ಹಳೇ ಪ್ರೇಯಸಿಗೊಂದು ನಿವೇದನೆ
ಗೆಳತಿ!
ಕ್ಷಮಿಸು..
ಪ್ರೇಯಸಿ ಎನ್ನಲು
ನನಗೆ ಬಾಯಿ ಬರುತ್ತಿಲ್ಲ
ಈಗಿರುವವಳು ನಿನಗಿಂತ ಚೆಂದ
ಅಂದದಲ್ಲಿ ಮತ್ತು ಮಾತಿನಲ್ಲಿ ಮಾತ್ರ
ನೀನೆಂದೂ ಎರಡಾಡಿದವಳಲ್ಲ
ಆದರೆ, ಅವಳು ಕ್ಷಣಕ್ಷಣಕ್ಕೂ..
ಪದಗಳನ್ನು ಅಲಂಕರಿಸಿ ಬಾಣಬಿಡುತ್ತಾಳೆ
ಒಮ್ಮೊಮ್ಮೆ ಎದೆ ಬಿರಿದು ಒಡೆಯುತ್ತದೆ
ನಾನು ಮೋಸಹೋಗಿದ್ದೇನೆ
ನೀನಾದರೂ ನೇವರಿಸುತ್ತೀ..
ಎಂದು ನಿನ್ನ ಬಳಿ ನಿವೇದಿಸುತ್ತಿದ್ದೇನೆ
ನಿನ್ನ ಅಕ್ಕರೆಯ ಮಾತುಗಳು
ನನಗೆ ಪುನರ್ಜನ್ಮ ನೀಡಬಲ್ಲವು
ತುಟಿಬಿಚ್ಚಿ ಮಾತನಾಡು ದಯವಿಟ್ಟು
ಕೇಳುವೆ ಕಣ್ಮುಚ್ಚಿ ಮನ ಕೊಟ್ಟು
ನೀನಾಗಿಯೇ ಪೀಡಿಸುತ್ತಿದ್ದೆ
ಆಗ ನನ್ನ ಬಳಿ ಮಾತುಗಳಿರಲಿಲ್ಲ
ಈಗ ನಾನೇ ಒದ್ದಾಡುತ್ತಿದ್ದೇನೆ
ಕಾರಣ ಗಂಟಲು ಕಟ್ಟಿದೆ
ಗೆಳತಿ!
ಕ್ಷಮಿಸು..
ಪ್ರೇಯಸಿ ಎನ್ನಲು
ನನಗೆ ಬಾಯಿ ಬರುತ್ತಿಲ್ಲ
ಈಗಿರುವವಳು ನಿನಗಿಂತ ಚೆಂದ
ಅಂದದಲ್ಲಿ ಮತ್ತು ಮಾತಿನಲ್ಲಿ ಮಾತ್ರ
ನೀನೆಂದೂ ಎರಡಾಡಿದವಳಲ್ಲ
ಆದರೆ, ಅವಳು ಕ್ಷಣಕ್ಷಣಕ್ಕೂ..
ಪದಗಳನ್ನು ಅಲಂಕರಿಸಿ ಬಾಣಬಿಡುತ್ತಾಳೆ
ಒಮ್ಮೊಮ್ಮೆ ಎದೆ ಬಿರಿದು ಒಡೆಯುತ್ತದೆ
ನಾನು ಮೋಸಹೋಗಿದ್ದೇನೆ
ನೀನಾದರೂ ನೇವರಿಸುತ್ತೀ..
