ಮದುವೆ
ಎಂಬ ಮೂರಕ್ಷರ ನಂಟಿನ ಜಾಡು ಹಿಡಿದುಕೋಪದ ನಂಜಿಗೆ, ನಗುವೇ ಸಾಕು
ದ್ವೇಷದ ಮಂಜಿಗೆ, ಸ್ನೇಹದ ಕಡಲು ಸಾಕು
ಬದುಕ ಬಂಡಿಗೆ, ನಮ್ಮಿಬ್ಬರ ಮಿಲನವಾಗಬೇಕು
ಮದುವೆಯ ಮೂರು ಗಂಟಿಗೆ, ನೀನೆ ಜೊತೆಯಾಗಬೇಕು...!!
"ಮದುವೆ" ಎಂಬುದು ಕೇವಲ ಮನಗಳ ಮಿಲನ ಅಲ್ಲ, ಅದು ಎರಡು ಮನೆಗಳ ಸಂಕಲನ ಎಂದು ಹಿರಿಯರು ನುಡಿದರು. ಶಾಸ್ತ್ರಗಳ ಸುರಿಮಳೆ, ಬಂಧು- ಬಳಗ ಆನಂದದಿ ಒಂದೆಡೆ ಸೇರುವಿಕೆ, ಸಡಗರ, ಸಂಭ್ರಮ ಎಲ್ಲರಲ್ಲೂ... ಆದರೆ ಆ ಸಂಭ್ರಮ ಮದುವೆಯ ಹಸೆಮಣೆ ಏರಲು ಸಿದ್ಧರಿರುವ ಆ ಎರಡು ಮನಗಳಲ್ಲೂ ಇರಬೇಕೆಂದರೆ ಅವರ ನಡುವೆ ಒಪ್ಪಿಗೆಯ ಬಂಧ ಬಿಗಿದಿರಬೇಕು.
"ಮದುವೆ" ಎನ್ನುವದು ಒಂದು ಸಮಾಜದ ವ್ಯವಸ್ಥೆ. ಶಿಸ್ತು ಬದ್ಧ ಜೀವನಕ್ಕೆ ಹಾಕಿಕೊಂಡ ಸರಪಳಿಯ ಗಂಟು. ಕೌಟುಂಬಿಕ ಕರ್ತವ್ಯಗಳ ನಿರ್ವಹಣೆಗೆ ಮದುವೆ ಎಂಬುದು ಸಮಾಜ ನಿರ್ಮಾಣದ ಸಾಂಸ್ಥಿಕ ವ್ಯವಸ್ಥೆ. ಇದು ಎಲ್ಲರಿಗೂ ಅಗತ್ಯ, ನಿಜ. ಅನೂಕೂಲಿಸಿದವರಿಗೆ ಅವಶ್ಯ. ಅನಾನೂಕೂಲಿಸಿದವರಿಗೆ ಅನಗತ್ಯ. ಮದುವೆ ಎಂಬುದು ಮನುಷ್ಯ ಜೀವಿಸುತ್ತಿರೋ ಅವನ ಪರಿಸರ ಮತ್ತು ಅವನು ನೋಡೋ ಜಗದ ದೃಷ್ಟಿಕೋನವ ಅವಲಂಬಿಸಿದೆ.
ಮನುಷ್ಯನ ವಯೋಸಹಜಕ್ಕನುಗುಣವಾಗಿ " ಮದುವೆ. ". ಮದುವೆ ಎಂದರೆ ಹೆಣ್ಣು- ಗಂಡು ಇಬ್ಬರಲ್ಲೂ ಏನೋ ಹೇಳಲಾಗದ ಪುಳಕ. ಮದುವೆಯಾಗಿ ಅದರ ಸವಿಯ ಸವೆದು ಸಿಪ್ಪೆ ಮಾಡಿಕೊಂಡವರ ಮುಖದಲ್ಲಿ ಹೊಸದಾಗಿ ಮದುವೆ ಆಗುವವರ ಕಂಡು ಏನಿದೆ ಇದರಲ್ಲಿ ಎಂಬ ಜಿಗುಪ್ಸೆಯ ಭಾವ. ಹೆಣ್ಣಾಗಲೀ, ಗಂಡಾಗಲೀ ಮದುವೆ ಎಂದರೆ ನೂರಾರು ಕನಸು, ಆಸೆಗಳು ಮನದಿ ಮೂಡುವದು ಸಹಜ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುವದು ಎನ್ನುವರು. ಹಾಗಾದರೆ ಈ ಭೂಮಿಯ ಮೇಲೆ ನಾವು ಇಷ್ಟಪಟ್ಟವರ ಕೂಡ ಮದುವೆ ಅಸಾಧ್ಯ. ಕಾರಣ ದೇವರ ನಿಶ್ಚಯ ಬೇರೆ ಇರುವದು. ಈ ಪ್ರೀತಿ- ಪ್ರೇಮ ಎಲ್ಲ ಕೇವಲ ನಮ್ಮ ಕೆಲ ದಿನಗಳ ನೆಮ್ಮದಿಯ ಜೀವನಕ್ಕಾಗಿ ನಾವು ಮಾಡಿಕೊಂಡಿರುವ ಬಂಧನ ಎಂದಷ್ಟೇ ಅನಿಸುವದು.
