ಮೌನದೂರಲ್ಲೂ ಒಂದು ಮಾತಿತ್ತು
ನಿಶಬ್ಧತೆಯಲ್ಲೂ ಒಂದು ಶಬ್ದ ಅಡಕವಾಗಿತ್ತು,
ಅದೇ ಪ್ರೀತಿಯ ಚಹರೆಯಂತೆ..!
ಅವಳು ವಟ ಗುಟ್ಟುವ ಕಪ್ಪೆಯಂತೆ,
ಇವನು ಅವಳ ಮಾತಿಗೆ ತಲೆದೂಗುವ
ಮಾತುಬಾರದ ಹುಂಬನಂತ..!
ಅವಳು ಹೇಳುತಲೇ ಇದ್ದಾಳೆ,
ಅವನು ಮಾತ್ರ ಅವಳ ಕಣ್ಣ ಕೊಳದಲ್ಲಿ ಮಿಂದು
ಕಾಡಿಗೆಯ ತೀಡಿ ಬಲು ಮಜುಬೂತಾದ
ಮೋಹಕತೆಗೆ ಜಾರಿದ್ದಾನೆ..!
ಅವಳು ಹೇಳುತಲೇ ಇದ್ದಾಳೆ,
ಅವನೋ, ಆ ಅದರದ
ಮಧು ಸವೆದ ನಶೆಗೆ ತೆಲಾಡಿ
ಮುಂಗುರುಳ ಕಳ್ಳಾಟಕ್ಕೆ
ರೋಮಗಳು ನವೀರಾದಂತೆ
ಕಂಪಿಸುತ್ತಿದ್ದಾನೆ..!
ಅವಳು ಹೇಳುತಲೇ ಹೋದಳು,
ಅವನೋ ಅವಳ ಭಾವ ಪರವಶಕ್ಕೆ
ತನ್ನನ್ನೇ ಅವಳಿಗರ್ಪಿಸುತ್ತ
ಸುಂದರವಾದ ಯೋಜನೆಯಲ್ಲಿ
ಹೇರಳಕ್ಕೆ ಕೈ ಸೋಕಿಸಿದಾಗ
ಅವಳಲ್ಲೊಂದು ಸಂಚಲನ..!
ಇನ್ನೂ ಅವಳ ಮಾತು ಸ್ತಬ್ಧ...!
ಇನ್ನೂ ಮಾತೆಲ್ಲ ಅವನದೇ..!
ಮಧುರ ಮಾತು, ಸುಮಧುರ ಮೌನ
ಇನ್ನೂ ಹೇಳಲೆನಿದೆ....
ದೀಪದ ಕಿರಣವದು ಪ್ರಜ್ವಲಿಸಿ
ಸಣ್ಣದೊಂದು ಕಥೆಯ ಸಾರುವ ಬಗೆಗೆ
ಸಾಕ್ಷಿಯಾಗದೆ ಆ ಕತ್ತಲು ಬೆಳಕಿನ ಆಟಕ್ಕೆ..!
ಮನದ ನೂರೆಂಟು ಬಯಕೆಯ ಕೂಟಕ್ಕೆ
ಅವನ ಮಾತು....ಅವಳ ಮೌನ...
ತೆಕರಿಕೆಯಲ್ಲೂ ಬೆವರಿನ ಉಮ್ಮಳಿಕೆ.
ಎಲ್ಲಾ ಚಂದ ಚಂದ ಚಂದ...!
ಪ್ರಕೃತಿಯ ರಸಿಕತೆಯ ಭಾವ ಅಂದ..!
ಇದು ಹೊಸಗೆಯ ಸೊಗಸ ಮಿಲನ..!!
ಅವರಿಬ್ಬರ ಮಧುರತೆಯ ಸಮ್ಮಿಲನ..!!
- ದೀಪಿಕಾ ಮಾರಗಟ್ಟ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