ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು ಸಾಹಿತ್ಯಾಸಕ್ತರ ಬೇಸರ ಕಳೆಯಲು, ಅವರನ್ನು ಸದಾ ಸೃಜನಶೀಲ ಹಾಗೂ ಕ್ರಿಯಾಶೀಲರಾಗಿರುವಂತೆ ಕಾಪಾಡಿಕೊಳ್ಳಲು ಒಂದರ ಹಿಂದೆ ಮತ್ತೊಂದು ಎಂಬಂತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಈ ಬಾರಿ ನ್ಯಾನೋ ಕಥಾಸ್ಪರ್ಧೆ ಹಮ್ಮಿಕೊಂಡಿತ್ತು
ಕಡಿಮೆ ಪದಗಳನ್ನು ಬಳಸಿಕೊಂಡು ಹೇಳಬೇಕಾದ್ದನ್ನು ಚಿಕ್ಕದಾಗಿ ಹೇಳಿ ಮುಗಿಸುವ ಚಮತ್ಕಾರಿ ಸಾಹಿತ್ಯ ಪ್ರಕಾರ ಇದಾಗಿದ್ದು, ಐದು ದಿನಗಳಲ್ಲಿ ಸ್ಪರ್ಧೆಗೆ 60 ಕ್ಕೂ ಹೆಚ್ಚು ನ್ಯಾನೋ ಕಥೆಗಳು ಬಂದಿದ್ದವು. ಅವುಗಳಲ್ಲಿ ಮೂರು ಬಹುಮಾನಿತ ಕಥೆಗಳು ಮತ್ತು 7 ಮೆಚ್ಚಿಗೆ ಪಡೆದ ಕಥೆಗಳನ್ನಾಗಿ ಆರಿಸಲಾಗಿದೆ.
ಬಹುಮಾನಿತರು ತಮ್ಮ ಹೆಸರು, ಪೂರ್ತಿ ಅಂಚೆ ವಿಳಾಸ ಮತ್ತು ಮೊಬೈಲ್ ನಂಬರನ್ನು ಈಕೂಡಲೆ avvapustakaalaya@gmail.com ಗೆ ಕಳುಹಿಸಿಕೊಡಿ. ಮತ್ತು ಮೆಚ್ಚುಗೆ ಪಡೆದ ಕಥೆಗಾರರಿಗೆ ಇ-ಪ್ರಮಾಣಪತ್ರ ನೀಡಿ ಅಭಿನಂದಿಸಲಾಗುವುದು. ಇನ್ನೆರೆಡು-ಮೂರು ದಿನಗಳಲ್ಲಿ ಪ್ರಮಾಣಪತ್ರಗಳನ್ನು ನಮ್ಮ ಅವ್ವ ಪುಸ್ತಕಾಲಯ ಫೇಸ್ಬುಕ್ ಫೇಜಿನಲ್ಲಿ ಮತ್ತು ವಾಟ್ಸಾಪ್ ತಂಡದಲ್ಲಿ ಹಂಚಲಾಗುವುದು. ಸ್ಪರ್ಧಾಳುಗಳು ತಮ್ಮ ತಮ್ಮ ಪ್ರಮಾಣಪತ್ರಗಳನ್ನು ಅಲ್ಲಿಂದಲೇ ಡೌನ್ಲೌಡ್ ಮಾಡಿಕೊಳ್ಳಬಹುದು. ಈ ವಾರದಲ್ಲಿ ನಿಮಗೆ ಪ್ರಮಾಣಪತ್ರ ತಲುಪದಿದ್ದಲ್ಲಿ ಅವ್ವ ಪುಸ್ತಕಾಲಯ ಮೇಲ್ ವಿಳಾಸಕ್ಕೆ ಮೇಲ್ ಮಾಡಿ ಪಡೆಯಬಹುದು.
