" ನೊಂದವರ ನೋವ ನೋಯದವರೆತ್ತಬಲ್ಲರೋ.. "
ಬರೆಯುತ್ತಿರುವುದು ಅಂಕಣವಾದರೂ, ಈ ಸರಣಿಯಲ್ಲಿ ಒಂದು ಮಿಡಲ್ ಕ್ಲಾಸ್ ಫ್ಯಾಮಿಲಿಯ ತೊಳಲಾಟಗಳು ಹೇಗಿರುತ್ತವೆಂದು ನನ್ನದೇ ಕುಟುಂಬವನ್ನು ಉದಾಹರಿಸಿ ನಿಮಗೆ ಉಣ್ಣಲು ಸಿದ್ದಪಡಿಸುತ್ತಿದ್ದೇನೆ. ಹಾಗಂತ ಇದನ್ನು ನಾನು ಖಂಡಿತ ಆತ್ಮಕಥನ ಎಂದು ಕರೆದುಕೊಳ್ಳುವುದಿಲ್ಲ. ಹಾಗೆಯೇ ಇಲ್ಲಿ ನಮೂದಿಸುವ ವಿಷಯಗಳು ಸುಳ್ಳಾಗಿರುವುದಿಲ್ಲ (ಅಗತ್ಯವಿದ್ದಲ್ಲಿ ವ್ಯಕ್ತಿಗಳ ಹಾಗೂ ಸ್ಥಳಗಳ ಹೆಸರನ್ನು ಬದಲಾಯಿಸಿರುತ್ತೇನೆ). ಬಡತನ ಎಲ್ಲರಿಗೂ ಬೇಡವಾದರೂ ಕೂಡ ಅದರ ಕತೆಗಳು ಎಲ್ಲರಿಗೂ ಹತ್ತಿರವಾಗುತ್ತವೆ ಎಂದು ನಾನಾದರೂ ಭಾವಿಸಿದ್ದೇನೆ. ಈ ಅಂಕಣವನ್ನು ನಾನು ಯಾಕೆ ಬರೆಯಲೇಬೇಕು? ಎಂಬುದಕ್ಕೆ ಸ್ಪಷ್ಟವಾದ ಕಾರಣವನ್ನು ಕೊನೆಯ ಅಂಕಣದಲ್ಲಿ ನಿಮ್ಮೆಲ್ಲರಿಗೂ ತಿಳಿಸುವೆ. ಅಲ್ಲಿಯವರೆಗೂ ಕಾದು, ಎಲ್ಲ ಅಂಕಣಗಳನ್ನ ಓದಿ, ಕಮೆಂಟ್ ಮೂಲಕ ಅಭಿಪ್ರಾಯಗಳನ್ನು ತಿಳಿಸಿ ಪ್ರೋತ್ಸಾಹಿಸಬೇಕೆಂದು ಓದುಗದೊರೆಗಳಲ್ಲಿ ನಾನು ವಿನಮ್ರತೆಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ.

