ನಾನೆಂಬುದು ಅಹಂಕಾರವಲ್ಲ
"ನಾನು ಎಂಬುದು ಅಹಂಕಾರವಲ್ಲ, ನನ್ನೊಳಗಿನ ಆತ್ಮ ವಿಶ್ವಾಸ"
ನೀವು ಇತರರನ್ನು ನಂಬುವ ಮೊದಲು ನಿಮ್ಮನ್ನು ನೀವು ಮೊದಲು ನಂಬಿ. ನಾನು ನಿನ್ನ ಜೊತೆ ಇರುತ್ತೇನೆ, ನಾನು ನಿನ್ನ ಜೊತೆ ಬರ್ತೀನಿ ಅಂದವರನ್ನು ನಂಬಿಕೊಂಡು ಕಾಲಕಳೆಯಬೇಡಿ. ಯಾರೂ ಬರಲ್ಲ, ಯಾರೂ ಇರಲ್ಲ. ಇನ್ನೊಬ್ಬರ ಋಣದಲ್ಲಿ ಯಾವತ್ತೂ ಇರಬೇಡಿ. ಸ್ವಾಭಿಮಾನದಿಂದ ನೀವೇ ದುಡಿದು ನೀವೆ ತಿನ್ನಿ. ಯಾರು ನಿಮ್ಮವರು ಎನ್ನುವುದನ್ನು ಚೆನ್ನಾಗಿ ಅರಿತುಕೊಳ್ಳಿ. ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಕೈ ಹಿಡಿಯುವರೇ ನಿಮ್ಮವರು. ಎಲ್ಲರನ್ನು ನಂಬಿ ಮೋಸ ಹೋಗಬೇಡಿ. ನಿಮ್ಮ ತನವನ್ನು ಬೇರೆ ಯಾರಿಗೂಗೋಸ್ಕರ ಬಿಟ್ಟುಕೊಡಬೇಡಿ. ಎಲ್ಲರೂ ನಿಮ್ಮ ಕೈ ಬಿಟ್ಟು ನಡೆದರೂ ಕೂಡ, ಕೊನೆಪಕ್ಷ ನಿಮ್ಮತನ ನಿಮ್ಮನ್ನು ಎಂದಿಗೂ ಬಿಡುವುದಿಲ್ಲ. ನಿಮ್ಮ ಕಷ್ಟ ಅಥವಾ ನಿಮ್ಮ ನೋವನ್ನು ಅರ್ಥಮಾಡಿಕೊಳ್ಳದೆ ಇರೋರ ಹತ್ರ ವಾದ ಅಲ್ಲ ಮಾತಾಡಲೇಬೇಡಿ. ನಿಮ್ಮೊಂದಿಗೆ ನೀವು ಹೆಚ್ಚು ಕಾಲ ಕಳೆಯಿರಿ. ಯಾರಾದರೂ ನನ್ನ ಬಳಿ ಬಂದು 'ನಿನಗೆ ನೆಚ್ಚಿನ ವ್ಯಕ್ತಿ ಯಾರು?' ಎಂದು ಕೇಳಿದರೆ ನನಗೆ ನಾನೇ ನೆಚ್ಚಿನ ವ್ಯಕ್ತಿ ಎಂದು ಉತ್ತರಿಸುತ್ತೇನೆ. ಕೋಪದಿಂದ ಕ್ಷಣಮಾತ್ರದ ಸಾಧನೆ ಸಿಕ್ಕಿತೇ ಹೊರತು, ದೀರ್ಘಕಾಲದ ಬಾಳಿಕೆಯ ಸಂಬಂಧ ಎಂದೂ ಸಿಗುವುದಿಲ್ಲ. ಕೋಪಕ್ಕಿಂತ ನಿಮ್ಮನ್ನು ನೀವು ಪ್ರೀತಿಸಿ, ಹಾಗೆ ಇತರರನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಿ. ನಿಸ್ವಾರ್ಥ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ಹಾಗಾಗಿ ಪ್ರೀತಿಯನ್ನು ಸಾರೋಣ ಮತ್ತು ಹಂಚೋಣ.
- ರಕ್ಷಿತಾ ಹೆಚ್ ಉಪ್ಪುಂದ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