ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮನ್ವಂತರ - ಕವಿತೆ - ಮೇಘನ ಕರಿಸೋಮನಗೌಡ್ರ

ಮನ್ವಂತರ ಬದಲಾಗುತಿದೆ ಜಗವು  ಜಗದ ನಿಯಮವೂ  ಯಾರ ಹಂಗೂ ಇಲ್ಲದೆ ಎಲ್ಲೆ ಮೀರಿ, ಕೇಳಿಬರುತಿವೆ  ತವಕ-ತಲ್ಲಣಗಳು ಕ್ಷಣಗಳಿಗೆಗೊಮ್ಮೆ..  ನಾನು,ತಾನು ಎಂಬುದ ತೊರೆದು ನಮ್ಮವರೊಂದಿಗೂ  ಬೆರೆಯಬೇಕಿದೆ ಮನದಿ ಪ್ರೀತಿ, ನಲಿವುಗಳ ಬೆಸುಗೆಯೊಂದಿಗೆ..  ಅತ್ತ ಅಶ್ರುಧಾರೆಯೊಂದಿಗೆ ಉಮ್ಮಳಿಸಿ  ಬರುವ ಆರ್ತನಾದ ಮನಕಲಕುತಿದೆ;  ಹಾದಿ-ಬೀದಿಗಳಲಿ ಬೆತ್ತಲೆಯಾದ ಹಸಿವಿನ  ಅಳಲಿನೊಂದಿಗೆ. ಈಗಲಾದರೂ ಮಿಡಿಯಬೇಕಿದೆ  ಹೃದಯ ವೈಶಾಲ್ಯತೆಯು.. ಸ್ವಾರ್ಥದ ಬೆಪ್ಪುತನಕೆ ಇತಿ ಹೇಳಿಬಿಡಿ,  ಚಿತ್ತಗ್ಲಾನಿಯೊಳಿನ ನೊಂದ ನಿನಾದಗಳಿಗೆ ಸ್ಪಂದಿಸಿ, ಸಂತೈಸಬೇಕಿದೆ ತುಸು ಮಾನವೀಯತೆಯ ಮನುಜತನದಿಂದ; ಸತ್ಯದರಿವು  ಮೂಡಿಸಿದ ವಾಸ್ತವದಲ್ಲಾದರೂ... - ಮೇಘನಾ ಕರಿಸೋಮನಗೌಡ್ರ

ಪ್ರೇಮ ಕಾವ್ಯ - ಕವಿತೆ - ಪ್ರವೀಣ ತಿಗಡಿ

ಪ್ರೇಮ ಕಾವ್ಯ ತಂಪು ತಂಪೆನಿಸುವ ತಂಗಾಳಿಯಲಿ ಇಂಪು ಇಂಪಾದ ನಿನ್ನ ನೆನಪಲಿ ಕೆಂಪು ಕೆಂಪಾದ ಕಂಗಳಲಿ ಹಂಪುಗಳಿರದ ಕಣ್ಣಿನ ರಸ್ತೆಯಲಿ ಸಂಪು ಸಂಪಾದ ಸಮಯದಲಿ ಕಂಪು ಕಂಪನದಿ ಸುರಿಯುತಿವೆ ಕಣ್ಣೀರು.. ನೋಡು ಗೆಳತಿ ಸಾಕಾಯಿತು ನಿನ್ನ ನೆನೆದು ಹಾಡು ಹಾಡುತಿರುವೆ ಪರಪಂಚದ ಎಲ್ಲ ಕ್ಷಣಗಳನು ತೊರೆದು ಪಾಡು ಹೇಳದಂತಾಗಿದೆ ನನದು ನಿನ್ನದೇ ಗುಂಗಲಿ ಕಾಡು ಕಾಡಲ್ಲಿ ಅಲೆದಾಡುತಿರುವೆ ಹುಡುಕುತ ನಿನ್ನನು ನಾಡು ನಾಡಲ್ಲೆಲ್ಲ ಸಾಕಾಯಿತು ನಿನ್ನ ಹುಡುಕಿ ಸೇಡು ತೀರಿಸುವ ನೆಪವ ಮಾಡಿ ತೊರೆದೆಯಾ ನನ್ನ ಕಣ್ಣೀರ ಸುರಿಸಲು ಬಿಟ್ಟು ಅಂದು ನೀನೇ ಬೇಡೆಂದರೂ ತುಬಿದೆ ಪ್ರೀತಿ ಇಂದು ಬೇಕೆಂದರೂ ನೀಡದೆ ನಡೆದೇ ನೀ ನನಗದೇ ಪ್ರೀತಿ ತಂದು ಕೊಡುವೆನೆಂದೆ ಜಗದೆಲ್ಲ ಪ್ರೀತಿ ಕೊಂದು ನಡೆದೇ ನನ್ನ ಮನ ನೀನೆಷ್ಟು ಸ್ವಾರ್ಥಿ ನೊಂದು ಕುಳಿತಿಹೆ ನಾನು ಬಂದೊಮ್ಮೆ ಆವರಿಸು ಒಂದು ತಪ್ಪಾದರೂ ವಿವರಿಸು ನೀನೀಗ ಸುರಿವ ಕಣ್ಣೀರ ನಿಲ್ಲಿಸು.. - ಪ್ರವೀಣ ತಿಗಡಿ

