ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2023

ಅವ್ವ ಪುಸ್ತಕಲಯ ಸಾಹಿತ್ಯ ಬಳಗವು ದಿ. ನರಸಯ್ಯ ಅವರ ಸ್ಮರಣಾರ್ಥ ಕೊಡಮಾಡುವ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2023 ಫಲಿತಾಂಶ ಈ ಕೆಳಗಿನಂತಿದೆ. ಅಹರ್ನಿಶಿ ಪ್ರಕಾಶನದ ಫಾತಿಮಾ ರಲಿಯಾ ಅವರು ಬರೆದಿರುವ "ಕಡಲು ನೋಡಲು ಹೋದವಳು" ಪ್ರಬಂಧ ಸಂಕಲನಕ್ಕೆ ಈ ವರ್ಷದ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ದೊರಕಿದೆ. ಸಂತೋಷಕುಮಾರ ಮೆಹೆಂದಳೆ ಅವರ "ವೈಜಯಂತಿಪುರ" ಕಾದಂಬರಿ, ಚೈತ್ರಾ ಶಿವಯೋಗಿಮಠ ಅವರ "ಪೆಟ್ರಿಕೋರ್" ಕವನಸಂಕಲನ, ಗಾಯತ್ರಿರಾಜ್ ಅವರ "ಟ್ರಾಯ್" ಕಾದಂಬರಿ, ಮುನವ್ವರ್ ಜೋಗಿಬೆಟ್ಟು ಅವರ "ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್" ಕಥಾಸಂಕಲನ ಕೃತಿಗಳು ಈ ವರ್ಷದ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾಗಿವೆ. ಲೇಖಕ, ವಿಮರ್ಶಕರಾದ ಮಹೇಶ ಅರಬಳ್ಳಿ ಅವರು ಕೃತಿಗಳ ಆಯ್ಕೆಯಲ್ಲಿ ತೀರ್ಪುಗಾರರಾಗಿದ್ದರು. ಐದು ಕೃತಿಯ ಲೇಖಕರಿಗೆ 2024ರ ಜನೆವರಿ ತಿಂಗಳಲ್ಲಿ ನಡೆಯುವ ಅವ್ವ ವಾರ್ಷಿಕೋತ್ಸವದಲ್ಲಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ  avvapustakaalaya@gmail.com  ಗೆ ಬರೆಯಿರಿ..

ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2023 ಕಿರುಪಟ್ಟಿ ಪ್ರಕಟ

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ದಿ. ನರಸಯ್ಯ ಅವರ ಸ್ಮರಣಾರ್ಥ ಕೊಡಮಾಡುವ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2023 ಕ್ಕೆ 90 ಕೃತಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 10 ಕೃತಿಗಳನ್ನು ತೀರ್ಪುಗಾರರು ಕಿರುಪಟ್ಟಿ ಮಾಡಿರುತ್ತಾರೆ. ಪಟ್ಟಿಯು ಈ ಕೆಳಗಿನಂತಿರುತ್ತದೆ. ಕಿರುಪಟ್ಟಿಯಲ್ಲಿ ಸ್ಥಾನ ಪಡೆದ ಹತ್ತು ಜನ ಲೇಖಕರಿಗೆ ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ಶುಭಾಶಯಗಳು.  - ಅವ್ವ ಪುಸ್ತಕಾಲಯ  8548948660

ಪೂಚಂತೇ ಕವಿತೆಗಳ ವಾಚನ ಸ್ಪರ್ಧೆ ಫಲಿತಾಂಶ

ವಿಜೇತರಿಗೆ ಅಭಿನಂದನೆಗಳು. ಈ ಕೆಳಗಿನ ಪ್ರಕಟಣೆಯಲ್ಲಿ ತಿಳಿಸಿರುವ ಕಾರ್ಯಕ್ರಮದಲ್ಲಿ ಎಲ್ಲರಿಗೂ ಅಭಿನಂದಿಸಲಾಗುವುದು. ಇನ್ನಷ್ಟು ಸಾಹಿತ್ಯ ಸ್ಪರ್ಧೆಗಳು & ಚಟುವಟಿಕೆಗಳಿಗಾಗಿ ನಮ್ಮ ತಂಡಗಳನ್ನು ಹಿಂಬಾಲಿಸಿ, ಬೆಂಬಲಿಸಿ.. 1.  https://instagram.com/dayavittu.gamanisi?igshid=MmU2YjMzNjRlOQ== 2.  https://instagram.com/avva_pustakaalaya?igshid=MmU2YjMzNjRlOQ== 3.  https://instagram.com/peldante_payanigaru?igshid=MmU2YjMzNjRlOQ== 4.  https://www.facebook.com/groups/3344469948953030/?ref=share_group_link 5.  https://www.facebook.com/groups/859399305807670/?ref=share_group_link

ಅವ್ವ ಪುಸ್ತಕಾಲಯ ನೂತನ ಸಮಿತಿ ಪಟ್ಟಿ ಬಿಡುಗಡೆ

ನಮಸ್ಕಾರ 💐  ಕೊರೋನಾ ಸಮಯದಲ್ಲಿ ಲೇಟ್. ನರಸಯ್ಯ ಅವರ ಸ್ಮರಣಾರ್ಥಕವಾಗಿ ಸ್ಥಾಪಿಸಿದ ಅವ್ವ ಪುಸ್ತಕಲಯ ಸಾಹಿತ್ಯ ಬಳಗ ಇವತ್ತು ನಿಮ್ಮೆಲ್ಲರನ್ನು ನಮಗೂ, ನಮ್ಮನ್ನು ನಿಮಗೂ ಪರಿಚಯಿಸಿದೆ. ಇದೊಂದು ಡಿಜಿಟಲ್ ಬ್ಲಾಗ್ ಮತ್ತು ಸಾಹಿತ್ಯಾಸಕ್ತರೇ ಸೇರಿಕೊಂಡು ಕಟ್ಟಿದ ತಂಡ. ಈಗಾಗಲೇ 4 ಪುಸ್ತಕಗಳು ಪ್ರಕಟಗೊಂಡಿವೆ ಮತ್ತು ಮೂರು ವರ್ಷಗಳಿಂದಲೂ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದೇವೆ. ಸಾಕಷ್ಟು ಸಾಹಿತ್ಯ ಕಾರ್ಯಕ್ರಮಗಳು, ಚಟುವಟಿಕೆಗಳು, ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಅವ್ವ ಪುಸ್ತಕಾಲಯ ಸಾಹಿತ್ಯದ ಘಮವನ್ನ ಪಸರಿಸುತ್ತಾ ನಿಮ್ಮೆಲ್ಲರನ್ನ ತಲುಪಿದೆ. ಅದರಲ್ಲಿ ನಿಮ್ಮೆಲ್ಲರ ಸಹಕಾರ ದೊಡ್ಡದಿದೆ. ಬಹಳಷ್ಟು ಜನ ಕೇಳುತ್ತಿರುತ್ತಾರೆ. ಅವ್ವ ಪುಸ್ತಕಾಲಯ ಎಲ್ಲಿದೆ? ಅದು ಒಬ್ಬರೇ ನಡೆಸುವ ಸಂಸ್ಥೆಯ? ತಂಡದಲ್ಲಿ ಯಾರು ಯಾರೆಲ್ಲ ಇದ್ದಾರೆ? ಅಂತ. ಅವರಿಗೆಲ್ಲ ಹೀಗೆ ಹೇಳುತ್ತಾ ಬಂದಿದ್ದೆವು. "ಇಲ್ಲ ಒಬ್ಬರೇ ಅಲ್ಲ, ಅದರ ಹಿಂದೆ ಬಹಳಷ್ಟು ಜನರ ಶ್ರಮವಿದೆ" ಅಂತ. ಆದರೆ ಅವರನ್ನು ಈವರೆಗೆ ಪರಿಚಯಿಸುವ ಸಮಯ ಒದಗಿ ಬಂದಿರಲಿಲ್ಲ. ಈಗ ನಿಮ್ಮ ಮುಂದೆ ಅವರೆಲ್ಲರನ್ನೂ ಪರಿಚಯಿಸುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಸಹಕಾರ ನಮ್ಮ ಬಳಗದ ಮೇಲೆ ಹೀಗೇ ಇರಲಿ..  - ಅವ್ವ ಪುಸ್ತಕಾಲಯ  ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ನೂತನ ಸಮಿತಿ ಈಕೆಳಗಂಡಂತಿದೆ.  ಅಧ್ಯ...

ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

"ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ - 2023"  ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ಇವರ ವತಿಯಿಂದ ಪ್ರತೀ ವರ್ಷದಂತೆ "ಶ್ರೀಮಾನ್ ಲೇ. ನರಸಯ್ಯ" ಅವರ ಸ್ಮರಣಾರ್ಥ ಕೊಡಮಾಡುವ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ 2022 ಮತ್ತು 2023 ರಲ್ಲಿ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.  * ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ.  * 2023 ರ ಆಗಸ್ಟ್ 31 ರ ಒಳಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು, ಪ್ರತ್ಯೇಕ ಹಾಳೆಯಲ್ಲಿ ಬರೆದ ಸ್ವಪರಿಚಯ, ಸಂಪೂರ್ಣ ಅಂಚೆ ವಿಳಾಸ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕವೇ (Printed Book Registered Post) ತಮ್ಮ ಕೃತಿಗಳನ್ನು ಕಳಿಸಬಹುದಾಗಿದೆ. ಒಬ್ಬ ಲೇಖಕ ತನ್ನ ಎರಡು ಕೃತಿಗಳ ಮೂಲಕ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.  * ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ. ಆತ್ಮಕತೆ, ವಿಮರ್ಶಾ ಸಂಕಲನ, ಪಿ.ಹೆಚ್.ಡಿ ಪ್ರಬಂಧಗಳು, ಅನುವಾದ ಹಾಗೂ ಸಂಶೋಧನಾ ಕೃತಿಗಳನ್ನು ಹೊರತುಪಡಿಸಿ ಸಾಹಿತ್ಯದ ಯಾವುದೇ ಪ್ರಕಾರದ (ಕತೆ, ಕಾದಂಬರಿ, ಕವಿತೆ, ಹನಿಗವನ, ನಾಟಕ, ಲೇಖನ, ಲಲಿತ ಪ್ರಬಂಧ, ಪ್ರವಾಸ ಕಥನ) ಕೃತಿಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  * ನವೆಂಬರ್ ತಿಂಗಳಲ್ಲಿ ಕಿರುಪಟ್ಟಿ ಬಿಡುಗಡೆ ಮಾಡಲಾಗ...

ಹನಿಗವನ ಸ್ಪರ್ಧೆಯ ವಿಜೇತ ಕವನಗಳು - ಅವ್ವ ಪುಸ್ತಕಾಲಯ

              (ಚಿತ್ರ : ಕಾರ್ತಿಕ್ ಎಸ್ ಕಾರ್ಗಲ್ಲು) ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಆಯೋಜಿಸಿದ್ದ "ಮಾನವೀಯತೆ" ವಿಷಯಧಾರಿತ ಹನಿಗವನ ಸ್ಪರ್ಧೆ 2023ರ ವಿಜೇತ ಕವನಗಳನ್ನು ಓದುಗರಿಗಾಗಿ ಪ್ರಕಟಿಸಲಾಗಿದೆ. 01. ಮಾನವೀಯತೆ ಸಂಜೆ ಮನೆಯ ಪ್ರಾಂಗಣದಲ್ಲಿ ಮ್ಯಾರೇಜ್ ಎನ್ವರ್ಸರಿಯ ಹಬ್ಬ! ಗಂಡ ಹೆಂಡತಿ ಸ್ನೕಹಿತರೆಲ್ಲ ಕೇಕ್ ಕತ್ತರಿಸಿ, ಬಣ್ಣದಂತೆ ಬಳಿದುಕೊಂಡಿದ್ದಾರೆ ಮುಖಕೆ! ಎಲ್ಲರ ಕೈಯಲ್ಲಿ  ಬೀಯರ್ ಬಾಟಲಿಗಳು,  ಚಲ್ಲಾಪಿಲ್ಲಿಯಾಗಿ ಬಿದ್ದ ಮೃಷ್ಟಾನ್ನ! ಅತ್ತ ಮನೆಯ ಮೂಲೆಯೊಂದರಲ್ಲಿ ಮಾನವೀಯತೆಯ ವೃದ್ಧ  ಮಡಿಲುಗಳೆರಡು ಹಲುಬುತ್ತಿರುವ ಸದ್ದು! ಕೇಳುವವರಾರು!? - ಸುರೇಶ ಮುದ್ದಾರ 02. ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ..  ಜಾತಿ - ಧರ್ಮಗಳೆಂದು ಬಡಿದಾಡುವವರ  ಮಸೀದಿ - ಮಂದಿರಗಳಿಗಾಗಿ ಕಿತ್ತಾಡುವವರ  ಹೊಟ್ಟೆ ಹೊರೆಯದ ಭಗವದ್ಗೀತೆ, ಕುರಾನಿಗಾಗಿ ನಡುರಸ್ತೆಯಲ್ಲಿ ರಕ್ತ ಹರಿಸುವವರ ಕಂಡು ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ..  ಹಸಿದ ಭಿಕ್ಷುಕರ ಖಾಲಿ ಹೊಟ್ಟೆ ಕಾಣದ  ದಾರಿಯಲ್ಲಿನ ಅನಾಥ ಮಗುವಿನೆಡೆ ಕಣ್ಣೆತ್ತಿ ನೋಡದ   ತನ್ನ ಹುಟ್ಟಿಸಿದವರನ್ನೇ ಮನೆ ಬಿಟ್ಟು ಅಟ್ಟಿದ ಪತ್ರಿಕೆಯಲ್ಲಿನ ಸಮಾಜ ಸೇವಕರ ಸೇವೆಯ ಕಂಡು ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ..  ಜಾತಿ - ಧರ್ಮಗಳ ಬೇಲಿ ದಾಟಿ ಬದುಕಿ ಎಂದವರನ್ನೆ ಧರ...

