ವಿಷಯಕ್ಕೆ ಹೋಗಿ

ಕೊರೋನ ಕಿರುಪ್ರಬಂಧ ಸ್ಪರ್ಧೆಯ ವಿಜೇತ ಪ್ರಬಂಧಗಳು


ಅವ್ವ ಪುಸ್ತಕಾಲಯ, ಕೆಂಚನಹಳ್ಳಿ ಸಾಹಿತ್ಯ ತಂಡದಿಂದ ಹಮ್ಮಿಕೊಂಡಿದ್ದ ಕೊರೋನ ಕಿರುಪ್ರಬಂಧ ಸ್ಪರ್ಧೆಯ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು, ಇ ಸರ್ಟಿಫಿಕೇಟ್ ಹಾಗೂ ಬಹುಮಾನಗಳನ್ನ ಕಳಿಸಿಕೊಡಲಾಗಿದೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಡಾ. ನೇತ್ರಾವತಿ ಹರಿಪ್ರಸಾದ್ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.
 ಇದೀಗ ವಿಜೇತ ಪ್ರಬಂಧಗಳನ್ನು ಓದುಗರಿಗಾಗಿ ನೀಡಲಾಗಿದೆ. ಓದಿ ಆನಂದಿಸುತ್ತೀರೆಂದು ಭಾವಿಸಿದ್ದೇವೆ.

ಎಲ್ಲರಿಗೂ ಶುಭವಾಗಲಿ.
ಸಾಹಿತ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸ್ಪರ್ಧೆಗಳಲ್ಲಿ ಭಾಗಿಯಾಗಲು ನಮ್ಮ ತಂಡ ಸೇರಿರಿ.
https://www.facebook.com/groups/3344469948953030/?ref=share

ಮೊದಲ ಬಹುಮಾನಿತ ಪ್ರಬಂಧ :
ಕೊರೋನಾ 2ನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರದ ಮತ್ತು ಸಾರ್ವಜನಿಕರ ಸಾಮಾಜಿಕ ಜವಾಬ್ದಾರಿಗಳು:

1. ಆರೊಗ್ಯದ ಬಿಕ್ಕಟ್ಟಿನ ವಿಷಮ ಸ್ಥಿತಿ ಉಂಟಾದಲ್ಲಿ ವಿಶೇಷ ಕಾನೂನು ರೂಪಿಸಿ, ವಿವಿಧ ಅಧಿಕಾರಿಗಳ ಮೂಲಕ ಜನಸಾಮಾನ್ಯರಿಗೆ ಅದನ್ನು ಮುಟ್ಟಿಸುವ ಕೆಲಸ ಮಾಡಬೇಕು.

2. ವಿತ್ತೀಯ ವ್ಯವಸ್ಥೆಯು ದೇಶದ ಆರ್ಥಿಕತೆಯಲ್ಲಿ ಸರ್ಕಾರವು ಹಣವನ್ನು ಒದಗಿಸುವಂತಹ ವ್ಯವಸ್ಥೆಯಾಗಿದೆ. ವಿತ್ತೀಯ ವ್ಯವಸ್ಥೆಗಳು ರಾಷ್ಟಿçÃಯ ಖಜಾನೆ, ಕೇಂದ್ರ ಬ್ಯಾಂಕುಗಳು ಮತ್ತು ವಾಣಿಜ್ಯ ಬ್ಯಾಂಕುಗಳನ್ನು ಒಳಗೊಂಡಿರುತ್ತವೆ. ಇದರ ಮೂಲಕ ಬಡತನ ರೇಖೆಗಿಂತ ಕೆಳಗಿನವರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು.

3. ಜನರಿಗೆ ಮೂಲ ಸೌಕರ್ಯಗಳಾದ ನೀರು, ಹಾಲು, ದಿನಸಿ, ತರಕಾರಿ, ವಿದ್ಯುತ್ ಮುಂತಾವುಗಳನ್ನು ಒದಗಿಸುವುದು.

