ನಿಮ್ಮಲ್ಲಿ ನಾನೂ ಒಬ್ಬಳು
ಆಸ್ಪತ್ರೆಯಲ್ಲಿ ಪುಟ್ಟ ಮಗುವಿನ ಚೀರಾಟವನ್ನು ಸುಮಾರು ಒಂದು ಗಂಟೆ ಕೇಳಿದ ಮನಸ್ಸು ಮಗುವನ್ನು ಹುಡುಕುತ್ತ ಹೊರಟಿತು. ಒಂದು ಬೆಡ್ ನ ಮೇಲೆ ದಾದಿಯ ಮಡಿಲಲ್ಲಿ ಹಾಲಿನ ಬಾಟಲಿಯನ್ನು ಬಾಯಿಯಲ್ಲಿ ಹಿಡಿದು ಒಂದೇ ಸಮನೆ ಅಳುತ್ತಿತ್ತು.ಹತ್ತಿರಕ್ಕೆ ಹೋದಂತೆಲ್ಲ ಅಯ್ಯೋ ಪಾಪ ಎಂಬ ಮಾತುಗಳು...!!! ಸಮೀಪಿಸಿದೆ....., ಮುದ್ದು ಮುಖದ ಒಂದು ದಿನದ ಹೆಣ್ಣು ಮಗು....!! ನೋಡಿದ ತಕ್ಷಣವೇ ಮುದ್ದಾಡುವ ಅಂದ..!!
ಮಗುವಿನ ಅಮ್ಮ ....? ಅಂದೆ
ದಾದಿ ಮೌನವಾಗಿಯೇ ಇದ್ದರು..!! ಅಕ್ಕ-ಪಕ್ಕದವರು ಕಥೆ ಹೇಳ ತೊಡಗಿದರು...!!
ನಿನ್ನೆ ಇಷ್ಟೊತ್ತಿಗಿನ್ನೂ ಇಲ್ಲೆ ಮಲಗಿದಳು, ಮಗುವಿಗೆ ಹಾಲು ಕುಡಿಸುತ್ತ ಇದ್ದಳು, ಇದು ಹೆಣ್ಣು ಮಗು ಅಂತ ಕೇಳಿದ ಕೂಡಲೇ ಉಸಿರು ಮೇಲೆ ಏಳೆಯೋಕೆ ಶುರುಮಡಿದಳು......!!! ಕೂಡಲೇ ಆಂಬ್ಯುಲೆನ್ಸ್ ನಲ್ಲಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದರು.ದಾರಿ ಮಧ್ಯೆಯೇ ತೀರಿಕೊಂಡಳಂತೆ.
ಆಕೆಗೆ ಮೂರು ಹೆಣ್ಣು ಮಕ್ಕಳು ಈ ಮಗುವೂ ಸೇರಿ ,ಆಕೆಯ ಗಂಡ ಈ ಬಾರಿ ಹೆಣ್ಣು ಮಗುವಾದರೆ ಮನೆಗೆ ಬರಬೇಡ ಅಂದಿದನಂತೆ.....!!! ಮನಸು ಏನು ತಿಳಿದುಕೊಳ್ಳತ್ತ ಪಾಪ ಉಸಿರೇ ಬಿಟ್ಟಳು....!!!!
ಕಣ್ಣ ಹನಿಗಳು ಈ ಮಗುವಿಗೆ ಆಸರೆ...??? ಏನಲೂ
ದಾದಿ ಸದ್ಯಕ್ಕೆ ನಾವೇ..!!. ಅವರು ಈ ಮಗುವನ್ನು ಬೇಡ ಎಂದು ಇಲ್ಲೇ ಬಿಟ್ಟು ಹೋಗಿದ್ದಾರೆ...!!!.ಎಷ್ಟೊಂದು ಜನ ಮಕ್ಕಳ ಆಸೆಯಿಂದ ಇದ್ದರೆ ,ಅವರ ಮಡಿಲನ್ನು ಈ ಕಂದಮ್ಮ ತುಂಬುತ್ತಳೆ ಎಂದರು.
ಮೊದಲ ಬಾರಿಗೆ ಒಂದು ದಿನದ ಮಗುವ ನೋಡಿ ಮಡಿಲಲ್ಲಿ ಆಡಿಸುವ ಆಸೆಯಾಗಿ,ದಾದಿಯನ್ನು ಕೇಳಿ ಮಗುವನ್ನು ಸುಮಾರು ಅರ್ಧ ತಾಸು ಮಡಿಲಲ್ಲಿ ಮಲಗಿಸಿಕೊಂಡು ಮುದ್ದಾಡಿದೆ.
ನಾವು 21ನೇ ಶತಮಾನದಲ್ಲಿ ಇದ್ದೇವೆ. ತಂತ್ರಜ್ಞಾನ,ಅನ್ವೇಷಣೆ ಹೀಗೆ ಮುಂದುವರೆಯುತ್ತಿದ್ದೇವೆ... ಆದರೆ, ನಾವು ಬದಲಾಗುತ್ತಿಲ್ಲ ಬದಲಿಗೆ ಬದಲಾಯಿಸುತ್ತಿದ್ದೇವೆ.
ತನ್ನನ್ನು ಹೆರುವ ತಾಯಿಯು ಕೂಡ ಹೆಣ್ಣು ಎಂಬುದರ ಅರಿವಿಲ್ಲದೆ ಮನುಷ್ಯ ಈ ರೀತಿಯ ಕೃತ್ಯಗಳನ್ನು ಎಸಗುತ್ತಾನೆ. ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಪುಸ್ತಕಗಳಲ್ಲಿ , ಪತ್ರಿಕೆಗಳಲ್ಲಿ ಹಾಗೂ ಬೀದಿ ನಾಟಕಗಳ ಮೂಲಕ ಅರಿವು ಮಾಡಿಸಬಹುದು. ಅದರೆ ಮನುಷ್ಯ ಅರ್ಥ ಮಾಡಿಕೊಳ್ಳಬೇಕು ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ, ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ|| ( ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ).
- ಪ್ರಿಯ ಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