ಪರಿಸರ
ಹೂವು-ಬಳ್ಳಿ, ಗಿಡ-ಮರ
ಪ್ರಾಣಿ-ಪಕ್ಷಿ ಜಲಚರ
ಬೆಟ್ಟ-ಗುಡ್ಡ, ಬಾನು-ಬಯಲು
ಕೀಟ, ಕಾನು, ಸರೋವರ...
ಇವೇ ನಮ್ಮ ಪರಿಸರ
ಇವು ಸೃಷ್ಟಿಗಾನದಿಂಚರ
ಹಾಡು ನೀ ನಲಿದಾಡು ನೀ
ಪರಿಸರದ ಸಿರಿ ನೋಡು ನೀ
ಮೂಡಲು ನೇಸರ ಆ ನೀಲಿ ಬಾನಲ್ಲಿ
ಸವಿರಾಗ ಕೇಳು ನೀ ಕೋಗಿಲೆ ಹಾಡಲ್ಲಿ
ಸಮರಸ ಸಾರುವ ಆ ಜೇನಗೂಡು
ಸಾಲಾಗಿ ಹಾರುವ ಬೆಳ್ಳಕ್ಕಿ ನೋಡು
ಸುಗಂಧ ಬೀರುವ ನೂರಾರು ಮಂದಾರ
ಫಲಗಳ ನೀಡುವ ಮಣ್ಣೇ ಬಂಗಾರ
ಬೆಳ್ಳಿ ಬೆಳಕ ಚೆಲ್ಲುವ ಚಂದಿರ
ತಂಪನೀಯುವ ತರುಗಳು ಸುಂದರ
ಮಳೆಯ ತರುವ ಮೇಘಗಳ ಸಂಚಾರ
ಮಳೆಬಿಲ್ಲು- ಸೃಷ್ಟಿಯ ಸೊಂಪಾದ ಚಿತ್ತಾರ!
ತೊರೆಗಳ, ತೆರೆಗಳ ವಿವಿಧ ಝೇಂಕಾರ
ಮಿರಮಿರ ಮಿನಗುವ ಮುಕ್ಕೋಟಿ ತಾರಾ
ಕಡಲೊಡಲಲಿ ಅಲೆವ ವಿವಿಧ ಜಲಚರ
ಮುಗಿಲನ್ನೆ ಮುಟ್ಟಿಸಿ ಬೀಗುವ ಶಿಖರ
ಹೊಲದೊಳು ತೆನೆಹೊತ್ತು ಮಿರುಗುವ ಪೈರು
ನೆಲದೊಳಗೆ ಸಿಗುವುದು ಲೋಹದ ಅದಿರು
ಸೃಷ್ಟಿಸಿರಿಯ ಚರಾಚರ
ಸವಿವ ಮನಕೆ ಸಡಗರ!
ಗಾಳಿ ಬೆಳಕು ನೀರು ಮಣ್ಣು
ಇವೇ ನಮ್ಮ ಬಾಳ ಕಣ್ಣು
ಕಣ್ಣ ಕಳೆದುಕೊಂಡು ನೀನು
ಆಗಬೇಡ ಕುರುಡನು
ಇಂದು ನೆಟ್ಟ ಗಿಡ ಹಸಿರು
ನಾಳೆ ಅದೇ ನೆಳಲು, ಉಸಿರು
ಮರೆತು ನಡೆದೆಯೆಂದರಿದನು
ಆಗದೆಂದೂ ಬಾಳು ಹಸನು
ಸೃಷ್ಟಿ ಸಿರಿಯ ಚರಾಚರ
ನರಗೆ ಸಿಕ್ಕ ಮಹಾವರ
ಕಣ್ಣು ಬಿಟ್ಟು ಕಾಣ್ಬ ಮನಕೆ
ಪರಿಸರದೊಳು ಪ್ರತಿಸ್ವರದೊಳು
ಪ್ರತಿಮನದೊಳು ಕಣಕಣದೊಳು
ದೈವ ದೃಗ್ಗೋಚರ.
ದೈವ ದೃಗ್ಗೋಚ್ಚರ.
ಪ್ರಾಣಿ-ಪಕ್ಷಿ ಜಲಚರ
ಬೆಟ್ಟ-ಗುಡ್ಡ, ಬಾನು-ಬಯಲು
ಕೀಟ, ಕಾನು, ಸರೋವರ...
ಇವೇ ನಮ್ಮ ಪರಿಸರ
ಇವು ಸೃಷ್ಟಿಗಾನದಿಂಚರ
ಹಾಡು ನೀ ನಲಿದಾಡು ನೀ
ಪರಿಸರದ ಸಿರಿ ನೋಡು ನೀ
ಮೂಡಲು ನೇಸರ ಆ ನೀಲಿ ಬಾನಲ್ಲಿ
ಸವಿರಾಗ ಕೇಳು ನೀ ಕೋಗಿಲೆ ಹಾಡಲ್ಲಿ
ಸಮರಸ ಸಾರುವ ಆ ಜೇನಗೂಡು
ಸಾಲಾಗಿ ಹಾರುವ ಬೆಳ್ಳಕ್ಕಿ ನೋಡು
ಸುಗಂಧ ಬೀರುವ ನೂರಾರು ಮಂದಾರ
ಫಲಗಳ ನೀಡುವ ಮಣ್ಣೇ ಬಂಗಾರ
ಬೆಳ್ಳಿ ಬೆಳಕ ಚೆಲ್ಲುವ ಚಂದಿರ
ತಂಪನೀಯುವ ತರುಗಳು ಸುಂದರ
ಮಳೆಯ ತರುವ ಮೇಘಗಳ ಸಂಚಾರ
ಮಳೆಬಿಲ್ಲು- ಸೃಷ್ಟಿಯ ಸೊಂಪಾದ ಚಿತ್ತಾರ!
