ವಿಷಯಕ್ಕೆ ಹೋಗಿ

ಆನ್ಲೈನ್ ಬಿಸಿನೆಸ್ಸು - ಕವಿತೆ - ಅನಂತ ಕುಣಿಗಲ್



" ಆನ್ಲೈನ್ ಬಿಸಿನೆಸ್ಸು "

ಈ ಕೊರೋನಾ ಅಲೆಯನ್ನು
ಹೇಗಾದ್ರು ಮಾಡಿ ತಡಿಬೋದು
ಆದ್ರೆ,
ಹತ್ತು ಸಾವಿರ ಹಿಂಬಾಲಕರನ್ನು ಪಡೆದ
ಕೆಲವು ಹೆಣ್ಮಕ್ಳನ್ನು ಮಾತ್ರ ಹಿಡಿಯಲಾಗದು
ಇದ್ಕೆ ಕೆಲವು ಹುಡ್ಗರೂ ಹೊರತಲ್ಲ!!

ಇನ್ಸ್ಟಾ, ಫೇಸ್ಬುಕ್ ಪೇಜ್ ಇನ್ನೂ ಹಲವಾರಿವೆ
ಅವ್ಗಳ ಹೆಸ್ರು ಮಾತ್ರ ಅವ್ರವ್ರಿಗೆ ಗೊತ್ತು
ಮೊದಮೊದಲು ಯಾವ ಗೋಜು ಇರೋದಿಲ್ಲ
ಒಂದಿಬ್ಬರು ಹುಡುಗರು ರೆಕ್ವೆಸ್ಟ್ ಕಳ್ಸಿದ್ರೆ ಸಾಕು
ಅವರನ್ನ ಮೆಚ್ಚಿಸಲು ಒಂದೆರಡು ಸ್ಟೋರಿ
ಮತ್ತೆ ತಲೆಬುಡ ಇಲ್ಲದ ರೀಲುಗಳು
ಎಲ್ಲೆಲ್ಲಿಂದಲೂ ಹಿಂಬಾಲಕರು ಸಿಗ್ತಾರೆ
ತಕ್ಕಮಟ್ಟಿಗೆ ಆಟಗಳೂ ಶುರುವಾಗುತ್ತವೆ


ಹಿಂಬಾಲಕರು ಹೆಚ್ಚಾದಂತೆ
ಹಿಂಬಾಲಿಸುವುದನ್ನು ಕಡಿಮೆ ಮಾಡ್ತಾರೆ
ಲೈಕು ಸಿಗದ ಹಳೇ ಫೋಸ್ಟುಗಳು ಬಿನ್ ಸೇರ್ತವೆ
ಯಾರೋ ಮಾಡಿ ಬಿಸಾಕಿದ ವೀಡಿಯೋಗಳಂತೆಯೇ
ಇವರೂ ಪ್ರಾರಂಭಿಸುತ್ತಾರೆ; ಹೆಸರೇ ಇಲ್ಲದ
ಅರವತ್ನಾಲ್ಕು ಸಾವಿರ ಮುಖಭಾವಗಳೊಂದಿಗೆ
ಅರೆ ಹುಚ್ಚಾಟಗಳು, ಸೈಕೋ ಮ್ಯಾನರಿಸಂ
ಇನ್ನೂ ಎಂತೆಂಥದೋ ಖಾಯಿಲೆಗಳು
ಗುಣಮುಖವಾಗುವುದು ಮಾತ್ರ ಸ್ವಲ್ಪ ಕಷ್ಟ ಸಾಧ್ಯ!

ಅಪ್ಪ ಅಮ್ಮ ಇಟ್ಟ ಹೆಸರು
ಅಪ್ಪ ಅಮ್ಮನೇ ಮರೆಯುವಷ್ಟು ದೊಡ್ಡವರಾಗಿರುತ್ತಾರೆ
ಆಟಿಟ್ಯೂಡ್ ಗರ್ಲ್, ಕ್ರೇಜಿ ಏಂಜಲ್, ಡೆವಿಲ್ ಮಾಸ್ಕ್
ಮಾಮ್ಸ್ ಲವ್, ಡ್ರೀಮ್ ಫಂಗಸ್, ಡ್ಯೂಕ್ ಲವರ್
ಯಪ್ಪಾ... ಒಂದಾ.. ಎರಡಾ??
ಬಯೋದಲ್ಲಿ ಜಾತಿ ಗೀಳಿನ ವೈರಸ್ಸು ಬೇರೆ
ಅಪ್ಪಟ, ಹೆಮ್ಮೆ, ಪಕ್ಕಾ ಕನ್ನಡತಿ ಅಂತ ಬೋಗಸ್
ವಾಲ್ ಅಲ್ಲಿ ಕನ್ನಡ ಪದಗಳೇ ಕಾಣ್ಸೋದಿಲ್ಲ


