ಕೇಳು ಜಾಣೆ
ಧರೆಗೆ ಬಂದ ಒಂದು ಅಂದ
ನಮ್ಮ ಬದುಕು ನೋಡೇ ಜಾಣೆ,
ಬದುಕು ಸಾಯಲೆಂದು ಅಲ್ಲ
ಸಾದಿಸೋಕೆ ಕೇಳೇ ಜಾಣೆ.
ಈಗ ಉಸಿರು ಹೊರಗೋ ಒಳಗೊ
ಅದೇ ಬದುಕು ನೋಡೇ ಜಾಣೆ,
ಉಸಿರು ನಿಂತರೇನು ಹೆಸರ ಹಸಿರು
ಮಾಸದಂತೆ ಬಾಳ ಬೇಕು ಜಾಣೆ.
ಬಾಳ ಹಾದಿ ತುಂಬಾ ಕಲ್ಲು ಮುಳ್ಳು
ಸುಮದ ಹಾದಿ ನೋಡು ಜಾಣೆ,
ಹೆಜ್ಜೆ ಸಾಗಿಸೋದ ಕಲಿತು
ಅರಿತು ಮುಂದೆ ಸಾಗು ಜಾಣೆ.
ಪ್ರೀತಿ ಸಾಲು ಬರೆಯುವಾಗ ಮೊದಲ
ಸಾಲು ನಿನ್ನ ಬದುಕಿಗಿರಲಿ ಜಾಣೆ,
ನೀನು ಸತ್ತರೂನು ನೀನು ಬರೆದ
ಪ್ರೀತಿ ಸಾಲು ಉಸಿರ ಆಡಬೇಕು ಜಾಣೆ.
ಬದುಕ ಜಗಳವೆಲ್ಲ ಜಯಿಸಿ
ಎದ್ದು ಗೆದ್ದು ನಿಲ್ಲ ಬೇಕು ಜಾಣೆ,
ಆಗ ನೋಡು ಎಲ್ಲ ಖುಷಿಗೆ
ಕಾರಣ ನೀನೇ ನೀನೇ ಜಾಣೆ.
ಹರಿದ ಬಟ್ಟೆ ತೊಟ್ಟು ನಿನಗೆ
ಒಲೆದ ಬಟ್ಟೆ ಕೊಟ್ಟರು ನೋಡು ಜಾಣೆ,
ನಿಂಗೆ ಬದುಕ ಕೊಟ್ಟರವರು; ಅವರ
ನೇತ್ರ ನೆಲವ ನೋಡದಂತೆ ಬಾಳು ಜಾಣೆ.
- ಭರತ್‌ಕುಮಾರ್ ಸಿ, ಕೊರಟಗೆರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