ತೊರೆಗಳ, ತೆರೆಗಳ ವಿವಿಧ ಝೇಂಕಾರ
ಮಿರಮಿರ ಮಿನಗುವ ಮುಕ್ಕೋಟಿ ತಾರಾ
ಕಡಲೊಡಲಲಿ ಅಲೆವ ವಿವಿಧ ಜಲಚರ
ಮುಗಿಲನ್ನೆ ಮುಟ್ಟಿಸಿ ಬೀಗುವ ಶಿಖರ
ಹೊಲದೊಳು ತೆನೆಹೊತ್ತು ಮಿರುಗುವ ಪೈರು
ನೆಲದೊಳಗೆ ಸಿಗುವುದು ಲೋಹದ ಅದಿರು
ಸೃಷ್ಟಿಸಿರಿಯ ಚರಾಚರ
ಸವಿವ ಮನಕೆ ಸಡಗರ!
ಗಾಳಿ ಬೆಳಕು ನೀರು ಮಣ್ಣು
ಇವೇ ನಮ್ಮ ಬಾಳ ಕಣ್ಣು
ಕಣ್ಣ ಕಳೆದುಕೊಂಡು ನೀನು
ಆಗಬೇಡ ಕುರುಡನು
ಇಂದು ನೆಟ್ಟ ಗಿಡ ಹಸಿರು
ನಾಳೆ ಅದೇ ನೆಳಲು, ಉಸಿರು
ಮರೆತು ನಡೆದೆಯೆಂದರಿದನು
ಆಗದೆಂದೂ ಬಾಳು ಹಸನು
ಸೃಷ್ಟಿ ಸಿರಿಯ ಚರಾಚರ
ನರಗೆ ಸಿಕ್ಕ ಮಹಾವರ
ಕಣ್ಣು ಬಿಟ್ಟು ಕಾಣ್ಬ ಮನಕೆ
ಪರಿಸರದೊಳು ಪ್ರತಿಸ್ವರದೊಳು
ಪ್ರತಿಮನದೊಳು ಕಣಕಣದೊಳು
ದೈವ ದೃಗ್ಗೋಚರ.
ದೈವ ದೃಗ್ಗೋಚ್ಚರ.
- ಪುನೀತ್ ಕುಮಾರ್ ವಿ
ತುಂಬಾ ಅದ್ಭುತವಾಗಿದೆ ಮರದಂತೆ ನಿನ್ನ ಕವನಗಳು ಪ್ರಸಿದ್ಧವಾಗಿ ಎಲ್ಲರಿಗೂ ಮಾದರಿಯಾಗಿರಲಿ.
ಪ್ರತ್ಯುತ್ತರಅಳಿಸಿಧನ್ಯವಾದ
ಅಳಿಸಿ👌🤝
ಪ್ರತ್ಯುತ್ತರಅಳಿಸಿಧನ್ಯವಾದ
ಅಳಿಸಿNejavaglu ole line galu parisara da bagge
ಪ್ರತ್ಯುತ್ತರಅಳಿಸಿಧನ್ಯವಾದ
ಅಳಿಸಿಪರಿಸರದ ಬಗ್ಗೆ ಬರೆದ ಸುಂದರ ಸರಳ ಅರ್ಥಪೂರ್ಣ ಕವನ. ನಮ್ಮ ಸುತ್ತಲಿನ ಎಲ್ಲವೂ ಪರಿಸರವೇ. ಅದರೊಡನಿನ ಸಹಬಾಳ್ವೆಯಲ್ಲೇ ನಮ್ಮ ಉಳಿವಿರುವುದು. ಇಲ್ಲದಿದ್ದರೆ, ವಿನಾಶ ಖಂಡಿತ. ಕೋವಿಡ್ ನ ಈ ದಿನಗಳಿಗಿಂತ ಹೆಚ್ಚಿನ ಪುರಾವೆ ಇದಕ್ಕೆ ಬೇಡ. ಪರಿಸರ ರಕ್ಷಣೆ ನಮ್ಮ ಭವಿಷ್ಯತ್ತಿನ ರಕ್ಷಣೆಯೇ ಹೊರತು ಇನ್ಯಾರಿಗೋ ಮಾಡುವ ಉಪಕಾರವಲ್ಲ. ಅದನ್ನು ಕಾಣದೆ ಕುರುಡಾಗದಿರಿವಂತೆ ಎಚ್ಚರಿಕೆ ನೀಡುವ ಈ ಕವನ ಸಕಾಲಿಕ ಮತ್ತು ಶಕ್ತಿಶಾಲಿಯಾದದ್ದು. ಉತ್ತಮ ಕವನ ಪುನೀತ್ ಅವರೆ.
ಪ್ರತ್ಯುತ್ತರಅಳಿಸಿತುಂಬ ಧನ್ಯವಾದ ಮೇಡಮ್
ಅಳಿಸಿ