ಎಂದು ನಿನ್ನ ಬಳಿ ನಿವೇದಿಸುತ್ತಿದ್ದೇನೆ
ನಿನ್ನ ಅಕ್ಕರೆಯ ಮಾತುಗಳು
ನನಗೆ ಪುನರ್ಜನ್ಮ ನೀಡಬಲ್ಲವು
ತುಟಿಬಿಚ್ಚಿ ಮಾತನಾಡು ದಯವಿಟ್ಟು
ಕೇಳುವೆ ಕಣ್ಮುಚ್ಚಿ ಮನ ಕೊಟ್ಟು
ನೀನಾಗಿಯೇ ಪೀಡಿಸುತ್ತಿದ್ದೆ
ಆಗ ನನ್ನ ಬಳಿ ಮಾತುಗಳಿರಲಿಲ್ಲ
ಈಗ ನಾನೇ ಒದ್ದಾಡುತ್ತಿದ್ದೇನೆ
ಕಾರಣ ಗಂಟಲು ಕಟ್ಟಿದೆ
ಹೇಳಬೇಕಾದ್ದು ಬಹಳ ಇದೆ
ಪಶ್ಚಾತ್ತಾಪದ ಅಲೆಯಲ್ಲಿ ಮುಳುಗಿದ್ದೇನೆ
ನೀನೇ ಕಾಪಾಡಬೇಕಿದೆ
ನಾನು ಇವಳಲ್ಲಿ ಹೊಸ ಪ್ರೇಮ ಕಂಡೆ
ಹಾಗೆಯೇ..
ನಾ ಸುಲಭವಾಗಿ ಅರಿತೆ
ನೀನೇ ಬೇರೆ, ಈಕೆಯೇ ಬೇರೆ
ನನಗೆ ಸಿಕ್ಕ ಇಬ್ಬರ ಪ್ರೇಮ ಒಂದೇಯಾದರೂ
ದಕ್ಕಿದ ಪರಿಗಳು ಬೇರೆ ಬೇರೆ
ಬಹುಶಃ ನನ್ನದೇ ತಪ್ಪಿರಬೇಕು
ನನ್ನ ದುಡುಕುತನ ನನ್ನನ್ನು ಕೊಲ್ಲುತ್ತಿದೆ
ಅವಳಿಗೀಗ ಪೂರ್ತಿ ಶರಣಾಗಿದ್ದೇನೆ
ಅದಕ್ಕೆ
ಆಗಾಗ ನೀನು ನೆನಪಾಗ್ತಿ
ನಿನಗೂ ನಾನು ಆಗುತ್ತೀನೇನೋ.. ಅಲ್ಲವೇ?
ನೀನು ಊಟ ಮಾಡಿಸುತ್ತಿದ್ದೆ
ಮಡಿಲಲ್ಲಿ ಮಲಗಿಸಿ ತೂಗಿಸುತ್ತಿದ್ದೆ
ಖರ್ಚಿಗೆ ಹಣವಿಲ್ಲದಾಗ ಪರ್ಸನ್ನೇ ಕೊಡುತ್ತಿದ್ದೆ
ಆದರೆ,
ಈಗ ನಿದ್ದೆಮಾಡಲೂ ಕಷ್ಟವಾಗಿದೆ
ಊಟದ ಬಗ್ಗೆ ವಿಚಾರಿಸುವವರೇ ಇಲ್ಲ
ಹಣವಿಲ್ಲದಾಗ ಕೆಟ್ಟ ನಗೆ ಬೀರುತ್ತಾಳೆ
ಎಲ್ಲವೂ ಸುಮಾರಾಗಿ ಬದಲಾಗಿದೆ
ನಾನು ನಿರಂತರವಾಗಿ ಕಲಿಯುತ್ತಿದ್ದೇನೆ
ನೀರಿಗಿಳಿಯದೆ ಈಜುವುದನ್ನು
ಈಕೆಯಲ್ಲೇನೋ ಆಕರ್ಷಣೆ
ನಿನ್ನಲ್ಲೇನೋ ಅದ್ಭುತ
ಎರಡೂ ಒಟ್ಟಿಗಿರಬೇಕಿತ್ತು
ಎರಡು ಕಣ್ಣುಗಳ ಹಾಗೆ!
ಮುಂದೆ ಬರುವವಳ ಕಥೆಯೇನೋ..
ಜೀವನ ಬೇಡವೆನಿಸಿದಾಗ
ಆಕೆ ಬರುವಳೇನೋ..
ನಿನಗೆ ಖಂಡಿತ ತಿಳಿಸುತ್ತೇನೆ
ಸೌಖ್ಯವಾಗಿರು.. ಕನಸಲ್ಲಿ ಬರುತ್ತಿರು
#ಅನಂತ
ಪಶ್ಚಾತ್ತಾಪದ ಅಲೆಯಲ್ಲಿ ಮುಳುಗಿದ್ದೇನೆ
ನೀನೇ ಕಾಪಾಡಬೇಕಿದೆ
ನಾನು ಇವಳಲ್ಲಿ ಹೊಸ ಪ್ರೇಮ ಕಂಡೆ
ಹಾಗೆಯೇ..
