ಶೂನ್ಯ
ಏನಿದೆ ಅವನಲ್ಲಿ ಜೀವವೊಂದು
-ಬಿಟ್ಟು ಹೋದರೆ ಹೊರಟು
ಕರೆವರಲ್ಲವೇ ಅವನ (ಮನುಜ)
ನಿಜ ಹೆಸರ ಬಿಟ್ಟು.
ಈ ಕ್ಷಣವಿದ್ದ ಮಾತೇಕೆ
ಶರಣಾಯಿತು ಮೌನಕ್ಕೆ??
ನಗುವಿದ್ದ ಮುಖ ಸ್ತಬ್ಧವಾಯಿತೇ??
ಕರುಳ ಕುಡಿಗಳು ಅರಚಿ ಕರೆದರೂ
ಆತನಿಗೆ ಕೇಳದೇಕೆ??
ಸಿಗಲಾರದೇ? ಈ ಪ್ರಶ್ನೆಪತ್ರಿಕೆಗಳಿಗೊಂದು
ಉತ್ತರ ಪತ್ರಿಕೆ.
ಕೊನೆಯಲ್ಲಿ....
ಖಾಲಿ ದೇಹವೊಂದು ಬಿಟ್ಟು,
ಹೊರಟನೆ ಅವನು....?
ಅಣ್ಣ-ತಮ್ಮ, ಅಮ್ಮ-ಅಪ್ಪ,
ಸಂಬಂಧಿ, ಶತ್ರು, ಪ್ರೀತಿ-ದ್ವೇಷ.
ಕೇವಲ ಪಾತ್ರಗಳಾಗಿ ಹುಟ್ಟಿ
-ನಟಿಸುವ ಕಾಮನಬಿಲ್ಲೋ..?
ಏನಿದೆ ಅವನಲ್ಲಿ ಜೀವವೊಂದು
-ಬಿಟ್ಟು ಹೋದರೆ ಹೊರಟು,
ತೊರದಿರೊ ಗುರಿಯೊಂದು ಶೂನ್ಯವ
-ಸೇರಿ... ಅಂತ್ಯವಾಗುವುದಲ್ಲವೇ ಇದರ
ಗುಟ್ಟು.
- ಗಣೇಶ್ ಹಿಲ್ಕುಂಜಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