ವಿಷಯಕ್ಕೆ ಹೋಗಿ

ಗುರುವಿನ ಪಾಠ - ಕಥೆ - ಚಂದನ್ ಕೃಷ್ಣ


ಗುರುವಿನ ಪಾಠ

     ‌‌ಗುರು ದ್ರೋಣಾಚಾರ್ಯರ ಗುರುಕುಲದಲ್ಲಿ ಸೊಬಗಿನಿಂದ ಕೂಡಿದ್ದ ಎಷ್ಟೊಂದು ಸುಂದರವಾದ ವಾತಾವರಣ ಇದೆ ಅಂದ್ರೆ, ಹಿಂದೆ ಸಲೀಲವೂ ನದಿಯಾಗಿ ಹರಿದು ಗಿರಿಶಿಖರದಿಂದ ಜಲಲಧಾರೆಯಾಗಿ ಧುಮ್ಮಿಕ್ಕುವ ಜಲಪಾತ. ಹಕ್ಕಿಗಳ ಇಂಚರದನಿಯಲ್ಲಿ ಮೂಡಣದಲ್ಲಿ ಆಗಷ್ಟೇ ಸೂರ್ಯೋದಯ. ಮಾವು, ಗಂಧ, ತೇಗ, ನೀಲ, ನೇರಳೆ, ನೆಲ್ಲಿ, ಅರಳಿ, ಆಲ ಮರಗಳ ಸ್ವಚ್ಛ ಹಸುರಿನ  ಭದ್ರತೆಯ ನೆರಳಲ್ಲಿ ಹಸ್ತಿನಾಪುರದ ಕುರು ರಾಜಕುಮಾರರಿಗೆ ಮಾಡಿರುವ ಶಿಕ್ಷಣದ ಸುವ್ಯವಸ್ಥಿತ ಸ್ಥಳಗಳು. ರಾಜಕುಮಾರರಿಗೆ ವಿಶ್ರಾಂತಿ ತಾಣಗಳು. ಅಬ್ಬಾ.. ಆ ಸೀಬೆ ಮರದ ಮೇಲಿಂದ ಗಿಳಿಗಳ ಮಾತು ಕೇಳುತ್ತಿದ್ದರೆ ಚೆಂದವೋ ಚೆಂದ.

ಅದೋ ಪಾಂಡವರು, ಬ್ರಾಹ್ಮೀ ಮೂಹರ್ತದಲ್ಲಿ ಎದ್ದು, ಪ್ರಾತಃ ಕಾಲ ವಿಧಿ ಮುಗಿಸಿ ಬೆಳಗಿನ ಉಪಾಹಾರ ಸೇವಿಸಿ, ಶಿಕ್ಷಣ ಕಲಿಯಲು ನಿಂತರೆ, ಇದೋ ನೂರು ಸಹೋದರರಾದ ದುರ್ಯೋಧಾನಾದಿಗಳು ಇನ್ನೂ ಮಲಗಿದ್ದಾರೆ. ರಾತ್ರಿಯೆಲ್ಲಾ ಕೀಟಗಳ ದಾಳಿಗೆ ನಿದ್ರೆ ಭಂಗವಾಗಿ ಈಗ ಮುಂಜಾನೆ ಸೋಮಾರಿಗಳಾಗಿ ಮಲಗಿದ್ದವರನ್ನು ಗುರುಗಳು ಎಬ್ಬಿಸಲು ಬಂದರು.
ಗುರುಗಳ ಆಜ್ಞೆಯನ್ನು ದುರ್ಯೋಧನಾದಿಗಳು ಪಾಲಿಸಿದರು.