ಹನಿಗವನ ಸ್ಪರ್ಧೆ 2023 ಫಲಿತಾಂಶ- ಅವ್ವ ಪುಸ್ತಕಾಲಯ

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಆಯೋಜನೆಯ 'ಹನಿಗವನ ಸ್ಪರ್ಧೆ - 2023' ರ ಫಲಿತಾಂಶ ಪ್ರಕಟ. ವಿಜೇತರು : ಟಾಪ್ 3 ಹನಿಗವನಗಳು (ಇ ಪ್ರಮಾಣಪತ್ರ ಹಾಗೂ ಪುಸ್ತಕ ಬಹುಮಾನ) 1. ಸುರೇಶ ಮುದ್ದಾರ - "ಮಾನವೀಯತೆ" 2. ಚೇತನ್ ಗವಿಗೌಡ - "ಮಾನವೀಯತೆ" 3. ಸಂಜಯ್ ಚಿತ್ರದುರ್ಗ - "ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ" ಮೆಚ್ಚುಗೆ ಪಡೆದವರು (ಇ ಪ್ರಮಾಣಪತ್ರ) *ವಿದ್ಯಾ ಎಸ್ * ಶಿವಕುಮಾರ್ ಟಿ * ಮಹದೇವ್ ಪೊನ್ನಾಚಿ * ಪ್ರಮೀಳಾ ರಾಜ್ * ಸೌಮ್ಯ ಗುರು * ರವಿ ದಂಡಗಿ * ಲೇಖನ್ ಮಹದೇವ * ಶೀತಲ್ ವನ್ಸ್ ರಾಜ * ಅಪೂರ್ವ ನಾಗರಾಜ್ * ಹೇಮ ಯಾದವ್ ವಿಜೇತರೆಲ್ಲರಿಗೂ ಅಭಿನಂದನೆಗಳು 💐 ಮೆಚ್ಚುಗೆ ಹಾಗೂ ಭಾಗವಹಿಸಿದವರ ಇ ಪ್ರಮಾಣಪತ್ರ ಡೌನ್ಲೌಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.. https://drive.google.com/drive/folders/1XTobH6joWaqfURw0fRgjWzmeCpksuVvQ ಹೆಚ್ಚೆಚ್ಚು ಸಾಹಿತ್ಯ ಸ್ಪರ್ಧೆಗಳು ಹಾಗೂ ಚಟುವಟಿಕೆಗಳಿಗಾಗಿ ಅವ್ವ ಪುಸ್ತಕಾಲಯ ಬಳಗವನ್ನು ಹಿಂಬಾಲಿಸಿ. Facebook :  https://www.facebook.com/groups/3344469948953030/?ref=share_group_link Instagram :  https://instagram.com/avva_pustakaalaya?igshid=MzNlNGNkZWQ4Mg== Clubhouse :  https://www.clubhouse.com/house/ಅವವ-ಪಸತಕಲಯ Blog :  avvapustaka...

ಸಾಹಿತ್ಯ ಸ್ಫರ್ಧೆಗಳ ಫಲಿತಾಂಶ - ಅವ್ವ ಪುಸ್ತಕಾಲಯ | ಸಾಹಿತ್ಯಮೈತ್ರಿ

ಅವ್ವ ಪುಸ್ತಕಾಲಯ ಮತ್ತು ಸಾಹಿತ್ಯಮೈತ್ರಿ ಸಾಹಿತ್ಯ ಬಳಗಗಳ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಲಾಗಿದ್ದ ಸಾಹಿತ್ಯ ಸ್ಪರ್ಧೆಗಳ ಫಲಿತಾಂಶ ಪ್ರಕಟವಾಗಿದ್ದು, ವಿಜೇತರ ಹೆಸರುಗಳು ಈ ಕೆಳಗಿನಂತೆ ಇರುತ್ತದೆ. ಈ ಕೂಡಲೇ ವಿಜೇತರು avvapustakaalaya@gmail.com  ವಿಳಾಸಕ್ಕೆ ನಿಮ್ಮ ಪೂರ್ತಿ ಹೆಸರು, ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಳಿಸಿಕೊಡಬೇಕಾಗಿ ಕೋರಲಾಗಿದೆ. ಎಲ್ಲಾ ವಿಜೇತರಿಗೆ ಅಭಿನಂದನೆಗಳು 💐 ಅವ್ವ ಪುಸ್ತಕಾಲಯ ತಂಡದ ಇನ್ನಷ್ಟು ಸಾಹಿತ್ಯ ಸ್ಪರ್ಧೆಗಳಿಗಾಗಿ ಇಲ್ಲಿ ಹಿಂಬಾಲಿಸಬಹುದು. 1.  https://www.facebook.com/groups/3344469948953030/?ref=share_group_link 2.  https://instagram.com/avva_pustakaalaya?igshid=YmMyMTA2M2Y= 3.  https://youtube.com/@avvapustakaalaya3582 4.  https://www.clubhouse.com/house/ಅವವ-ಪಸತಕಲಯ 5.  https://wa.me/c/918548948660

ಉಚಿತ ಸಾಹಿತ್ಯ ಸ್ಫರ್ಧೆಗಳು - 2023

ಅವ್ವ ಪುಸ್ತಕಾಲಯ ಹಾಗೂ ಸಾಹಿತ್ಯಮೈತ್ರಿ ಅಂತರ್ಜಾಲ ಪತ್ರಿಕೆ ಬಳಗಗಳ ವಾರ್ಷಿಕೋತ್ಸವದ ಪ್ರಯುಕ್ತ ಕನ್ನಡ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆ : 01 - ನ್ಯಾನೋ ಕಥಾ ಸ್ಪರ್ಧೆ 250 ಪದಮಿತಿಯ ಕತೆ ರಚಿಸಬೇಕು. ಕತೆ ಈ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು. ಸ್ಪರ್ಧೆ : 02 - ಸ್ವರಚಿತ ಕವನ ಸ್ಪರ್ಧೆ 25 ಸಾಲುಗಳ ಮಿತಿಯ ಕವಿತೆ ರಚಿಸಬೇಕು. ಕವಿತೆ ಈ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು. ಸ್ಪರ್ಧೆ : 03 - ಮಂಕುತಿಮ್ಮನ ಕಗ್ಗ ವಾಚನ ಸ್ಪರ್ಧೆ ನಿಮಗಿಷ್ಟವಾದ ಯಾವುದಾದರೊಂದು ಕಗ್ಗವನ್ನು ಆಯ್ಕೆ ಮಾಡಿಕೊಂಡು, ಅದನ್ನು ವಾಚಿಸಿದ (ಕೇವಲ ವಾಚನ ಮಾತ್ರ, ನಿರೂಪಣೆ ಇಲ್ಲ) ವೀಡಿಯೋ ಅನ್ನು ನಮಗೆ ಕಳಿಸಿಕೊಡಬೇಕು. ಕಗ್ಗಗಳನ್ನು ಇಲ್ಲಿ ಆರಿಸಿಕೊಳ್ಳಬಹುದು. https://kagga.sanchaya.net/poems?page=2&start_letter=%E0%B2%AA ಮೂರು ಸ್ಪರ್ಧೆಗಳಿಗೂ ಯಾವುದೇ ವಯಸ್ಸಿನ ಮತ್ತು ವಿಷಯದ ಮಿತಿ ಇಲ್ಲ. ಒಬ್ಬರು ಮೂರು ಸ್ಫರ್ಧೆಗಳಲ್ಲೂ ಭಾಗವಹಿಸಬಹುದು.  ದಿನಾಂಕ 15/04/2023 ರ ಒಳಗೆ ಈ ಕೆಳಗೆ ಸೂಚಿಸಿರುವ ಈಮೇಲ್ ವಿಳಾಸಕ್ಕೆ ನುಡಿ ಅಥವಾ ಯೂನಿಕೋಡ್ ನಲ್ಲಿ ಟೈಪ್ ಮಾಡಿದ  ನ್ಯಾನೋ ಕತೆ & ಕವಿತೆಯನ್ನು ಪಿಡಿಎಫ್ ರೂಪದಲ್ಲಿ ಕಳಿಸಿಕೊಡಬೇಕು. ಮತ್ತು ಕಗ್ಗ ವಾಚಿಸಿದ ವೀಡಿಯೋ ಅನ್ನು ವಾಟ್ಸಪ್ ಮಾಡಬೇಕು.  ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಸ್ಪರ್ಧೆಗಳಲ್ಲಿ ವ...