ಶೇರ್ ಮೇಲೆ ಶೇರು
ಶೇರ್ ಮಾರ್ಕೆಟ್ ಕೂಡ ಇಷ್ಟು ಫಾಸ್ಟ್ ಇಲ್ಲ
ಮುಕ್ಕಿರಿದು ಸಾವಿರ ಹಿಂಬಾಲಕರನ್ನು ಪಡ್ಕೋತಾರೆ
ಹೊರ ಹಾಗೂ ಒಳ ಉಡುಪುಗಳ ವ್ಯತ್ಯಾಸ ಗೊತ್ತಿಲ್ಲದಂತೆ
- ನಟಿಸುತ್ತಾರೆ, ಅವರೇ ಮೆಚ್ಚಿಕೊಳ್ತಾರೆ ಕೂಡ!
ಈ ಹಾಳಾದ ಹುಡುಗರೋ...
ದೇಶಕ್ಕಿಲ್ಲದ ಬೆಂಬಲ ಕೊಡ್ತಾರೆ
ಲೈಕು, ಕಮೆಂಟು, ರೀ-ಕ್ರಿಯೇಟು
ಯಾವ ಆಫ್ಶನ್ ಬಿಡದೆ ಎಲ್ಲವನ್ನೂ ಟ್ರೈಮಾಡ್ತಾರೆ
ಆ ನಡುವೆ ಇಬ್ಬರೂ ತಮ್ಮ ಭವಿಷ್ಯ ಮರೆತಿರುತ್ತಾರೆ

ಹತ್ತು ಸಾವಿರದ ಗಡಿ ದಾಟಿದರೆ ಮುಗಿದೇಹೋಯ್ತು
ಮೆಸೇಜುಗಳಿಗೆ ರೀಪ್ಲೆ ಇಲ್ಲ
ಬೇರೆಯವರ ಫೋಸ್ಟುಗಳು ಕಂಡರೂ ನೋಡುವುದಿಲ್ಲ
ಈ ಮಧ್ಯೆ ಜಾಹಿರಾತುಗಳು ಬೇರೆ ಶುರುವಾಗ್ತವೆ
ಅದರಲ್ಲೂ ಈ ಮಾಟ-ಮಂತ್ರ, ಸತಿ-ಪತಿ, ಜ್ಯೊತಿಷ್ಯಗಳದ್ದೇ ದರ್ಬಾರು
ಡಿಎಂ ಫಾರ್ ಪೇಡ್ ಕೊಲ್ಯಾಬೊರೇಷನ್ ಎಂಬ ಬೋರ್ಡ್
ಕಾಲು ನಿಲ್ಲುವುದಿಲ್ಲ, ತಲೆ ಯೋಚಿಸುವುದಿಲ್ಲ
ಆದರೂ ಇದೊಂದು ಬಿಸಿನೆಸ್ ಎಂಬಂತೆ
ಸೆಲೆಬ್ರಿಟಿ ಫೀಲ್ ಅಲ್ಲೇ ವಸಂತ ಕಳೆಯುತ್ತಾರೆ
ನಂತರ, ನ್ಯಾಯಬೆಲೆಯಂಗಡಿಯ ಅಕ್ಕಿಗಾಗಿಯೋ
ಹಾಲಿನ ಕ್ಯಾನ್ ಹಿಡಿದು ಚೀಟಿಗಾಗಿಯೋ
ಸ್ಕ್ರಬ್ಬರ್ ಹಿಡಿದು ಪಾತ್ರೆಗಳ ಮುಖಮಜ್ಜನಕ್ಕೋ
ಕರೆದಾಗ ಹೋಗಿ ಗಂಡನ ಬೆನ್ನು ಉಜ್ಜಲಿಕ್ಕೋ
ಕುಕ್ಕರ್ ವಿಷಲ್ ಆಫ್ ಮಾಡಲಿಕ್ಕೋ
ಮಕ್ಕಳ ತಲೆ ಕೂದಲು ಬಾಚಲಿಕ್ಕೋ
ಅಪ್ಪ-ಅಮ್ಮನೊಂದಿಗೆ ವೀಡಿಯೋ ಕಾಲಿನಲ್ಲಿ ಅಳೋದಿಕ್ಕೋ..
ತುದಿಗಾಲಲ್ಲಿ ನಿಂತಿರ್ತಾರೆ!!


ಇದು ಕಟು ಸತ್ಯ
ವಾಸ್ತವ ಬದುಕಿನ ಬವಣೆ
ಅರಿತವರು ಅರಿಯುವರು
ಬೇರೆಯವರು ಉರಿಯುವರು
ಅರಿದರೂ, ಉರಿದರೂ.. ಸತ್ಯ ಎಂದಿಗೂ ಸತ್ಯವೇ..






                      - ಅನಂತ ಕುಣಿಗಲ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...