ಗುರುಕುಲಕ್ಕೆ ಬಂದ ರಾಜಕುಮಾರರಿಗೆ ತರಬೇತಿ ಶುರುವಾಗಿಯೇ ಬಿಟ್ಟಿತು. ಮೊದಲಿಗೆ ಗುರು ದ್ರೋಣಾಚಾರ್ಯರು ರಾಜಕುಮಾರರಲ್ಲಿ‌ ಯಾರು ತಮಗೆ ಅತ್ಯುತ್ತಮ ಶಿಷ್ಯನಾಗಬಲ್ಲ ಎಂದು ಪರೀಕ್ಷಿಸುವಾಗ ಬಾಲಅರ್ಜುನನ ನಿಷ್ಠೆ ಮೆಚ್ಚುವಂತಹದ್ದು. ಯಾಕಂದ್ರೆ,, ಕೆಲವು ದೂರದ ಅಂತರದಲ್ಲಿ ಮರದ ಮೇಲೆ ಒಂದು ಪಕ್ಷಿಯ ಆಕಾರವಿರಿಸಿ ಆ ಪಕ್ಷಿಯ ಕಣ್ಣನ್ನು ಛೇದಿಸಬೇಕು. ಆದರೆ ಒಂದು ಷರತ್ತು ಇದೆ ಪಕ್ಷಿ ಕೆಳಗೆ ಬೀಳಬಾರದು ಎಂದು ಹೇಳಿದ್ದರು ಗುರು ದ್ರೋಣಾಚಾರ್ಯರು. 

ಇನ್ನೂ ಪ್ರತಿ ರಾಜಕುಮಾರರನ್ನು ಕರೆದು ಗುರು ದ್ರೋಣಚಾರ್ಯರು ಕೇಳುತ್ತಾರೆ. ಆಗ ಪ್ರತಿ ರಾಜಕುಮಾರರು, ಮರ ಕಾಣುತ್ತಿದೆ.. ರೆಂಬೆ ಕಾಣುತ್ತಿದೆ.. ಹಕ್ಕಿ ಕಾಣುತ್ತಿದೆ.. ಹಣ್ಣುಗಳು ಕಾಣುತ್ತಿದೆ.. ಹಾೂ ಏನೂ ಕಾಣುತ್ತಿಲ್ಲ ಎಂದು ಉತ್ತರ ಹೇಳಿದರೆ, ಪಾರ್ಥನು ಹಕ್ಕಿಯ ಕಣ್ಣು ಮಾತ್ರ ಕಾಣುತ್ತಿದೆ ಎಂದು ಹೇಳಿ ಗುರು ದ್ರೋಣಾಚಾರ್ಯರ ಅಣತಿಯಂತೆ ಗುರಿಯಿಟ್ಟು ಬಾಣ ಬಿಟ್ಟಿದ ನಂತರ ಹಕ್ಕಿಯ ಕಣ್ಣು ಛೇದಿಸಿದ ಅರ್ಜು‌ನನ್ನು ದ್ರೋಣರು ಮೆಚ್ಚಿಕೊಳ್ಳುತ್ತಾರೆ. ಮತ್ತು ಇತರೆ ರಾಜಕುಮಾರರಿಗಿಂತ ಅರ್ಜುನ ಧನುರ್ವಿದ್ಯೆಯಲ್ಲಿ ಉತ್ತಮ ಆಸಕ್ತಿ ವಹಿಸುತ್ತಾನೆ‌. 

ನಂತರ ದುರ್ಯೋಧನ ಮತ್ತು ದುಶ್ಯಾಸನರು 
ಅಧರ್ಮ ಕಾರ್ಯಕ್ಕಾಗಿ, ಗುರು ದ್ರೋಣರ ಪುತ್ರ
ಅಶ್ವತ್ಥಾಮನ ಸ್ನೇಹವನ್ನು ಬಯಸಿದ್ದರು. ಇವರ ಮೂವ್ವರ ಗೆಳತನದಿಂದ ಪಾಂಡವರಿಗಂತೂ ಅಪಾಯ ಇದ್ದೇ ಇದೆ. 

