ನಮಸ್ಕಾರ 💐
ಕೊರೋನಾ ಸಮಯದಲ್ಲಿ ಲೇಟ್. ನರಸಯ್ಯ ಅವರ ಸ್ಮರಣಾರ್ಥಕವಾಗಿ ಸ್ಥಾಪಿಸಿದ ಅವ್ವ ಪುಸ್ತಕಲಯ ಸಾಹಿತ್ಯ ಬಳಗ ಇವತ್ತು ನಿಮ್ಮೆಲ್ಲರನ್ನು ನಮಗೂ, ನಮ್ಮನ್ನು ನಿಮಗೂ ಪರಿಚಯಿಸಿದೆ. ಇದೊಂದು ಡಿಜಿಟಲ್ ಬ್ಲಾಗ್ ಮತ್ತು ಸಾಹಿತ್ಯಾಸಕ್ತರೇ ಸೇರಿಕೊಂಡು ಕಟ್ಟಿದ ತಂಡ. ಈಗಾಗಲೇ 4 ಪುಸ್ತಕಗಳು ಪ್ರಕಟಗೊಂಡಿವೆ ಮತ್ತು ಮೂರು ವರ್ಷಗಳಿಂದಲೂ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದೇವೆ. ಸಾಕಷ್ಟು ಸಾಹಿತ್ಯ ಕಾರ್ಯಕ್ರಮಗಳು, ಚಟುವಟಿಕೆಗಳು, ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಅವ್ವ ಪುಸ್ತಕಾಲಯ ಸಾಹಿತ್ಯದ ಘಮವನ್ನ ಪಸರಿಸುತ್ತಾ ನಿಮ್ಮೆಲ್ಲರನ್ನ ತಲುಪಿದೆ. ಅದರಲ್ಲಿ ನಿಮ್ಮೆಲ್ಲರ ಸಹಕಾರ ದೊಡ್ಡದಿದೆ. ಬಹಳಷ್ಟು ಜನ ಕೇಳುತ್ತಿರುತ್ತಾರೆ. ಅವ್ವ ಪುಸ್ತಕಾಲಯ ಎಲ್ಲಿದೆ? ಅದು ಒಬ್ಬರೇ ನಡೆಸುವ ಸಂಸ್ಥೆಯ? ತಂಡದಲ್ಲಿ ಯಾರು ಯಾರೆಲ್ಲ ಇದ್ದಾರೆ? ಅಂತ. ಅವರಿಗೆಲ್ಲ ಹೀಗೆ ಹೇಳುತ್ತಾ ಬಂದಿದ್ದೆವು. "ಇಲ್ಲ ಒಬ್ಬರೇ ಅಲ್ಲ, ಅದರ ಹಿಂದೆ ಬಹಳಷ್ಟು ಜನರ ಶ್ರಮವಿದೆ" ಅಂತ. ಆದರೆ ಅವರನ್ನು ಈವರೆಗೆ ಪರಿಚಯಿಸುವ ಸಮಯ ಒದಗಿ ಬಂದಿರಲಿಲ್ಲ. ಈಗ ನಿಮ್ಮ ಮುಂದೆ ಅವರೆಲ್ಲರನ್ನೂ ಪರಿಚಯಿಸುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಸಹಕಾರ ನಮ್ಮ ಬಳಗದ ಮೇಲೆ ಹೀಗೇ ಇರಲಿ..
- ಅವ್ವ ಪುಸ್ತಕಾಲಯ
ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ನೂತನ ಸಮಿತಿ ಈಕೆಳಗಂಡಂತಿದೆ.
ಅಧ್ಯಕ್ಷರು : ಶ್ರೀಮತಿ ಗೌರಮ್ಮ
ಉಪಾಧ್ಯಕ್ಷರು : ನಾರಾಯಣ ಕೆ ಎನ್
ಸಂಸ್ಥಾಪಕರು & ವ್ಯವಸ್ಥಾಪಕರು : ಅನಂತ ಕುಣಿಗಲ್
ಕಾರ್ಯದರ್ಶಿಗಳು :
* ನಂದಕುಮಾರ ಜಿ ಕೆ (ನಟ, ಬರಹಗಾರ, ರಂಗಶಿಕ್ಷಕ)
* ಶಿವಾಗ್ (ಬರಹಗಾರ, ಸಹನಿರ್ದೇಶಕ)
* ಚೇತನ್ ಗವಿಗೌಡ (ಬರಹಗಾರ)
* ರಾಜು ಪುಸ್ತಕಗ್ರಾಮ್ (ಬರಹಗಾರ)
* ಚಂದ್ರಶೇಖರ ಕುಲಗಾಣ (ಬರಹಗಾರ, ಸಂಪಾದಕರು)
ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು, ಕಾರ್ಯಕ್ರಮಗಳು & ಸ್ಪರ್ಧೆಗಳ ಕುರಿತ ಮಾಹಿತಿಗಳಿಗಾಗಿ ನಮ್ಮನ್ನು ಹಿಂಬಾಲಿಸಿ..
ವಾಟ್ಸಪ್ :
ಇನ್ನ್ಟಾಗ್ರಾಮ್ :
ಬ್ಲಾಗ್ : avvapustakaalaya.blogspot.com
ಟೆಲಿಗ್ರಾಮ್ : https://t.me/kannadanalikali
ಮೇಲ್ : avvapustakaalaya@gmail.com
ಕ್ಲಬ್ ಹೌಸ್ : https://bit.ly/3wEPkMx
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