ಅವ್ವ ಪುಸ್ತಕಾಲಯ ಬಳಗದಿಂದ ಮೇ ತಿಂಗಳಲ್ಲಿ ಆಯೋಜಿಸಲಾಗಿದ್ದ ಕೊರೋನಾ ಕಿರುಪ್ರಬಂಧ ಸ್ಪರ್ಧೆ ಯ ಫಲಿತಾಂಶ ಬಿಡುಗಡೆಯಾಗಿದ್ದು, ಅವ್ವ ಪುಸ್ತಕಾಲಯ ಬಳಗವು ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದೆ.
ಪ್ರಬಂಧ ರಚನೆಯಲ್ಲಿ ಎಲ್ಲಾ ಸ್ಪರ್ಧಿಗಳ ಪಾತ್ರವೂ ಸ್ವಾಗತಾರ್ಹ. ವಿಜೇತರು ಈ ಕೂಡಲೆ ತಮ್ಮ ಪೂರ್ತಿ ಅಂಚೆ ವಿಳಾಸ, ಫೋನ್ ನಂಬರ್ ಹಾಗೂ ಇತ್ತೀಚಿನ ನಿಮ್ಮ ಭಾವಚಿತ್ರಗಳನ್ನು avvapustakaalaya@gmail.com ಗೆ ಈ ಕೂಡಲೆ ಮೇಲ್ ಮಾಡುವಂತೆ ಕೋರಲಾಗಿದೆ. ವಿಜೇತರಿಗೆ ಅಂಚೆಯ ಮೂಲಕ(ಕೊರೋನಾ ಕಾರಣ ವಿಳಂಬವಾಗಬಹುದು) ಪುಸ್ತಕ ಬಹುಮಾನ ಹಾಗೂ ಅರ್ಹ ಎಲ್ಲಾ ಪ್ರಬಂಧಗಳಿಗೂ ಮುಂದಿನ ವಾರದ ಒಳಗೆ ಇ ಪ್ರಮಾಣ ಪತ್ರ ದೊರೆಯಲಿದೆ.
ತೀರ್ಪುಗಾರರ ನುಡಿಗಳು :
ಕೊರೋನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಯುವ ಬರಹಗಾರರಲ್ಲಿನ ಸೃಜನಶೀಲತೆ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಪ್ರೇರೇಪಿಸಲು ಅವ್ವ ಪುಸ್ತಕಾಲಯದಿಂದ ಕೊರೋನ ಕಿರುಪ್ರಬಂಧ ಸ್ಪರ್ಧೆ ಆಯೋಜಿಸಿದ್ದು ಪ್ರಶಂಸನೀಯ.
ಈ ಸ್ಪರ್ಧೆಯಲ್ಲಿ ಗೃಹಿಣಿಯರ ಪಾಲ್ಗೊಳ್ಳುವಿಕೆ ನಿಜಕ್ಕೂ ಆಶಾದಾಯಕವಾಗಿದೆ. ಇಲ್ಲಿನ ಸ್ಪರ್ಧಿಗಳಂತೆಯೇ ಎಲ್ಲ ಜನಸಾಮಾನ್ಯರು ಹಾಗೂ ಸರ್ಕಾರಗಳು ಸಾಮಾಜಿಕ ಜವಾಬ್ದಾರಿಯಿಂದ ನಡೆದುಕೊಂಡರೆ ಸಮಾಜದ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ವಿಜೇತರಿಗೆ ಹಾಗೂ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನೆಗಳು. ಹಾಗೆಯೇ ಈ ಸ್ಪರ್ಧೆಗೆ ನನ್ನನ್ನು ತೀರ್ಪುಗಾರನನ್ನಾಗಿ ಆಹ್ವಾನಿಸಿದ ಅವ್ವ ಪುಸ್ತಕಾಲಯ ಬಳಗಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಸಾಹಿತ್ಯಯಾನ ಹೆಮ್ಮರದಂತೆ ಕವಲೊಡೆದು ಸಮಾಜದ ಹಿತಕ್ಕೆ ಆಧಾರವಾಗಲಿ.
ವಿಜೇತರು :
ಪ್ರಥಮ : ಜ್ಯೋತಿ ಪ್ರಭು ಬ್ಯಾಹಟ್ಟಿ
ದ್ವಿತೀಯ : ಪೂಜಾ ಬಿ ಜಿ
ತೃತೀಯ : ಸರೋಜ ಶ್ರೀಕಾಂತ ಅಮಾತಿ
ನಮ್ಮ ಇನ್ನಷ್ಟು ಸಾಹಿತ್ಯ ಸ್ಪರ್ಧ್ಧೆಗಳಲ್ಲಿ ಪಾಲ್ಗೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
https://www.facebook.com/groups/3344469948953030/?ref=share
ಎಲ್ಲರಿಗೂ ಶುಭವಾಗಲಿ..💐
ನಾರಾಯಣ್ ಕೆ ಎನ್
ಅಧ್ಯಕ್ಷರು, ಅವ್ವ ಪುಸ್ತಕಾಲಯ
ಎಲ್ಲರಿಗೂ ಶುಭವಾಗಲಿ..💐
ನಾರಾಯಣ್ ಕೆ ಎನ್
ಅಧ್ಯಕ್ಷರು, ಅವ್ವ ಪುಸ್ತಕಾಲಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