ವಿಷಯಕ್ಕೆ ಹೋಗಿ

ವಿಜಯಧಾರೆ - ಮಿನಿ ಕಥೆ - ಅನಂತ ಕುಣಿಗಲ್


                  " ವಿಜಯಧಾರೆ "
                   (ಕಾಲ್ಪನಿಕ ಕಥೆ )

     ದು ಒಡೆದ ಹೂಕುಂಡದ ಒಂದು ಭಾಗ. ಬೆಂಗಳೂರಿನ ಸೈನ್ಸ್ ಮ್ಯೂಸಿಯಂ ಒಂದರಲ್ಲಿ ಪ್ರದರ್ಶನಕ್ಕೆಂದು ಇಟ್ಟಿದ್ದರು. ಮುನ್ನೂರು ವರ್ಷಗಳ ಹಿಂದೆ ಪಡಾಯಿ ಸಾಮ್ರಾಜ್ಯದ ರಾಣಿ ರುಕುಮಾಯಿ ಬಳಿ ಈ ಹೂಕುಂಡ ಇತ್ತಂತೆ. ತನ್ನ ರಾಜ್ಯವೆಲ್ಲಾ ಶತ್ರುಗಳಿಂದ ಧ್ವಂಸವಾದಾಗ ಈ ಕುಂಡವೂ ನುಚ್ಚುನೂರಾಯಿತಂತೆ. ಅದಾದ ಒಂದಷ್ಟು ವರ್ಷಗಳಲ್ಲಿ ಆ ಜಾಗವು ಒಂದು ಪ್ರೇಕ್ಷಣೀಯ ಸ್ಥಳವಾಯಿತಂತೆ. ಆ ಸ್ಥಳಕ್ಕೆ ಅಲೆಮಾರಿಯೊಬ್ಬ ಭೇಟಿ ನೀಡಿ, ಒಡೆದ ಹೂಕುಂಡವನ್ನು ಗಮನಿಸಿ ವಿಶೇಷವೆನಿಸಿದಾಗ ಅದನ್ನು ತಂದು ಮ್ಯೂಸಿಯಂಗೆ ಒಪ್ಪಿಸಿದನಂತೆ.

"ಹೂಕುಂಡಗಳಲ್ಲೇ ವಿಶೇಷವಾದದ್ದು ವಿಜಯಧಾರೆ" ಎಂದು ಪಡಾಯಿಯ ಮುದುಕ ಮುದುಕಿಯರು ಹೇಳುತ್ತಿದ್ದ ಕಥೆಗಳಲ್ಲಿ ವಿಜಯಧಾರೆಯೂ ಉಳಿದುಬಂದಿದೆ.