ಕೆಲವು ಸಲ ಇಷ್ಟಪಟ್ಟವರನ್ನೇ ಮದುವೆ ಆದರೆ ಮದುವೆಯಾದ ಜೀವನ , ಜೀವಗಳ ಬದುಕು ಸ್ವಚ್ಛಂದದ ಬಾನಲಿ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಯಂತಾಗುವದು. ಕೆಲವು ಸಲ ರಕ್ಕೆ ಕಳಚಿ ಬಿದ್ದು, ಸೋಲು ಉಚಿತವಾಗಿರುವದು... ಮನೆಯವರು ಹುಡುಕಿ ಮಾಡಿದ ಜೋಡಿಗಳು ಎಲ್ಲವೂ ಖುಷಿಯಾಗಿರುತ್ತವೆ ಅಂತಲ್ಲ...ಎಲ್ಲವೂ ಮುಳುಗುತ್ತವೆ ಅಂತೆಯೂ ಅಲ್ಲ... ಅದು ಅವರವರ ಹೊಂದಾಣಿಕೆ ಬುನಾದಿ ಮೇಲೆ ನಿಂತಿದೆ.
ಮದುವೆ ಎಂದರೇನೆ ಹೊಂದಾಣಿಕೆ. ಜೀವ ಜೀವಗಳ ಬೆಸುಗೆ. ಭಾವ ಭಾವಗಳ ಬೆಸುಗೆ. ಅನುರಾಗ ಅನುಗಾಲ ಹೀಗೆ ಬೆಸೆದುಕೊಂಡಿರಬೇಕು. ಸದಾ ಸಂಚಾರದ ಮನಕೆ ಈ ಮದುವೆ ಒಂದು ತಳಪಾಯವೇ ಸರಿ.
ಮದುವೆ ಒಂದು ಅನುಬಂಧ. ಜನುಮ ಜನುಮಗಳ ಬಂಧ. ಆತ್ಮಗಳ ಮಿಲನ. ಅನುರಾಗವ ಅನುಗಾಲದಿ ಉಳಿಸೋ ಸಂಬಂಧ. ಹಿರಿಯರ ಹಾರೈಕೆ, ಸದಾಚಾರ, ಸದ್ವಿಚಾರ, ಸಹಕಾರ, ಸಹಬಾಳ್ವೆ, ಸಂತೋಷಗಳ ಸಮ್ಮೀಲನವೇ ಮದುವೆ.
ಹಣದ ದುರಾಸೆಯ ಹಿಂದೆ ಬಿದ್ದು ಜೊತೆಯಿದದ್ದು ಮದುವೆಯಾಗಲಾರದು. ಅನುಮಾನ ಬಿರುಕು ಬಿಟ್ಟ ಗೋಡೆಯಂತೆ ಬದುಕಲಿ. ನಂಬಿಕೆಯೇ ಜೀವಾಳ ಎರಡು ಮನಸುಗಳ ಮಿಲನಕೆ.
ಅನಾದಿ ಕಾಲದಿಂದಲೂ ಒಂದು ಹೆಣ್ಣಿಗೆ ಒಂದು ಗಂಡು ಅದುವೇ ಮದುವೆ ಎಂಬುದು ಜಗದ ನಿಯಮ. ಅನುಸರಿಸಿಕೊಂಡು ನಡೆದರೆ ಅನುದಿನವೂ ಹೊಸದಿನ. ಪ್ರತಿಕ್ಷಣವೂ ಅವನು ಅವಳಿಗೆ, ಅವಳು ಅವನಿಗೆ.