ಒಂದು ಸಂದರ್ಭದಲ್ಲಿ ಬಾಲಭೀಮ ಮತ್ತು ಬಾಲದುರ್ಯೋಧನನರಿಗೆ ಜಗಳವಾಗಿ ಭೀಮನು ಕೆಸರಿಗೆ ಬಿದ್ದಾಗ. ಭೀಮನ ಸಹಾಯಕ್ಕಾಗಿ ದ್ರೋಣರನ್ನು ಕರೆತಂದಾಗ, ಗುರುಗಳು ಒಂದೇ ಮಾತು ಹೇಳುತ್ತಾರೆ. " ಅಪಾಯ ಬಂದಾಗ, ಅದರಿಂದ ಹೊರಬರುವ ಮಾರ್ಗ ಹುಡುಕಿ. ಆಕಸ್ಮಿಕವಾಗಿ ಬಂದ  ಅಪಾಯವನ್ನು ಎದುರಿಸುವುದು ಶಿಕ್ಷಣದ ಒಂದು ಭಾಗವಾಗಿರುತ್ತದೆ."  ಅದನ್ನು ಕೇಳಿದ ಬಾಲಾರ್ಜುನನು, ಕತ್ತಲೆಯ ಸಮಯದಲ್ಲಿ ಅಂದ್ರೆ ಸೂರ್ಯಾಸ್ತವಾದಾಗ ಎನೂ ಕಾಣುವುದಿಲ್ಲ ಎಂದು ತರಬೇತಿ ನಿಲ್ಲಿಸಿರುತ್ತಾನೆ. ಆದ್ರೆ ಈಗ ಇರುಳಲ್ಲೇ ಬಾಲಭೀಮನು ಕೆಸರಲ್ಲಿ ಸಿಲುಕಿದಾಗ, ಮಧ್ಯಮಪಾಂಡವ ತಡಮಾಡದೆ, ಅಂಧಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ಅಪಾಯದಿಂದ ಪಾರಾಗಲು ಬಾಣಹೂಡಿ ಮರದ ಕೊಂಬೆಯನ್ನು ಬೀಳಿಸಿ ಭೀಮನನ್ನು ಕೆಸರಿಂದ ಮುಕ್ತಿಗೊಳಿಸಿದ ಅರ್ಜುನನನ್ನು " ಜಗತ್ತಿನ ಅದ್ವಿತೀಯ ಬಿಲ್ಲುಗಾರನನ್ನಾಗಿ ಮಾಡುವೆ " ಎಂದು ಗುರು ದ್ರೋಣರು ಪಣ ತೊಡುತ್ತಾರೆ. ಮತ್ತು ಭರವಸೆಯನ್ನು ನೀಡುತ್ತಾರೆ.