ಲೆಕ್ಕಾಚಾರ ಎಂದರೆ ಎಲ್ಲರಿಗೂ ತಿಳಿದದ್ದೇ.. ಸರಿಯಾದ ಲೆಕ್ಕಾಚಾರವಿಲ್ಲದೆ ಯಾವೊಬ್ಬ ಮನುಷ್ಯನೂ ಅರ್ಥಪೂರ್ಣ ಹಾಗೂ ಸಮರ್ಥ ಬದುಕನ್ನು ಬದುಕಲು ಸಾಧ್ಯವಿಲ್ಲವೆಂಬುದು ನನ್ನ ಅಭಿಪ್ರಾಯ. ಪ್ರತೀ ಕ್ಷಣವೂ ನಾವು ಯಾವುದಾದರೊಂದು ಲೆಕ್ಕಾಚಾರದಲ್ಲಿ ಬದುಕುತ್ತಿರುತ್ತೇವೆ. ಎಷ್ಟು ಗಂಟೆಗೆ, ಯಾವ ದಿಕ್ಕಿಗೆ ಎದ್ದು, ಯಾವ ದೇವರ ಫೋಟೋ ನೋಡಬೇಕು ಎಂಬುದರಿಂದ ಹಿಡಿದು, ರಾತ್ರಿಗೆ ಊಟ ಏನು, ಎಷ್ಟು ಜನಕ್ಕೆ, ಎಷ್ಟು ಉಪ್ಪು ಹಾಕಬೇಕು, ಎಷ್ಟು ಹುಳಿ ಹಾಕಬೇಕು, ಖಾರ ಎಷ್ಟಿದ್ದರೆ ಚೆನ್ನ ಎಂಬ ದೈನಂದಿನ ಲಕ್ಷಾಂತರ ಪ್ರಶ್ನೆಗಳಿಗೆ ನಮ್ಮ ಮನದಲ್ಲಿ ಈಗಾಗಲೇ ಉತ್ತರಗಳು ಮನನಗೊಂಡಿದ್ದರೂ.. ಪ್ರತಿಬಾರಿಯೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ನಮ್ಮೆಲ್ಲರದ್ದು ಭಿನ್ನ ಭಿನ್ನವಾದ ಲೆಕ್ಕಾಚಾರಗಳು. ಅವುಗಳಲ್ಲಿ ನನ್ನದೂ ಒಂದು. ಈ ಭಿನ್ನವಾದ ಲೆಕ್ಕಾಚಾರ ತಮ್ಮೆಲ್ಲರಿಗೂ ಮುದ ನೀಡಬಹುದು, ಮನ ತಿಳಿಯಾಗುವಂತೆ ಕಲಕಬಹುದು ಅಥವಾ ಕೆಲವೊಮ್ಮೆ ತಟ್ಟಿ ಎಚ್ಚರಿಸಬಹುದು. ಒಟ್ಟಿನಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಅದು ನಿಮ್ಮನ್ನು ಮುಟ್ಟಿ, ರುಚಿಸುತ್ತದೆ ಎಂಬುದು ನನ್ನ ಲೆಕ್ಕಾಚಾರ.
ಅಚ್ಚ ಹಳ್ಳಿಯಾದ ನನ್ನೂರು, ಮಿಡಲ್ ಕ್ಲಾಸ್ ಫ್ಯಾಮಿಲಿ, ಕುಡುಕ ತಂದೆ, ಬಡತನ, ಬಾಡಿಗೆ ಮನೆ, ಹೋರಾಟ, ಕಣ್ಣೀರು, ಬಿಸಿಲು, ಹಸಿವು, ಮಮತೆ, ಕೂಲಿ-ನಾಲಿ, ಮೈಕ್ ಸೆಟ್, ಅಪ್ಪನ ಆತ್ಮಹತ್ಯೆ, ಬಾರ್ ಸಫ್ಲೈಯರ್, ಕನ್ನಡದ ಹುಚ್ಚು, ಸಿನೆಮಾ, ರಂಗಭೂಮಿ, ಪುಸ್ತಕಗಳ ಕಳವು, ಸ್ಕೂಲ್ ಲೈಫ್, ಗುರುಗಳು ಮತ್ತು ಅಣ್ಣನ ಸುತ್ತ ಬೆಸೆದುಕೊಂಡಿರುವ ನೆನಪುಗಳ ಬುತ್ತಿಯನ್ನು ನಿಮ್ಮುಂದೆ ಬಿಚ್ಚಿಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಎಂದಿನಂತೆ ಇರಲಿ.