2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಪ್ರಕಟ - ಅವ್ವ ಪುಸ್ತಕಲಯ

2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಪ್ರಕಟ  ಅವ್ವ ಪುಸ್ತಕಲಯ ಸಾಹಿತ್ಯ ಬಳಗವು ಕಳೆದ ಎರಡು ವರ್ಷಗಳಿಂದ ದಿ. ಶ್ರೀಮಾನ್ ನರಸಯ್ಯ ಅವರ ಸ್ಮರಣಾರ್ಥ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿ, ಆಯ್ಕೆಯಾದ ಕೃತಿಗಳಿಗೆ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ವರ್ಷ ಪ್ರಶಸ್ತಿಗೆ ಸುಮಾರು 80ಕ್ಕೂ ಹೆಚ್ಚು ಕೃತಿಗಳು ಬಂದಿದ್ದು, ನಿರ್ಣಾಯಕರ ಆಯ್ಕೆಯಂತೆ ಸೃಜನಶೀಲವೆನಿಸುವ 15 ಕೃತಿಗಳ ಕಿರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ 15 ಕೃತಿಗಳಲ್ಲಿ ಸೃಜನಶೀಲವೆನಿಸುವ ಆರು ಕೃತಿಗಳನ್ನು ತೀರ್ಪುಗಾರರಾಗಿ ಡಾ. ನೇತ್ರಾವತಿ ಹರಿಪ್ರಸಾದ್ (ಪ್ರಾಧ್ಯಾಪಕರು, ರೇವಾ ವಿಶ್ವವಿದ್ಯಾಲಯ, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಸೃಜನಶೀಲವೆನಿಸುವ ಒಂದು ಕೃತಿಗೆ 2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು, ಅದರ ನಂತರದ ಐದು ಕೃತಿಗಳಿಗೆ ಅವ್ವ ಸೃಜನಶೀಲ ಸಾಹಿತ್ಯ ಮೆಚ್ಚುಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಗುತ್ತದೆ. ಜನವರಿ ತಿಂಗಳಿನಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅವ್ವ ಪುಸ್ತಕಾಲಯದ ಅಧ್ಯಕ್ಷರಾದ ನಾರಾಯಣ್ ಕೆ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರಶಸ್ತಿಗೆ ಹಾಗೂ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾದ ಕೃತಿಗಳ ಹೆಸರು ಮತ್ತು ಲೇಖಕರ ಹೆಸರನ್ನು ಈ ಕೆಳಗೆ ನೀಡಲಾಗಿದೆ.   2022ರ ಅ...

ಅವ್ವ ಪುಸ್ತಕಾಲಯ ಸಾಹಿತ್ಯ ಸ್ಪರ್ಧೆಗಳು 2022

ಹಲವಾರು ಸಾಹಿತ್ಯಕ ಚಟುವಟಿಕೆಗಳಿಂದ ಸಾಹಿತ್ಯಾಸಕ್ತರ ಮನೆಮಾತಾಗಿರುವ ಅವ್ವ ಪುಸ್ತಕಾಲಯ ಬಳಗವು ಮೂರನೆ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿದೆ.  ಸ್ಪರ್ಧೆ 01 - ಸ್ವರಚಿತ ಕವನ ವಾಚನ : "ಅವ್ವ" ವಿಷಯಾಧಾರಿತ ಸ್ವರಚಿತ ಕವನವೊಂದನ್ನು 4 ನಿಮಿಷಗಳ ಒಳಗೆ ವಾಚಿಸಿ ನಮಗೆ ಕಳುಹಿಸಬಹುದಾಗಿದೆ.  ಸ್ಪರ್ಧೆ 02 - ಪೂರ್ಣಚಂದ್ರ ತೇಜಸ್ವಿ ಕುರಿತ ಲೇಖನ ಸ್ಪರ್ಧೆ : ಕನ್ನಡ ಸಾರಸ್ವತ ಲೋಕ ಕಂಡ ಅತ್ಯದ್ಭುತ ಸಾಹಿತಿ, ಅಕ್ಷರ ಲೋಕದ ಮಾಯಾವಿ, ಆಲ್ರೌಂಡರ್ ಪೂರ್ಣಚಂದ್ರ ತೇಜಸ್ವಿಯವರ ವ್ಯಕ್ತಿತ್ವ, ಹವ್ಯಾಸಗಳು, ಕೃತಿಗಳನ್ನು ಕುರಿತಂತೆ 500 ಪದಗಳನ್ನು ಮೀರದ ಲೇಖನವನ್ನು ಬರೆದು ನಮಗೆ ಕಳುಹಿಸಬಹುದಾಗಿದೆ.  ಎರಡೂ ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕವಾಗಲೀ, ವಯೋಮಿತಿಯಾಗಲಿ ಇಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಕವನ ವಾಚನದ ವೀಡಿಯೋ ಮತ್ತು ಲೇಖನವನ್ನು (ಪಿಡಿಎಫ್ ರೂಪದಲ್ಲಿರಲಿ) 8548948660 ನಂಬರಿನ ವಾಟ್ಸಾಪಿಗೆ ದಿನಾಂಕ 25-12-2022 ರ ಒಳಗೆ ಕಳುಹಿಸಬಹುದಾಗಿದೆ.  ಪ್ರತಿ ಸ್ಪರ್ಧೆಯಲ್ಲಿ ಮೂರು ಜನ ವಿಜೇತರನ್ನು ಆಯ್ಕೆ ಮಾಡಿ, ಜನವರಿ ತಿಂಗಳಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನ ಮತ್ತು ಪ್ರಮಾಣಪತ್ರದೊಂದಿಗೆ ಅಭಿನಂದಿಸಲಾಗುತ್ತದೆ.

