ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

2021ರ ಅವ್ವ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ - ಅವ್ವ ಪುಸ್ತಕಾಲಯ

ಕುಣಿಗಲ್ ತಾಲ್ಲೂಕಿನ   ರೈತ  ಶ್ರೀಮಾನ್ ಲೇ. ನರಸಯ್ಯ  ಅವರ ಸ್ಮರಣಾರ್ಥ  ಅವ್ವ ಪುಸ್ತಕಾಲಯ  ಕೊಡುವ  ಅವ್ವ ಪ್ರಶಸ್ತಿ 2021 ರ ವಿಜೇತರ ಪಟ್ಟಿ ಬಿಡುಗಡೆಯಾಗಿದೆ. ನಾಡಿನಾದ್ಯಂತ ಲೇಖಕರಿಂದ  'ಅವ್ವ' ಸೃಜನಶೀಲ ಸಾಹಿತ್ಯ ಪ್ರಶಸ್ತಿ - 2021  ಕ್ಕೆ ಸುಮಾರು 75 ಕ್ಕೂ ಹೆಚ್ಚು ಕೃತಿಗಳು ಬಂದಿದ್ದವು. ಅವುಗಳಲ್ಲಿ ಸೃಜನಶೀಲವೆನಿಸುವ ಒಂದಷ್ಟು ಕೃತಿಗಳನ್ನು ತೀರ್ಪುಗಾರರಾಗಿ  ಡಾ. ನೇತ್ರಾವತಿ ಹರಿಪ್ರಸಾದ್  (ಪ್ರಾಧ್ಯಾಪಕರು, ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು) ಅವರು ಆಯ್ಕೆ ಮಾಡಿದ್ದರು. ಅಂತಿಮ ಸುತ್ತಿನಲ್ಲಿ ಒಟ್ಟು ಏಳು ಕೃತಿಗಳಿಗೆ ಅವ್ವ ಪುರಸ್ಕಾರ ಬಹುಮಾನ ಮತ್ತು ಒಂದು ಕೃತಿಗೆ ಅವ್ವ ಪ್ರಶಸ್ತಿ ಘೋಷಿಸಲಾಗಿದೆ. ಶ್ರೀಮತಿ ಶ್ರೀದೇವಿ ಕೆರೆಮನೆ ಅವರ 'ಮೈ ಮುಚ್ಚಲೊಂದು ತುಂಡು ಬಟ್ಟೆ' ಕೃತಿಗೆ 2021ನೇ ಸಾಲಿನ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಮತ್ತು 3000 ರೂಗಳ ಪುಸ್ತಕ ಬಹುಮಾನ ದೊರೆತಿದೆ . ಡಾ. ಪ್ರಿಯಾಂಕ ಎಂ ಜಿ ಅವರ ಅನುಸೃಷ್ಠಿ ಮತ್ತು ಅಕ್ಷಯ ಪಂಡಿತ್ ಅವರ ಬಯಲಲಿ ತೇಲುತ ತಾನು ಕೃತಿಗಳಿಗೆ ಮೆಚ್ಚುಗೆ ಇ ಪ್ರಮಾಣ ಪತ್ರದ ಜೊತೆಗೆ 500 ರೂಗಳ ಪುಸ್ತಕ ಬಹುಮಾನ ಸಿಗಲಿದೆ. ಮತ್ತು ಕೆಳಗಿನ ಐದು ಕೃತಿಗಳಿಗೆ ಸಮಾಧಾನಕರ ಪುಸ್ತಕ ಬಹುಮಾನ ನೀಡಲಾಗುತ್ತದೆ. * ಇಶ್ಖಿನ ಒರತೆಗಳು - ಮುನವ್ವರ್ ಜೋಗಿಬೆಟ್ಟು * ಸು - ಡಾ....

ಅವಳೊಂದು ನಿಗೂಢ ಕವಿತೆ - ಕವಿತೆ - ಅನಂತ ಕುಣಿಗಲ್

ಅವಳೊಂದು ನಿಗೂಢ ಕವಿತೆ ನಗುತ್ತಿದ್ದಳು ಯಾವಾಗಲೂ ಮರೆಮಾಚಿ ಅಳುತ್ತಿದ್ದಳು ಹನಿ ನೀರಿನ ಸದ್ಧಾಗದಂತೆ ಮೆಲ್ಲಗೆ ರಚ್ಚೆ ಹಿಡಿಯುತ್ತಿದ್ದಳು ಹಳೆ ನೆನಪುಗಳನ್ನು ಕೆದಕಿದಾಗ! ತುಂಬಾ ನೊಂದಿದ್ದಳು ಜಗತ್ತಿನ ಪರಿವೆಯಿಲ್ಲದೆ ಯಾಂತ್ರಿಕವಾಗಿ ಬದುಕುತ್ತಿದ್ದಳು ಅಪ್ಪ-ಅಮ್ಮ-ಗೆಳತಿಯರ ಗೊಡವೆಯೇ ಇರಲಿಲ್ಲ ಎಲ್ಲವೂ ಇದ್ದೂ.. ಇಲ್ಲದಂತಾಗಿತ್ತು ಅವಳ ದಿನಗಳು ಅದೊಂದು ಸ್ಪರ್ಶವಾಯಿತು ಪುಸ್ತಕಗಳ ದರ್ಶನವಾಯಿತು ಅವಳಲ್ಲಿ ಹೊಸ ಚಿಗುರು ಬೇರು ಬಿಟ್ಟಿತು ನಿಜವಾಗಿಯೂ ನಗಲು ಶುರುಮಾಡಿದಳು ಜಗತ್ತು ಬೇರೆಯದಾಗಿ ಕಂಡಿತು ಬದುಕು ಇನ್ನೂ ಬೇಕೆನಿಸಿತು ಈಗ ಎಲ್ಲರೊಂದಿಗೆ ಬೆರೆಯುತ್ತಾಳೆ ಓದುತ್ತಾಳೆ, ಹಾಡುತ್ತಾಳೆ, ಕುಣಿಯುತ್ತಾಳೆ ಉಲ್ಲಾಸದಿಂದ ನನ್ನ ಮುದ್ದಿಸುತ್ತಾಳೆ ಬೇಸರವಾದಾಗ ಮಾತು ಬಿಟ್ಟು ಮಾತನಾಡದಿದ್ದರೆ ಚುಚ್ಚುತ್ತಾಳೆ ಮಾತು ಹೆಚ್ಚಾದಾಗ ಮಲಗುತ್ತಾಳೆ ಯಾವಾಗಲೂ ತಿನ್ನುತ್ತಲೇ ಇರುತ್ತಾಳೆ ಅವಳೆಂದರೆ ನನಗೇನೋ ಉತ್ಸಾಹ ಹೊಸ ಚೈತನ್ಯ ತುಂಬಿದ ನಕ್ಷತ್ರದ ಹೊಳಪು ಎದೆಗೂಡಲ್ಲಿ ಯಾವಾಗಲೂ ಗುನುಗುತ್ತಾಳೆ ನಿಗೂಢ ಕವಿತೆಯಾಗಿ ಕಾಡುತ್ತಾಳೆ ಈಗೀಗ ಜೀವಿಸುವುದನ್ನು ಕಲಿತ್ತಿದ್ದಾಳೆ ನನಗೂ ಹೇಳಿಕೊಡುತ್ತಾಳೆ ಕವಿತೆ ಬರೆಯುವುದನ್ನು ಮತ್ತು ಒಂಟಿಯಾಗಿ ಜೀವಿಸುವುದನ್ನು!                           #ಅನಂತ ಕುಣಿಗಲ್ ...

