೆ ಮೆಸೇಜ್ ಮಾಡಿದರು.
ಈ ಚಿರು ಅಲಿಯಾಸ್ ಚಿರಂತನ ನಿರು ಮತ್ತು ವರು ನಂಬರಿನಿಂದ ಮೆಸೇಜ್ ಬಂದದ್ದೆ ತಡ ತುಂಬಾ ಖುಷಿ ಆಗಿ ಅವರ ಅನುಮತಿ ಇಲ್ಲದೆ ಒಂದು ವಾಟ್ಸ್ ಆ್ಯಪ್ ಗುಂಪು ತೆರೆದಳು. ಆ ಗುಂಪಿನ ಹೆಸರು ಮೂರು ರತ್ನಗಳು. ಅದರಲ್ಲಿ ಅವರಿಬ್ಬರಿಗೂ ಸ್ವಾಗತ ಕೋರಿಯೇ ಬಿಟ್ಟಳು.
ವರು ಮತ್ತು ನಿರು ಕೂಡ ತಡಮಾಡದೆ ಚಿರುಗೂ ಸ್ವಾಗತ ಹೇಳಿ ಮಾತು ಶುರು ಮಾಡಿದರು. ದಿನೇ ದಿನೇ ಈ ಮೂರು ಜನರ ನಡುವೆ ತುಂಬಾ ಆತ್ಮೀಯತೆ ಬೆಳೆಯಿತು.
ಒಮ್ಮೆ ವರು ಅನಾರೋಗ್ಯ ನಿಮಿತ್ತ ಮಾತಾಡಲಿಲ್ಲ ಅಂತ ಈ ಚಿರು ವರುಗೆ ತುಂಬಾ ಬೇಜಾರು ಮಾಡಿದಳು. ನಂತರ ನಿರು, ಚಿರುವನ್ನು ಸಮಾಧಾನ ಮಾಡಿದನು. ನಂತರ ವರು ತುಂಬಾ ಒಳ್ಳೆಯ ಮನಸುಳ್ಳವಳು ಆದ್ದರಿಂದ ಚಿರು ಮಾಡಿದ ಬೇಸರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಚಿರು ಮತ್ತು ನಿರು ಜೊತೆ ಖುಷಿ ಖುಷಿಯಾಗಿ ಮಾತಾಡ್ತಾ ಇದ್ದಳು.
ಹೀಗೆ ಕೆಲವು ದಿನಗಳ ನಂತರ ವರು ತನ್ನ ವೈಯಕ್ತಿಕ ವಿಷಯದ ಸಲುವಾಗಿ, ರಂಗಸ್ಥಳದಿಂದ ಹೊರಬರಬೇಕಾದ ಸಮಯ ಬಂತು. ರಂಗಸ್ಥಳದ ಎಲ್ಲರಿಗೂ ವರು ವಿದಾಯ ಹೇಳಿ ಹೊರಡಲು ಅನುವಾದಳು. ಆದರೆ ಈ ಚಿರು ಮತ್ತು ನಿರುಗೆ ಮಾತ್ರ ವರುವನ್ನು ಕಳುಹಿಸಲು ಮನಸ್ಸಿಲ್ಲ. ಆದರೆ ಏನು ಮಾಡುವುದು ವಸುಂಧರಾಳ ವೈಯಕ್ತಿಕ ಬದುಕಿನ ಬಗ್ಗೆ ಕೂಡ ಯೋಚಿಸಬೇಕು ಅಲ್ವಾ? ಆದ್ದರಿಂದ ಒಲ್ಲದ ಮನಸ್ಸಿನಿಂದ ವರುವನ್ನು ಬೀಳ್ಕೋಟ್ಟರು ಚಿರು ಮತ್ತು ನಿರು.