4. ಆರೋಗ್ಯ ದೃಷ್ಟಿಯಿಂದ ಸರಕಾರವು ನಾಗರಿಕರಿಗೆ ಸರಿಯಾದ ಮಾಹಿತಿ ನೀಡಿ, ಅಂಕಿಅAಶಗಳನ್ನು ಪಾರದರ್ಶಕತೆಯಿಂದ ನಾಗರಿಕರಿಗೆ ತಲುಪಿಸಬೇಕು.

5. ಸಣ್ಣ ಕೈಗಾರಿಕೆಗಳು ದೊಡ್ಡ ಮಟ್ಟದ ಆದಾಯ ಗಳಿಸುವ ಮೂಲಗಳಾಗಿದ್ದು, ಅರ್ಥವ್ಯವಸ್ಥೆಯಲ್ಲಿ ನಾಗರಿಕರು ಸರಕಾರಕ್ಕೆ ಸಂದಾಯ ಮಾಡುವ ತೆರಿಗೆಯ ಒಂದು ಭಾಗವನ್ನು ಸಣ್ಣ ಕೈಗಾರಿಕೆಗಳಿಗೆ ಮಿಸಲಿಟ್ಟು ಅವುಗಳೂ ನಿರ್ಧಿಷ್ಟ ಮೊತ್ತದ ಆದಾಯ ಗಳಿಸುವಂತೆ ಮಾಡಬೇಕು.

6. ದುಡಿಯುವ ವರ್ಗದವರಿಗೆ ಕೃಷಿ ಚಟುವಟಿಕೆಗೆ ಯಂತ್ರಗಳು, ಗೊಬ್ಬರ ವ್ಯವಸ್ಥೆ, ಔಷಧ ತಯಾರಿಕೆಗೆ ಬೇಕಾದ ಯಂತ್ರಗಳು, ಆಸ್ಪತ್ರೆಗೆ ಬೇಕಾದ ಯಂತ್ರೋಪಕರಣಗಳ ಒದಗಿಸುವಿಕೆಗೆ ಮೊದಲಾದ ತಂತ್ರಜ್ಞಾನ ಒದಗಿಸಬೇಕು.

7. ದೇಶದಲ್ಲಿ ದುರ್ಬಲ ವರ್ಗದವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರಿಗೆ ಮಾಶಾಸನ ನೀಡಿ ಕನಿಷ್ಟ ಮಟ್ಟದ ಜೀವನ ನಡೆಸಲು ಅಗತ್ಯ ವ್ಯವಸ್ಥೆ ಮಾಡಬೇಕು.

8. ನಾಗರಿಕರೇ ದೇಶದ ಆಸ್ತಿಯಾಗಿದ್ದು, ಹಿರಿಯ ನಾಗರಿಕರಿಗೆ ಚುಚ್ಚು ಮದ್ದು ಸಿಗುವಂತಾಗಲು ಅಲ್ಲಲ್ಲಿ ಲಸಿಕೆ ಕೇಂದ್ರಗಳನ್ನು ತೆರೆದು ಅಲ್ಲಿ ವ್ಶೆದ್ಯರನ್ನು ನೇಮಿಸಿ ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ ಮಾಡಬೇಕು.

ಜನಸಾಮಾನ್ಯರ ಸಾಮಾಜಿಕ ಜವಾಬ್ದಾರಿಗಳು: ಕೋವಿಡ್ ರೋಗವು ಪ್ರಪಂಚದೆಲ್ಲಾ ದೇಶಗಳ ಮೇಲೆ ಪರಿಣಾಮ ಬೀರಿದ್ದು, ೬.೫ ದಶಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿ 3,83,000ಕ್ಕೂ ಹೆಚ್ಚು ಸಾವಾಗಿದೆ. (3 ಜೂನ್ 2020 ರಂತೆ) ಇದು ಪ್ರಾಣಹಾನಿಯ ಜೊತೆಗೆ, ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ತಗ್ಗಿಸಿ, ಶಿಕ್ಷಣ ವ್ಯವಸ್ಥೆಯನ್ನೂ ಕುಸಿಯುವಂತೆ ಮಾಡಿದೆ. ವ್ಯವಹಾರಗಳು ಮತ್ತು ಆರ್ಥಿಕತೆಗಳ ಮೇಲೆ ಹಾನಿ ಉಂಟುಮಾಡಿದೆ, ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ ಮತ್ತು ಲಾಕ್‌ಡೌನ್‌ಗಳು, ಕರ್ಫ್ಯೂಗಳು ಮತ್ತಿತರ ಕಠಿಣ ಕ್ರಮಗಳೊಂದಿಗೆ ಸಾಮಾಜಿಕ ಜೀವನವನ್ನು ಅಡ್ಡಿಪಡಿಸಿದೆ.