ಅತ್ಯಾಚಾರ - ಲೇಖನ - ಸ್ವಾತಿ ಶೆಟ್ಟಿ

ಅತ್ಯಾಚಾರ      ಈ ಪ್ರಪಂಚದಲ್ಲಿ ಅತ್ಯಾಚಾರಕ್ಕೆ ಕೊನೆಯೆ ಇಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ. ಹೆಣ್ಣೆಂದರೆ ಏನು? ಅವಳು ಅಬಲೇ,ತ್ಯಾಗಮಯಿ,ಮೃದು ಸ್ವಭಾವದ ಮುಗುದೆ. ಪ್ರತಿ ಹೆಣ್ಣಲ್ಲೂ ಲಕ್ಷ್ಮೀ ನೆಲೆಸಿರುತ್ತಾಳೆ. ಪ್ರತಿ ಹೆಣ್ಣಲ್ಲೂ ಸೀತೆ ವಾಸವಿರುತ್ತಾಳೆ.ಅದಕ್ಕಿಂತ‌ ಮಿಗಿಲಾಗಿ ಪ್ರತಿ ಹೆಣ್ಣಲ್ಲೂ ಒಬ್ಬ ತಾಯಿ, ತಂಗಿ, ಅಕ್ಕ ಇರುತ್ತಾಳೆ.‌ ಹೆಣ್ಣು ಎಂಬುವವಳು ಮಗುವಿಗೆ ತಾಯಿಯಾಗುತ್ತಾಳೆ, ತಮ್ಮನಿಗೆ ಅಕ್ಕನಾಗುತ್ತಾಳೆ, ಅಣ್ಣನಿಗೆ ತಂಗಿಯಾಗುತ್ತಾಳೆ, ಗಂಡನಿಗೆ ಹೆಂಡತಿಯಾಗುತ್ತಾಳೆ. ಹೀಗೆ ಹಲವಾರು ಆಕೆಯ ಬಂಧನದ ಬದುಕು. ಯಾಕೆ ಇಂದು ಈ ಪ್ರಪಂಚದಲ್ಲಿ ಹೆಣ್ಣಿಗೆ‌ ರಕ್ಷಣೆ  ಸಿಗುತ್ತಿಲ್ಲ. ಗಂಡೆಂದರೆ ಹೆಣ್ಣಿಗೆ ರಕ್ಷಣೆ ಕೊಡುವವನು ಎಂಬ ತಪ್ಪು ತಿಳುವಳಿಕೆಯ?  ಅಂದು ದ್ರೌಪದಿಗೆ ತುಂಬಿದ ಸಭೆಯಲ್ಲಿ  ಅವಮಾನ ಆಗುತ್ತಿದ್ದರೂ, ವಸ್ತ್ರಾಪಹರಣ ಆಗುತ್ತಿದ್ದರೂ‌, ಹೆಣ್ಣಿಗೆ ದೌರ್ಜನ್ಯ ಆಗುತ್ತಿದ್ದರೂ  ಸುಮ್ಮನೆ ಕುಳಿತು ನೋಡುತ್ತಿದ್ದರೇ ವಿನಹ ಅವಳ ಸಹಾಯಕ್ಕೆ ಯಾರು ಒಂದು ಹೆಜ್ಜೆ ಮುಂದಿಡಲಿಲ್ಲ.  ಎಲ್ಲಾ ಪಾಂಡವರಾಗಲಿ, ಭೀಷ್ಮ, ಗುರು ದ್ರೋಣ, ಎಲ್ಲಾ ಸಭಿಕರು ಮೂಖರಾದಂತೆ, ಕುರುಡ ದೃತರಾಷ್ಟ್ರ ನಂತೆ ಎಲ್ಲರೂ ಕಣ್ಣಿದ್ದು ಕುರುಡರಂತೆ ವರ್ತಿಸಿದ್ದರು. ಅಂದು ಕೃಷ್ಣನ ಸಹಾಯವೂ ಇಲ್ಲದಿದ್ದರೆ‌ ಏನಾಗುತ್ತಿತ್ತೊ‌ ಏನೋ? ‌ಇಂದು‌ ಕೂಡ‌ ಇಂತಹ ಇಷ್ಟು ಮುಂದುವರೆದ ಪ್ರಪಂಚದಲ್ಲೂ ತ...

ನಾನು ಕೋಳಿಕೆ ರಂಗ - ಕವಿತೆ - ಟಿ ಪಿ ಕೈಲಾಸಂ

ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ ಬೆಪ್ಪು ನನ್ ಮಗ ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ, ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ; ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ ಇವ್ರೆಲ್ರು ಕಂಡವ್ರೆ ನನ್ನಾ. ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು, ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ ನಂಹಳ್ಳಿ ಕಿಲಾಡಿ ಹುಂಜಾ! ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ ಬೆಪ್ಪು ನನ್ ಮಗ ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ, ತುಂಬಿದ್ ಮೈಸೂರಿಗ್ ಬಂದೆ; ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ ಕಟ್ ತಂದಿದ್ ಬುತ್ತಿನ್ ತಿಂತಿದ್ದೆ. ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ, ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿ “ಲೇ, ಯಾರೋ ಯಾಕೋ ಇಲ್ಲಿ” ಅಂತ! ಹಃ ನಾನು.. ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ...

ಕಲಿಗಳ ಮನಕೆ, ಕನ್ನಡದ ಹರಕೆ - ಕವಿತೆ - ಸಚಿನ್ ಹೆಚ್ ಎಂ

ಕಲಿಗಳ ಮನಕೆ, ಕನ್ನಡದ ಹರಕೆ  ಕನ್ನಡಕೆಂದೆಳಿರ ಕುಡಿದು ಪರದೇಶಿಗೆ ಫಲವಾಗಿ ನೆಲೆದು, ಸವೆದು ಸೋತುಗಾಲದಲ್ ಕನ್ನಡಕಂಪ ಕೇಳಬಂದಹೀನರ ನೀರ್ನೆರಳಿಲ್ಲದ ತಾಣಕೆ ದೂಡಿರೈ ಕಲಿಗಳೆ, ಕನ್ನಡಕೆ ಮಣಿರೈ.  ಕನ್ನಡಕೆನೆಮೊಸರ ಸವಿದು ಕಂಠದೊಳ್ ಕನ್ನಡ ತೊರೆದು, ಜರಿದು ಕನ್ನಡನಾಡಲ್ನುಡಿಯಲ್ ಕೀಳರಿಮೆಗೈದ ಮತಿಯಾತ್ಮಹೀನರ ಹುಚ್ಚಲೆಯಿಸಿ ಉರಿಯಿರೈ ವೀರರೆ, ಕನ್ನಡಕೆ ಮಡಿರೈ.  ಕನ್ನಡಕಲ್ಪವೃಕ್ಷದಡಿ ನೆಲೆಸಿಹ ಕನ್ನಡವ ಕಣಕಣದಿ ಬಳಸಿಹ, ಉಳಿಸಿಹ ಕನ್ನಡಿಹೃದಯದ, ಕನ್ನಡಿಗರ ಹೃದಯವ ಕಾಮಧೇನು ಕ್ಷೀರದಿ ಅಭಿಷೇಕಿಸಿ ಪೊರೆಯಿರೈ ಪೂಜ್ಯರೆ, ಕನ್ನಡ ನುಡಿರೈ. - ಸಚಿನ್ ಹೆಚ್ ಎಂ