ಎಲ್ಲಿದೆ ಅಂತ್ಯ ಇದಕ್ಕೆಲ್ಲಾ - ಕವಿತೆ - ಮೇಘನ ಕರಿಸೋಮನಗೌಡ್ರ

ಎಲ್ಲಿಯ ಅಂತ್ಯ ಇದಕ್ಕೆಲ್ಲಾ??! ಬದುಕುವ ಛಲವಿದೆ  ಬದುಕಲು ಭಯವಾಗುತಿದೆ  ನೋಟ ಬೀರಿದೆಲ್ಲೆಡೆ  ಅಪಹರಣದ ಸುದ್ದಿಗಳ ಕೇಳಿ ಕೇಳಿ  ಕಿವಿಗಳೂ ಮಂದವಾಗುತಿವೆ..  ಹೆಣ್ಣು ಹಣ್ಣಾಗುತಿರುವಳೇನೋ  ತಿಂದೆಸೆದ ಸಿಪ್ಪೆಯಾಗುತಿರುವಳಲ್ಲ?  ಅಬ್ಬಾ ಅದೆಂಥ ಕೃತ್ಯಗಳು  ಎಳೆಕೂಸುಗಳ ತೋಯ್ದು ಹೋದ ಧ್ವನಿಗೆ ಬಗ್ಗದ ಪಾಪಿಗಳಿರಾ..  ಅಮ್ಮಾ ಎಂದು ತೊದಲ್ನುಡಿವ  ಹಸುಳೆ ಕಾಪಾಡಿ,,, ಎನ್ನುತಿರಲು ಮಾನವೀಯತೆ ಮೂಲೆ ಸೇರಿತೆ? ಇನ್ನೂ ಬಲಗೊಳ್ಳದ  ಎಳೆ ಮೂಳೆಗಳು ವಿಲ ವಿಲ ಎನ್ನುತಿವೆ  ಮುಗಿಬಿದ್ದ ಬಿಸಿರಕ್ತಕ್ಕೂ ತೋಚದೆ ಹೋಯಿತೆ. ಅತ್ತ ಅತಂತ್ರಗೊಂಡ ಆತ್ಮಗಳೆ ಬಡದಾಡುತ್ತಿದ್ದರೆ, ಇತ್ತ ಕಂಡು ಕಾಣರಿಯದೇ  ಹಿಂದೇಟು ಹಾಕುವ ಸಮಾಜ,  ಮೇಣದ ಬತ್ತಿಗೂ ಬೇಸರ ತಂದಿದೆ  ಸತ್ವವಿಲ್ಲದ ಹೋರಾಟ ನೋಡಿ..  ಜಗಮುಖವ ನೋಡಲು  ಹೊಸ್ತಿಲೆ ದಿಗ್ಬಂಧನ ಹಾಕುತಿದೆ  ಸಂಸ್ಕಾರದ ಮೇಲೆ ಲಗ್ಗೆ ಇಟ್ಟು  ಜೊಲ್ಲು ಸುರಿಸುತ ನಿಂತ  ಕಾಮುಕರ ದಂಡನು ನೋಡಿ..  ಮಹಾಯುದ್ಧಗಳು ನಡೆದರೂ ಹೆಣ್ಣಿಗೆ ಕಾವಲಿತ್ತೆನೋ, ಆದರಿಂದು ಕಿರುಚಾಟ  ಮುಗಿಲೇರಿದರೂ ಕುರುಡರಾಗುವುದ  ನೋಡಿ ಬಿಕ್ಕಿಸುತಿದೆ ಮನ..  ಜಗವ ಕಂಡಿರದ ಹೆಣ್ಗೂಸೂ ಕಂಕುಳ ಹುರಿಯನ್ನೆ  ಬಿಗಿದುಕೊಳ್ಳುತ್ತಿದೆ  ಪಾಪಿಗಳಿಗೆ ಬಲಿಯಾಗದಿರಲು ಇನ್ನಾದರೂ ರಕ್ಷಣೆ ಕ...