ನಾ ಸುಲಭವಾಗಿ ಅರಿತೆ
ನೀನೇ ಬೇರೆ, ಈಕೆಯೇ ಬೇರೆ
ನನಗೆ ಸಿಕ್ಕ ಇಬ್ಬರ ಪ್ರೇಮ ಒಂದೇಯಾದರೂ
ದಕ್ಕಿದ ಪರಿಗಳು ಬೇರೆ ಬೇರೆ
ಬಹುಶಃ ನನ್ನದೇ ತಪ್ಪಿರಬೇಕು
ನನ್ನ ದುಡುಕುತನ ನನ್ನನ್ನು ಕೊಲ್ಲುತ್ತಿದೆ
ಅವಳಿಗೀಗ ಪೂರ್ತಿ ಶರಣಾಗಿದ್ದೇನೆ
ಅದಕ್ಕೆ
ಆಗಾಗ ನೀನು ನೆನಪಾಗ್ತಿ
ನಿನಗೂ ನಾನು ಆಗುತ್ತೀನೇನೋ.. ಅಲ್ಲವೇ?
ನೀನು ಊಟ ಮಾಡಿಸುತ್ತಿದ್ದೆ
ಮಡಿಲಲ್ಲಿ ಮಲಗಿಸಿ ತೂಗಿಸುತ್ತಿದ್ದೆ
ಖರ್ಚಿಗೆ ಹಣವಿಲ್ಲದಾಗ ಪರ್ಸನ್ನೇ ಕೊಡುತ್ತಿದ್ದೆ
ಆದರೆ,
ಈಗ ನಿದ್ದೆಮಾಡಲೂ ಕಷ್ಟವಾಗಿದೆ
ಊಟದ ಬಗ್ಗೆ ವಿಚಾರಿಸುವವರೇ ಇಲ್ಲ
ಹಣವಿಲ್ಲದಾಗ ಕೆಟ್ಟ ನಗೆ ಬೀರುತ್ತಾಳೆ
ಎಲ್ಲವೂ ಸುಮಾರಾಗಿ ಬದಲಾಗಿದೆ
ನಾನು ನಿರಂತರವಾಗಿ ಕಲಿಯುತ್ತಿದ್ದೇನೆ
ನೀರಿಗಿಳಿಯದೆ ಈಜುವುದನ್ನು
ಈಕೆಯಲ್ಲೇನೋ ಆಕರ್ಷಣೆ
ನಿನ್ನಲ್ಲೇನೋ ಅದ್ಭುತ
ಎರಡೂ ಒಟ್ಟಿಗಿರಬೇಕಿತ್ತು
ಎರಡು ಕಣ್ಣುಗಳ ಹಾಗೆ!
ಮುಂದೆ ಬರುವವಳ ಕಥೆಯೇನೋ..
ಜೀವನ ಬೇಡವೆನಿಸಿದಾಗ
ಆಕೆ ಬರುವಳೇನೋ..
ನಿನಗೆ ಖಂಡಿತ ತಿಳಿಸುತ್ತೇನೆ
ಸೌಖ್ಯವಾಗಿರು.. ಕನಸಲ್ಲಿ ಬರುತ್ತಿರು
#ಅನಂತ
ಯುವಬರಹಗಾರ & ಸಹಾಯಕ ನಿರ್ದೇಶಕ
ಸೊಗಸಾಗಿದೆ
ಪ್ರತ್ಯುತ್ತರಅಳಿಸಿಭಾಳ ಚಂದ ಐತ್ರಿ ಪ.... 💐👍
ಪ್ರತ್ಯುತ್ತರಅಳಿಸಿಅದ್ಭುತವಾಗಿದೆ ಸರ್
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ 👌👌👌👌👌 ಸರ್
ಪ್ರತ್ಯುತ್ತರಅಳಿಸಿ👌👌👌👌
ಪ್ರತ್ಯುತ್ತರಅಳಿಸಿ