     ಮುನ್ನೂರು ವರ್ಷಗಳ ಹಿಂದೆ ಪಡಾಯಿಯ ರಾಜ ಮೊಹಬ್ಬತ್ ನ ರಾಜ್ಯದ ಮೇಲೆ ಶತ್ರುಗಳು ದಾಳಿ ಮಾಡಿ, ನಾಲ್ಕೈದು ಬಾರಿ ವಿಜಯಗಳಿಸಿ ರಾಜನನ್ನು ಅವಮಾನಿಸಿದರು. ಇದರಿಂದ ಕುಪಿತಗೊಂಡ ಮೊಹಬ್ಬತ್ ರಾಜ ಸುಧೀರ್ಘ ತಪಸ್ಸು ನಡೆಸಿದ. ತಪಸ್ಸನ್ನು ಮೆಚ್ಚಿ, ಒಬ್ಬಳು ಗಂಧರ್ವ ದೇವತೆ ಪ್ರತ್ಯಕ್ಷಳಾಗಿ ರಾಜನಿಗೆ ವಿಶೇಷವಾದ ಹೂಕುಂಡವನ್ನು ಕೊಟ್ಟಳು. ಅದರ ಹೆಸರು ವಿಜಯಧಾರೆ. 'ಈ ಹೂಕುಂಡದಲ್ಲಿನ ಬಳ್ಳಿ ಹೂಬಿಡುವವರೆಗೂ ಕಾದು, ಆ ಹೂವುಗಳ ಪರಿಮಳವನ್ನು ನೀನೊಬ್ಬನೇ ಹೀರಬೇಕು. ಆಗ ನಿನಗೆ ಕೈತಪ್ಪಿಹೋದ ನಿನ್ನ ರಾಜ್ಯದ ಸಂಪತ್ತನ್ನು ಗೆಲ್ಲುವ ಶಕ್ತಿ ಬರುತ್ತದೆ' ಎಂದು ಹೇಳಿ ಮಾಯವಾದಳು. ಅದರಂತೆಯೇ ಮೊಹಬ್ಬತ್ ಪಾಲಿಸಿದ. ಹಾಗೆಯೇ ಒಂದೇ ವರ್ಷದಲ್ಲಿ ಶತ್ರು ರಾಜ್ಯಗಳ ಮೇಲೆ ಯುದ್ಧ ಮಾಡಿ, ತನ್ನ ಸಂಪತ್ತನ್ನು ಹಿಂಪಡೆದ. ಇದರಿಂದ ಆಶ್ಚರ್ಯಗೊಂಡ ಶತ್ರುಗಳು ಪಕ್ಕದ ದೇಶದಿಂದ ಒಬ್ಬಳು ರೂಪದರ್ಶಿಯನ್ನು ಕರೆಸಿ, ಸೇವಕಿಯಂತೆ ಗೂಢಾಚಾರಿಣಿಯಾಗಿ ಮೊಹಬ್ಬತ್ ನ ರಾಜ್ಯಕ್ಕೆ ಕಳುಹಿಸಿದರು. ಸೇವಕಿಯ ಮೈಮಾಟವನ್ನು ಕಂಡು ಬೆರಗಾದ ಮೊಹಬ್ಬತ್ ಆಕೆಯಿಂದ ಆಕರ್ಷಿತನಾಗಿ ಅವಳನ್ನು ಆನಂದಿಸಲು ಶುರುಮಾಡಿದ. ಒಂದು ದಿನ ಆಲಂಘನೆಯಲ್ಲಿದ್ದಾಗ, ವಿಜಯಧಾರೆಯ ರಹಸ್ಯವನ್ನು ರುಕುಮಾಯಿಗೆ ಹೇಳಿಬಿಟ್ಟ. ಅಂದಿನಿಂದ ಸೇವಕಿ ರುಕುಮಾಯಿ ವಿಜಯಧಾರೆ ಹೂವಿನ ಸುಗಂಧವನ್ನು ತಾನೇ ಹೀರಲು ಪ್ರಾರಂಭಿಸಿದಳು. ಅದರಿಂದ ಮೊಹಬ್ಬತ್ ನ ಶಕ್ತಿ ಕುಂದುತ್ತಾಹೋಯಿತು. ಇದನ್ನು ತಿಳಿದ ಶತ್ರುಗಳು ಮತ್ತೆ ಮೊಹಬ್ಬತ್ ರಾಜ್ಯದ ಮೇಲೆ ಯುದ್ಧ ಮಾಡಿ ಮೊಹಬ್ಬತ್ ನನ್ನು ಸಾಯಿಸಿಬಿಟ್ಟರು. ರುಕುಮಾಯಿ ಮೊಹಬ್ಬತ್ ರಾಜ್ಯದ ರಾಣಿಯಾದಳು. ನಂತರ ವಿಜಯಧಾರೆಯ ಶಕ್ತಿಯಿಂದ ರುಕುಮಾಯಿ ತನ್ನನ್ನು ಕಳಿಸಿದ್ದ ಪಕ್ಕದ ರಾಜ್ಯಗಳ ಮೇಲೆ ಯುದ್ಧ ಮಾಡಿ ಎಲ್ಲಾ ಸಂಪತ್ತನ್ನು ವಶಪಡಿಸಿಕೊಳ್ಳಲು ಪಿತೂರಿ ನಡೆಸಿದ್ದಳು. ಈ ವಿಷಯ ತಿಳಿದ ಅಕ್ಕಪಕ್ಕದವರು ರುಕುಮಾಯಿಯ ಮೇಲೆ ದಾಳಿ ಮಾಡಿ ಮೊದಲು ಹೂಕುಂಡವನ್ನು ನುಚ್ಚುನೂರು ಮಾಡಿದರು. ನಂತರ ಯುದ್ಧದ್ದಲ್ಲಿ ಎಲ್ಲರೂ ಸತ್ತರು. ಸುಮಾರು ವರ್ಷಗಳ ತರುವಾಯ ಆ ಹಾಳಾದ ಸ್ಥಳ ಪ್ರೇಕ್ಷಣೀಯ ಸ್ಥಳವಾಗಿ ಬದಲಾಯಿತು. ಅಲ್ಲಿ ಸಿಕ್ಕಿದ ವಿಜಯಧಾರೆ ಹೂಕುಂಡದ ಚೂರು ಇಂದಿಗೂ ಸೂರ್ಯ, ಚಂದ್ರ, ನಕ್ಷತ್ರಗಳನ್ನೂ ಮೀರಿಸುವಂತೆ ಅಗಾಧವಾಗಿ ಹೊಳೆಯುತ್ತಿದೆ.