ತ್ಯಾಪೆ ಹಾಕುವವರು ಬೇಕಾಗಿದ್ದಾರೆ - ಕವಿತೆ - ಅನಂತ ಕುಣಿಗಲ್

ತ್ಯಾಪೆ ಹಾಕುವವರು ಬೇಕಾಗಿದ್ದಾರೆ            - ಅನಂತ ಕುಣಿಗಲ್ ದಾರಿ ಯಾವುದು ನದಿ ಹರಿವ ದಾರಿ ಯಾವುದು?? ಗೊತ್ತು ಗುರಿ ಇಲ್ಲದ ಕಂಗಳಿಗೂ ಅತ್ತು.. ಅತ್ತು.. ಈಗ ಹರಿವ ಆಸೆಯಾಗಿದೆ! ದೂರದಲ್ಲಿನ ತೀರ ಸೇರುವ ಬಯಕೆಯೊಂದು ಬಸುರಾಗಿದೆ ದಿನವೂ ಎಷ್ಟು ಚೆಂದ ಶುಭೋದಯ ಶುಭರಾತ್ರಿ ಘಳಿಗೆ ಲೆಕ್ಕವೇ ಇಲ್ಲ ಶುಭಾಷಯಗಳಿಗೆ ಈಗ ನನಗೆ ಬೆಳಕಾಗುವುದೇ ಬೇಡ ಆಕೆಗೆ ಕತ್ತಲೆಂದರೆ ಬಲು ಕೋಪ ಬೆಳಕಿನಲ್ಲಲ್ಲವೇ ಹೂಗಳು ಅರಳುವುದು! ಕತ್ತಲಿನಲ್ಲಲ್ಲವೇ ಹೂಗಳು ಹಾಡುವುದು? ಜಗಳಕ್ಕೆ ಕೊನೆಯೇ ಇರಲಿಲ್ಲ ಆದರೆ, ಗರ್ವಕ್ಕೂ ಬೇಸರ ಬಂತಲ್ಲಾ.. ಅದಕ್ಕೆ, ಆವ ಸಂಬಂಧಗಳೂ ರುಚಿಸುತ್ತಿಲ್ಲ! ಇನ್ನೆಷ್ಟು ದಿನ ಬೇಕೋ..? ಮೊದಲಿನಂತಾಗಲು.. ಬದುಕಿಗಿಂತ ಸಾವು ಎಷ್ಟು ಹತ್ತಿರ ಒಂದೇ ಕಟು ಮಾತಿಗೆ ಎದೆಯೊಡೆದು ಚೂರಾಗುವುದು ನೋವುಗಳಿಂದ ಹಲ್ಲೆಯಾಗುವುದು ಎದೆಗಾರನ ಮೇಲೆ ಕರುಣೆಯಿಲ್ಲದೆ ಗುಡುಗುವವು ಎಲ್ಲವೂ ಸಾಕಾಗಿದೆ ಬದುಕು ಶೂನ್ಯವಾಗಿ ಸಾವನ್ನೂ ಸಂಭ್ರವಿಸುವಂತೆ ಒಲವು ಬಲವಂತಪಡಿಸಿದೆ ಇಂಥಾ ಹತ್ತಾರು ಅಲೆಗಳಿಗೆ ಸಿಕ್ಕಿ, ಇನ್ನೇನು ಬೇಡವಾಗಿದೆ ತ್ಯಾಪೆ ಹಾಕುವವರು ಬೇಕಾಗಿದ್ದಾರೆ ಹೃದಯವನ್ನು ನಿಮಗ್ಯಾರಾದರೂ ಸಿಕ್ಕರೆ.. ನನ್ನ ವಿಳಾಸ ಕೊಡಿ ಮನೆಯ ದೀಪ ಹೊತ್ತಿಸುವ ಮಾಯಾವಿಗಳು ಬೇಕಾಗಿದ್ದಾರೆ! ಶುಭೋದಯ 💐🙏🥰💐

ಹಳೇ ಪ್ರೇಯಸಿಗೊಂದು ನಿವೇದನೆ - ಕವಿತೆ ಅನಂತ ಕುಣಿಗಲ್

ಹಳೇ ಪ್ರೇಯಸಿಗೊಂದು ನಿವೇದನೆ ಗೆಳತಿ! ಕ್ಷಮಿಸು.. ಪ್ರೇಯಸಿ ಎನ್ನಲು ನನಗೆ ಬಾಯಿ ಬರುತ್ತಿಲ್ಲ ಈಗಿರುವವಳು ನಿನಗಿಂತ ಚೆಂದ ಅಂದದಲ್ಲಿ ಮತ್ತು ಮಾತಿನಲ್ಲಿ ಮಾತ್ರ ನೀನೆಂದೂ ಎರಡಾಡಿದವಳಲ್ಲ ಆದರೆ, ಅವಳು ಕ್ಷಣಕ್ಷಣಕ್ಕೂ.. ಪದಗಳನ್ನು ಅಲಂಕರಿಸಿ ಬಾಣಬಿಡುತ್ತಾಳೆ ಒಮ್ಮೊಮ್ಮೆ ಎದೆ ಬಿರಿದು ಒಡೆಯುತ್ತದೆ ನಾನು ಮೋಸಹೋಗಿದ್ದೇನೆ ನೀನಾದರೂ ನೇವರಿಸುತ್ತೀ.. ಎಂದು ನಿನ್ನ ಬಳಿ ನಿವೇದಿಸುತ್ತಿದ್ದೇನೆ ನಿನ್ನ ಅಕ್ಕರೆಯ ಮಾತುಗಳು ನನಗೆ ಪುನರ್ಜನ್ಮ ನೀಡಬಲ್ಲವು ತುಟಿಬಿಚ್ಚಿ ಮಾತನಾಡು ದಯವಿಟ್ಟು ಕೇಳುವೆ ಕಣ್ಮುಚ್ಚಿ ಮನ ಕೊಟ್ಟು ನೀನಾಗಿಯೇ ಪೀಡಿಸುತ್ತಿದ್ದೆ ಆಗ ನನ್ನ ಬಳಿ ಮಾತುಗಳಿರಲಿಲ್ಲ ಈಗ ನಾನೇ ಒದ್ದಾಡುತ್ತಿದ್ದೇನೆ ಕಾರಣ ಗಂಟಲು ಕಟ್ಟಿದೆ ಹೇಳಬೇಕಾದ್ದು ಬಹಳ ಇದೆ ಪಶ್ಚಾತ್ತಾಪದ ಅಲೆಯಲ್ಲಿ ಮುಳುಗಿದ್ದೇನೆ ನೀನೇ ಕಾಪಾಡಬೇಕಿದೆ ನಾನು ಇವಳಲ್ಲಿ ಹೊಸ ಪ್ರೇಮ ಕಂಡೆ ಹಾಗೆಯೇ.. ನಾ ಸುಲಭವಾಗಿ ಅರಿತೆ ನೀನೇ ಬೇರೆ, ಈಕೆಯೇ ಬೇರೆ ನನಗೆ ಸಿಕ್ಕ ಇಬ್ಬರ ಪ್ರೇಮ ಒಂದೇಯಾದರೂ ದಕ್ಕಿದ ಪರಿಗಳು ಬೇರೆ ಬೇರೆ ಬಹುಶಃ ನನ್ನದೇ ತಪ್ಪಿರಬೇಕು ನನ್ನ ದುಡುಕುತನ ನನ್ನನ್ನು ಕೊಲ್ಲುತ್ತಿದೆ ಅವಳಿಗೀಗ ಪೂರ್ತಿ ಶರಣಾಗಿದ್ದೇನೆ ಅದಕ್ಕೆ ಆಗಾಗ ನೀನು ನೆನಪಾಗ್ತಿ ನಿನಗೂ ನಾನು ಆಗುತ್ತೀನೇನೋ.. ಅಲ್ಲವೇ? ನೀನು ಊಟ ಮಾಡಿಸುತ್ತಿದ್ದೆ ಮಡಿಲಲ್ಲಿ ಮಲಗಿಸಿ ತೂಗಿಸುತ್ತಿದ್ದೆ ಖರ್ಚಿಗೆ ಹಣವಿಲ್ಲದಾಗ ಪರ್ಸನ್ನೇ ಕೊ...