ಮಗಧದ ನೆಲದ ನಿಷಾಧ ಬೇಡರಾಜನ ಪುತ್ರ 
ಏಕಲವ್ಯನ ಬಿಲ್ವಿದ್ಯೆಯ ಪ್ರಾವೀಣ್ಯತೆ ಕಂಡ ಅರ್ಜುನನಿಗೆ ತನ್ನಲ್ಲಿಯೇ ಪ್ರಯತ್ನ ಕಡಿಮೆವಿದೆ ಎಂದು ಸತತ ಪ್ರಯತ್ನ ಮಾಡುತ್ತಾನೆ. ಏಕಲವ್ಯನಿಗೆ ಗುರು ದ್ರೋಣಾಚಾರ್ಯರರು ಮೊದಲೇ ತಿಳಿಸಿದ್ದರು ನಾನೀಗ ರಾಜಕುಮಾರರಿಗೆ ಮಾತ್ರ ಶಿಕ್ಷಣ ಕಲಿಸಬೇಕು ಎಂದಾಗ, ಏಕಲವ್ಯನು ಛಲ ಬಿಡದೆ ದ್ರೋಣರ ಮೂರ್ತಿ ಮಾಡಿ ದ್ರೋಣರನ್ನು ಗುರುವನ್ನಾಗಿ ಸ್ವೀಕರಿಸಿ ಬಿಲ್ವಿದ್ಯೆಯನ್ನು ಗುರುಗಳ ಮಾರ್ಗದರ್ಶನವಿಲ್ಲದೆ ಕೇವಲ ದೂರದಿಂದಲೇ ನೋಡಿ, ಕೇಳಿ.. ಗುರು ದ್ರೋಣಾಚಾರ್ಯರು ರಾಜಕುಮಾರರಿಗೆ ಬಿಲ್ವಿದ್ಯೆ ಕಲಿಸುವಾಗ ಮರೆಯಲ್ಲಿ ನಿಂತು ಏಕಾಗ್ರತೆಯಿಂದ ಕಲಿಯುತ್ತಿರುತ್ತಾನೆ. ವಿದ್ಯಾಪ್ರಾಪ್ತಿಯಾಗಿ ನಾಯಿ ಬೊಗಳಿದ ಸದ್ದನ್ನು ಅನುಸರಿಸಿ ಬಾಣಗಳನ್ನ ಹೂಡಿ ಶಬ್ಧವೇದಿ ವಿದ್ಯೆಯಿಂದ ನಾಯಿ ಬಾಯಿಗೆ ಬಾಣ ಬಿಟ್ಟ ಕಂಡ ದ್ರೋಣರು ಏಕಲವ್ಯನ ಪ್ರತಿಭೆಯ ಮೆಚ್ಚುತ್ತಾರೆ. ಆದ್ರೆ ಅರ್ಜುನನ ಚಂಚಲತೆ ಮತ್ತು ಆತನಿಗೆ ಕೊಟ್ಟ ಭರವಸೆಯಿಂದ, ಎಲ್ಲಿ ಏಕಲವ್ಯನು ಅರ್ಜುನನಿಗಿಂತ ಶ್ರೇಷ್ಠ ಬಿಲ್ಲುಗಾರನಾಗುವನೋ ಎಂದು, ಮನಸ್ಸಿಲ್ಲದೆ ಇದ್ದರೂ, ಏಕಲವ್ಯನಿಂದ ಗುರುದಕ್ಷಿಣೆಯಾಗಿ ಬಲಗೈ ಹೆಬ್ಬೆರಳನ್ನು ಕೇಳುತ್ತಾರೆ. ಯಾವುದೇ ಆಲೋಚನೆಯಿಲ್ಲದೆ ಗುರುಗಳು ಕೇಳಿದ ದಕ್ಷಿಣೆಯನ್ನು ಆ ಕ್ಷಣವೇ ಗುರುಗಳಿಗೆ ಸಮರ್ಪಿಸುವ ಏಕಲವ್ಯನ ಸಮರ್ಪಣಾ ಭಾವ ಕಂಡಾಗ ನಿಜಕ್ಕೂ ಏಕಲವ್ಯ ಜಗತ್ತಿನ ಶ್ರೇಷ್ಠ
ಶಿಷ್ಯೋತ್ತಮನೇ ಸರಿ. ಈಗ ದ್ರೋಣರಿಗೆ ಅರ್ಜುನನಿಗೆ ಕೊಟ್ಟ ಭರವಸೆಗೆ ಯಾವುದೇ ಅಡ್ಡಿಯಿಲ್ಲ ಎಂದುಕೊಳ್ಳುತ್ತಾರೆ.

ಇನ್ನೂ ಏಕಲವ್ಯ ಗುರುಗೆ ತಕ್ಕ ಶಿಷ್ಯ. ಅಂತೂ ಏಕಲವ್ಯನನ್ನು ಗುರು ದ್ರೋಣಾಚಾರ್ಯರು ಶಿಷ್ಯನಾಗಿ ಸ್ವೀಕರಿಸಿ, ಅವನ ಸ್ಥಳ ಮಗಧ ಕ್ಕೆ ಹಿಂದಿರುಗಲು ಆದೇಶ ನೀಡಿದರು. ಅಂತೂ ಏಕಲವ್ಯನ ಪಾತ್ರ ಅಜರಾಮರ. 