· ಅಗತ್ಯವಿದ್ದಲ್ಲಿ ಮಾತ್ರ ಹೋರಗಡೆ ಹೊಗುವುದು.

· ಸಾಮಾಜಿಕ ಅಚಿತರವನ್ನು ಕಾಪಾಡುವುದು.

· ಮಾಸ್ಕ್ ಕಡ್ಡಾಯವಾಗಿ ಬಳಸುವುದು.

· ಆಗಿಂದಾಗ್ಗೆ ಸೋಪ್ ಬಳಸಿ ಕೈ ತೊಳೆಯುವದು.

· ಸಾಧ್ಯವಾದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡುವುದು ಅಥವಾ ನಿಲ್ಲಿಸುವುದು.

· ನಮ್ಮ ಆದಾಯದ ಒಂದು ಭಾಗವನ್ನು ಬಡವರ ರಕ್ಷಣೆಗಾಗಿ ಮಿಸಲಿಟ್ಟು ಆರ್ಥಿಕವಾಗಿ ಸಹಾಯ ಮಾಡುವುದು.

· ಹೊರಗಿನ ತಿಂಡಿ-ತಿನಿಸುಗಳನ್ನು ತಿನ್ನದಿರುವುದು.

· ಸರಕಾರದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

                     ಜ್ಯೋತಿ ಪ್ರಭು ಬ್ಯಾಹಟ್ಟಿ



ದ್ವಿತೀಯ ಬಹುಮಾನಿತ ಪ್ರಬಂಧ :