ಅವ್ವ ಪ್ರಶಸ್ತಿ 2021 ಕಿರುಪಟ್ಟಿ ಪ್ರಕಟ - ಅವ್ವ ಪುಸ್ತಕಾಲಯ

ಕುಣಿಗಲ್ ತಾಲ್ಲೂಕಿನ ರೈತ ಶ್ರೀಮಾನ್ ಲೇ. ನರಸಯ್ಯ ಅವರ ಸ್ಮರಣಾರ್ಥ ಅವ್ವ ಪುಸ್ತಕಾಲಯ ಕೊಡುವ ಅವ್ವ ಪ್ರಶಸ್ತಿ 2021 ರ ಕಿರುಪಟ್ಟಿ ಬಿಡುಗಡೆಯಾಗಿದೆ. ನಾಡಿನಾದ್ಯಂತ ಲೇಖಕರಿಂದ 'ಅವ್ವ' ಸೃಜನಶೀಲ ಸಾಹಿತ್ಯ ಪ್ರಶಸ್ತಿ - 2021 ಕ್ಕೆ ಸುಮಾರು 75 ಕ್ಕೂ ಹೆಚ್ಚು ಕೃತಿಗಳು ಬಂದಿದ್ದವು. ಅವುಗಳಲ್ಲಿ ಸೃಜನಶೀಲವೆನಿಸುವ ಒಂದಷ್ಟು ಕೃತಿಗಳನ್ನು ತೀರ್ಪುಗಾರರಾಗಿ ಡಾ. ನೇತ್ರಾವತಿ ಹರಿಪ್ರಸಾದ್ (ಪ್ರಾಧ್ಯಾಪಕರು, ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ. ಯಾವುದೇ ಕ್ರಮಾಂಕವಿಲ್ಲದೆ ಕೃತಿ ಮತ್ತು ಲೇಖಕರ ಹೆಸರು : * ತೇಜಸ್ವಿ ನೆನಪಲ್ಲಿ ಅಲ್ಮೆರಾ ರಿಪೇರಿ - ಮಲ್ಲಿಕಾರ್ಜುನ ಹೊಸಪಾಳ್ಯ * ಕಂದೀಲಿನ ಕುಡಿ - ರೇಣುಕಾ ಕೋಡಗುಂಟಿ * ಅರಿವಿನ ಬೆಳಕು - ಸಂತೋಷ್ ರಾವ್ ಪೆರ್ಮುಡ * ಪ್ರಕೃತಿ - ಭಾರ್ಗವ ಎ ಆರ್ * ಸೂರ್ಯನಿಗೊಂದು ಗೂಡಗು - ಕೋಳಾಲಪ್ಪ ಹೆಚ್ * ಮೌನ ಧ್ವನಿಸಿತು - ದಿವ್ಯಾ ಶ್ರೀಧರ್ ರಾವ್ * ತೆರೆದಂತೆ ಹಾದಿ - ಜಯಶ್ರೀ ಬಿ ಕದ್ರಿ * ಅನುಸೃಷ್ಠಿ - ಡಾ. ಪ್ರಿಯಾಂಕ ಎಂ ಜಿ * ತಿಳಿದ ನೋಟ - ವಿ ಅರ್ಪಿತ * ಹಳ್ಳದ ದಂಡಿ ಮತ್ತು ಕಳ್ಳಿ ಸಾಲು - ಧೀರೇಂದ್ರ ನಾಗರಹಳ್ಳಿ * ಒಳಿತು ಕೆಡುಕುಗಳ ಸಂತೆ ಮಾಲ್ ಗಳಲ್ಲಿ ಮಾರಾಟಕ್ಕಿದೆ - ರವಿಕುಮಾರ ಜಾಧವ * ಸಾಂವಿ - ಸುರೇಶ ಮದ್ದಾರ * ಬಂಜೆತನ ಬಯಸಿದವಳು - ಎನ್ನೇಬಿ ಮೊಗ್ರಾಲ್ ಪುತ್ತೂರು * ಮೈ ಮುಚ್ಚಿಲೊಂದು ತುಂಡು ಬಟ್ಟ...

