2022 ರ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ ಪ್ರಕಟಿತ ಕೃತಿಗಳ ಆಹ್ವಾನ
* ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ವತಿಯಿಂದ "ಶ್ರೀಮಾನ್ ಲೇ. ನರಸಯ್ಯ" ಅವರ ಸ್ಮರಣಾರ್ಥ ಕೊಡಮಾಡುವ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ 2020 ರ ಜುಲೈ ತಿಂಗಳಿಂದ 2022 ರ ಜೂನ್ ತಿಂಗಳವರೆ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ.
* 2022 ರ ಆಗಸ್ಟ್ 31 ರೊಳಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದ ಸ್ವಪರಿಚಯ, ವಿಳಾಸ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕವೇ (ರಿಜಿಸ್ಟರ್ ಪೋಸ್ಟ್) ತಮ್ಮ ಕೃತಿಗಳನ್ನು ಕಳಿಸಬಹುದಾಗಿದೆ. ಒಬ್ಬ ಲೇಖಕ ತನ್ನ ಎರಡು ಕೃತಿಗಳ ಮೂಲಕ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
* ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ. ಆತ್ಮಕತೆ, ವಿಮರ್ಶಾ ಸಂಕಲನ, ಪಿ.ಹೆಚ್.ಡಿ ಪ್ರಬಂಧಗಳು, ಅನುವಾದ ಹಾಗೂ ಸಂಶೋಧನಾ ಕೃತಿಗಳನ್ನು ಹೊರತುಪಡಿಸಿ ಸಾಹಿತ್ಯದ ಯಾವುದೇ ಪ್ರಕಾರದ (ಕತೆ, ಕಾದಂಬರಿ, ಕವಿತೆ, ಗಜಲ್, ಹನಿಗವನ, ನಾಟಕ, ಲೇಖನ, ಪ್ರಬಂಧ, ಪ್ರವಾಸ ಕಥನ ಇತ್ಯಾದಿ) ಕೃತಿಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
* ನವೆಂಬರ್ ತಿಂಗಳಲ್ಲಿ ಕಿರುಪಟ್ಟಿ ಬಿಡುಗಡೆ ಮಾಡಲಾಗುವುದು. ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅವ್ವ ಪುಸ್ತಕಾಲಯ ತಂಡವನ್ನು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್, ಬ್ಲಾಗ್, ಕ್ಲಬ್ ಹೌಸ್ ಗಳಲ್ಲಿ ಹಿಂಬಾಲಿಸಬಹುದು.
ಮೇಲ್ : avvapustakaalaya@gmail.com
* ಬಹುಮಾನ ವಿವರ :
1). ಮೊದಲ ಸ್ಥಾನ ಪಡೆದ ಸೃಜನಶೀಲ ಕೃತಿಗೆ ಈ ವರ್ಷದ ಪ್ರಶಸ್ತಿಯ ಜೊತೆಗೆ 1501/- ರೂಗಳ ನಗದು ಬಹುಮಾನ, 1500/- ರೂ ಮೌಲ್ಯದ ಪುಸ್ತಕ ಬಹುಮಾನ ನೀಡಿ ಗೌರವಿಸಲಾಗುವುದು.
2). ಸೃಜನಶೀಲವೆನಿಸಿದ ಎರಡು ಕೃತಿಗಳಿಗೆ ತಲಾ 500/- ರೂಗಳ ನಗದು ಬಹುಮಾನ, 500/- ರೂ ಮೌಲ್ಯದ ಪುಸ್ತಕ ಬಹುಮಾನ, ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಗುವುದು.
* ತಮ್ಮ ಕೃತಿಗಳನ್ನು ಕಳಿಸಬೇಕಾದ ಅಂಚೆ ವಿಳಾಸ :
ಅವ್ವ ಪುಸ್ತಕಾಲಯ
#189, ಗ್ರಾಮ ನಂ.೦೧ ನಾಗರೀಕಸೇವಾಕೇಂದ್ರ,
ಕೆಂಚನಹಳ್ಳಿ ಅಂಚೆ, ಹುಲಿಯೂರುದುರ್ಗ ಹೋಬಳಿ,
ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ - 572123
ಮೊ : 8548948660
ಸರ್ ಈ ಬಾರಿ ಅಪ್ರಕಟಿತ ಕೃತಿಗಳಿಗೆ ಅವಕಾಶವಿಲ್ಲವೆ?
ಪ್ರತ್ಯುತ್ತರಅಳಿಸಿ