ಸಮಯ ಮುಂಚಿನಂತಿಲ್ಲ.
ಪ್ರಕೃತಿಯೆಡೆಗೆ ಅಸಡ್ಡೆ ತೋರಿ, ಪ್ರಕೃತಿಮಾತೆಯ ಸೀರೆ ಕಳಚಿ ಪ್ಲಾಸ್ಟಿಕ್ ನಿಂದ ಅಲಂಕಾರ ಮಾಡಿದ ಅದೇ ನಾವು, ಇಂದು ಅದೇ ಪ್ಲಾಸ್ಟಿಕ್ ನಿಂದ ದೇಹ ಮುಚ್ಚಿಕೊಳ್ಳುವಂತೆ ಆಗಿದೆ, ಒಂದು ರಕ್ಷಣೆಗಾಗಿ ಇನ್ನೊಂದು ರಕ್ಷಿಸಲಾಗದ ಜೀವಗಳ ವಿಲೇವಾರಿಗೆ.
ಬಹುಶಃ ಕಾಲ ಬದಲಾಗಿದೆ ಅನ್ನೋದಕ್ಕೆ ಬೇರೆ ಪುರಾವೆಯ ಅಗತ್ಯವಿಲ್ಲ ಅಂದುಕೊಳ್ತೀನಿ....ಹಾಗಂತ ಹೇಳಿ ಪ್ರಕೃತಿಯ ಈ ಈ ವೈರತ್ವಕ್ಕೆ ಎಚ್ಚೆತ್ತು ಕೊಳ್ಳದಿದ್ದರೆ ಮನುಕುಲದ ಅಂತ್ಯ ದೂರ ಇಲ್ಲ..
ಇನ್ನು ಸರ್ಕಾರದ ವಿಷಯಕ್ಕೆ ಸಂಬಂಧಿಸಿದಂತೆ,
*ಈ ಪಕ್ಷ ತಾರತಮ್ಯದ ನಡುವೆ ಜನರ ಮಾರಣಹೋಮ ನಡೀತಿದೆ.. ಮಂತ್ರಿಗಳಾಗಿ ಪಟ್ಟ ಕೊಟ್ಟಿರೋದು ಕೆಟ್ಟ ಸಮಯದಲ್ಲಿ ಜನರಿಗೆ ಬೆಂಬಲ ನೀಡೋಕೇ ಹೊರತು ಜನರ ಹಣದಲ್ಲಿ ನೀವುಗಳು 100 ವರ್ಷ ಬದುಕೋದಲ್ಲ, ನಿಮ್ನ ನಂಬಿರೋ ೧೦೦ ಜನ ಬದುಕುಳೀಬೇಕು...
* "LOCKDOWN " ಸರ್ಕಾರದ ಅಸ್ತ್ರ ಉಪಾಯ ಒಳ್ಳೆಯದು, ಆದ್ರೆ ತಿನ್ನಕ್ಕೆ ಅನ್ನ ಇಲ್ಲದವನಿಗೆ ಮನೇಲೇ ಇರು ಅಂದ್ರೆ ಅವನು Corona ಅಲ್ಲ ಹಸಿವುನಿಂದ ಸತ್ತು ಹೋಗ್ತಾನೆ,
ಸಂಘ-ಸಂಸ್ಥೆಗಳು ಸಾಲ ಮರುಪಾವತಿ ಬೇಡಿಕೆ ಇಟ್ಟು,ಬಡವರನ್ನ ಮನೇಲಿ ಇರು ಅಂದರೆ ಹೇಗಿರಬೇಕು ಸರ್, Do find Alternative ways! LOCKDOWN ಅವಧಿಯಲ್ಲಿ ಜನರ ಬಾಧ್ಯತೆಗಳನ್ನು ಪೂರೈಸಿ.
* ಮೊದಲನೇ ಅಲೆಯ ಸಮಯದಲ್ಲಿ ಸರ್ಕಾರಕ್ಕೆ ವೈರಸ್ ನ ಮುಂದಿನ ಅಲೆ ಮತ್ತು ಅದರ ಅಪಾಯದ ಅರಿವಿತ್ತು. ಬೇಕಾದ ಪ್ರಾಣವಾಯು ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ನಮ್ಮ ಸರ್ಕಾರ ಈಗಿನ ತುರ್ತು ಪರಿಸ್ಥಿತಿಯಲ್ಲಿ ಕೂಡ ಸ್ಪಂದಿಸಿಲ್ಲ. Emergency fund ಬಳಕೆ ಮಾಡಿ ದಯವಿಟ್ಟು ಅಗತ್ಯತೆನ ಪೂರೈಸಿ ಜೀವ ಉಳಿಸೀ.