ಗುರುವಿನ ಪಾಠ - ಕಥೆ - ಚಂದನ್ ಕೃಷ್ಣ

ಗುರುವಿನ ಪಾಠ      ‌‌ಗುರು ದ್ರೋಣಾಚಾರ್ಯರ ಗುರುಕುಲದಲ್ಲಿ ಸೊಬಗಿನಿಂದ ಕೂಡಿದ್ದ ಎಷ್ಟೊಂದು ಸುಂದರವಾದ ವಾತಾವರಣ ಇದೆ ಅಂದ್ರೆ, ಹಿಂದೆ ಸಲೀಲವೂ ನದಿಯಾಗಿ ಹರಿದು ಗಿರಿಶಿಖರದಿಂದ ಜಲಲಧಾರೆಯಾಗಿ ಧುಮ್ಮಿಕ್ಕುವ ಜಲಪಾತ. ಹಕ್ಕಿಗಳ ಇಂಚರದನಿಯಲ್ಲಿ ಮೂಡಣದಲ್ಲಿ ಆಗಷ್ಟೇ ಸೂರ್ಯೋದಯ. ಮಾವು, ಗಂಧ, ತೇಗ, ನೀಲ, ನೇರಳೆ, ನೆಲ್ಲಿ, ಅರಳಿ, ಆಲ ಮರಗಳ ಸ್ವಚ್ಛ ಹಸುರಿನ  ಭದ್ರತೆಯ ನೆರಳಲ್ಲಿ ಹಸ್ತಿನಾಪುರದ ಕುರು ರಾಜಕುಮಾರರಿಗೆ ಮಾಡಿರುವ ಶಿಕ್ಷಣದ ಸುವ್ಯವಸ್ಥಿತ ಸ್ಥಳಗಳು. ರಾಜಕುಮಾರರಿಗೆ ವಿಶ್ರಾಂತಿ ತಾಣಗಳು. ಅಬ್ಬಾ.. ಆ ಸೀಬೆ ಮರದ ಮೇಲಿಂದ ಗಿಳಿಗಳ ಮಾತು ಕೇಳುತ್ತಿದ್ದರೆ ಚೆಂದವೋ ಚೆಂದ. ಅದೋ ಪಾಂಡವರು, ಬ್ರಾಹ್ಮೀ ಮೂಹರ್ತದಲ್ಲಿ ಎದ್ದು, ಪ್ರಾತಃ ಕಾಲ ವಿಧಿ ಮುಗಿಸಿ ಬೆಳಗಿನ ಉಪಾಹಾರ ಸೇವಿಸಿ, ಶಿಕ್ಷಣ ಕಲಿಯಲು ನಿಂತರೆ, ಇದೋ ನೂರು ಸಹೋದರರಾದ ದುರ್ಯೋಧಾನಾದಿಗಳು ಇನ್ನೂ ಮಲಗಿದ್ದಾರೆ. ರಾತ್ರಿಯೆಲ್ಲಾ ಕೀಟಗಳ ದಾಳಿಗೆ ನಿದ್ರೆ ಭಂಗವಾಗಿ ಈಗ ಮುಂಜಾನೆ ಸೋಮಾರಿಗಳಾಗಿ ಮಲಗಿದ್ದವರನ್ನು ಗುರುಗಳು ಎಬ್ಬಿಸಲು ಬಂದರು. ಗುರುಗಳ ಆಜ್ಞೆಯನ್ನು ದುರ್ಯೋಧನಾದಿಗಳು ಪಾಲಿಸಿದರು. ಗುರುಕುಲಕ್ಕೆ ಬಂದ ರಾಜಕುಮಾರರಿಗೆ ತರಬೇತಿ ಶುರುವಾಗಿಯೇ ಬಿಟ್ಟಿತು. ಮೊದಲಿಗೆ ಗುರು ದ್ರೋಣಾಚಾರ್ಯರು ರಾಜಕುಮಾರರಲ್ಲಿ‌ ಯಾರು ತಮಗೆ ಅತ್ಯುತ್ತಮ ಶಿಷ್ಯನಾಗಬಲ್ಲ ಎಂದು ಪರೀಕ್ಷಿಸುವಾಗ ಬಾಲಅರ್ಜುನನ ನಿಷ್ಠೆ ಮೆಚ್ಚುವಂತಹದ್ದು. ಯಾಕಂದ್ರೆ,...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...

ಶೂನ್ಯ - ಕವಿತೆ - ಗಣೇಶ್ ಹಿಲ್ಕುಂಜಿ

ಶೂನ್ಯ ಏನಿದೆ ಅವನಲ್ಲಿ ಜೀವವೊಂದು -ಬಿಟ್ಟು ಹೋದರೆ ಹೊರಟು ಕರೆವರಲ್ಲವೇ ಅವನ (ಮನುಜ) ನಿಜ ಹೆಸರ ಬಿಟ್ಟು. ಈ ಕ್ಷಣವಿದ್ದ ಮಾತೇಕೆ ಶರಣಾಯಿತು ಮೌನಕ್ಕೆ?? ನಗುವಿದ್ದ ಮುಖ ಸ್ತಬ್ಧವಾಯಿತೇ?? ಕರುಳ ಕುಡಿಗಳು ಅರಚಿ ಕರೆದರೂ ಆತನಿಗೆ ಕೇಳದೇಕೆ?? ಸಿಗಲಾರದೇ? ಈ ಪ್ರಶ್ನೆಪತ್ರಿಕೆಗಳಿಗೊಂದು ಉತ್ತರ ಪತ್ರಿಕೆ. ಕೊನೆಯಲ್ಲಿ.... ಖಾಲಿ ದೇಹವೊಂದು ಬಿಟ್ಟು, ಹೊರಟನೆ ಅವನು....? ಅಣ್ಣ-ತಮ್ಮ, ಅಮ್ಮ-ಅಪ್ಪ, ಸಂಬಂಧಿ, ಶತ್ರು, ಪ್ರೀತಿ-ದ್ವೇಷ. ಕೇವಲ ಪಾತ್ರಗಳಾಗಿ ಹುಟ್ಟಿ -ನಟಿಸುವ ಕಾಮನಬಿಲ್ಲೋ..? ಏನಿದೆ ಅವನಲ್ಲಿ ಜೀವವೊಂದು -ಬಿಟ್ಟು ಹೋದರೆ ಹೊರಟು, ತೊರದಿರೊ ಗುರಿಯೊಂದು ಶೂನ್ಯವ -ಸೇರಿ... ಅಂತ್ಯವಾಗುವುದಲ್ಲವೇ ಇದರ ಗುಟ್ಟು. - ಗಣೇಶ್ ಹಿಲ್ಕುಂಜಿ