ಬಾಲ ಪ್ರಪಂಚ - ಕಥೆ - ಚೈತ್ರ ಗೋವರ್ಧನ್ ಬೆಂಗಳೂರು

ಬಾಲ ಪ್ರಪಂಚ      ಒಂದು ಹೆಸರಾಂತ ನಗರದಲ್ಲಿ ಬಾಲಪ್ರಪಂಚ ಎಂಬ ಒಂದು ಪುಟ್ಟ ಸಂಸ್ಥೆ ಇರುತ್ತದೆ. ಈ ಬಾಲ ಪ್ರಪಂಚದ ವಿಶೇಷತೆ ಏನೆಂದರೆ ಅನಾಥ ಮಕ್ಕಳು,  ಕೆಲವರು ಅನೈತಿಕ ಸಂಬಂಧದಿಂದ ಜನಿಸಿದ, ಬೇಡ ಎಂದು ಬೀದಿಯಲ್ಲಿ ಬಿಟ್ಟು ಹೋದ ಮಕ್ಕಳು, ಇನ್ನು ಕೆಲವರು ತಮ್ಮ ಬಡತನದಿಂದ ಮಕ್ಕಳನ್ನು ಸಾಕಲಾರದವರು ಕೂಡ ಈ ಸಂಸ್ಥೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಈ ಸಂಸ್ಥೆಯ ಮುಖ್ಯಸ್ಥ ಆಪತ್ಭಾಂದವ ಎಂದು. ಇವರಿಗೆ ಸಹಾಯಕರಾಗಿ ನಂಬಿಕೆ, ಪ್ರೀತಿ ಮತ್ತು ವಿಶ್ವಾಸ ಎಂಬ ಮೂವರು ಕೆಲಸ ನಿರ್ವಹಿಸುತ್ತಿದ್ದರು.ಈ ಸಂಸ್ಥೆಯಲ್ಲಿ ಒಟ್ಟಾರೆ ೨೦೦ರಿಂದ ೨೫೦ ಮಕ್ಕಳಿದ್ದರು.  ಬಾಲಪ್ರಪಂಚದ ಮಕ್ಕಳೆಲ್ಲ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬೆಳೆಯುತ್ತಿದ್ದರು. ಇಲ್ಲಿ ಮಕ್ಕಳಿಗೆ ಭಗವದ್ಗೀತೆ, ಕುರಾನ್, ಬೈಬಲ್ ಗ್ರಂಥಗಳ ಬಗ್ಗೆ ಬೋಧನೆ ಕೂಡ ಮಾಡುತಿದ್ದರು. ಅದಲ್ಲದೇ ಮಕ್ಕಳಿಗೆ ಜೀವನದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಹೇಳಿಕೊಡುತ್ತಿದ್ದರು. ಈ ಬಾಲ ಪ್ರಪಂಚದಲ್ಲಿ ಮನರಂಜನೆ ಕಾರ್ಯಕ್ರಮಗಳು ಕೂಡ ನಡೆಯುತಿದ್ದವು. ಆದ್ದರಿಂದಲೇ ಇಲ್ಲಿನ ಮಕ್ಕಳು ಎಲ್ಲರೂ ಜಾತಿ, ಧರ್ಮ, ಭಾಷೆ, ಲಿಂಗ ಭೇದವಿಲ್ಲದೆ ಬೆಳೆಯುತ್ತಿದ್ದರು.  ಹೀಗೆ ಒಂದು ದಿನ ಆಪತ್ಭಾಂದವರು ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರು. ಹೋಗುವ ಮುನ್ನ ನಂಬಿಕೆ, ವಿಶ್ವಾಸ, ಪ್ರೀತಿ ಈ ಮೂವರನ್ನು ಕರೆದು ನಾನು ಮೂರು ದಿನಗಳ ಕಾಲ ಊರಿನಲ್ಲಿ ಇರುವುದಿಲ...