ವರು ರಂಗಸ್ಥಳ ಬಿಟ್ಟು ಹೋದರು ಕೂಡ ದಿನದಲ್ಲಿ ಅದೆಷ್ಟು ಬಾರಿ ನಿರು ಮತ್ತು ಚಿರು ಜೊತೆ ವಾಟ್ಸ್ ಆ್ಯಪ್ ಲೀ ಮೆಸೇಜ್ ಮಾಡಿ ಮಾತಾಡ್ತಾ ಇದ್ದಳು ಗೊತ್ತಾ? ಈ ಮೂರು ಜನ ತುಂಬಾ ತುಂಬಾನೇ ಆತ್ಮೀಯರಾದರು. ಹೇಗೆಂದರೆ ಈ ಚಿರುವನ್ನು ರೇಗಿಸುವುದು ಅಂದರೆ ಈ ನಿರು ಮತ್ತು ವರು ಗೆ ತುಂಬಾ ಇಷ್ಟ. ನಿರು ಚಿರುವನ್ನು ರೇಗಿಸುವುದ ಕಂಡು ವರು ಖುಷಿ ಪಡುವುದು. ಒಟ್ಟಿನಲ್ಲಿ ಮೂರು ಜನ ಸಂತೋಷದಿಂದ ಇದ್ದರು.
ಮತ್ತೆ ಒಂದು ದಿನ ಈ ಚಿರು ತಾನು ಬರೆದ ಕಥೆ ಓದಿಲ್ಲ ನನಗೆ ಸಹಕರಿಸಲಿಲ್ಲ ಎಂದು ನಿರುವನ್ನು ಮೋಸ ಮಾಡ್ತೀಯ ಅಂತ ಹೇಳಿದಳು. ಇದಕ್ಕೆ ನಿರು ನೀನು ಬರೆದ ಅಷ್ಟು ಕಥೆಯನ್ನು ಓದಿದ ನಂತರವೇ ನಿನ್ನ ಜೊತೆ ಮಾತಾಡೋದು ಎಂದು ಮಾತು ನಿಲ್ಲಿಸಿಯೇ ಬಿಟ್ಟ. ಚಿರು ನಿರುವಿನ ಮೌನ ತಾಳಲಾರದೆ ನಾನು ಸುಮ್ಮನೆ ಹೇಳಿದ್ದು ದಯಮಾಡಿ ಕ್ಷಮಿಸು ಎಂದು ಎಷ್ಟು ಹೇಳಿದರೂ ಕೇಳಲಿಲ್ಲ ನಿರು.
ಹೀಗೆ ಐದು ದಿನಗಳ ಕಾಲ ನಿರಂತರವಾಗಿ ಚಿರು ನಿರುವಿಗೆ ಮಾತಾಡ್ಸು ಎಂದು ಬೆಂಬಿಡದ ಬೇತಾಳದಂತೆ ಹಿಂಸೆ ನೀಡಿದಳು. ನಂತರ ವರುವಿಗೂ ಈ ವಿಷಯ ತಿಳಿಸಿದಳು ಚಿರು. ಏನೋ ಗೊತ್ತಿಲ್ಲಾ ನಮ್ಮ ವರು ನಿರುಗೆ ಏನೇಳಿದಳೋ ಗೊತ್ತಿಲ್ಲ. ನಿರು ಚಿರುವನ್ನು ಮಾತಾಡಿಸಿದನು.
ಎಲ್ಲರಿಗೂ ವಿಶ್ವ ಸ್ನೇಹ ದಿನಾಚರಣೆಯ ಶುಭಾಶಯಗಳು 💐💐💐💐💐
ಚೈತ್ರ ಗೋವರ್ಧನ್, ಬೆಂಗಳೂರು
ಪ್ರತ್ಯುತ್ತರಅಳಿಸಿಸೂಪರ್ ಇದೇ ಮುದ್ದು ಅಕ್ಕ😘
ಥ್ಯಾಂಕ್ಯೂ ಡಿಯರ್ 💕💕💕💕💕
ಅಳಿಸಿ