*ಬದುಕುವ ಹಕ್ಕು ಮನುಷ್ಯನ ಮೂಲಭೂತ ಹಕ್ಕು ಅದನ್ನು ಕಾಪಾಡಲಿಲ್ಲ ಅಂದರೆ ಯಾವ ಸರ್ಕಾರ ಬೇರೆ ಯಾವ ಬಾಹ್ಯ ರಕ್ಷಣೆ ಮಾಡಿದ್ರೆ ಏನು ಪ್ರಯೋಜನ!!
*ವೈದ್ಯಕೀಯ ಪದ್ಧತಿಗಳ ತಾರತಮ್ಯ ಅಲ್ಲಗಳೆದು, ಖಾಸಗೀಕರಣ ನಿಲ್ಲಿಸಿ, ಇದು ಹಣ ಮಾಡುವ ಸಂದರ್ಭದವಲ್ಲ ಹೆಣವಾಗುವುದನ್ನು ತಡೆಯುವ ಸಂದರ್ಭ. ಮಾನವೀಯತೆ ಮೆರೆಯಿರಿ..
ಇನ್ನು ನಾವು ನೀವು ಅಂದರೆ ಜನಸಾಮಾನ್ಯರ ಜವಾಬ್ದಾರಿಗಳೆಂದರೇ,
*ಸರ್ಕಾರದ ನೀತಿ ನಿಯಮಗಳು ನಿರ್ಜೀವ ವಸ್ತುಗಳಿಗಲ್ಲ.,ನಮಗೆ ಅನ್ನುವ ಅರಿವಿರಲಿ.
*ಒಂದು ಬಟ್ಟೆಯಿಂದ ಮುಖ ಮುಚ್ಚಿಕೊಳ್ಳೋಕೆ ಅಸಡ್ಡೆ ಆದರೆ, ಮುಂದೊಂದು ದಿನ ನಮ್ಮ ದೇಹವನ್ನು ನಮ್ಮ ಹತ್ತಿರದವ್ರು ಕೂಡ ಮುಟ್ಟಲ್ಲ ಅನ್ನೋದು ವಾಸ್ತವ.
*ಸಾಮಾಜಿಕ ಅಂತರ, ಶಾಶ್ವತ ಅಂತರಕ್ಕಿಂತ ಅನುಕೂಲವಾದದ್ದು ಅಲ್ವಾ?
*ಸ್ವಾರ್ಥಿಯಾಗದೆ, ತನ್ನೊಂದಿಗೆ ಇತರರ ಜೀವವು ಅಮೂಲ್ಯವಾದದ್ದು. ನಮ್ಮ ಅಜಾಗರೂಕತೆಯಿಂದ ಇನ್ನೊಬ್ಬರ ಜೀವ ಹೋಗಬಾರದು.
*ಅಸಡ್ಡೆ, ಉದಾಸೀನ, ನಿರ್ಲಕ್ಷ್ಯ ತೋರುವ ಸಮಯ ಇದಲ್ಲ ಅನ್ನುವ ಪರಿಜ್ಞಾನವಿರಲಿ.
*ಮೂಢತೆಗಳಿಂದ ದೂರವಿದ್ದು, ಲಸಿಕೆಯನ್ನು ಪಡೆದುಕೊಳ್ಳಿ, ಮೂಢತೆಗಳು ಪ್ರಾಣ ವಾಪಸ್ಸು ತಂದುಕೊಡಲ್ಲ.
*ಆದಷ್ಟು ದೇಶೀಯ ಪದ್ದತಿಯ ಉಷ್ಣ ವೀರ್ಯ ದ್ರವ್ಯಗಳ ಕಷಾಯ ಕುಡಿಯಿರಿ, ಜಲೀಯ ಅಂಶಗಳ ಸೇವನೆ ಮಾಡಿ.
*Prevention is better than cure ದುರಾದೃಷ್ಟವಶಾತ್ ಸೋಂಕಿಗೆ ಒಳಗಾಗಿದ್ದರೆ, ತಮ್ಮವರಿಂದ ಅಂತರ ಕಾಯ್ದುಕೊಂಡು, ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಿರಿ.
*ಸೋಂಕು ಅಪಾಯಕಾರಿ ಹಂತಕ್ಕೆ ಹೋಗಿ.., ventilator, bed shortage ತುಚ್ಛ ಸರ್ಕಾರ ಹಾಗೂ ಖಾಸಗಿಕರಣದ ಕೆನ್ನಾಲಿಗೆಗೆ ತುತ್ತಾಗಿದಿರಿ.
* Stay home stay safe