ಈಗ ಆಕೆ ಇರಬೇಕಾಗಿತ್ತು - ಕವಿತೆ - ಲಕ್ಷ್ಮಿ ಬಿ ಕೆ ಬೆಂಗಳೂರು

ಈಗ ಆಕೆ ಇರಬೇಕಾಗಿತ್ತು.. ಸದಾ ನನ್ನ ಮುಖಕಮಲದಲ್ಲಿ ಕುಳಿತು  ಕಣ್ಣ ಕೊಳದೊಳಗೆ ನಿಧಾನವಾಗಿ ಇಳಿದು  ಎದೆಯ ಸುಳಿಯೊಳಗೆ ಸದಾ ಸುಳಿದು  ಹಾಲ್ಜೇನ ಕಡಲೊಳಗೆ ನನ್ನ ಮುಳುಗಿಸಿ ಮೀಯಿಸುತ್ತಿದ್ದ  ಆಕೆ ಈಗ ಇರಬೇಕಾಗಿತ್ತು  ನನ್ನ ಭಾವ ಪದಗಳಿಗೆ ಭಾವಗೀತೆಯಾಗಿ  ನನ್ನ ಕವಿಮನದ ಕಾಡುವ ಕವಿತೆಯಾಗಿ  ನನ್ನ ಬಿಸಿಯುಸಿರಿಗೆ ಚಾಮರವಾಗಿ  ರಾಗ ರಂಗಿನ ಸಂಗೀತದ ಅಲೆಗಳಲಿ ನನ್ನ ತೇಲಿಸುತ  ನಿದ್ದೆ ಬಾರದ ನನ್ನ ಕಂಗಳಿಗೆ ನಿದ್ರಾಮಾತೆಯಾಗಿದ್ದ  ಆಕೆ ಈಗ ಇರಬೇಕಾಗಿತ್ತು  ಹೇಳುವ ಮುನ್ನವೇ ಮನವರಿತು ಬಾಳುತ್ತಿದ್ದವಳು   ಒಂದು ಕಪ್ ಚಹಾದೊಂದಿಗೆ ಬೇಸರವ ಮರೆಸಿ  ನನ್ನ ನೋವ ಹಾಡುಗಳಿಗೆ ನಲಿವಿನಾ ದೀಪವಿರಿಸಿ  ನನ್ನ ಬಾಳ ದಾರಿಯುದ್ದಕ್ಕೂ ಬೆಳಕ ಹಾಸುತ  ಒಲವ ಸಸಿ ಬೆಳೆಸಿದ ಆಕೆ ಈಗ ಇರಬೇಕಾಗಿತ್ತು  ನನ್ನ ಕಾವ್ಯಕ್ಕೆ ಮುನ್ನುಡಿ ಯಾದರೂ  ಬೆನ್ನುಡಿಯಾಗು ಳಿದವಳು  ನನ್ನ ಪ್ರತಿ ಅಕ್ಷರಕ್ಕೂ  ಇಣುಕು ಹಾಕಿ  ಸದ್ದಿಲ್ಲದೆ ತನ್ನ ರೂಪ ಮೂಡಿಸಿ  ನನ್ನ ಕಾವ್ಯದ ಒಳಹೊರಗನ್ನು ಆವರಿಸಿ  ಮೌನವಾಗಿ ಮರೆಯಾದ  ಆಕೆ ಈಗ ಇರಬೇಕಾಗಿತ್ತು  ಎಷ್ಟು ಬರೆದರು ಬರೆಯಿಸಿಕೊಳ್ಳುವ ಪ್ರೀತಿಯ ಸೆಲೆ  ತನ್ನ ಮರೆತು ನನ್ನ ಮೆರೆಸಿದ ಪ್ರೇಮದ ಕಲೆ  ಸದಾ ತನ್ನ ಗುಂಗಿನಲ್ಲೆ ನನ್ನ ಹಿಡಿದಿಡುವ ಒಲವಿನ ಬಲೆ ...

ಹೀಗೊಂದು ವಿಷಾದ - ಕವಿತೆ - ಸಿದ್ಧುಮೂರ್ತಿ ತುಮಕೂರು

ಹೀಗೊಂದು ವಿಷಾದ.. ಹಾಡು ಹಗಲೇ ಕಾರಿರುಳ ಛಾಯೆ ಭಯದ ಬೆನ್ನಿಗೆ ಬದುಕ ಬವಣೆಯ ಭಾರ.. ಹೊತ್ತು ಸಾಗಿದೆ... ಸ್ವಾತಂತ್ರ್ಯದ ಹಾದಿಯಲಿ... ಬಿತ್ತುವ ನೆಲಗಳೀಗ ಬತ್ತಿವೆ,ಬಿರಿದಿವೆ.. ಹಸಿರು ಹುಟ್ಟನು ನುಂಗಿ ಉಳುವ ನೆಲದ ಮೇಲೆ ಮೊಳೆಯುವ ಬೀಜದ ಬದಲು ಹಾಳು ಕಟ್ಟಡಗಳು ತುಂಬಿ ಹಸಿದ ಹೊಟ್ಟೆಗಳ ಅಸಹಾಯ ಹೆಗಲುಗಳ ಬುನಾದಿಯ ಮಾಡಿ... ಶ್ರಮದ ಬಸಿದ ಪಸೆಯ ಉಂಡ ಮಣ್ಣ ಕಣ ಕಣವು ಫಸಲಾಗದೆ ಹುಸಿಯಾಗಿವೆ. ಹಸಿವಿನ ದಾರಿಯ ಬದಿ ಎದೆಯ ಕನಸುಗಳ ಬಗೆದು ಬರಿದು ಮಾಡಿದ ಬದುಕು ಬೀಡು ಬಿಟ್ಟಿದೆ... ಉಳಿದ ಉಸಿರಿಗಾಗಿ... ತನ್ನೊಳಿತಿಗೆ ತಾನು ಅರಿವ ಕುರುಹುಗಳ ತುಳಿದು ಮೌಲ್ಯ ನೆಲೆಗಳ ಅಳಿಸಿ ಮಿಕ್ಕಿ ಮಿಗಿಲಾಗಿ ಕರಗದ ದಾಹ ಮೀರಿ ತಿರುಗಿ ಎರಗುವ ದಾಳಿಗೆ ವಾಸ್ತವದಿ ನಲುಗುವ ಕ್ಷಣ ಮರೆತು ನಡೆಯುತಲಿದೆ... ಒಮ್ಮೆ ಅರಿವುಗಣ್ಣ ತೆರೆದು ನಡೆ ಪಾಪಕೂಪಗಳು ಮುಂದಿವೆ... - ಸಿದ್ದು ಮೂರ್ತಿ ತುಮಕೂರು