ಯಾರಿಗಿಲ್ಲ ಹಸಿವು?? - ಕವಿತೆ - ಅನಂತ ಕುಣಿಗಲ್

" ಯಾರಿಗಿಲ್ಲ ಹಸಿವು?? " ಹಸಿವು ಅದು ಬಡವರ ನೋವು ಅಲ್ಲ, ರೈತನ ನರಳಾಟದ ಕಾವು ಅಲ್ಲಲ್ಲಾ, ಕಾಯುವವರ ಗುಟ್ಟಿನ ಬೇವು ಹೌದು, ಸರಳವಾಗಿ ಬಾಯಿ ಮುಚ್ಚಬಹುದು ಬಡವನ ಹಸಿವನ್ನು ಮಣ್ಣಿನಿಂದ ಆದರೆ, ಬಾಯಿ ಮುಚ್ಚಿದರೆ ಸಾಕೇ! ಹೊಟ್ಟೆಯ ಕತೆ ಏನು? ಬಡವನಿಗೆ ಮೈಯೆಲ್ಲಾ ಬಾಯಿ ಅಯ್ಯೋ ಪಾಪ; ಎನ್ನದಿರಿ ಪ್ರಚಾರಕ್ಕಾಗಿ ಸುಮ್ಮನೆ ಬಳಸಿಕೊಳ್ಳದಿರಿ; ನಿಮ್ಮುಚ್ಚಾಟದ ನಾಟಕ ನೋಡುವ ಏನೂ ಗೊತ್ತಿಲ್ಲದ ಪ್ರೇಕ್ಷಕರಾಗಿ ಅವರಿಲ್ಲದೆ ನೀವಿಲ್ಲ ನೀವೆಂಬುದು ನೀವೇ ಅಲ್ಲ ನಿಮ್ಮ ಅಂತರಾತ್ಮದ ಅಣುವಣುವು ಹಸಿವಿನ ನೋವುಂಡ ಬಡಪಾಯಿಯದು ನಿನ್ನದೆಂಬುದು ಏನೂ ಇಲ್ಲ! ತಿನ್ನಲು ಪರದಾಡುವವರ ಮುಂದೆ ತಿಂದು ತೇಗುವಿರಲ್ಲಾ.. ಹೆಚ್ಚಾಗಿ ಬಿಸಾಡುವಿರಲ್ಲಾ.. ಹಸಿವಿಗೂ ಬೆಲೆ ಇದೆ ಅದನ್ನು ನಿಮ್ಮಿಂದ ಖಂಡಿತ ಭರಿಸಲಾಗದು ಕಾಯಕಯೋಗಿಯ ಸೋಲಿಸಲಾಗದು ಹಸಿವು ಅವನ ಶತ್ರು ಖಡ್ಗ ಮಾಡಿಕೊಳ್ಳದಿರಿ; ಬೇಗ ಮಣ್ಣಾಗುವಿರಿ ಬಡವನಿಗೆ ಹೊಟ್ಟೆಯ ಹಸಿವು ಹಣವಂತನಿಗೆ ನೋಟಿನ ಹಸಿವು ಕಾಮುಕನಿಗೆ ಹೆಣ್ಣಿನ ಹಸಿವು ಗುರುವಿಗೆ ಕಲಿಸುವ ಹಸಿವು ತಾಯಿಗೆ ಉಣಿಸುವ ಹಸಿವು ನನಗೆ ಗೀಚುವ ಹಸಿವು ನಿಮಗೆ ಓದುವ ಹಸಿವು ಯಾರಿಗಿಲ್ಲ ಹಸಿವು? ತುತ್ತು ತಿನ್ನುವ ಮುನ್ನ ನೀ ನೆನೆಯೋ ಆತನನ್ನ ದಿನವೂ.. ಪ್ರತಿದಿನವೂ.. ಮಲಗುವ ಮುಂಚೆ, ಎದ್ದ ನಂತರ ಹಾಗೂ, ಉಸಿರಿರುವ ತನಕ                   ...