2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಕಿರುಕಟ್ಟಿ ಪ್ರಕಟ

2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಕಿರುಕಟ್ಟಿ ಪ್ರಕಟ  ಅವ್ವ ಪುಸ್ತಕಲಯ ಸಾಹಿತ್ಯ ಬಳಗವು ಕಳೆದ ಎರಡು ವರ್ಷಗಳಿಂದ ದಿ. ಶ್ರೀಮಾನ್ ನರಸಯ್ಯ ಅವರ ಸ್ಮರಣಾರ್ಥ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿ, ಆಯ್ಕೆಯಾದ ಕೃತಿಗಳಿಗೆ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ವರ್ಷ ಪ್ರಶಸ್ತಿಗೆ ಸುಮಾರು 80ಕ್ಕೂ ಹೆಚ್ಚು ಕೃತಿಗಳು ಬಂದಿದ್ದು, ನಿರ್ಣಾಯಕರ ಆಯ್ಕೆಯಂತೆ  (ನಿರ್ಣಾಯಕರ ಬಗ್ಗೆ ಅಂತಿಮ ಪಟ್ಟಿಯಲ್ಲಿ ತಿಳಿಸಲಾಗುವುದು)  ಸೃಜನಶೀಲವೆನಿಸುವ 15 ಕೃತಿಗಳ ಕಿರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. 15 ಕೃತಿಗಳಲ್ಲಿ 5 ಕೃತಿಗಳನ್ನು ಆಯ್ಕೆ ಮಾಡಿ, ಅದರಲ್ಲಿ ಸೃಜನಶೀಲವೆನಿಸುವ ಒಂದು ಕೃತಿಗೆ 2022ರ ಸೃಜನ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು, ಅದರ ನಂತರದ ನಾಲ್ಕು ಕೃತಿಗಳಿಗೆ ಅವ್ವ ಪುಸ್ತಕ ಬಹುಮಾನವನ್ನು ನೀಡಿ ಅಭಿನಂದಿಸಲಾಗುತ್ತದೆ. ಜನವರಿ ತಿಂಗಳಿನಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅವ್ವ ಪುಸ್ತಕಾಲಯದ ಅಧ್ಯಕ್ಷರಾದ ನಾರಾಯಣ್ ಕೆ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಯಾವುದೇ ಕ್ರಮಾಂಕವಿಲ್ಲದೆ ಕಿರುಪಟ್ಟಿಗೆ ಆಯ್ಕೆಯಾದ ಕೃತಿಗಳ ಹೆಸರು ಮತ್ತು ಲೇಖಕರ ಹೆಸರನ್ನು ಈ ಕೆಳಗೆ ನೀಡಲಾಗಿದೆ.  * ಆರನೆಯ ಬೆರಳು ...

ಆ ಹೊತ್ತು - ಕವಿತೆ - ಅನಂತ ಕುಣಿಗಲ್

                     (ಚಿತ್ರ : ಅಂತರ್ಜಾಲ ಕೃಪೆ) ಆ ಹೊತ್ತು ಭವಿಷ್ಯ ಹೇಳುವ ಕನಸ ಬರೆದಿಡುವ ಹೊತ್ತದು ನಿದ್ದೆ ಹತ್ತದ ಹೊತ್ತು ಏನನ್ನೋ ಕಾದಿರಿಸಿ ಕಾಡುವ ಹೊತ್ತು ಬರೆಯುತ್ತಾಹೋದೆ ಬದುಕಿದ ದಿನಗಳ ಬದುಕಬಹುದಾದ ಕ್ಷಣಗಳ ನನ್ನದೇ ನಿರೂಪಣೆಯಲ್ಲಿ ಕೆತ್ತುತ್ತಾಹೋದೆ ಹಾಳೆಗಳ ಮೇಲೆ ಗೀಚಿದಂತೆ ಕಾಣಿಸಿದರೆ ಅದು ನನ್ನದೇ ತಪ್ಪು! ಆಕಾಶ, ಭೂಮಿ, ನಕ್ಷತ್ರ ಯಾವೂ ಇರಲಿಲ್ಲ ಅಲ್ಲಿ ಗುಡುಗಿನ ಸದ್ದಾದರೂ ಮಳೆಯಿರಲಿಲ್ಲ ಅಲ್ಲಿ ಗಾಳಿಯ ಸ್ಪರ್ಶವಿರಲಿಲ್ಲ ಹಸಿರಸಿರಿಯ ಬಯಲು ಕಾಣಲೇ ಇಲ್ಲ ಅದೇನು ಮಾಯೆಯೋ.. ಬಿಟ್ಟೆನೆಂದರೂ ಬಿಡದು ಕೈಕಾಲುಗಳಿಗೆ ಕಟ್ಟು ಇರಲಿಲ್ಲ ದೇಹವನ್ನು ಬರಸಿಳೆದಂತಿತ್ತು ಉಸಿರು ಸರಾಗವಾಗಿತ್ತು ಹಾರುವ ಹದ್ದುಗಳಿಗೆ ನನ್ನ ಹಿಡಿಯಲಾಗಲಿಲ್ಲ ಬಲಿಷ್ಠನಾಗಿದ್ದೆ ನನ್ನದೇ ಪ್ರಪಂಚದಲ್ಲಿ ಚಿನ್ನದ ಪದಕ ಪೋಷಾಕು ನೆತ್ತಿಗೆ ಕಿರೀಟ ಧಾರಣೆ ರೆಡ್ ಕಾರ್ಪೆಟ್ಟಿನ ಮೇಲೆ ಯುದ್ಧ ಗೆದ್ದು ಬಂದ ಆಚರಣೆ ಭಕ್ಷ್ಯ ಭೋಜನಗಳ ಮೆಲ್ಲುತ್ತಾ ಹದಿಹರೆಯ ಯುವತಿಯರ ಒಡೆಯನಾಗಿದ್ದೆ ನನ್ನನ್ನೇ ಹೋಲುವ ಕನ್ನಡಿಯೊಳಗೆ ಬಂಧಿಯಾಗಿ ಬಹಳ ಹೊತ್ತು ಕಳೆದಿದ್ದೆ ಆ ಹೊತ್ತು ಹೆತ್ತವ್ವ ನೆನಪಾಗಲಿಲ್ಲ ಗುರುಗಳು ವೈರಿಗಳಂತೆ ಗೆಳೆಯರು ಕಾರ್ಕೋಟಕದಂತೆ ನನ್ನೂರು ನನ್ನನ್ನೇ ತಿನ್ನುವಂತೆ ಎಲ್ಲವನ್ನೂ ಹಿಡಿಮುಷ್ಠಿಯಲ್ಲೇ ನಿಗ್ರಹಿಸಿದ್ದೆ ಹ...

ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2022 - ಕೃತಿಗಳ ಆಹ್ವಾನ - ಅವ್ವ ಪುಸ್ತಕಾಲಯ

2022 ರ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ ಪ್ರಕಟಿತ ಕೃತಿಗಳ ಆಹ್ವಾನ  * ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ವತಿಯಿಂದ " ಶ್ರೀಮಾನ್ ಲೇ. ನರಸಯ್ಯ " ಅವರ ಸ್ಮರಣಾರ್ಥ ಕೊಡಮಾಡುವ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ 2020 ರ ಜುಲೈ ತಿಂಗಳಿಂದ 2022 ರ ಜೂನ್ ತಿಂಗಳವರೆ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ.  * 2022 ರ ಆಗಸ್ಟ್ 31 ರೊಳಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು  ಪ್ರತ್ಯೇಕ ಹಾಳೆಯಲ್ಲಿ ಬರೆದ ಸ್ವಪರಿಚಯ, ವಿಳಾಸ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕವೇ (ರಿಜಿಸ್ಟರ್ ಪೋಸ್ಟ್) ತಮ್ಮ ಕೃತಿಗಳನ್ನು ಕಳಿಸಬಹುದಾಗಿದೆ. ಒಬ್ಬ ಲೇಖಕ ತನ್ನ ಎರಡು ಕೃತಿಗಳ ಮೂಲಕ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.  * ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ. ಆತ್ಮಕತೆ, ವಿಮರ್ಶಾ ಸಂಕಲನ, ಪಿ.ಹೆಚ್.ಡಿ ಪ್ರಬಂಧಗಳು, ಅನುವಾದ ಹಾಗೂ ಸಂಶೋಧನಾ ಕೃತಿಗಳನ್ನು ಹೊರತುಪಡಿಸಿ ಸಾಹಿತ್ಯದ ಯಾವುದೇ ಪ್ರಕಾರದ (ಕತೆ, ಕಾದಂಬರಿ, ಕವಿತೆ, ಗಜಲ್, ಹನಿಗವನ, ನಾಟಕ, ಲೇಖನ, ಪ್ರಬಂಧ, ಪ್ರವಾಸ ಕಥನ ಇತ್ಯಾದಿ) ಕೃತಿಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ .  * ನವೆಂಬರ್ ತಿಂಗಳಲ್ಲಿ ಕಿರುಪಟ್ಟ...