ಸಾಕ್ಷಿ ಶ್ರೀಕಾಂತ - ನಾದ-ನಿನಾದ
ಕೋಮಲ ಎಂ ವಿ - ನಂಬಿಕೆಯ ಬುನಾದಿ
ರಾಜಬಕ್ಷಿ ಕೆ - ರಜೆ-ಸಜೆ
ಸಂತೋಷ್ ಕುಮಾರ್ ಸಿ - ಗರ್ವ
ರಶ್ಮಿ ಶಮಂತ್ - ವಿಚ್ಚೇದನ
ಜಯರಾಮಚಾರಿ - ಪುನರಪಿ ಮರಣಂ
ಲೀಲಾವತಿ ಎಂ ಬಿ - ವಿಮರ್ಶೆ
ಯೂಟ್ಯೂಬ್ : https://youtube.com/channel/UCEvSlHKHjYmcVln8QN-MEpw
ಬ್ಲಾಗ್ : avvapustakaalaya.blogspot.com
ಟೆಲಿಗ್ರಾಮ್ : https://t.me/kannadanalikali
ಪ್ರತಿಲಿಪಿ : https://pratilipi.page.link/YHYHtdYJ2UmCuyuq9
ಕ್ಲಬ್ ಹೌಸ್ : https://bit.ly/3wEPkMx

ಬಹುಮಾನಿತ ಕಥೆಗಳು :
ಸಾಕ್ಷಿ ಶ್ರೀಕಾಂತ - ನಾದ-ನಿನಾದ
ಕೋಮಲ ಎಂ ವಿ - ನಂಬಿಕೆಯ ಬುನಾದಿ
ರಾಜಬಕ್ಷಿ ಕೆ - ರಜೆ-ಸಜೆ
ಸಂತೋಷ್ ಕುಮಾರ್ ಸಿ - ಗರ್ವ
ರಶ್ಮಿ ಶಮಂತ್ - ವಿಚ್ಚೇದನ
ಜಯರಾಮಚಾರಿ - ಪುನರಪಿ ಮರಣಂ
ಲೀಲಾವತಿ ಎಂ ಬಿ - ವಿಮರ್ಶೆ
ಬಹುಮಾನಿತ ಕಥೆಗಳು ಓದಿಗಾಗಿ :
1. ಬೂಟಾಟಿಕೆ
"ಅವನು ನಿನ್ನ ಗಂಡ ತಾನೆ,ಹೊಡೆದರೆ ಹೊಡೆಸ್ಕೊ,ಬೈದರೆ ಬೈಸ್ಕೊ. ನಾವು ಅನುಭವಿಸದೇ ಇರೋದ" ಗಂಡ ಕೊಡುತ್ತಿದ್ದ ಕಾಟದ ಬಗ್ಗೆ ಅತ್ತೆಯ ಸಮರ್ಥನೆಯ ಮಾತುಗಳಿವು.ಆದರೆ ಅವರು ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವನ್ನು ಬಹಳ ಮಾರ್ಮಿಕವಾಗಿ ತನ್ನ ಕಥೆ, ಕಾದಂಬರಿಗಳಲ್ಲಿ ಚಿತ್ರಿಸಿ ಪ್ರಶಸ್ತಿಗಳನ್ನು ಪಡೆದ ಪ್ರಸಿದ್ಧ ಲೇಖಕಿ.
2. ಮೌನಿ
ನನ್ನ ಗೆಳೆಯ ತನ್ನ ಬರ್ತ್ ಡೇ ಪಾರ್ಟಿಯನ್ನು ಅನಾಥಾಶ್ರಮವೊಂದರಲ್ಲಿ ಆಚರಿಸಿಕೊಳ್ಳುತ್ತಿದ್ದ.ನನಗೆ ಇಷ್ಟವಿಲ್ಲದಿದ್ದರು ಹೋಗಬೇಕಾಗಿ ಬಂತು, ಅವರೆಲ್ಲರ ನಡುವೆ ಮೌನಿಯಾಗಿ ಮೂಲೆಗುಂಪಾಗಿದ್ದೆ. ನನಗಾಗಿಯೇ ಒಂದು ಪುಟ್ಟ ಹುಡುಗಿ ನನ್ನಂತೆಯೆ ಆ ರೂಮಿನ ಮೂಲೆಯಲ್ಲಿ ಒಂಟಿಯಾಗಿ ಕುಳಿತ್ತಿದ್ದಳು. ಅವಳೊಡನೆ ಕುಳಿತು ಕೇಕ್ ತಿನ್ನುವ ಪ್ಲಾನ್ ಮಾಡಿ ಎರಡು ಪೀಸ್ ಕೇಕನ್ನು ತೆಗೆದುಕೊಂಡು ಹೋಗಿ ಅವಳ ಪಕ್ಕ ಕುಳಿತುಕೊಂಡೆ.