 ✍      ಅನಂತ ಕುಣಿಗಲ್

ಕಾಮೆಂಟ್‌ಗಳು




  1. ಇಬ್ಬರ ಜಗಳ ಮೂರನೇಯವರಿಗೆ ಲಾಭ ಈ ಕಥೆಯಲ್ಲಿ ಚೆನ್ನಾಗಿ ಅನಾವರಣಗೊಳಿಸಿದೆ
    ಕಾಲ್ಪನಿಕ ಕಥೆ ಆದರೂ ಒಂದೊಂದು ಪಾತ್ರ ಕಣ್ಮುಂದೆ ಹಾದು ಹೋಯಿತು. ಸರ್
    👏🏾👏🏾👏🏾👏🏾👆👌👌👌🙏🙏💖

    ಪ್ರತ್ಯುತ್ತರಅಳಿಸಿ
  2. ಹೂಂ ಚೆನ್ನಾಗಿದೆ ಸಾರ್💐💐💐👌👌👌

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಆಕೆಗೆ ಅದು ಮೊದಲ ರಾತ್ರಿಯಲ್ಲ! - ಕವಿತೆ - ಅನಂತ ಕುಣಿಗಲ್

" ಆಕೆಗೆ ಅದು ಮೊದಲ ರಾತ್ರಿಯಲ್ಲ! " ಆಕೆಗೆ ಅದು ಮೊದಲ ರಾತ್ರಿಯಲ್ಲ ಯಾಕೆಂದರೆ, ಅವಳು ಮದುವೆಯೇ ಆಗಿರಲಿಲ್ಲ!! ಇಪ್ಪತ್ತೆರೆಡು ವರ್ಷದ ಆ ಬಾಲಕಿ ಹೆಚ್ಚು ಓದಲಾಗಲಿಲ್ಲ, ಕಾರಣ ನೂರಾರು  ಅಪ್ಪ ಕುಡಿದು ಕುಡಿದು ಸತ್ತ ಇಲ್ಲ, ಮಗನಿಂದಲೇ ಕೊಲೆಯಾದ ಅಪರಾಧಿ ತಮ್ಮ ಜೈಲಿಗೆ ಹೋದ ಅಮ್ಮ ಒಬ್ಬಳೇ ಹಾಸಿಗೆ ಮೇಲೆ ದಿನ ಎಣಿಸುತ್ತಿದ್ದಾಳೆ ಹಾಳಾದ ಕ್ಯಾನ್ಸರ್ ರೋಗ ಆರು ವರ್ಷಗಳಿಂದ ಅವಳ ನಗು ಕಿತ್ತುಕೊಂಡಿದೆ  ಈಗಲೂ ಅವಳು ಸ್ವಾರ್ಥಿಯಾದರೆ..? ಆ ಬದುಕಿಗೆ ಅರ್ಥವುಂಟೆ?! ಓದಿಗೆ ತಕ್ಕನಾದ ಕೆಲಸವಿಲ್ಲ ತನ್ನವರು ಅಂತ ಯಾರೂ ಇಲ್ಲ ಒಬ್ಬಳಿಗೊಬ್ಬಳೇ.. ಒನಕೆ ಓಬವ್ವನೂ ಅಲ್ಲ  ಮದುವೆಯಾದರೆ ಸರಿಯಾಗುವುದೇ ಎಲ್ಲ? ನಂತರವೂ ಎಲ್ಲ ಹೀಗೆ ಇದ್ದರೆ.. ಮದುವೆ ಅನರ್ಥ ಹೀಗೇ ಇದ್ದುಬಿಡೋಣ.. ಅದೊಂದು ಗಟ್ಟಿ ನಿರ್ಧಾರ  ಎಷ್ಟು ದುಡಿಯಬಹುದು? ಎರಡೇ ಎರಡು ಕೈಗಳು?! ಪಾಪ ಪುಟ್ಟ ಕೈಗಳು ಸೂರ್ಯನಿಗೂ ಸಮಯದ ಅರಿವಿಲ್ಲ ಬೇಗ ಬಂದು ಬೇಗ ಹೋಗುತ್ತಾನೆ ಸಿಗುವುದು ಚಿಲ್ಲರೆ ರೂಪಾಯಿಗಳಷ್ಟೇ ಅದರಿಂದ ಅವಳ ಹೊಟ್ಟೆ ತುಂಬೀತೇ?? ಹೆತ್ತಾಕೆಯ ರೋಗ ಹೋದೀತೇ?? ಮತ್ತೆ ಎಲ್ಲವೂ.. ಹಾಗೇ!!  ಇನ್ನೊಂದು ನಿರ್ಧಾರವಾಗಬೇಕಿದೆ ಹಳ್ಳಿ ಬಿಟ್ಟು ಪಟ್ಟಣ ಸೇರುವುದು ಅದೂ ಆಯ್ತು.. ಕೆಲಸಕ್ಕಾಗಿ ಅಲೆದಲೆದು ಸಾಕಾಯ್ತು ಕಣ್ಣಿನಲ್ಲಡಗಿರುವ ನೋವು ನೋಡಿದವರಿಗಿಂತ ಅವಳೆದೆಯ ಉಬ್ಬು ಸವಿದವರೇ ಹೆಚ್ಚು ಅವರ ಕಣ್ಣಿನ ದಾಹಕ್ಕೆ ಎದೆಯೇ ಹಿಂಗುತ್ತಿವೆ ದಿನವೂ ...