ಕುರುಡು ಕಾಣ್ಕೆಯ ಕವಿತೆ - ಅನಂತ ಕುಣಿಗಲ್

ಕುರುಡು ಕಾಣ್ಕೆಯ ಕವಿತೆ (ಚಿತ್ರ : ಅಂತರ್ಜಾಲ ಕೃಪೆ https://bit.ly/3akWHkH) ಪ್ರಿಯ, ಏನದು ನಾಡಿನಲ್ಲಿ ಗಲಭೆ? ಎಲ್ಲರೂ ಕಿರುಚುತ್ತಿದ್ದಾರೆ ನನಗೆ ಕಣ್ಣಿದ್ದರೆ ನೋಡಬಹುದಿತ್ತು! ಆದರೇನು ಮಾಡಲಿ.. ಎಲ್ಲ ದನಿಗಳು ಒಟ್ಟಿಗೆ ದಾಳಿ ಮಾಡುವಾಗ ಯಾವುದಕ್ಕೆ ಕಿವಿಕೊಡಲಿ?? ಈಗ ನೀನೇ ನನಗೆ ಕಣ್ಣು!! ಪ್ರಿಯೆ, ನನಗೆ ಕಣ್ಣಿದ್ದೂ ಅರ್ಥವಾಗುತ್ತಿಲ್ಲ ಇನ್ನು ನಿನಗೇನು ಹೇಳಲಿ? ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ಸಿಕ್ಕಿಲ್ಲವಂತೆ! ಈಕಡೆಯವರು ಈಕಡೆಗೆ ತೂಗುವಂತೆ ಪತ್ರ ಬರೆಯುತ್ತಿದ್ದಾರೆ.. ಆಕಡೆಯವರು ಆಕಡೆಗೆ ತೂಗುವಂತೆ ಭಾಷಣ ಮಾಡುತ್ತಿದ್ದಾರೆ.. ನನಗೂ ತಲೆಕೆಟ್ಟಿಹೋಗಿದೆ!! ಪ್ರಿಯ, ಪಠ್ಯವಿಲ್ಲದೆ ಮಕ್ಕಳೇನು ಓದುತ್ತಾರೆ? ಸರ್ಕಾರ ಈಗ ನಿದ್ದೆ ಮಾಡುತ್ತಿಲ್ಲ ತಾನೇ?? ಯಾಕೆ ಇಷ್ಟೊಂದು ತಡವಾಗುತ್ತಿದೆ.. ಮಕ್ಕಳ ದಿನಗಳಿಗೆ ಬೆಲೆಯೇ ಇಲ್ಲವೇ?? ಇದೇನು ಹುನ್ನಾರವೇ??? ಪ್ರಿಯೆ, ಸರ್ಕಾರ ನಿದ್ದೆಯಲ್ಲಿದ್ದಿದ್ದರೆ ಎದ್ದಮೇಲಾದರೂ ತಿಳಿಯುತ್ತಿತ್ತು ಆದರೆ ಈಗ ಸತ್ತಂತೆ ನಟಿಸುತ್ತಿದೆ ನಟಿಸುವವರನ್ನು ಪ್ರಶಂಸಿಸುವುದೇ ಪ್ರೇಕ್ಷಕರ ಧರ್ಮವಲ್ಲವೇ?! ಬೇಡದಿದ್ದನ್ನು ತೆಗೆದು ಇತಿಹಾಸವನ್ನು ತಿರುಚಿ ಅವಮಾನಿಸಲಾಗುತ್ತಿದೆಯಂತೆ! ಈಗ ಸತ್ಯ-ಮಿಥ್ಯಗಳೆರಡಕ್ಕೂ ವ್ಯತ್ಯಾಸವಿಲ್ಲದಂತಾಗಿದೆ ಪದವಿಗಳೇ ಇಲ್ಲದವರು ಪಠ್ಯ ಆರಿಸಿದ್ದಾರಂತೆ ಅದರಲ್ಲಿ ಅವರಿಗೆ ಬೇಕಾದ್ದೇ ಹೆಚ್ಚಿದೆಯಂತೆ! ಅದು ಸಮಸಮಾಜದ ಕನಸನ್ನು ನುಂಗುತ್ತಿದೆಯಂತೆ ಇವರಿವರ ರಾಜಕೀಯದಲ್...

ಪಟ್ಟುಹಿಡಿದು ಓದಿಸಿಕೊಳ್ಳುವ ರೋಚಕ ಕಾದಂಬರಿ ರೌದ್ರಾವರಣಂ - ಲೇಖನ - ಶ್ರೀನಾಥ್ ವಿ ಸಿ

ಪಟ್ಟುಹಿಡಿದು ಓದಿಸಿಕೊಳ್ಳುವ ರೋಚಕ ಕಾದಂಬರಿ ರೌದ್ರಾವರಣಂ ಆಪ್ತ ಗೆಳೆಯ ಅನಂತನ ಮೊದಲ ಕಾದಂಬರಿ “ರೌದ್ರವರಣಂ” ಕೃತಿಯು ಬಹಳ ಬೇಗ ಓದಿಸಿಕೊಳ್ಳುತ್ತದೆ. ಏಕೆಂದರೆ ಪ್ರತೀ ಅಧ್ಯಾಯಗಳಲ್ಲಿಯೂ  ಕುತೂಹಲ ಮತ್ತು ರೋಚಕಭರಿತ ಪ್ರೇರಣೆಗಳು ಭರ್ಜರಿಯಾಗಿ ಇರುವುದರಿಂದ. ಸುನೀತವಾದ ಸ್ವಚ್ಛ, ಹಳ್ಳಿ ಸೊಗಡಿನ ಭಾಷೆ ಸುಲಲಿತವಾಗಿ ಆಸ್ವಾದಿಸಲಿಕ್ಕೆ ಸಹಾಯ ಮಾಡುತ್ತದೆ. ರೌದ್ರದ ಆವರಣ ಎಲ್ಲ ಪಾತ್ರಗಳಲ್ಲಿಯೂ ಬಹಳ ಆಚ್ಚುಕಟ್ಟಾಗಿ ಆಗಿದೆ. ಕೆಲವೊಮ್ಮೆ,  ಕೌತುಕದ  ಪತ್ತೇದಾರಿಯಲ್ಲಿ ಸಾಗುತ್ತಿರುವಂತೆ ಅನಿಸುತ್ತದೆ. ಅದನ್ನ ಪೋಷಿಸುವಂತೆ ತಕ್ಕ  ಪ್ರೆಶ್ನೆಗಳು, ಗೊಂದಲಗಳು, ವಿಭಿನ್ನವಾದ ತಿರುವುಗಳು ಕೂಡ ಅಡಗಿವೆ. ಚಂದ್ರ(ನಾಯಿ)ನೆಂಬ ಭಾವ ಜೀವಿಯ ಸುತ್ತ ಭಾವನೆಗಳನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಬಲ್ಲ ಮನುಜ ಪಾತ್ರಗಳ ಚಿತ್ರಣ ಸಹಜವಾಗಿವೆ. ಸಹಜವಾಗಿ ಮನುಷ್ಯರನ್ನು ಆಕ್ರಮಿಸುವ ಅರಿಷಡ್ವರ್ಗಗಳು ಪಾತ್ರಗಳಲ್ಲಿ ನೈಜವಾಗಿ  ತುಂಬಿದ್ದಾರೆ  ಕಾದಂಬರಿಕಾರರು. ಅವಾಸ್ತವಿಕತೆಯನ್ನೇ ಹೆಚ್ಚು ನೆಚ್ಚಿಕೊಂಡಿರುವ ಮತ್ತು ಒಪ್ಪಿಕೊಂಡಿರುವ ಈ ಸಮಾಜದಲ್ಲಿ ವಾಸ್ತವ ಜೀವನವನ್ನು ಬಿಚ್ಚಿಡಲು ಹೆಚ್ಚಿಗೆ ಯಾರೂ ಇಷ್ಟಪಡುವುದಿಲ್ಲ. ಅವರವರ ಹವ್ಯಾಸ, ಯೋಚನೆಗಳು, ವ್ಯಕ್ತಿತ್ವಗಳದೂ ಅದೇ ಕಥೆ. ಇರುವುದೊಂದು, ಮಾಡುವುದೊಂದು, ಹೇಳುವುದೊಂದು, ತೋರ್ಪಡಿಸಿಕೊಳ್ಳುವುದು ಮತ್ತೊಂದು. ಬಾಬಣ್ಣನ  ಹೊಟ್ಟೆಪಾಡಿಗೊಂದು ಕೆಲಸ (...

ನ್ಯಾನೋ ಕಥಾಸ್ಪರ್ಧೆ ಫಲಿತಾಂಶ - ಮೇ-2022 - ಅವ್ವ ಪುಸ್ತಕಾಲಯ

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು ಸಾಹಿತ್ಯಾಸಕ್ತರ ಬೇಸರ ಕಳೆಯಲು, ಅವರನ್ನು ಸದಾ ಸೃಜನಶೀಲ ಹಾಗೂ ಕ್ರಿಯಾಶೀಲರಾಗಿರುವಂತೆ ಕಾಪಾಡಿಕೊಳ್ಳಲು ಒಂದರ ಹಿಂದೆ ಮತ್ತೊಂದು ಎಂಬಂತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಈ ಬಾರಿ ನ್ಯಾನೋ ಕಥಾಸ್ಪರ್ಧೆ ಹಮ್ಮಿಕೊಂಡಿತ್ತು ಕಡಿಮೆ ಪದಗಳನ್ನು ಬಳಸಿಕೊಂಡು ಹೇಳಬೇಕಾದ್ದನ್ನು ಚಿಕ್ಕದಾಗಿ ಹೇಳಿ ಮುಗಿಸುವ ಚಮತ್ಕಾರಿ ಸಾಹಿತ್ಯ ಪ್ರಕಾರ ಇದಾಗಿದ್ದು, ಐದು ದಿನಗಳಲ್ಲಿ ಸ್ಪರ್ಧೆಗೆ 60 ಕ್ಕೂ ಹೆಚ್ಚು ನ್ಯಾನೋ ಕಥೆಗಳು ಬಂದಿದ್ದವು. ಅವುಗಳಲ್ಲಿ ಮೂರು ಬಹುಮಾನಿತ ಕಥೆಗಳು ಮತ್ತು 7 ಮೆಚ್ಚಿಗೆ ಪಡೆದ ಕಥೆಗಳನ್ನಾಗಿ ಆರಿಸಲಾಗಿದೆ. ಬಹುಮಾನಿತರು ತಮ್ಮ ಹೆಸರು, ಪೂರ್ತಿ ಅಂಚೆ ವಿಳಾಸ ಮತ್ತು ಮೊಬೈಲ್ ನಂಬರನ್ನು ಈಕೂಡಲೆ  avvapustakaalaya@gmail.com ಗೆ ಕಳುಹಿಸಿಕೊಡಿ. ಮತ್ತು ಮೆಚ್ಚುಗೆ ಪಡೆದ ಕಥೆಗಾರರಿಗೆ ಇ-ಪ್ರಮಾಣಪತ್ರ ನೀಡಿ ಅಭಿನಂದಿಸಲಾಗುವುದು. ಇನ್ನೆರೆಡು-ಮೂರು ದಿನಗಳಲ್ಲಿ ಪ್ರಮಾಣಪತ್ರಗಳನ್ನು ನಮ್ಮ ಅವ್ವ ಪುಸ್ತಕಾಲಯ ಫೇಸ್ಬುಕ್ ಫೇಜಿನಲ್ಲಿ ಮತ್ತು ವಾಟ್ಸಾಪ್ ತಂಡದಲ್ಲಿ ಹಂಚಲಾಗುವುದು. ಸ್ಪರ್ಧಾಳುಗಳು ತಮ್ಮ ತಮ್ಮ ಪ್ರಮಾಣಪತ್ರಗಳನ್ನು ಅಲ್ಲಿಂದಲೇ ಡೌನ್ಲೌಡ್ ಮಾಡಿಕೊಳ್ಳಬಹುದು. ಈ ವಾರದಲ್ಲಿ ನಿಮಗೆ ಪ್ರಮಾಣಪತ್ರ ತಲುಪದಿದ್ದಲ್ಲಿ ಅವ್ವ ಪುಸ್ತಕಾಲಯ ಮೇಲ್ ವಿಳಾಸಕ್ಕೆ ಮೇಲ್ ಮಾಡಿ ಪಡೆಯಬಹುದು.                  ...

ಆಕೆಗೆ ಅದು ಮೊದಲ ರಾತ್ರಿಯಲ್ಲ! - ಕವಿತೆ - ಅನಂತ ಕುಣಿಗಲ್

" ಆಕೆಗೆ ಅದು ಮೊದಲ ರಾತ್ರಿಯಲ್ಲ! " ಆಕೆಗೆ ಅದು ಮೊದಲ ರಾತ್ರಿಯಲ್ಲ ಯಾಕೆಂದರೆ, ಅವಳು ಮದುವೆಯೇ ಆಗಿರಲಿಲ್ಲ!! ಇಪ್ಪತ್ತೆರೆಡು ವರ್ಷದ ಆ ಬಾಲಕಿ ಹೆಚ್ಚು ಓದಲಾಗಲಿಲ್ಲ, ಕಾರಣ ನೂರಾರು  ಅಪ್ಪ ಕುಡಿದು ಕುಡಿದು ಸತ್ತ ಇಲ್ಲ, ಮಗನಿಂದಲೇ ಕೊಲೆಯಾದ ಅಪರಾಧಿ ತಮ್ಮ ಜೈಲಿಗೆ ಹೋದ ಅಮ್ಮ ಒಬ್ಬಳೇ ಹಾಸಿಗೆ ಮೇಲೆ ದಿನ ಎಣಿಸುತ್ತಿದ್ದಾಳೆ ಹಾಳಾದ ಕ್ಯಾನ್ಸರ್ ರೋಗ ಆರು ವರ್ಷಗಳಿಂದ ಅವಳ ನಗು ಕಿತ್ತುಕೊಂಡಿದೆ  ಈಗಲೂ ಅವಳು ಸ್ವಾರ್ಥಿಯಾದರೆ..? ಆ ಬದುಕಿಗೆ ಅರ್ಥವುಂಟೆ?! ಓದಿಗೆ ತಕ್ಕನಾದ ಕೆಲಸವಿಲ್ಲ ತನ್ನವರು ಅಂತ ಯಾರೂ ಇಲ್ಲ ಒಬ್ಬಳಿಗೊಬ್ಬಳೇ.. ಒನಕೆ ಓಬವ್ವನೂ ಅಲ್ಲ  ಮದುವೆಯಾದರೆ ಸರಿಯಾಗುವುದೇ ಎಲ್ಲ? ನಂತರವೂ ಎಲ್ಲ ಹೀಗೆ ಇದ್ದರೆ.. ಮದುವೆ ಅನರ್ಥ ಹೀಗೇ ಇದ್ದುಬಿಡೋಣ.. ಅದೊಂದು ಗಟ್ಟಿ ನಿರ್ಧಾರ  ಎಷ್ಟು ದುಡಿಯಬಹುದು? ಎರಡೇ ಎರಡು ಕೈಗಳು?! ಪಾಪ ಪುಟ್ಟ ಕೈಗಳು ಸೂರ್ಯನಿಗೂ ಸಮಯದ ಅರಿವಿಲ್ಲ ಬೇಗ ಬಂದು ಬೇಗ ಹೋಗುತ್ತಾನೆ ಸಿಗುವುದು ಚಿಲ್ಲರೆ ರೂಪಾಯಿಗಳಷ್ಟೇ ಅದರಿಂದ ಅವಳ ಹೊಟ್ಟೆ ತುಂಬೀತೇ?? ಹೆತ್ತಾಕೆಯ ರೋಗ ಹೋದೀತೇ?? ಮತ್ತೆ ಎಲ್ಲವೂ.. ಹಾಗೇ!!  ಇನ್ನೊಂದು ನಿರ್ಧಾರವಾಗಬೇಕಿದೆ ಹಳ್ಳಿ ಬಿಟ್ಟು ಪಟ್ಟಣ ಸೇರುವುದು ಅದೂ ಆಯ್ತು.. ಕೆಲಸಕ್ಕಾಗಿ ಅಲೆದಲೆದು ಸಾಕಾಯ್ತು ಕಣ್ಣಿನಲ್ಲಡಗಿರುವ ನೋವು ನೋಡಿದವರಿಗಿಂತ ಅವಳೆದೆಯ ಉಬ್ಬು ಸವಿದವರೇ ಹೆಚ್ಚು ಅವರ ಕಣ್ಣಿನ ದಾಹಕ್ಕೆ ಎದೆಯೇ ಹಿಂಗುತ್ತಿವೆ ದಿನವೂ ...

ನಿಮ್ಮಲ್ಲಿ ನಾನೂ ಒಬ್ಬಳು - ಲೇಖನ - ಪ್ರಿಯಾ ಡಿ

ನಿಮ್ಮಲ್ಲಿ ನಾನೂ ಒಬ್ಬಳು ಆಸ್ಪತ್ರೆಯಲ್ಲಿ ಪುಟ್ಟ  ಮಗುವಿನ ಚೀರಾಟವನ್ನು ಸುಮಾರು ಒಂದು ಗಂಟೆ ಕೇಳಿದ ಮನಸ್ಸು ಮಗುವನ್ನು ಹುಡುಕುತ್ತ ಹೊರಟಿತು. ಒಂದು ಬೆಡ್ ನ ಮೇಲೆ ದಾದಿಯ ಮಡಿಲಲ್ಲಿ ಹಾಲಿನ ಬಾಟಲಿಯನ್ನು ಬಾಯಿಯಲ್ಲಿ ಹಿಡಿದು ಒಂದೇ ಸಮನೆ ಅಳುತ್ತಿತ್ತು.ಹತ್ತಿರಕ್ಕೆ ಹೋದಂತೆಲ್ಲ ಅಯ್ಯೋ ಪಾಪ ಎಂಬ ಮಾತುಗಳು...!!! ಸಮೀಪಿಸಿದೆ.‌...., ಮುದ್ದು ಮುಖದ ಒಂದು ದಿನದ ಹೆಣ್ಣು ಮಗು....!! ನೋಡಿದ ತಕ್ಷಣವೇ ಮುದ್ದಾಡುವ ಅಂದ..!! ಮಗುವಿನ ಅಮ್ಮ ....? ಅಂದೆ ದಾದಿ ಮೌನವಾಗಿಯೇ ಇದ್ದರು..!! ಅಕ್ಕ-ಪಕ್ಕದವರು ಕಥೆ ಹೇಳ ತೊಡಗಿದರು...!! ನಿನ್ನೆ ಇಷ್ಟೊತ್ತಿಗಿನ್ನೂ ಇಲ್ಲೆ ಮಲಗಿದಳು, ಮಗುವಿಗೆ ಹಾಲು ಕುಡಿಸುತ್ತ ಇದ್ದಳು, ಇದು ಹೆಣ್ಣು ಮಗು ಅಂತ ಕೇಳಿದ ಕೂಡಲೇ ಉಸಿರು ಮೇಲೆ ಏಳೆಯೋಕೆ ಶುರುಮಡಿದಳು‌.‌.....!!! ಕೂಡಲೇ  ಆಂಬ್ಯುಲೆನ್ಸ್ ನಲ್ಲಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದರು.ದಾರಿ ಮಧ್ಯೆಯೇ ತೀರಿಕೊಂಡಳಂತೆ. ಆಕೆಗೆ ಮೂರು ಹೆಣ್ಣು ಮಕ್ಕಳು ಈ ಮಗುವೂ ಸೇರಿ ,ಆಕೆಯ ಗಂಡ ಈ ಬಾರಿ ಹೆಣ್ಣು ಮಗುವಾದರೆ ಮನೆಗೆ ಬರಬೇಡ ಅಂದಿದನಂತೆ.....!!! ಮನಸು ಏನು ತಿಳಿದುಕೊಳ್ಳತ್ತ ಪಾಪ ಉಸಿರೇ ಬಿಟ್ಟಳು....!!!! ಕಣ್ಣ ಹನಿಗಳು ಈ ಮಗುವಿಗೆ ಆಸರೆ...??? ಏನಲೂ  ದಾದಿ ಸದ್ಯಕ್ಕೆ ನಾವೇ..!!. ಅವರು ಈ ಮಗುವನ್ನು ಬೇಡ ಎಂದು ಇಲ್ಲೇ ಬಿಟ್ಟು ಹೋಗಿದ್ದಾರೆ...!!!.ಎಷ್ಟೊಂದು ಜನ ಮಕ್ಕಳ ಆಸೆಯಿಂದ ಇದ್ದರೆ ,ಅವರ ಮಡಿಲನ್ನು ಈ ...