ಯುವ ಉತ್ಸಾಹಿ ಬೋರೇಗೌಡನ ಅನಂತಯಾನ ನನ್ನ ಪ್ರಕಾರ ಸಾಧಕ ಎಂದರೆ ನಿರ್ದಿಷ್ಟವಾದ ಗುರಿ ಮುಟ್ಟುವುದು. ಸಾಧಕ ಎಂದಿಗೂ ಗುರಿ ಮುಟ್ಟಿ ನಿಲ್ಲಬಾರದು, ನಿರಂತರ ಶ್ರಮದ ಮೂಲಕ ಸಾಧನೆಯ ಉತ್ತುಂಗ ಮಟ್ಟವನ್ನು ಅಲಂಕರಿಸಿ, ಇತರರಿಗೆ ಮಾದರಿಯಾಗಬೇಕು. ನಾನು ಪರಿಚಯಿಸುತ್ತಿರುವ ವ್ಯಕ್ತಿಯನ್ನು ಸಾಧಕ ಅನ್ನುವುದರ ಬದಲು ಸಾಧನೆಯ ಹಾದಿಯಲ್ಲಿ ಚಲಿಸುತ್ತಿರುವ ಛಲಗಾರ ಎನ್ನಲು ಇಚ್ಛಿಸುವೆ. ಬೋರೇಗೌಡ ಕೆ.ಎನ್ ಅವರು ಈಗಾಗಲೇ ಸಾಹಿತ್ಯ ಸೇವೆ ಹಾಗೂ ರಂಗಭೂಮಿಯ ಮೂಲಕ ಹಲವರಿಗೆ ಅನಂತ ಎಂದು ಪರಿಚಯವಿರಬಹುದು. ಇವರು ಹುಟ್ಟಿದ್ದು ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ಒಂದು ಬಡ ಕುಟುಂಬದಲ್ಲಿ. ಹುಟ್ಟೂರಿನಲ್ಲಿ ಪ್ರಾಥಮಿಕ ಶಾಲೆ, ರಾಮನಗರ ಜಿಲ್ಲೆಯಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ. ಬೆಂಗಳೂರಿನಲ್ಲಿ ವಿಜ್ಞಾನ ಪದವಿ ಹಾಗೂ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯಲ್ಲಿ ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ ಮುಗಿಸಿ, ಸಧ್ಯ ಚಲನಚಿತ್ರ ನಿರ್ದೇಶಕರಾಗುವ ತಮ್ಮ ಕನಸಿನತ್ತ ಪಯಣಿಸುತ್ತಿದ್ದಾರೆ. ಈಗಾಗಲೇ ಹಲವಾರು ಕಿರು ನಾಟಕಗಳು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿ ಪ್ರಶಸ್ತಿ ಹಾಗೂ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರಿಗೆ ಸುಮಾರು 21 ವರ್ಷ ಆಗಿತ್ತು ಬೋರೇಗೌಡ ಅನಂತನಾಗಿ ಕಾಣಿಸಿಕೊಂಡಾಗ. ಅನಂತ ಎಂಬ ಹೆಸರಿನಲ್ಲೇ ಇದೆ 'ಕೊನೆ...
"ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ"