ಕಲಿಗಳ ಮನಕೆ, ಕನ್ನಡದ ಹರಕೆ
ಕನ್ನಡಕೆಂದೆಳಿರ ಕುಡಿದು
ಪರದೇಶಿಗೆ ಫಲವಾಗಿ ನೆಲೆದು, ಸವೆದು
ಸೋತುಗಾಲದಲ್ ಕನ್ನಡಕಂಪ
ಕೇಳಬಂದಹೀನರ ನೀರ್ನೆರಳಿಲ್ಲದ ತಾಣಕೆ
ದೂಡಿರೈ
ಕಲಿಗಳೆ, ಕನ್ನಡಕೆ ಮಣಿರೈ.
ಕನ್ನಡಕೆನೆಮೊಸರ ಸವಿದು
ಕಂಠದೊಳ್ ಕನ್ನಡ ತೊರೆದು, ಜರಿದು
ಕನ್ನಡನಾಡಲ್ನುಡಿಯಲ್ ಕೀಳರಿಮೆಗೈದ
ಮತಿಯಾತ್ಮಹೀನರ ಹುಚ್ಚಲೆಯಿಸಿ
ಉರಿಯಿರೈ
ವೀರರೆ, ಕನ್ನಡಕೆ ಮಡಿರೈ.
ಕನ್ನಡಕಲ್ಪವೃಕ್ಷದಡಿ ನೆಲೆಸಿಹ
ಕನ್ನಡವ ಕಣಕಣದಿ ಬಳಸಿಹ, ಉಳಿಸಿಹ
ಕನ್ನಡಿಹೃದಯದ, ಕನ್ನಡಿಗರ ಹೃದಯವ
ಕಾಮಧೇನು ಕ್ಷೀರದಿ ಅಭಿಷೇಕಿಸಿ
ಪೊರೆಯಿರೈ
ಪೂಜ್ಯರೆ, ಕನ್ನಡ ನುಡಿರೈ.
- ಸಚಿನ್ ಹೆಚ್ ಎಂ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