                           ಪೂಜಾ ಬಿ ಜಿ 


ತೃತೀಯ ಬಹುಮಾನಿತ ಪ್ರಬಂಧ :
*ಕಠಿಣ ಪರಿಸ್ಥಿತಿಯಲ್ಲೂ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು*

ಕಳೆದ ವರ್ಷದಿಂದಲೂ ಇಡೀ ಮನುಕುಲವನ್ನು ಈ ಮಹಾಮಾರಿ ಕೊರೊನಾ ನಲುಗಿಸಿ ಬಿಟ್ಟಿದೆ.ಹೋದ ವರುಷದ 2020 ನೆ ಕೊನೆಯ ತಿಂಗಳುಗಳಲ್ಲಿ ಒಂದಿಷ್ಟು ಚೇತರಿಸಿಕೊಂಡಿದ್ದ ಜನ ಸಾಮಾನ್ಯರು ಈ ವರುಷದ 2021 ರ ಮಾರ್ಚ ತಿಂಗಳಿನಿಂದ ಕೊರೊನಾ 2 ನೆ ಅಲೆಗೆ ಮತ್ತಷ್ಟು ತತ್ತರಿಸಿ ಹೋಗಿದ್ದಾರೆ.ಏಕೆಂದರೆ ಒಂದು ವರುಷದಿಂದ ಆರ್ಥಿಕವಾಗಿ,ಮಾನಸಿಕವಾಗಿ ಸಂಪೂರ್ಣ ಸೋತು ಹೋಗಿದ್ದ ಜೀವಗಳು ಈಗಷ್ಟೇ ಚೇತರಿಸಿಕೊಂಡು ಮತ್ತೆ ಹೊಸ ಬದುಕು ಕಟ್ಟಿಕೊಳ್ಳಲು ಶುರು ಮಾಡಿದ್ದರು.ಆದರೆ ಈ 2 ನೆಯ ಅಲೆಯು ಮತ್ತೆ ಬರಸಿಡಿಲಿನಂತೆ ಎರಗಿ ಎಲ್ಲರ ಆಸೆಗಳಿಗೆ ನೀರು ಸುರಿದಿದೆ. ಬಂಧು,ಬಾಂಧವರನ್ನು ಕಳೆದುಕೊಂಡ ಗಾಯ ಇನ್ನೂ ಹಾಗೇ ಇರುವಾಗ ಮತ್ತೆ ಬರೆ ಬಿದ್ದಂತಾಗಿದೆ.

*ಸರಕಾರ ಹಲವಾರು ಆಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು*.

1. ಎಲ್ಲ ಕೊರೊನಾ ರೋಗಿಗಳಿಗೆ ಉಚಿತ ಔಷಧೋಪಚಾರ,ಊಟದ ವ್ಯವಸ್ಥೆ ಸೂಕ್ತ ಆಮ್ಲಜನಕದ ಬಳಕೆ ಕಡ್ಡಾಯವಾಗಿ ಮಾಡಬೇಕು.
2.ದಿನಗೂಲಿ ಕಾರ್ಮಿಕರಿಗೆ,ನಿರಾಶ್ರಿತರಿಗೆ ಆಶ್ರಯ ಕೊಟ್ಟು ಪೋಷಿಸಬೇಕು.
3.ಪೊಲೀಸರು,ಆರೋಗ್ಯ ಕಾರ್ಯಕರ್ತರ ಮೂಲಕ ಕೊರೊನಾ 2 ನೆ ಅಲೆಯ ಬಗ್ಗೆ ಜನ ಜಾಗೃತಿ ಮೂಡಿಸಬೇಕು.
4.ಅಲ್ಲಲ್ಲಿ ಉಚಿತ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ರೋಗದ ಲಕ್ಷಣಗಳು ಮತ್ತು ನಿವಾರಣೆಯ ಸಂಪೂರ್ಣ ಮಾಹಿತಿ ಒದಗಿಸಬೇಕು.
5.ತುರ್ತುಪರಿಸ್ಥಿತಿಯಲ್ಲಿ ಜನಸಾಮಾನ್ಯರೆಲ್ಲರಿಗೂ ಅಂಬ್ಯುಲೆನ್ಸ ವ್ಯವಸ್ಥೆ ಸಮಯಕ್ಕೆ ಸರಿಯಾದ ಸಿಗುವಂತೆ ನೋಡಿಕೊಳ್ಳಬೇಕು.
6.ಯಾವುದೇ ತಾರತಮ್ಯ ಮಾಡದೇ ಮಾನವೀಯತೆಯ ಮೌಲ್ಯಗಳನ್ನು ಹೆಚ್ಚಿಸುವತ್ತ ಯೋಚಿಸಬೇಕು.