ಜೀವನಾನುಭವವನ್ನು ತೆರೆದಿಡುವಷ್ಟು ವಯಸ್ಸಾಗದಿದ್ದರೂ ಕೂಡ, ಈ ಆಧುನಿಕ ಯುಗದಲ್ಲಿ ನೆನಪುಗಳು ಮಾಸಬಾರದು ಎಂಬ ಚಿಕ್ಕ ಕಾರಣಕ್ಕಾಗಿ ಬೇಗನೆ ನನ್ನ ನೆನಪುಗಳನ್ನು ಹಂಚಿಕೊಳ್ಳುತ್ತಿದ್ಧೇನೆ. ತಪ್ಪಿದ್ದರೆ ತಿದ್ದಿ ನಡೆಸಿ. ಈ ಅಂಕಣದಲ್ಲಿ ನನ್ನ ಕುಟುಂಬ ಒಂದು ಉದಾಹರಣೆಯಷ್ಟೇ.. ನನ್ನ ಕುಟುಂಬದಷ್ಟು ನಾನು ಇನ್ನೊಂದು ಬೇರೆ ಕುಟುಂಬವನ್ನು ಅರಿಯಲು ಸಾಧ್ಯವಿಲ್ಲ. ಹಾಗಾಗಿ ಅಂಕಣದಲ್ಲಿ ನನ್ನದೇ ಕುಟುಂಬವನ್ನು ಉದಾಹರಿಸುವುದರಿಂದ ಪ್ರಮಾದವೇನೂ ಆಗದೆಂದು ಭಾವಿಸಿದ್ದೇನೆ. ಎಲ್ಲರಿಗೂ ಇಷ್ಟವಾಗದಿದ್ದರೂ ಕೂಡ ಇಲ್ಲಿನ ಕೆಲವು ಅಸಂಭವನೀಯ ಘಟನೆಗಳು ನಿಮ್ಮನ್ನು ಕೆಲಹೊತ್ತು ಮೌನಿಯಾಗಿಸುತ್ತವೆ ಎಂದು ನಂಬಿದ್ದೇನೆ. ಹಾಗೇ ಈ ಜಗವನ್ನು ಕ್ಷಣಕಾಲ ಮೌನದಲ್ಲೇ ನೋಡುವ ಬಹು ದಿನಕ ಬಯಕೆ ನನ್ನದು. ಕೆಲವರಾದರೂ ಮೌನಿಯಾಗುವಿರೆಂಬ ಭರವಸೆ ಇದೆ. ಮುಂದೆ, ತಿಳಿಯದೆ ಆಗಬಹುದಾದ ತಪ್ಪುಗಳಿಗೆ ಮೊದಲೇ ಕ್ಷಮೆಯಾಚಿಸುತ್ತಾ.. ಇನ್ನು ಮುಂದೆ ನಿಮ್ಮೆಲ್ಲರನ್ನು ಪ್ರತೀವಾರವೂ ಭೇಟಿಯಾಗಬಯಸುತ್ತೇನೆ. ಎಲ್ಲರೂ ಕಾತುರದಿಂದ ಕಾಯುವ, ಹಾಗೂ ಅವರೆಲ್ಲರ ಕಾತುರವನ್ನು ನಿರಾಶೆ ಪಡಿಸದ ನನ್ನ ಉತ್ಸಾಹಕ್ಕೆ ನಿಮ್ಮೆಲ್ಲರ ಬೆಂಬಲ ಇದೆ ಎಂಬ ಹೆಬ್ಬಯಕೆಯೊಂದಿಗೆ ಅತಿ ಶೀಘ್ರದಲ್ಲಿ ಲೆಕ್ಕಾಚಾರ ಬರೆಯಲು ಮುಂದಾಗುತ್ತಿದ್ದೇನೆ.
ಎಲ್ಲರ ಆಶೀರ್ವಾದವಿರಲಿ..🙏💐🥰
ಅನಂತ ಕುಣಿಗಲ್
ಯುವ ನಿರ್ದೇಶಕ & ಬರಹಗಾರ
ಪೀಠಿಕೆ ಸೊಗಸಾಗಿದೆ ಬೇಗ ಮುಂದುವರೆಸಿ ಕಾಯುತ್ತಿರುತ್ತೇವೆ.
ಪ್ರತ್ಯುತ್ತರಅಳಿಸಿನಿಮ್ಮ ಕಥೆಯೆಂದರೆ ಅದು ನಮ್ಮದೂ ಕೂಡ ಶುಭವಾಗಲಿ
ಧನ್ಯವಾದಗಳು 🙏
ಅಳಿಸಿಸೊಗಸಾದ ಪೀಠಿಕೆ, ನಿಮ್ಮ ಅಂಕಣಕ್ಕೆ ಶುಭವಾಗಲಿ, ಬೇಗ ನಿಮ್ಮ ಬರಹ ನಮ್ಮನ್ನು ಸೇರಲಿ
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಅಳಿಸಿ