ಮನ್ವಂತರ
ಬದಲಾಗುತಿದೆ ಜಗವು
ಜಗದ ನಿಯಮವೂ
ಯಾರ ಹಂಗೂ ಇಲ್ಲದೆ
ಎಲ್ಲೆ ಮೀರಿ, ಕೇಳಿಬರುತಿವೆ
ತವಕ-ತಲ್ಲಣಗಳು ಕ್ಷಣಗಳಿಗೆಗೊಮ್ಮೆ..
ನಾನು,ತಾನು ಎಂಬುದ
ತೊರೆದು ನಮ್ಮವರೊಂದಿಗೂ
ಬೆರೆಯಬೇಕಿದೆ ಮನದಿ
ಪ್ರೀತಿ, ನಲಿವುಗಳ
ಬೆಸುಗೆಯೊಂದಿಗೆ..
ಅತ್ತ ಅಶ್ರುಧಾರೆಯೊಂದಿಗೆ ಉಮ್ಮಳಿಸಿ
ಬರುವ ಆರ್ತನಾದ ಮನಕಲಕುತಿದೆ;
ಹಾದಿ-ಬೀದಿಗಳಲಿ ಬೆತ್ತಲೆಯಾದ ಹಸಿವಿನ
ಅಳಲಿನೊಂದಿಗೆ. ಈಗಲಾದರೂ ಮಿಡಿಯಬೇಕಿದೆ
ಹೃದಯ ವೈಶಾಲ್ಯತೆಯು..
ಸ್ವಾರ್ಥದ ಬೆಪ್ಪುತನಕೆ ಇತಿ ಹೇಳಿಬಿಡಿ,
ಚಿತ್ತಗ್ಲಾನಿಯೊಳಿನ ನೊಂದ ನಿನಾದಗಳಿಗೆ
ಸ್ಪಂದಿಸಿ, ಸಂತೈಸಬೇಕಿದೆ ತುಸು ಮಾನವೀಯತೆಯ
ಮನುಜತನದಿಂದ; ಸತ್ಯದರಿವು
ಮೂಡಿಸಿದ ವಾಸ್ತವದಲ್ಲಾದರೂ...
- ಮೇಘನಾ ಕರಿಸೋಮನಗೌಡ್ರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