ಇಂದಿನ ಕಾಲಕ್ಕೆ " ಮದುವೆ " ಮಾರಾಟದ ಮಳಿಗೆ. ಹುಡಗ, ಹುಡುಗಿ ಇಬ್ಬರಿಗೂ ನೌಕರಿ ಅಗತ್ಯ. ಅವರ ಭಾವನೆಗಳೇ ಸತ್ತಂತೆ ಬದುಕುವರು. ಬೆಳೆಯುತ್ತಿರುವ ಈ ವೈಜ್ಞಾನಿಕ ಯುಗದಲ್ಲಿ ಎಲ್ಲವೂ ಬದಲಾಗಿದೆ. ಹಣಕ್ಕಿರುವ ಬೆಲೆ ಭಾವನೆಗಳಿಗಿಲ್ಲ. ಎಂಟತ್ತು ದಿನಗಳ ಕಾಲ, ನೂರಾರು ಶಾಸ್ತ್ರಗಳಿಗೆ ಮೀಸಲಾಗಿದ್ದ ಮದುವೆ, ಇಂದು ಕೇವಲ ನೀ ಹ್ಞು, ನಾ ಹ್ಞು ಅಷ್ಟಕ್ಕೇ ಮುಗಿಯಿತು ಮದುವೆ. ಸಾಂಪ್ರದಾಯಿಕ ಮದುವೆಯ ಮನೆಗಳೇ ಖಾಲಿ ಖಾಲಿ.
ಸಪ್ತಪದಿ ತುಳಿದು ಏಳು ಹೆಜ್ಜೆಗಳಲಿ ಬೆಸೆವ ಬಂಧ , ಏಳೇಳು ಜನುಮಕ್ಕೂ ನೀನೆ ನನ್ನವಳು, ನೀನೆ ನನ್ನವನು ಎಂಬ ಅನುಬಂಧ ...ಇಂದಿಗೆ ಏನಾದರೂ ಸ್ವಲ್ಪ ತೊಂದರೆಯಾದರೂ ಸಾಕಪ್ಪ ಇವನ /ಇವಳ ಸಹವಾಸ ಎಂಬಲ್ಲಿಗೆ ಬಂದು ನಿಂತಿದೆ.
ಮನುಷ್ಯನ ಜೀವನ ಧರ್ಮ, ಅರ್ಥ, ಕಾಮಗಳಲ್ಲಿ ಲೀನವಾದುದು. ಆದರೆ ಆ ಎಲ್ಲ ಪುರುಷಾರ್ಥಗಳು ಮದುವೆಯ ಯಾವ ನಿಯಮಕ್ಕೂ ಅನ್ವಯಿಸದೇ ಹೋಗುತ್ತಿವೆ. ನಿಜವಾಗಿಯೂ ಹೇಳಬೇಕೆಂದರೆ ಮನುಷ್ಯನ ಸಣ್ಣ- ಪುಟ್ಟ ಆಸೆಗಳ ಪೂರೈಕೆ ಕಾಮ ಮತ್ತು ಅರ್ಥ. ಅರ್ಥ, ಕಾಮಗಳು ಮಿತಿಮೀರದಂತೆ ಕಡಿವಾಣ ಹಾಕುವದೇ ಧರ್ಮ. ಅರ್ಥ, ಕಾಮಗಳ ಹಂಗು ಕಳಚಿ , ವಿರಕ್ತಿ ಮೂಡಿದಾಗ ಮೋಕ್ಷದ ದಾರಿ. ಅವನ್ನೆಲ್ಲ ನಿಯಂತ್ರಿಸುವ, ಅವುಗಳ ಕಲ್ಪನೆ, ವಿಕಲ್ಪನೆಗಳ ರೂವಾರಿ ಈ ಮದುವೆ.
ಅವಿವಾಹಿತರಾಗಿ ಉಳಿಯುವದು ತಪ್ಪಲ್ಲ, ಆದರೆ ವಿವಾಹದ ಬಾಂಧವ್ಯ, ಸಂಸಾರದ ಸಾಮರಸ್ಯ, ಕೌಟುಂಬಿಕ ಜೀವನದ ಅನುಭವ ಎಲ್ಲವೂ ಈ ಜೀವ ಜೀವನಕ್ಕೆ ನಿರಾಳ ಬದುಕಿಗೆ ದೇವರಿಟ್ಟ ರಹದಾರಿ. ಮದುವೆಯಲ್ಲಿ ಭೋಗ- ತ್ಯಾಗಗಳ ಸುಂದರ ಸಾಮರಸ್ಯವಿದೆ. ಅದೇ ಹಿರಿಯರು ಹೇಳುವರಲ್ಲ " ಉಂಡವನೇ ಬಲ್ಲ ಊಟದ ರುಚಿಯ" ಎಂದು. ಹಾಗೆಯೇ ಈ ಮದುವೆಯ ಬಂಧನ.
ಕೊನೆಯದಾಗಿ, ಮದುವೆಯೆಂದರೆ ಹೊಸ ಜೀವನದ ಸಿಹಿ- ಕಹಿಯ ಬೆಸುಗೆ, ಎರಡು ಜೀವಗಳ ಆಜೀವ ದಿವ್ಯ ಒಡಂಬಡಿಕೆ. ಒಂದರಿಂದ ಏಳರವರೆಗಿನ ಗಂಟು, ನಂಟುಗಳ ಅವಿನಾಭಾವ ಬಂಧನವದು.