"ಏನ್ ಪುಟ್ಟ ನಿನ್ನ ಹೆಸರು"
"ಸೌಮ್ಯಾ"
"ಹೆಸರಿಗೆ ತಕ್ಕಹಾಗೆ ಸೈಲೆಂಟ್ ಆಗಿ ಕುಳಿತಿದ್ದಿಯಾ" ಎಂದೆ ನನ್ನ ಕಡೆ ನೋಡಿ ನಕ್ಕಳು .
"ತಗೋ ಪುಟ್ಟ ಕೇಕ್ ತಿನ್ನು"
"ಬೇಡಾ ಅಣ್ಣಾ"
"ಯಾಕೆ ಪುಟ್ಟ ಕೇಕ್ ಅಂದ್ರೆ ನಿನಗೆ ಇಷ್ಟ ಇಲ್ವಾ ಅಲ್ನೋಡು ನಿನ್ ಫ್ರೆಂಡ್ಸೆಲ್ಲಾ ತಿಂತಿದ್ದಾರೆ"
"ಇಲ್ಲ ಅಣ್ಣಾ ಅವರಿಗೂ ಕೇಕ್ ಅಂದ್ರೆ ಇಷ್ಟ ಇಲ್ಲ. ಡೈಲಿ ನಿಮ್ಮ ತರಾನೆ ನಾಲ್ಕೈದು ಜನ ಬರ್ತಾರೆ ಕೇಕ್ ಕಟ್ ಮಾಡ್ತಾರೆ ಹೊರಟು ಹೋಗ್ತಾರೆ. ವಾರ್ಡನ್ ಅಕ್ಕ ಹೇಳಿದ್ದಾಳೆ ಬರೋ ಜನಗಳಿಗೆ ಬೇಜಾರು ಮಾಡಬೇಡಿ, ಅವರ ಬಳಿ ಹಠ ಮಾಡಬೇಡಿ,ನಮ್ಮನ್ನ ಇದ್ದಾರೋ ಇಲ್ವೋ ಅಂತ ವಿಚಾರಿಸಿಕೊಳ್ಳೋಕೆ ಈ ಪ್ರಪಂಚದಲ್ಲಿ ಯಾರು ಇಲ್ಲ. ಅಂತಹುದರಲ್ಲಿ ಅವರಾದ್ರು ಬಂದು ತಮ್ಮ ಬರ್ತ್ ಡೇ ಆಚರಿಸಿಕೊಳ್ತಾರಲ್ಲ. ಅಷ್ಟಕ್ಕೇ ಖುಷಿ ಪಡಿ ಅಂತ ಹೇಳಿದ್ದಾಳೆ".
ಇಷ್ಟೆಲ್ಲಾ ಕೇಳಿ ಮುಂದೇನು ಮಾತನಾಡಬೇಕೋ ತಿಳಿಯದೆ ಮಂಕಾಗಿ ಕುಳಿತ್ತಿದ್ದೆ. ಪುಟ್ಟ ಹುಡುಗಿಯ ಬಾಯಲ್ಲಿ ಭಾರವಾದ ಮಾತುಗಳು ನನ್ನನ್ನು ಮತ್ತಷ್ಟು ಮೌನಕ್ಕೆ ನೂಕಿತ್ತು.
"ಅಣ್ಣಾ ನೀವು ಬೇಜಾರು ಮಾಡ್ಕೋಬೇಡಿ ನಾನು ಕೇಕ್ ತಿಂತಿನಿ" ಎಂದು ಕೇಕ್ ತೆಗೆದುಕೊಂಡು ಗೆಳತಿಯರ ಗುಂಪಿಗೆ ಓಡಿಹೋದಳು.