ಆನ್ಲೈನ್ ಬಿಸಿನೆಸ್ಸು - ಕವಿತೆ - ಅನಂತ ಕುಣಿಗಲ್

" ಆನ್ಲೈನ್ ಬಿಸಿನೆಸ್ಸು " ಈ ಕೊರೋನಾ ಅಲೆಯನ್ನು ಹೇಗಾದ್ರು ಮಾಡಿ ತಡಿಬೋದು ಆದ್ರೆ, ಹತ್ತು ಸಾವಿರ ಹಿಂಬಾಲಕರನ್ನು ಪಡೆದ ಕೆಲವು ಹೆಣ್ಮಕ್ಳನ್ನು ಮಾತ್ರ ಹಿಡಿಯಲಾಗದು ಇದ್ಕೆ ಕೆಲವು ಹುಡ್ಗರೂ ಹೊರತಲ್ಲ!! ಇನ್ಸ್ಟಾ, ಫೇಸ್ಬುಕ್ ಪೇಜ್ ಇನ್ನೂ ಹಲವಾರಿವೆ ಅವ್ಗಳ ಹೆಸ್ರು ಮಾತ್ರ ಅವ್ರವ್ರಿಗೆ ಗೊತ್ತು ಮೊದಮೊದಲು ಯಾವ ಗೋಜು ಇರೋದಿಲ್ಲ ಒಂದಿಬ್ಬರು ಹುಡುಗರು ರೆಕ್ವೆಸ್ಟ್ ಕಳ್ಸಿದ್ರೆ ಸಾಕು ಅವರನ್ನ ಮೆಚ್ಚಿಸಲು ಒಂದೆರಡು ಸ್ಟೋರಿ ಮತ್ತೆ ತಲೆಬುಡ ಇಲ್ಲದ ರೀಲುಗಳು ಎಲ್ಲೆಲ್ಲಿಂದಲೂ ಹಿಂಬಾಲಕರು ಸಿಗ್ತಾರೆ ತಕ್ಕಮಟ್ಟಿಗೆ ಆಟಗಳೂ ಶುರುವಾಗುತ್ತವೆ ಹಿಂಬಾಲಕರು ಹೆಚ್ಚಾದಂತೆ ಹಿಂಬಾಲಿಸುವುದನ್ನು ಕಡಿಮೆ ಮಾಡ್ತಾರೆ ಲೈಕು ಸಿಗದ ಹಳೇ ಫೋಸ್ಟುಗಳು ಬಿನ್ ಸೇರ್ತವೆ ಯಾರೋ ಮಾಡಿ ಬಿಸಾಕಿದ ವೀಡಿಯೋಗಳಂತೆಯೇ ಇವರೂ ಪ್ರಾರಂಭಿಸುತ್ತಾರೆ; ಹೆಸರೇ ಇಲ್ಲದ ಅರವತ್ನಾಲ್ಕು ಸಾವಿರ ಮುಖಭಾವಗಳೊಂದಿಗೆ ಅರೆ ಹುಚ್ಚಾಟಗಳು, ಸೈಕೋ ಮ್ಯಾನರಿಸಂ ಇನ್ನೂ ಎಂತೆಂಥದೋ ಖಾಯಿಲೆಗಳು ಗುಣಮುಖವಾಗುವುದು ಮಾತ್ರ ಸ್ವಲ್ಪ ಕಷ್ಟ ಸಾಧ್ಯ! ಅಪ್ಪ ಅಮ್ಮ ಇಟ್ಟ ಹೆಸರು ಅಪ್ಪ ಅಮ್ಮನೇ ಮರೆಯುವಷ್ಟು ದೊಡ್ಡವರಾಗಿರುತ್ತಾರೆ ಆಟಿಟ್ಯೂಡ್ ಗರ್ಲ್, ಕ್ರೇಜಿ ಏಂಜಲ್, ಡೆವಿಲ್ ಮಾಸ್ಕ್ ಮಾಮ್ಸ್ ಲವ್, ಡ್ರೀಮ್ ಫಂಗಸ್, ಡ್ಯೂಕ್ ಲವರ್ ಯಪ್ಪಾ... ಒಂದಾ.. ಎರಡಾ?? ಬಯೋದಲ್ಲಿ ಜಾತಿ ಗೀಳಿನ ವೈರಸ್ಸು ಬೇರೆ ಅಪ್ಪಟ, ಹ...

ಕೊರೋನ ಕಿರುಪ್ರಬಂಧ ಸ್ಪರ್ಧೆಯ ವಿಜೇತ ಪ್ರಬಂಧಗಳು

ಅವ್ವ ಪುಸ್ತಕಾಲಯ, ಕೆಂಚನಹಳ್ಳಿ ಸಾಹಿತ್ಯ ತಂಡದಿಂದ ಹಮ್ಮಿಕೊಂಡಿದ್ದ ಕೊರೋನ ಕಿರುಪ್ರಬಂಧ ಸ್ಪರ್ಧೆಯ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು, ಇ ಸರ್ಟಿಫಿಕೇಟ್ ಹಾಗೂ ಬಹುಮಾನಗಳನ್ನ ಕಳಿಸಿಕೊಡಲಾಗಿದೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ  ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಡಾ. ನೇತ್ರಾವತಿ ಹರಿಪ್ರಸಾದ್ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.  ಇದೀಗ ವಿಜೇತ ಪ್ರಬಂಧಗಳನ್ನು ಓದುಗರಿಗಾಗಿ ನೀಡಲಾಗಿದೆ. ಓದಿ ಆನಂದಿಸುತ್ತೀರೆಂದು ಭಾವಿಸಿದ್ದೇವೆ. ಎಲ್ಲರಿಗೂ ಶುಭವಾಗಲಿ. ಸಾಹಿತ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸ್ಪರ್ಧೆಗಳಲ್ಲಿ ಭಾಗಿಯಾಗಲು ನಮ್ಮ ತಂಡ ಸೇರಿರಿ. https://www.facebook.com/groups/3344469948953030/?ref=share ಮೊದಲ ಬಹುಮಾನಿತ ಪ್ರಬಂಧ : ಕೊರೋನಾ 2ನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರದ ಮತ್ತು ಸಾರ್ವಜನಿಕರ ಸಾಮಾಜಿಕ ಜವಾಬ್ದಾರಿಗಳು: 1. ಆರೊಗ್ಯದ ಬಿಕ್ಕಟ್ಟಿನ ವಿಷಮ ಸ್ಥಿತಿ ಉಂಟಾದಲ್ಲಿ ವಿಶೇಷ ಕಾನೂನು ರೂಪಿಸಿ, ವಿವಿಧ ಅಧಿಕಾರಿಗಳ ಮೂಲಕ ಜನಸಾಮಾನ್ಯರಿಗೆ ಅದನ್ನು ಮುಟ್ಟಿಸುವ ಕೆಲಸ ಮಾಡಬೇಕು. 2. ವಿತ್ತೀಯ ವ್ಯವಸ್ಥೆಯು ದೇಶದ ಆರ್ಥಿಕತೆಯಲ್ಲಿ ಸರ್ಕಾರವು ಹಣವನ್ನು ಒದಗಿಸುವಂತಹ ವ್ಯವಸ್ಥೆಯಾಗಿದೆ. ವಿತ್ತೀಯ ವ್ಯವಸ್ಥೆಗಳು ರಾಷ್ಟಿçÃಯ ಖಜಾನೆ, ಕೇಂದ್ರ ಬ್ಯಾಂಕುಗಳು ಮತ್ತು ವ...

