ಅವ್ವ ಪುಸ್ತಕಲಯ ಸಾಹಿತ್ಯ ಬಳಗವು ದಿ. ನರಸಯ್ಯ ಅವರ ಸ್ಮರಣಾರ್ಥ ಕೊಡಮಾಡುವ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2023 ಫಲಿತಾಂಶ ಈ ಕೆಳಗಿನಂತಿದೆ.
ಅಹರ್ನಿಶಿ ಪ್ರಕಾಶನದ ಫಾತಿಮಾ ರಲಿಯಾ ಅವರು ಬರೆದಿರುವ "ಕಡಲು ನೋಡಲು ಹೋದವಳು" ಪ್ರಬಂಧ ಸಂಕಲನಕ್ಕೆ ಈ ವರ್ಷದ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ದೊರಕಿದೆ.
ಸಂತೋಷಕುಮಾರ ಮೆಹೆಂದಳೆ ಅವರ "ವೈಜಯಂತಿಪುರ" ಕಾದಂಬರಿ, ಚೈತ್ರಾ ಶಿವಯೋಗಿಮಠ ಅವರ "ಪೆಟ್ರಿಕೋರ್" ಕವನಸಂಕಲನ, ಗಾಯತ್ರಿರಾಜ್ ಅವರ "ಟ್ರಾಯ್" ಕಾದಂಬರಿ, ಮುನವ್ವರ್ ಜೋಗಿಬೆಟ್ಟು ಅವರ "ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್" ಕಥಾಸಂಕಲನ ಕೃತಿಗಳು ಈ ವರ್ಷದ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾಗಿವೆ.
ಲೇಖಕ, ವಿಮರ್ಶಕರಾದ ಮಹೇಶ ಅರಬಳ್ಳಿ ಅವರು ಕೃತಿಗಳ ಆಯ್ಕೆಯಲ್ಲಿ ತೀರ್ಪುಗಾರರಾಗಿದ್ದರು.
ಐದು ಕೃತಿಯ ಲೇಖಕರಿಗೆ 2024ರ ಜನೆವರಿ ತಿಂಗಳಲ್ಲಿ ನಡೆಯುವ ಅವ್ವ ವಾರ್ಷಿಕೋತ್ಸವದಲ್ಲಿ ಗೌರವಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ avvapustakaalaya@gmail.com ಗೆ ಬರೆಯಿರಿ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