3. ಅನುಕರಣೆ
ವಾರದ ಹಿಂದೆ ಮನೆಯ ಹಿರಿಯರನ್ನು ಆಶ್ರಮಕ್ಕೆ ಸೇರಿಸಿ ಬಂದಿದ್ದ ಗಂಡ ಹೆಂಡತಿ ಇಬ್ಬರೂ ಆಶ್ರಮದ ವಿಳಾಸ ಬರೆದು ಇಟ್ಟಿದ್ದ ಪುಸ್ತಕದ ಹುಡುಕಾಟದಲ್ಲಿದ್ದರು. ಆ ವಿಷಯ ತಿಳಿದ 12ನೇ ವಯಸ್ಸಿನ ಅವರ ಮಗ ತಾನು ಜತನವಾಗಿ ಬೀರುವಿನಲ್ಲಿ ತೆಗೆದು ಇರಿಸಿಕೊಂಡಿದ್ದ ಪುಸ್ತಕವನ್ನ ಹೊರಗೆ ತೆಗೆದ. ಅದನ್ನು ನೋಡಿದ ತಂದೆ ಆಶ್ಚರ್ಯದಿಂದ ಯಾಕಪ್ಪಾ ಈ ಪುಸ್ತಕ ಎತ್ತಿಟ್ಟುಕೊಂಡೆ? ಅಂತ ಪ್ರಶ್ನೆ ಮಾಡಿದರು. ಅವರ ಮುಖ ನೋಡಿದ ಮಗ, ಮುಂದೆ ನಿಮಗೆ ವಯಸ್ಸಾದಾಗ ನಾನು ನಿಮ್ಮನ್ನ ಆಶ್ರಮಕ್ಕೆ ಸೇರಿಸಲು ವಿಳಾಸ ಬೇಕಾಗುತ್ತಲ್ಲಪ್ಪ, ನೀವು ಹೆತ್ತವರನ್ನು ಸೇರಿಸಿದ್ದೀರ ಅಂದರೆ ಅದು ಒಳ್ಳೆಯ ಆಶ್ರಮವೇ ಆಗಿರಬೇಕು. ಈ ಪುಸ್ತಕ ಇದ್ದರೆ ನಾನು ಮುಂದೆ ಒಳ್ಳೆಯ ಆಶ್ರಮವನ್ನು ಹುಡುಕುವ ಕಷ್ಟ ತಪ್ಪುತ್ತದಲ್ಲ ಅದಕ್ಕೆ ಭವಿಷ್ಯದ ಸಹಾಯಕ್ಕೆ ಬೇಕು ಅಂತ ಎತ್ತಿಟ್ಟೆ ಅಂದ. ಹೆತ್ತವರ ಮಾತು ಮೌನವಾಗಿತ್ತು. ಅವರ ಕಾರ್ಯ ಮಾತ್ರ ಅನುಕರಣೆಗೆ ಸಿದ್ಧವಾಗಿತ್ತು.
ಎಲ್ಲರಿಗೂ ಅಭಿನಂದನೆಗಳು. ತಮ್ಮ ಸಾಹಿತ್ಯ ಸೇವೆ ಕನ್ನಡವನ್ನು ಬೆಳಗಲಿ. ಇನ್ನಷ್ಟು ಸಾಹಿತ್ಯ ಕಾರ್ಯಕ್ರಮ ಮತ್ತು ಸ್ಪರ್ಧೆಗಳಿಗಾಗಿ ನಮ್ಮ ತಂಡವನ್ನು ಹಿಂಬಾಲಿಸಿ..
ವಾಟ್ಸಪ್ : https://chat.whatsapp.com/KyRJdvj4ZFAIY8Wkuk0BQK
ಇನ್ನ್ಟಾಗ್ರಾಮ್ : https://instagram.com/avva_pustakaalaya?igshid=YmMyMTA2M2Y=
ಫೇಸ್ಬುಕ್ : 1). https://www.facebook.com/groups/3344469948953030/?ref=share
ಇನ್ನ್ಟಾಗ್ರಾಮ್ : https://instagram.com/avva_pustakaalaya?igshid=YmMyMTA2M2Y=
ಫೇಸ್ಬುಕ್ : 1). https://www.facebook.com/groups/3344469948953030/?ref=share
ಯೂಟ್ಯೂಬ್ : https://youtube.com/channel/UCEvSlHKHjYmcVln8QN-MEpw
ಬ್ಲಾಗ್ : avvapustakaalaya.blogspot.com
ಟೆಲಿಗ್ರಾಮ್ : https://t.me/kannadanalikali
ಪ್ರತಿಲಿಪಿ : https://pratilipi.page.link/YHYHtdYJ2UmCuyuq9
ಕ್ಲಬ್ ಹೌಸ್ : https://bit.ly/3wEPkMx
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