ಕೊರೋನಾ ಕಿರುಪ್ರಬಂಧ ಸ್ಪರ್ಧೆ ಫಲಿತಾಂಶ - ಅವ್ವ ಪುಸ್ತಕಾಲಯ

      ಅವ್ವ ಪುಸ್ತಕಾಲಯ ಬಳಗದಿಂದ ಮೇ ತಿಂಗಳಲ್ಲಿ ಆಯೋಜಿಸಲಾಗಿದ್ದ ಕೊರೋನಾ ಕಿರುಪ್ರಬಂಧ ಸ್ಪರ್ಧೆ  ಯ ಫಲಿತಾಂಶ ಬಿಡುಗಡೆಯಾಗಿದ್ದು, ಅವ್ವ ಪುಸ್ತಕಾಲಯ ಬಳಗವು ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದೆ. ಪ್ರಬಂಧ ರಚನೆಯಲ್ಲಿ ಎಲ್ಲಾ ಸ್ಪರ್ಧಿಗಳ ಪಾತ್ರವೂ ಸ್ವಾಗತಾರ್ಹ. ವಿಜೇತರು ಈ ಕೂಡಲೆ ತಮ್ಮ ಪೂರ್ತಿ ಅಂಚೆ ವಿಳಾಸ, ಫೋನ್ ನಂಬರ್ ಹಾಗೂ ಇತ್ತೀಚಿನ ನಿಮ್ಮ ಭಾವಚಿತ್ರಗಳನ್ನು   avvapustakaalaya@gmail.com  ಗೆ  ಈ ಕೂಡಲೆ ಮೇಲ್ ಮಾಡುವಂತೆ ಕೋರಲಾಗಿದೆ. ವಿಜೇತರಿಗೆ ಅಂಚೆಯ ಮೂಲಕ(ಕೊರೋನಾ ಕಾರಣ ವಿಳಂಬವಾಗಬಹುದು) ಪುಸ್ತಕ ಬಹುಮಾನ ಹಾಗೂ ಅರ್ಹ ಎಲ್ಲಾ ಪ್ರಬಂಧಗಳಿಗೂ ಮುಂದಿನ ವಾರದ ಒಳಗೆ ಇ ಪ್ರಮಾಣ ಪತ್ರ ದೊರೆಯಲಿದೆ. ತೀರ್ಪುಗಾರರ ನುಡಿಗಳು : ಕೊರೋನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಯುವ ಬರಹಗಾರರಲ್ಲಿನ ಸೃಜನಶೀಲತೆ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಪ್ರೇರೇಪಿಸಲು ಅವ್ವ ಪುಸ್ತಕಾಲಯದಿಂದ ಕೊರೋನ ಕಿರುಪ್ರಬಂಧ ಸ್ಪರ್ಧೆ ಆಯೋಜಿಸಿದ್ದು ಪ್ರಶಂಸನೀಯ. ಈ ಸ್ಪರ್ಧೆಯಲ್ಲಿ ಗೃಹಿಣಿಯರ ಪಾಲ್ಗೊಳ್ಳುವಿಕೆ ನಿಜಕ್ಕೂ ಆಶಾದಾಯಕವಾಗಿದೆ. ಇಲ್ಲಿನ ಸ್ಪರ್ಧಿಗಳಂತೆಯೇ ಎಲ್ಲ ಜನಸಾಮಾನ್ಯರು ಹಾಗೂ ಸರ್ಕಾರಗಳು ಸಾಮಾಜಿಕ ಜವಾಬ್ದಾರಿಯಿಂದ ನಡೆದುಕೊಂಡರೆ ಸಮಾಜದ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ವಿಜೇತರಿಗೆ ಹಾಗೂ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನೆಗಳು. ಹಾಗೆಯೇ ...

ವಿಜಯಧಾರೆ - ಮಿನಿ ಕಥೆ - ಅನಂತ ಕುಣಿಗಲ್

                  " ವಿಜಯಧಾರೆ "                    ( ಕಾಲ್ಪನಿಕ ಕಥೆ  )       ಅ ದು ಒಡೆದ ಹೂಕುಂಡದ ಒಂದು ಭಾಗ. ಬೆಂಗಳೂರಿನ ಸೈನ್ಸ್ ಮ್ಯೂಸಿಯಂ ಒಂದರಲ್ಲಿ ಪ್ರದರ್ಶನಕ್ಕೆಂದು ಇಟ್ಟಿದ್ದರು. ಮುನ್ನೂರು ವರ್ಷಗಳ ಹಿಂದೆ ಪಡಾಯಿ ಸಾಮ್ರಾಜ್ಯದ ರಾಣಿ ರುಕುಮಾಯಿ ಬಳಿ ಈ ಹೂಕುಂಡ ಇತ್ತಂತೆ. ತನ್ನ ರಾಜ್ಯವೆಲ್ಲಾ ಶತ್ರುಗಳಿಂದ ಧ್ವಂಸವಾದಾಗ ಈ ಕುಂಡವೂ ನುಚ್ಚುನೂರಾಯಿತಂತೆ. ಅದಾದ ಒಂದಷ್ಟು ವರ್ಷಗಳಲ್ಲಿ ಆ ಜಾಗವು ಒಂದು ಪ್ರೇಕ್ಷಣೀಯ ಸ್ಥಳವಾಯಿತಂತೆ. ಆ ಸ್ಥಳಕ್ಕೆ ಅಲೆಮಾರಿಯೊಬ್ಬ ಭೇಟಿ ನೀಡಿ, ಒಡೆದ ಹೂಕುಂಡವನ್ನು ಗಮನಿಸಿ ವಿಶೇಷವೆನಿಸಿದಾಗ ಅದನ್ನು ತಂದು ಮ್ಯೂಸಿಯಂಗೆ ಒಪ್ಪಿಸಿದನಂತೆ. "ಹೂಕುಂಡಗಳಲ್ಲೇ ವಿಶೇಷವಾದದ್ದು ವಿಜಯಧಾರೆ" ಎಂದು ಪಡಾಯಿಯ ಮುದುಕ ಮುದುಕಿಯರು ಹೇಳುತ್ತಿದ್ದ ಕಥೆಗಳಲ್ಲಿ ವಿಜಯಧಾರೆಯೂ ಉಳಿದುಬಂದಿದೆ.      ಮುನ್ನೂರು ವರ್ಷಗಳ ಹಿಂದೆ ಪಡಾಯಿಯ ರಾಜ ಮೊಹಬ್ಬತ್ ನ ರಾಜ್ಯದ ಮೇಲೆ ಶತ್ರುಗಳು ದಾಳಿ ಮಾಡಿ, ನಾಲ್ಕೈದು ಬಾರಿ ವಿಜಯಗಳಿಸಿ ರಾಜನನ್ನು ಅವಮಾನಿಸಿದರು. ಇದರಿಂದ ಕುಪಿತಗೊಂಡ ಮೊಹಬ್ಬತ್ ರಾಜ ಸುಧೀರ್ಘ ತಪಸ್ಸು ನಡೆಸಿದ. ತಪಸ್ಸನ್ನು ಮೆಚ್ಚಿ, ಒಬ್ಬಳು ಗಂಧರ್ವ ದೇವತೆ ಪ್ರತ್ಯಕ್ಷಳಾಗಿ ರಾಜನಿಗೆ ವಿಶೇಷವಾದ ಹೂಕುಂ...

