ಕೊರನದಲ್ಲೂ ಕರುಣಾಮಯಿ ಅಮ್ಮ
" ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "
ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು
ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದೆ ಇರುವಾಗ ಪೆಟ್ಟು ಮಾಡಿಕೊಂಡರೆ, ಹಾಗೆಯೇ ಕುಟುಂಬದಲ್ಲಿನ ಹಿರಿಯರ ಪರಿಸ್ಥಿತಿಗೆ ಹೋಂ ನರ್ಸ್ ಆಗುವ ಸಾಧ್ಯತೆಯೂ ಹೆಚ್ಚು, ಇನ್ನು ಕುಟುಂಬದಲ್ಲಿ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿದ್ದರೆ, ಅವರಿಗೆ ಆನ್ಲೈನ್ ತರಗತಿ, ಪರೀಕ್ಷೆ , ನೋಟ್ಸ್ ಇವೆಲ್ಲಾ ಒತ್ತಡಗಳ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ. ಹಾಗೆಯೇ ಅವರಿಗೆ ಸಮಯಕ್ಕೆ ಸರಿಯಾಗಿ ಕಾಫಿ ಟೀ ಊಟ-ತಿಂಡಿ ಒದಗಿಸಿ ಕೊಡಬೇಕಾಗುತ್ತದೆ. ಇಷ್ಟಕ್ಕೆ ನಿಂತರೆ ಓಕೆ. ಮುಂದುವರೆದು ಇನ್ನೊಂದಷ್ಟು ಮಕ್ಕಳ ಆರೋಗ್ಯ ಆನ್ಲೈನ್ ಕ್ಲಾಸಿನಿಂದ ಕ್ಷೀಣಿಸಲು ಶುರುವಾಗಿದೆ. ಆನ್ಲೈನ್ ತರಗತಿಗಳಿಂದ ತಲೆನೋವು, ಕಣ್ಣು ಉರಿಯುವುದು, ಕಣ್ಣು ನೋವು ಬರುವುದು, ಗಂಟೆಗಟ್ಟಲೆ ಮೊಬೈಲ್ ಸ್ಕ್ರೀನ್ಗಳನ್ನು ನೋಡುವುದರಿಂದ ಮೈಂಡ್ ಬ್ಲಾಂಕ್ ಆಗುತ್ತಿರುವುದು ಸಹಜವಾಗಿದೆ. ಜೊತೆಗೆ ಮಾನಸಿಕ ಒತ್ತಡಗಳು ಇವೆಲ್ಲದಕ್ಕೂ ಸ್ಪೆಷಲ್ ಕೇರ್ ಅಮ್ಮನ ಕೈಯಿಂದ ಮಾತ್ರ ಸಾಧ್ಯ ಅಲ್ಲವೇ? ಇನ್ನು ಕುಟುಂಬದ ಕಣ್ಣಾಗಿರುವ ಗೃಹಣಿಯರ ಹೃದಯಬಡಿತವಾದ ಪತಿದೇವರನ್ನು ಬೆಳಿಗ್ಗೆ ಎಬ್ಬಿಸುವುದರಿಂದ ಹಿಡಿದು, ರಾತ್ರಿ ಮಲಗುವವರೆಗೂ ತುಂಬಾ ಜಾಗೃತೆಯಿಂದ, ಜವಾಬ್ದಾರಿಯಿಂದ ನೋಡಿಕೊಳ್ಳುವ ಅವಶ್ಯಕತೆ ಇದೆ. ಏಕೆಂದರೆ ಗಂಡಸರು ಹೊರಗಡೆ ಹೋಗುವ ಪರಿಸ್ಥಿತಿಗಳೇ ಹೆಚ್ಚು, ತಮ್ಮ ದಿನಚರಿಗಳಲ್ಲಿ ಹೊರಗಡೆ ಹೋಗಿ ಸುತ್ತಾಡಿ ಬರುವುದು ಕೂಡ ಒಂದು ಪ್ರಮುಖ ಕಾರ್ಯ ಏಕೆಂದರೆ ಅದು ಮುಂಚಿನಿಂದ ಬಂದಂತಹ ಅಭ್ಯಾಸವಾಗಿದೆ.