ಹೆಜ್ಜೆ
ಬದುಕು ಮತ್ತು ಸಾವು
ಅಲೆ ಅಲೆದು ಸಾಕಾಗಿ
ವಿಶ್ರಮಿಸುತ್ತಿವೆ
ಬದುಕಿನ ಕಣ್ಣು
ಬದುಕು ಕಟ್ಟಿಕೊಳ್ಳುವುದರ ಮೇಲೆ;
ಸಾವಿನ ಕಣ್ಣು
ಬದುಕಿನ ಮೇಲೆ
ಒಂದು ಹೆಜ್ಜೆ ಮುಂದಿಟ್ಚರೂ
ಬದುಕು ಬದುಕ ಕಟ್ಟಕೊಳ್ಳಬಹುದು
ಸಾವು ಬದುಕುನ್ನ ಸಾಯಿಸಬಹುದು
ಬದುಕೋ! ಸಾವೋ!
ಮೊದಲಿಡುವ ಹೆಜ್ಜೆ ಯಾರದ್ದೋ?
ಯೋಚಿಸಿದ ಬ್ರಹ್ಮ
ಬದುಕು ಒಂದು ಹೆಜ್ಜೆ ಇಟ್ಟರೆ
ಬದುಕು ಕಟ್ಟಿಕೊಳ್ಳಬಹುದು,
ಇನ್ನು ಒಂದು ಹೆಜ್ಜೆ ಇಟ್ಟರೆ
ಮತ್ತೇನನ್ನೋ ತನ್ನದಾಗಿಸಿಕೊಳ್ಳಬಹುದು
ಇಷ್ಟರ ಮೇಲೂ ಬದುಕು
ಮತ್ತೊಂದು ಹೆಜ್ಜೆಯನ್ನೂ ಇಡಬಹುದು
ವಿಶ್ರಮಿಸುತ್ತಿದ್ದ ಸಾವೊಮ್ಮೆ ಎದ್ದು ಹೆಜ್ಜೆ ಇಡುವವರೆಗೂ
ಆದರೆ
ಬದುಕು ಬದುಕ ಕಟ್ಟಿಕೊಳ್ಳಲಿಲ್ಲ
ಸಾವು ಕೂಡ!
- ಶಂಭುಗೌಡ. ಆರ್. ಜಿ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಬಲ್ಗಳು
poem
ಲೇಬಲ್ಗಳು:
poem
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