ಯಾಶಿ - ಕವಿತೆ - ಅನಂತ ಕುಣಿಗಲ್

" ಯಾಶಿ " ಅವಳ್ಯಾರು ಯಾಶಿ? ಎಂಬ ಪ್ರಶ್ನೆಗೆ, ಉತ್ತರಿಸುವಾಗ ಒಂದು ಕ್ಷಣ ತಬ್ಬಿಬ್ಬಾಗುವುದು ನನ್ನ ಮೂಲ ಗುಣವಿರಬೇಕು ಯಾಶಿ ಸಿಕ್ಕ ಘಳಿಗೆಯಿಂದ ಯಾಶಿ ನನಗೊಲಿದ ಅಪರೂಪದ ಹಾಗೂ ಅನಿವಾರ್ಯವಾಗಿರುವ ಕವಿತೆ ಅವಳ್ಯಾರೋ.. ಒಟ್ಟಿನಲ್ಲಿ ಯಾಶಿ ಎಂಬ ಹೆಸರಿನವಳು ದಿನ ರಾತ್ರಿ ಕನಸ್ಸಿನಲ್ಲಿ ಬಂದು ಕಾಡುವಳು ನೋಡುವ ಸಿನೆಮಾಗಳಲ್ಲಿ ಓದುವ ಪುಸ್ತಕಗಳಲ್ಲಿ ಶರೀರ-ಶಾರೀರವಿಲ್ಲದೆಯೂ ಗೋಚರಿಸುವಳು ಕವಿತೆಯಲ್ಲಿನ ರೂಪಕ ಅವಳು ಛಂದಸ್ಸು, ಉಪಮೆ, ತಾಳ, ರಾಗ ಪದಪುಂಜ, ಪ್ರಾಸ ಎಲ್ಲವೂ ಆಗಿದ್ದಾಳೆ ಈವರೆಗೆ ಹೆಣ್ಣಂತೆಯೇ ಕಂಡಿದ್ದಾಳೆ ನಾನೂ ಕೂಡ ಕವಿತೆಯನ್ನು ಹೆಣ್ಣೆಂದೇ ಭಾವಿಸಿದ್ದೇನೆ ಯಾಕೆಂದರೆ, ಹೆಣ್ಣಿನಲ್ಲಲ್ಲವೇ ಲೋಕದ ಭಾವಗಳು ಹೆಚ್ಚು ಹೆಪ್ಪುಗಟ್ಟಿರುವುದು! ಹಾಗಾಗಿ, ನಿತ್ಯವೂ ಬಿಡುವಿಲ್ಲದಂತೆ ಕಾಡುತ್ತಾಳೆ ರೂಪವಿಲ್ಲದವಳು ಆದರೂ ಅದ್ಭುತ ರೂಪದರ್ಶಿ ಆಕಾರವಿಲ್ಲದವಳು ಆದರೂ ಪ್ರೇಮದ ಸೃಷ್ಠಿಕರ್ತೆ ಬಣ್ಣವಿಲ್ಲದವಳು ಆದರೂ ಕಾಮನಬಿಲ್ಲಿನಂಥವಳು ದೇಹವಿಲ್ಲದವಳು ಆದರೂ ಹುಚ್ಚಿಡಿಸುವ ತಿಳಿಮನಸ್ಸಿನವಳು ಯಾರೀ.. ಶಿರೋಮಣಿ?? ಎಂದರೆ.. ಯಾಶಿಯ ಬಿಟ್ಟು ಇನ್ಯಾರಿಲ್ಲ ಧರ್ಮ, ಜಾತಿ, ಪಂಗಡ ಇಲ್ಲದವಳು ಎಲ್ಲವನ್ನು ಎಲ್ಲರನ್ನೂ ಅಪ್ಪಿ-ಮುದ್ದುವ ವಿಶಾಲ ಹೃದಯದವಳು ಸತ್ಯ-ನ್ಯಾಯ-ಶಾಂತಿ-ಸಮಾನತೆಗಾಗಿ ಒಂಟಿ ದನಿ ಎತ್ತುವಳು ಯಾರವಳು?? ಯಾಶಿ!! ಪ್ರೇಮವನ್...