ನಾನು ನೋಡಿದ ಪರ್ವ - ಲೇಖನ - ಅನಂತ ಕುಣಿಗಲ್

ನಾನು ನೋಡಿದ ಪರ್ವ " ಕತ್ತಲೆಯನ್ನು ಬೆಳಕು ಹಾಗೂ ಬೆಳಕನ್ನು ಕತ್ತಲೆಯು ನುಂಗಿ, ಜಗತ್ತನ್ನು ಪಾಪಕೃತ್ಯಗಳಿಂದ ತೊಳೆದು, ಹೊಸ ಹೊಳಪನ್ನು ಕೊಟ್ಟ.. ದೀರ್ಘಾಯುಷ್ಯ ಅನುಭವ! "      ವಿಸ್ಮಯಕಾರಿ ಸರಳ ರಂಗಸಜ್ಜಿಕೆ. ಬೆಳಕು ಅಲ್ಲಲ್ಲಿ ಸೋರುತ್ತಿತ್ತು. ಸಂಗೀತ ಮನಕ್ಕೆ ಅಣು ದೂರದಲ್ಲಿತ್ತು. ವಸ್ತ್ರ ವಿನ್ಯಾಸ ಕಣ್ಣಿಗೆ ಕಪ್ಪಾಗಿಯೇ ಇತ್ತು. ಹದಿನೆಂಟರಿಂದ ಅರವತೈದು ವರ್ಷಗಳವರೆಗಿನ ರಂಗ ಕಲಾವಿದರ ಅದಮ್ಯ ಚೈತನ್ಯವನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ಸವಿಯುವುದೆಂದರೆ..  ನಮ್ಮಂಥ ಕಲಾವಿದರಿಗೆ ಅದಕ್ಕಿಂತ ಖುಷಿಯೆಂಬುದು, ಅದ್ಭುತವೆನಿಸಬಹುದಾದದ್ದು ಮತ್ತೇನಾದರೂ ಇದೆ ಎಂದರೆ ಅದು ನಿಜಕ್ಕೂ ನಮ್ಮ ಹೊಗಳಿಕೆಯ ಭಂಡತನ!  " ನಿಜ ಹೇಳೋದ್ರಿಂದ ಏನ್ ಸಿಗುತ್ತೆ? ಭ್ರಮೆ ಕಳೆಯುತ್ತೆ ." ಇಂಥಾ ಸರ್ವಕಾಲಿಕ ಸತ್ಯಗಳನ್ನು ಸಾರುವ ಗಾಂಧಾರಿಯ ಮಾತುಗಳಿಂದ ಶುರುವಾಗಿ, " ಪ್ರತಿಜ್ಞೆಗೆ ಕಾಲದ ಮಿತಿ ಹಾಕದಿರುವುದು ಕೂಡ ಒಂದು ಅದೃಷ್ಟ " ಎಂಬ ಮಾಯಾವಿ ಕೃಷ್ಣನ ಮಾತಿನವರೆಗೂ ಕೂತವರನ್ನು ಎದ್ದೇದಂತೆ ತಡೆದು, ಪ್ರೇಕ್ಷಕರನ್ನು ಪರ್ವದ ಒಂದೊಂದು ಗೌಣ ಪಾತ್ರಗಳನ್ನಾಗಿಸಿಕೊಂಡು, ಅಳಿಸಿ, ನಗಿಸಿ, ಕೆಲವು ತಾತ್ವಿಕತೆಯ ಮಹತ್ವ ಸಾರುವ ಮಹಾರಂಗಪ್ರಯೋಗ "ಪರ್ವ". ಕನ್ನಡ ಸಾಹಿತ್ಯದಲ್ಲಿ ಎಸ್. ಎಲ್ ಭೈರಪ್ಪನವರದು ದೊಡ್ಡ ಹೆಸರು. ಆ ದೊಡ್ಡ ಹೆಸರಿನಿಂದ ರಚಿತವಾದ ಮೇರು ಕೃತಿ ಪರ್ವ. ಆ ಬೃಹತ್ ಕೃತಿಯನ್ನು ...

ಗುರುಭ್ಯೋನಮಃ - ಲೇಖನ - ಅನಂತ ಕುಣಿಗಲ್

ಗುರುಭ್ಯೋನಮಃ ಅವರ್ಯಾರೂ ನನ್ನ ಗುರುಗಳಾಗಿರಲಿಲ್ಲ! ಬದಲಾಗಿ ನನಗೆ ತಂದೆಯಾಗಿ ಹೆಗಲು ಕೊಟ್ಟವರು. ದೇವರ ರೂಪ ಪಡೆದು ನನ್ನ ಸಲುಹಿದವರು. ಲಾಲಿ ತೂಗಿಸುವ ಮೂಲಕ ಬದುಕಿನ ಶಾಂತತೆಯನ್ನು ಹೇಳಿಕೊಡುತ್ತಿದ್ದ ಅಂಗನವಾಡಿಯಿಂದ ಡಿಪ್ಲೋಮಾ ಮುಗಿಸಿ ಸಿನೆಮಾ ರಂಗಕ್ಕೆ ಬಂದು ಆಕ್ಷನ್, ಕಟ್, ಲೆನ್ಸುಗಳ ಬಗ್ಗೆ ತಿಳಿದುಕೊಳ್ಳುವವರೆಗೆ ಸಿಕ್ಕ ಮಾಸ್ತರು, ಶಿಕ್ಷಕರು, ಟೀಚರ್ಸ್, ಲೆಕ್ಚರ್ಸ್ ಎಲ್ಲರೂ ಕೂಡ ಗುರುಗಳೆನ್ನಿಸಿಕೊಳ್ಳದಷ್ಟು ಆಪ್ತವಾಗಿ ನನ್ನೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದರು. ಕ್ಲಾಸಿನಲ್ಲಿ ಹೆಚ್ಚು ತರ್ಲೆ ಮಾಡಿದಾಗ ತಲೆ ಮೇಲೆ ಹೊಡೆದು ಬುದ್ಧಿ ಹೇಳುವುದು ಹಾಗೇ ಎಂದಾದರೂ ಬೇಸರದಿಂದ ತಲೆ ಬಗ್ಗಿಸಿ ಒಬ್ಬನೇ ಕೂತಾಗ ತಂದೆಯಂತೆ ತಲೆ ನೇವರಿಸುತ್ತಾ ನನ್ನ ಕಷ್ಟ ಕೇಳಿ ಕಣ್ಣೀರು ಹಾಕಿ, ನನ್ನ ಕಣ್ಣೀರನ್ನು ವರೆಸಿದ್ದಾರೆ. ಅಂತಹ ಹೃದಯದ ಅನಂತತೆ ಹೊಂದಿರುವ ನನ್ನೆಲ್ಲಾ ಗುರುವೃಂದದ ಪದಾದಿಕಾರಿಗಳಿಗೆ ನನ್ನ ಈ ಲೇಖನ ಕೃತಜ್ಞಾಪೂರ್ಪಕ ಅರ್ಪಣೆ. ಜೀವನದಲ್ಲಿ ನನ್ನಂತೆಯೇ ಗುರುಗಳ ಆಶೀರ್ವಾದ, ಸಹಕಾರ ಹಾಗೂ ಮಾರ್ಗದರ್ಶನ ಪಡೆದುಕೊಂಡಿರುವ ಮತ್ತು ಗುರುಗಳ ಅಗತ್ಯತೆಯೇ ಇಲ್ಲದೆ ಏಕಲವ್ಯನಂತೆ ಬದುಕಿನ ಏಳು-ಬೀಳುಗಳನ್ನೇ ತಮ್ಮ ಗುರುಗಳನ್ನಾಗಿ ಮಾಡಿಕೊಂಡು ಜೀವನ ಗೆಲ್ಲುತ್ತಿರುವ ನನ್ನೆಲ್ಲಾ ಆತ್ಮೀಯರಿಗೂ ಹಾಗೂ ಗುರು ಪರಂಪರೆಯಲ್ಲಿ ಹಗಲಿರುಳು ದುಡಿದು ದೇಶದ ಮೌಲ್ಯುಯುತ ಸಂಪತ್ತನ್ನು ಹೆಚ್ಚಿಸುತ್ತಿರುವ ಮಾರ್ಗದರ್ಶಕರ ಬಳಗಕ್ಕೆ ಶಿಕ್ಷಕರ ...

