ಪ್ರೇಮ ಕಾವ್ಯ
ತಂಪು ತಂಪೆನಿಸುವ ತಂಗಾಳಿಯಲಿ
ಇಂಪು ಇಂಪಾದ ನಿನ್ನ ನೆನಪಲಿ
ಕೆಂಪು ಕೆಂಪಾದ ಕಂಗಳಲಿ
ಹಂಪುಗಳಿರದ ಕಣ್ಣಿನ ರಸ್ತೆಯಲಿ
ಸಂಪು ಸಂಪಾದ ಸಮಯದಲಿ
ಕಂಪು ಕಂಪನದಿ ಸುರಿಯುತಿವೆ ಕಣ್ಣೀರು..
ನೋಡು ಗೆಳತಿ ಸಾಕಾಯಿತು ನಿನ್ನ ನೆನೆದು
ಹಾಡು ಹಾಡುತಿರುವೆ ಪರಪಂಚದ ಎಲ್ಲ ಕ್ಷಣಗಳನು ತೊರೆದು
ಪಾಡು ಹೇಳದಂತಾಗಿದೆ ನನದು ನಿನ್ನದೇ ಗುಂಗಲಿ
ಕಾಡು ಕಾಡಲ್ಲಿ ಅಲೆದಾಡುತಿರುವೆ ಹುಡುಕುತ ನಿನ್ನನು
ನಾಡು ನಾಡಲ್ಲೆಲ್ಲ ಸಾಕಾಯಿತು ನಿನ್ನ ಹುಡುಕಿ
ಸೇಡು ತೀರಿಸುವ ನೆಪವ ಮಾಡಿ ತೊರೆದೆಯಾ ನನ್ನ ಕಣ್ಣೀರ ಸುರಿಸಲು ಬಿಟ್ಟು
ಅಂದು ನೀನೇ ಬೇಡೆಂದರೂ ತುಬಿದೆ ಪ್ರೀತಿ
ಇಂದು ಬೇಕೆಂದರೂ ನೀಡದೆ ನಡೆದೇ ನೀ ನನಗದೇ ಪ್ರೀತಿ
ತಂದು ಕೊಡುವೆನೆಂದೆ ಜಗದೆಲ್ಲ ಪ್ರೀತಿ
ಕೊಂದು ನಡೆದೇ ನನ್ನ ಮನ ನೀನೆಷ್ಟು ಸ್ವಾರ್ಥಿ
ನೊಂದು ಕುಳಿತಿಹೆ ನಾನು ಬಂದೊಮ್ಮೆ ಆವರಿಸು
ಒಂದು ತಪ್ಪಾದರೂ ವಿವರಿಸು ನೀನೀಗ ಸುರಿವ ಕಣ್ಣೀರ ನಿಲ್ಲಿಸು..

- ಪ್ರವೀಣ ತಿಗಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