ಅಮ್ಮಂದಿರ ದಿನದ ಶುಭಾಷಯಗಳು - ಕವಿತೆ - ಅನಂತ ಕುಣಿಗಲ್

       " ಅಮ್ಮಾ.. " ಮೊದಲ ತೊದಲು ಅಮ್ಮ ಜಗದ ನಿಲುವು ಅಮ್ಮ ಜೀವ-ಜೀವದ ಅಂತರಾತ್ಮ ಅಮ್ಮಾ.... ಅಮ್ಮಾ.. ಲೋಕ ಪೂಜಿತ ದೇವತೆ ಕರುಣೆಯ ಕೂಗು ಅಮ್ಮಾ.. ಅನಂತ ಕಷ್ಟದ ಕೈಗಳು ಸಂಸಾರದ ಗುಟ್ಟು ಅಮ್ಮಾ.. ಅಮ್ಮಾ... ಅಮ್ಮಾ.. ಜನ್ಮದಾತೆ ಅಮ್ಮ ಜೀವ ರಕ್ಷಕಿ ಅಮ್ಮ ಕರುಳ ಧ್ವನಿಯೂ ಅಮ್ಮ ಪ್ರತಿ ಶ್ವಾಸದ ಉಸಿರು ಅಮ್ಮ ಅಮ್ಮಾ... ಅಮ್ಮಾ.. ಕಷ್ಟದ ಕಡಲು ಅಮ್ಮಾ.. ಇಷ್ಟದ ಮಡಿಲು ಅಮ್ಮಾ.. ಅಮ್ಮಾ... ಅಮ್ಮಾ.. ಸಾಧು-ಸಂತರ ರೂಪ ದುರ್ಗಿ-ಕಾಳಿಯ ಕೋಪ ಅಮ್ಮಾ.. ಅಮ್ಮಾ.. ಸ್ವರ್ಗದ ಸೃಷ್ಠಿ ಅಮ್ಮಾ ಬೆಚ್ಚನೆ ನಗುವೇ ಅಮ್ಮಾ ಕಣ-ಕಣದಲ್ಲೂ ಅಮ್ಮಾ ಹಗಲು ರಾತ್ರಿಯ ಗಮ್ಯ ನೂರು ಜನ್ಮದ ಪುಣ್ಯ ಅಮ್ಮಾ... ಅಮ್ಮಾ.. ಅಮ್ಮಾ.. ಅಮ್ಮಾ..                             ಅನಂತ ಕುಣಿಗಲ್

ಬೆವರು - ಕವಿತೆ - ಅನಂತ ಕುಣಿಗಲ್

" ಬೆವರು " ಬೆವರು ಅದು ವಾಸನೆ ಅಲ್ಲಾ, ನೀರು ಅಲ್ಲಲ್ಲಾ, ದುಡಿಮೆಯ ಫಲ ಪಾರ್ಕಿನೊಂದು ಸೈಡಿನಲ್ಲಿ ಸಿಕ್ಸ್ ಪ್ಯಾಕಿಗಾಗಿ ಜಿಗಿಯುತ್ತಿದ್ದ ಯುವತಿಯೊಬ್ಬಳ ಮೈಮ್ಯಾಲಿನ ಬಟ್ಟೆಯೋ.. ಬರೀ ನೀರು ನೀರು ಮಳೆಯಲ್ಲಿ ನೆನೆಯುವ ಚಾಳಿ ಅಂದುಕೊಂಡಿದ್ದೆ ಅಲ್ಲಾ, ಅದು ಬೆವರು! ಅಲ್ಲೊಬ್ಬ ಪೋರ ಪಕ್ಕದ ಮನೆಯಲ್ಲಿ ಮೊಸರು ಕೇಳಲು ಹೊಸದಾಗಿ ಹೋಗಿದ್ದ ನೋಡು ನೋಡುತ್ತಿದ್ದಂತೆಯೇ ಉಸಿರುಕಟ್ಟಿ ಓಡಿ ಬರುತ್ತಿದ್ದ ಆಂಟಿಯನ್ನು ರೇಗಿಸಿರಬೇಕೆಂದುಕೊಂಡೆ ಅಲ್ಲಾ, ಅವನ ಹಿಂದೆ ಒಂದು ಡಾಬರ್ ಇತ್ತು ಅದೂ ಕೂಡ ಬೆವರುವಂತೆಯೇ ಓಡುತ್ತಿತ್ತು ನಡುರಾತ್ರಿಯಲ್ಲಿ ಯಾರಿರದ ಬೀದಿಯಲ್ಲಿ ವೈಯ್ಯಾರದಿ ಸೆರಗು ಸರಿಸಿಕೊಂಡು ನಿಂತಿದ್ದ ಲೈಂಗಿಕ ಕಾರ್ಯಕರ್ತೆಯೊಬ್ಬಳು ತನಗೆ ಗ್ರಾಹಕ ಸಿಕ್ಕ ನಂತರವೇ ನಾಲ್ಕು ದಿನಗಳ ಸ್ನಾನ ಒಟ್ಟಿಗೇ ಮಾಡಿದ್ದಳು ಇಲ್ಲಾ, ತುಂಬಾ ಬೆವತ್ತಿದ್ದಳು ಎಸಿಯ ಕೆಳಗೆ ಚಿನ್ನದ ಮಂಚದ ಮೇಲೆ ಕೂತಿದ್ದ ಮುದಿ ರಾಜಕಾರಣಿಯೊಬ್ಬ ನೋಟಿನ ಮೇಲೆ ನೋಟು ಎಣಿಸುತ್ತಿದ್ದ ಎಸಿಯ ಗಾಳಿಗೆ ತರಗೆಲೆಯಂತಿದ್ದ ನೋಟುಗಳು ಒದ್ದೆಯಾದ ಒಳಉಡುಪುಗಳಾಗಿದ್ದವು ಇಲ್ಲಾ, ನೋಟುಗಳೂ ಬೆವತ್ತಿದ್ದವು ಕೈಯಿಂದ ಕೈಯಿಗೆ ಓಡಾಡಿ! ಸೂರ್ಯ ನೆತ್ತಿಗೆ ಬಂದರೂ ಚಿಂತಿಸದೆ ನೆಲ ಅಗೆಯುತ್ತಿದ್ದ ರೈತ ಒಲೆ ಊದುತ್ತಿದ್ದ ಗೃಹಿಣಿ ತಡರಾತ್ರಿ ಓದುತ್ತಿದ್ದ ವಿದ್ಯಾರ್ಥಿಗಳು ಲ್ಯಾಪ್‌ಟಾಪಿನ ಪರದೆ ನೋಡುತ್ತಿದ್ದ ಲೆಕ್ಚರರ್ ...