*ಇನ್ನು ಜನಸಾಮಾನ್ಯರ ಜವಾಬ್ದಾರಿಗಳು*

1.ಎಲ್ಲವನ್ನು ಸರ್ಕಾರವೇ ಮಾಡಲಿ,ಇದೆಲ್ಲಾ ಬರೀ ಸರಕಾರದ ಹೊಣೆ ಎಂಬ ಧೋರಣೆ ಮರೆತು ವ್ಯಕ್ತಿಗತ ಸಹಾಯ ಮಾಡುವ ಮನಸ್ಸುಳ್ಳವರಾಗಬೇಕು.
2.ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರ ಹೋಗಿ,ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
3.ಅನಾವಶ್ಯಕವಾದ ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಹರಡುವುದನ್ನು ಬಿಟ್ಟು ಸಕಾರಾತ್ಮಕ ಚಿಂತನೆಗಳು, ವಿಚಾರಗಳನ್ನು ಹಂಚಿಕೊಳ್ಳಬೇಕು.
4.ಸಭೆ, ಮದುವೆ ಕಾರ್ಯಕ್ರಮಗಳಿಗೆ ಹೋಗದೆ ಕಟ್ಟುನಿಟ್ಟಾಗಿ ಸರಕಾರದ ನೀತಿ ನಿಯಮಗಳನ್ನು ಪ್ರತಿಯೊಬ್ಬ ನಾಗರೀಕರು ಪಾಲಿಸಲೇಬೇಕು.
5. ತಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಮತ್ತು ವೈಯಕ್ತಿಕ ಸ್ವಚ್ಛತೆಯ ಕಡೆ ಗಮನವಿರಿಸಬೇಕು. ಸತ್ವಯುತ ಆಹಾರ ಸೇವನೆ ತಾಜಾ ತರಕಾರಿಗಳು, ವಿಟಾಮಿನ್ 'ಸೀ'ಯುಕ್ತ ಹಣ್ಣುಗಳನ್ನು ದಿನ ನಿತ್ಯದ ಆಹಾರವಾಗಿ ಉಪಯೋಗಿಸಬೇಕು.
6.ಸ್ಥಿತಿವಂತರು ಬಡವರಿಗೆ ,ಅನಾಥಾಶ್ರಮಗಳಿಗೆ
ಫೋನ್ ಪೇ ಮೂಲಕ ಅಥವಾ ಸಂಬಂಧಪಟ್ಟ ಇಲಾಖೆ,ಸಂಸ್ಥೆಯೊಂದಿಗೆ ಸೇರಿ ಮೂಲಭೂತ ಸಹಾಯ ಮಾಡಬಹುದು.

ಸರಕಾರದ ನಿಯಮಗಳಿಗೆ ಬದ್ಧರಾಗಿ ತಮ್ಮ ತಮ್ಮ ಕುಟುಂಬವನ್ನು ಸಂರಕ್ಷಿಸಿಕೊಳ್ಳುವ ಜೊತೆಗೆ ಇಂತ ಕಠಿಣ ಪರಿಸ್ಥಿತಿಯಲ್ಲೂ ಪ್ರಾಮಾಣಿಕತೆಯನ್ನು,
ಮಾನವೀಯತೆಯನ್ನು ಮೈಗೂಡಿಸಿಕೊಂಡು ಸರಕಾರದ ಜೊತೆ ಜನಸಾಮಾನ್ಯರು ಹೆಜ್ಜೆ ಹಾಕಿದಾಗ ಮಾತ್ರ ಈ ಕೊರೊನಾ 2 ನೇ ಅಲೆಯನ್ನು ಹಂತ ಹಂತವಾಗಿ ಇಳಿಮುಖಗೊಳಿಸಬಹುದು.ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ.

               ಸರೋಜಾ ಶ್ರೀಕಾಂತ ಅಮಾತಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...