ಆದಷ್ಟು ಕಡಿಮೆಅವಶ್ಯಕತೆ ಇರುವಾಗ ಮಾತ್ರ, ಹೊರಗಡೆ ಹೋಗುವಂತೆ, ಅತ್ಯುತ್ತಮ ಪರಿಸರವನ್ನು ಮನೆಯಲ್ಲಿ ಅಮ್ಮಂದಿರು ನಿರ್ಮಾಣ ಮಾಡಬೇಕಾಗುತ್ತದೆ. ತಮ್ಮ ಜೀವನಸಂಗಾತಿ,ಕೋರೊನ ದಿನಗಳನ್ನು ಕಳೆಯಲು ಅವರಲ್ಲಿ ನಕರಾತ್ಮಕ ಶಕ್ತಿಗಳನ್ನು ತುಂಬಿ ಅತ್ಯುತ್ತಮ ಅಭ್ಯಾಸಗಳನ್ನು ಮಾಡಿಸಬೇಕಾಗುತ್ತದೆ. ಉದಾ :- ಯೋಗ, ಪ್ರಾಣಾಯಾಮ, ದಿನಕ್ಕೆಎರಡು ಬಾರಿ ಧ್ಯಾನ ಉತ್ತಮ ಕಾದಂಬರಿ, ಕಥೆ-ಕವನ, ಪುಸ್ತಕಗಳನ್ನು ಓದಲು ಸಲಹೆ ನೀಡುವುದು, ಒಳ್ಳೆಯ ಸಂಗೀತಗಳನ್ನು ಕೇಳುವುದು, ಕುಟುಂಬದವರ ಜೊತೆ ಸೇರಿ ಆಟಗಳನ್ನು ಆಡುವುದು, ಮನೆಯಲ್ಲಿ ಹಿರಿಯರೊಂದಿಗೆ ಕುಳಿತು ಹೊಸ ವಿಭಿನ್ನ ವಿಚಾರಗಳನ್ನು ಚರ್ಚಿಸುವುದು, ಕುಟುಂಬದವರೆಲ್ಲರೂ ಸೇರಿ ಮನೆಯಲ್ಲಿ ಚಲನಚಿತ್ರಗಳನ್ನು ನೋಡುವುದು, ಈ ರೀತಿಯ ಆರೋಗ್ಯಕರ ಪರಿಸರವನ್ನು ನಿರ್ಮಾಣ ಮಾಡಬೇಕಾಗುತ್ತದೆ, ಹಾಗೂ ಇದು ಪ್ರತಿ ಅಮ್ಮಂದಿರ ಕರ್ತವ್ಯವು ಕೂಡ ತಮ್ಮ ಮಕ್ಕಳ ಮತ್ತು ಗಂಡನ ಕೆಲವು ವೈಯಕ್ತಿಕ ವಿಚಾರಗಳಿಗೆ ಅಮ್ಮಂದಿರು ಸ್ನೇಹಿತೆ ಆಗಬೇಕಾಗುತ್ತದೆ. ಆಗ ಮಾತ್ರ ಅವರಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಈ ಕೊರೋನಾ ಸಂದರ್ಭದಲ್ಲಿ ಹಲವಾರು ಕುಟುಂಬದ ಆರ್ಥಿಕ ಪರಿಸ್ಥಿತಿ ಕುಂಟಿತವಾಗಿದೆ ನಾವು ಮುಂಚಿನ ರೀತಿಯ ಐಶಾರಾಮಿ ಜೀವನ ನಡೆಸುವುದು ಕಷ್ಟವಾಗಿದೆ. ಕುಟುಂಬದಲ್ಲಿನ ಸರಳ ಜೀವನ ಶೈಲಿಗೆ ತನ್ನನ್ನು ತಾನು ಒಗ್ಗಿಸಿಕೊಂಡು ತನ್ನ ಪತಿಯೊಡನೆ ಸಮಾಧಾನ ಹೇಳಿಕೊಂಡು ಇಡೀ ಕುಟುಂಬದ ಸಾರಥಿಯನ್ನು ಮುನ್ನೆಡೆಸುವುದೇ ಒಂದು ದೊಡ್ಡ ಸವಾಲಾಗಿದೆ. ಇನ್ನು ಕೋರೋನ ಬಂದಂತಹ ಕುಟುಂಬವಿದ್ದರೆ, ಧೈರ್ಯವಾಗಿ ಅ ವ್ಯಕ್ತಿಯನ್ನು ಒಂದು ಕೊಠಡಿಯಲ್ಲಿ ಇಟ್ಟು ಸಂಪೂರ್ಣವಾಗಿ ಆ ವ್ಯಕ್ತಿಯ ಆರೈಕೆ ಮಾಡುವುದು ಕೂಡ ಅಮ್ಮನಾದೆ ಆಗಿರುತ್ತದೆ. ಇಂದು ನಾವು ಏನೇ ಸಾಧಿಸಿದರು, ಏನೇ ಸಮಾಜಕ್ಕೆ ಸೇವೆ ಮಾಡಿದರು, ಇದಕ್ಕೆಲ್ಲ ಕಾರಣ ಅಮ್ಮನೆಂಬ ಕಾಣದ ಕೈಗಳ ಶ್ರಮವೆ ಅಲ್ಲವೇ? ಈ ಲೇಖನದ ಮೂಲಕ ನಾನು ನಿಮ್ಮಲ್ಲಿ ಪ್ರಾರ್ಥಿಸುವುದು ಏನೆಂದರೆ ಸಾಧ್ಯವಾದಷ್ಟು ನಿಮ್ಮ
ಅಮ್ಮನ ಕೆಲಸಗಳಿಗೆ ಪರಸ್ಪರ ಸಹಾಯ ಮಾಡಿ, ಸಾಧ್ಯವಾದಷ್ಟು ಅವರನ್ನು ಅರ್ಥಮಾಡಿಕೊಳ್ಳಿ. ಸಾಧ್ಯವಾದರೆ ಅವರಿಗೆ ಅತ್ಯುತ್ತಮ ಗೆಳೆಯ ಅಥವಾ ಗೆಳತಿಯರಾಗಿ.
- ಸಿಂಚನ ಜಿ. ಏನ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