ಇನ್ನು ಗುರು ದ್ರೋಣಾಚಾರ್ಯರು ಎಷ್ಟು ಸ್ವಾಮಿನಿಷ್ಠೆ ಯಾಗಿದ್ದರೂ ಅಂದ್ರೆ, ಕುರು ವಂಶದ ರಕ್ಷಣೆಗಾಗಿ, ಮತ್ತು ಹಸ್ತಿನಾಪುರ ನೀಡಿದ ಅನ್ನದ ಋಣಕ್ಕಾಗಿ, ತಮ್ಮ ಬಳಿ ವಿದ್ಯೆ ಕಲಿಯಲು ಬಂದ ಏಕಲವ್ಯನಿಂದ ಗುರುದಕ್ಷಿಣೆಯಾಗಿ ಮನಸಿಲ್ಲದಿದ್ದರೂ, ಬಲಗೈನ ಹೆಬ್ಬೆರಳನ್ನು ಪಡೆದರು. ಹಾಗಾಗಿ ದ್ರೋಣಾಚಾರ್ಯರದ್ದು 
ದುರಾಲೋಚನೆಯಲ್ಲ‌ ದೂರಾಲೋಚನೆ ಎಂದುಕೊಳ್ಳಬಹುದು. ಕಾರಣ ಹಸ್ತಿನಾಪುರಕ್ಕೆ ಶತ್ರು ದೇಶವಾದ, ಮಗಧದೇಶದವನಾದ ಏಕಲವ್ಯ ಎಲ್ಲರಿಗಿಂತ ಚೆನ್ನಾಗಿ ಕಲಿತು ಹಸ್ತಿನಾವತಿಗೆ ದಂಡೆತ್ತಿ ಬಂದರೆ, ಹಸ್ತಿನಾವತಿಗೆ ದ್ರೋಹ ಬಗೆದಂತೆ. ಕಾರಣ, ದ್ರೋಣಚಾರ್ಯರ ನಿಲುವು ಮತ್ತು ಪ್ರತಿಜ್ಞೆ. ಇನ್ನೂ ಅರ್ಜುನನ ಶ್ರೇಷ್ಠತೆಗಾಗಿ ಏಕಲವ್ಯನಿಂದ ಹೆಬ್ಬೆರಳು ತೆಗೆದುಕೊಂಡು ಪಕ್ಷಪಾತ ಮಾಡಿದರೂ ಎಂದುಕೊಳ್ಳುವ ನಮಗೆ, ದ್ರೋಣಾಚಾರ್ಯರ ದೂರಾಲೋಚನೆ ತಿಳಿಯುವುದೇ ಇಲ್ಲ. ಕಾರಣ ಗುರುದೇವ ದ್ರೋಣರಿಗೆ ತಿಳಿದಿತ್ತು ಪಾರ್ಥ ತನ್ನ ಶ್ರಮದಿಂದ ಸರ್ವಶ್ರೇಷ್ಠ ಧನುರ್ಧಾರಿಯಾಗಬಲ್ಲ ಎಂದು.