- ಅಶ್ವಿನಿ ಭೀ ಬರಗಾಲಿ
ವೀವೆಕಾಂದ ನಗರ, ಗೋಕಾಕ
Super sir
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿಅಶ್ವಿನಿ ನಿಮ್ಮ ಭಾವನೆಗಳ ಬರಹಕ್ಕೆ ಚೊಚ್ಚಲ ಲೇಖನಕ್ಕೆ ಅಭಿನಂದನೆಗಳು 💐🙏
ಅಳಿಸಿSuper
ಪ್ರತ್ಯುತ್ತರಅಳಿಸಿಮದುವೆಯ ಇಷ್ಟೊಂದು ವರ್ಣಮಯ ಚಿತ್ರಣಕ್ಕೆ ಶ್ಲಾಘಿಸಬೆಕು!. ಆದ್ರೆ ಮದುವೆಯ ನೈಜ ಜೀವನ ಸತ್ಯ ಮತ್ತು ಸತ್ವ ಕಾಣಲಿಲ್ಲ. ಆಶಾಭಾವನೆ ಅಷ್ಟೇ, ವಾಸ್ತವಕ್ಕೆ ದೂರವಾದುದು!
ಪ್ರತ್ಯುತ್ತರಅಳಿಸಿಮದುವೆ ಎನ್ನುವುದು 'ಬಂಧನ', ಸರ್ವ ಸ್ವಾತಂತ್ರಗಳಿಗೆ ಕಡಿವಾಣ. ಪ್ರಪಂಚದ ಎಲ್ಲ ಕ್ರೌರ್ಯಗಳ ಉಗಮ. ಸ್ವಾರ್ಥ, ಜಿದ್ದು, ಅಸೂಯೆ, ಜಗಳ, ಮನಸ್ತಾಪಗಳ ಹುಟ್ಟು ಕೂಡ.
ಬುದ್ಧನ ಪ್ರಕಾರ "ಮದುವೆಯೇ ಮನುಷ್ಯನ ಸಂಕಷ್ಟಗಳ ಗರ್ಭಚೀಲ" ಎಂದು ಹೇಳುತ್ತಾರೆ. ಇದು ಸಹಿತ ತಿಳಿದಿರಲಿ, ಮದುವೆ ಒಂದೇ ಮನುಷ್ಯ ಮಾಡಿದ ಮುರಿಯಬಹುದಾದ ಸಂಬಂಧ. ಅದ್ರ ಕಡೆಗೂ ಲೇಖನ ಮತ್ತಷ್ಟು ಮಾತಾಡ ಬೆಕಿತ್ತೆನೂ? ಜಾತಿ ವ್ಯವಸ್ಥೆ, ವರದಕ್ಷಿಣೆ, ಬಾಲ್ಯವಿವಾಹ ದಂತ ಸಾಮಾಜಿಕ ಪಿಡುಗುಗಳು ಸುತ್ತಿದುದು ಇದೇ ಮದುವೆಯ ಬಂಧಕ್ಕೆ ಅಲ್ಲವೇ?
ನನ್ನಉದ್ದೇಶ ಮದುವೆ ಒಂದು ಅನುರಾಗ ಅರಳಿಸೋ ಬಂಧ ಹೇಳುವದಾಗಿತ್ತು... ಕೊಂಡಿ ಮುರಿದ ಬಾಗಿಲು ಎಂದು ಹೇಳಲು ಇಷ್ಟವಾಗಲಿಲ್ಲ ...ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಅಳಿಸಿಅರ್ಧ ಸತ್ಯದ ಹಾದಿ, ಸುಳ್ಳಿಗಿಂತ ಕಠಿಣ ಬಲೆ..ಪರಿಪೂರ್ಣ ಸಮತೋಲನದ ನಿಜ ಸತ್ಯಗಳ ಹುಡುಕಾಟ ತಮ್ಮದಾಗಲಿ...
ಅಳಿಸಿಧನ್ಯವಾದಗಳು
ಲೇಖನ ಬಹಳ ಅದ್ಭುತವಾಗಿ ಬಂದಿದೆ. ತಮ್ಮ ಚೋಚ್ಚಲ ಲೇಖನಕ್ಕೆ ಅಭಿನಂದನೆಗಳು ಮೇಡಂ.
ಪ್ರತ್ಯುತ್ತರಅಳಿಸಿತುಂಬಾ ಧನ್ಯವಾದಗಳು ಸರ್
ಅಳಿಸಿ