ನಾನೂ ಅತ್ಯಾಚಾರಿ - ಕವಿತೆ - ದೀಕ್ಷಿತ್ ನಾಯರ್

ನಾನೂ ಅತ್ಯಾಚಾರಿ ಅತ್ಯಾಚಾರಿ ಎಂದರೆ ಅನಾಮಧೇಯ  ಜಾಗದಲ್ಲಿ, ಆಕೆಯ ಎದೆಯೊಳಗಿನ ಆರ್ದ್ರತೆಗೆ ಕಿವಿ ಕೊಡದೆ, ವಗರು ವಗರಾಗಿ ಅಂಗಾತ ಮೈ ಮೇಲೆ ಬಿದ್ದು, ಖೇಚರಕ್ಕೇರಿದ ಅವಳ ದನಿಯ ಲಕ್ಷ್ಯವಿಲ್ಲದೆ,ಉನ್ಮತ್ತ ಬೈರಾಗಿಯಂತೆ ಹೂಂಕರಿಸುತ್ತಾ, ಬಿಳುಪೇರಿದ ತುಟಿಯ ಕಚ್ಚುತ್ತಾ, ಮೃಗದ ಲಂಪಟತನ ಬೀರಿ,ಜಿಗುಟುತ್ತಾ ಕೆಂಪು ರಂಗನ್ನು ನೆಲಕ್ಕೆ ಕೆಡವುವವನಂತೆ ಹೌದಾ? ನೀರಸವೆನಿಸಿದ ರಾತ್ರಿಗಳಲ್ಲಿ ಬಿನಾಕಾ ಹಲ್ಲ ತೆರೆಯುತ್ತಾ, ಗೆಳೆಯರೊಂದಿಗೆ ಹರಟುತ್ತಾ, ಆಗುಂತಕಿ ಸ್ಪುರದ್ರೂಪಿ ಹೆಣ್ಣ ನೆನೆಯುತ್ತಾ; ಆಕೆಯ ಉಬ್ಬಿದ ಎದೆ,ಗದಗುಡವ ನಿತಂಬಗಳಿಗೆ ರೂಪಕ ನೀಡಿ ಮನದೊಳಗೆ ಆಕೆಯ ನಗ್ನ ದೇಹ ಸೃಷ್ಟಿಸಿ ಇಷ್ಟ ಬಂದಂತೆ ಆಕ್ರಮಿಸುತ್ತೀನಲ್ಲ? ಹೌದು ನಾನೂ ಅತ್ಯಾಚಾರಿ ಹೋದಲ್ಲಿ ನಿಂತಲ್ಲಿ ಹೊಕ್ಕುಳ ಮೇಲಕ್ಕೆ ಪ್ರವಹಿಸುವ ಕಾಮವ ಅತ್ತಿತ್ತ ಸುಳಿದಾಡುವ ಹೆಣ್ಣ ಮೇಲೆ ಹೇರಿ ಆಕೆಯನ್ನು ಸ್ಪರ್ಶಿಸದೆ ಕಲ್ಪನೆಯಲ್ಲಿಯೇ ಹಿಂಡಿ ಹಾಕಿ ನನ್ನ ತೃಷೆ ತೀರಿಸಿಕೊಂಡು ತೃಪ್ತ ಭಾವದೊಂದಿಗೆ ನಗುತ್ತೀನಲ್ಲ? ಹೌದು ನಾನೂ ಅತ್ಯಾಚಾರಿ ಅತ್ಯಾಚಾರವೆಂದರೆ ದೈಹಿಕವಾಗಿ ತಾಕುವುದೇನಲ್ಲ; ವಾಂಛೆಯ ಬೀಭತ್ಸತೆಗೆ ಸಿಲುಕಿ ಗಾವುದ ನಿಂತು ಹೆಣ್ಣೊಬ್ಬಳ ವ್ಯಕ್ತಿತ್ವವನ್ನೇ ತಲೆ ಕೆಳಗೆ ಮಾಡುವುದಿದೆಯಲ್ಲಾ ಅದೂ ಅತ್ಯಾಚಾರವೇ; ಮತ್ತೇ ಅವಳದೇ ಗುಂಗಲ್ಲಿ ಅವಳ ಇಡೀ ರೂಪವನ್ನು ಬ್ರಹ್ಮ ರಂಧ್ರಕ್ಕೇರಿಸಿಕೊಂಡು ಭೋಗಿಸುವುದಿದೆಯಲ್ಲಾ? ಅದೂ ಅತ್ಯಾಚಾರವೇ; ಹೌದು ನಾನೂ ಅತ್ಯಾಚಾರಿ ...