ಇದಕ್ಕೆ ಉದಾಹರಣೆಗಾಗಿ ದುರ್ಯೋಧನಾದಿಗಳು ಗುರುಗಳು ಪಕ್ಷಪಾತ ಮಾಡುತ್ತಾರೆ ಎಂದು ಗುರುಕುಲ ತ್ಯಜಿಸಿ ಹೋಗುವುದಾಗಿ ಅಶ್ವತ್ಥಾಮನ ಬಳಿ ತಿಳಿಸಿ. ಅಶ್ವತ್ಥಾಮನಿಗೂ ಗೊಂದಲ ಏರ್ಪಡಿಸಿದರು. ಈಗ ದ್ರೋಣಾಚಾರ್ಯರು ತಮಗೆ ತಗುಲಿದ ಕಳಂಕ ದೂರ ಮಾಡಲು ಎಲ್ಲ ರಾಜಕುಮಾರ ಶಿಷ್ಯರನ್ನು ನದಿತಟದಲ್ಲಿ ಬರಲು ಹೇಳಿದರು. ಗುರುಗಳು ದ್ರೋಣರು ಸೂರ್ಯವಂದನೆ ಮಾಡುವಾಗ ಮೊಸಳೆದಾಳಿಗೆ ಗುರಿಯಾದಾಗ ಎಲ್ಲ ಶಿಷ್ಯರು ಕೂಗಿಕೊಳ್ಳುತ್ತಾರೆ. ದುರ್ಯೋಧನ, ಯುಧಿಷ್ಠಿರ, ಭೀಮ ಅಷ್ಟೇ ಯಾಕೆ ದ್ರೋಣರ ಮಗ ಅಶ್ವತ್ಥಾಮನು ಕೂಗಿ ಕೊಳ್ಳುತ್ತಾನೆ ಹೊರತು, ನದಿಗಿಳಿದು ಸಹಾಯ ಮಾಡುವುದಿಲ್ಲ. ಆದ್ರೆ ಮಧ್ಯಮ ಪಾಂಡವ ಅರ್ಜುನ ಕ್ಷಣಮಾತ್ರ ಯೋಚಿಸದೆ, ನದಿ ನೀರಿಗೆ ಧುಮ್ಮುಕಿ ಮೊಸಳೆಯ ವಿರುದ್ಧ ಹೋರಾಡಿ ಮೊಸಳೆಯ ಬಾಯಿಗೆ ಉದ್ದದ್ದ ಮರದ ಕಾಂಡ ಇಟ್ಟು ಗುರು ದ್ರೋಣಾಚಾರ್ಯರನ್ನು ಈ ಅಪಾಯದಿಂದ ಪಾರು ಮಾಡಿದಾಗಲೇ ತಿಳಿಯುತ್ತದೆ. ಅಲ್ಲವೇ ಶಿಷ್ಯರು ತಮ್ಮನ್ನು ತಾವೂ ಗುರುಗಳಿಗೆ ಸಮರ್ಪಣಾ ಭಾವ ಮಾಡಿಕೊಂಡಾಗ. ಶಿಷ್ಯರ ಉತ್ಸಾಹ ಕಂಡು ಗುರುಗಳು ಹೆಚ್ಚೆಚ್ಚು ತಿಳಿಸುತ್ತಾರೆ. ಆದ್ರೆ ಈ ಸನ್ನಿವೇಶದಲ್ಲಿ ಗುರು ದ್ರೋಣರನ್ನು ಅಪಾಯದಿಂದ ಪಾರಾಗಿಸಲು ನದಿಗೆ ಬೀಳುವುದೇ ಬೇಡವೇ ಎಂಬ ದ್ವಂದ್ವ ಇದ್ದಾಗಲೇ ಪಕ್ಷಪಾತ ಎನ್ನುವ ನಿಲುವು ಶಿಷ್ಯರಿಗೆ ಬರುವುದು. ಏಕಮನಸ್ಸಿನಿಂದ ಮಾಡಿದಾಗ ಎಲ್ಲವೂ ಏಕವಾಗುತ್ತದೆ. ಹಾಗಾಗಿ ತನ್ನ ಶಿಷ್ಯ ಅರ್ಜುನನು, ತಾನೂ ಏಕಲವ್ಯ ನಿಂದ ಕೇಳಿ ಪಡೆದ ಗುರುದಕ್ಷಿಣೆಯ ವಿಚಾರವೇ ಬೇರೆ, ಅರ್ಜುನನಿಗಾಗಿ ಅಲ್ಲ. ಅರ್ಜುನ ತನ್ನ ಶ್ರಮದಿಂದ ಶ್ರೇಷ್ಟತೆಯಾಗಬಲ್ಲ ಎಂದು ಅರ್ಥೈಸಲು ಗುರು ದ್ರೋಣರೇ ಈ ಸನ್ನಿವೇಶ ಸೃಷ್ಟಿಸಿದ್ದರು ಎಂದು ಇದು ಯಾರಿಗೂ ತಿಳಿಯಲೇ ಇಲ್ಲ.... ಆದ್ರೆ ವಿಚಾರ ಎಲ್ಲ ರಾಜಕುಮಾರ ಶಿಷ್ಯರಿಗೂ ಮತ್ತು ಅಶ್ವತ್ಥಾಮನಿಗೂ ಅರ್ಥವಾಯ್ತು.


- ನಂಜನಗೂಡು ಚಂದನ್ ಕೃಷ್ಣ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...