ತ್ಯಾಪೆ ಹಾಕುವವರು ಬೇಕಾಗಿದ್ದಾರೆ
- ಅನಂತ ಕುಣಿಗಲ್
ದಾರಿ ಯಾವುದು
ನದಿ ಹರಿವ ದಾರಿ ಯಾವುದು??
ಗೊತ್ತು ಗುರಿ ಇಲ್ಲದ ಕಂಗಳಿಗೂ
ಅತ್ತು.. ಅತ್ತು..
ಈಗ ಹರಿವ ಆಸೆಯಾಗಿದೆ!
ದೂರದಲ್ಲಿನ ತೀರ ಸೇರುವ
ಬಯಕೆಯೊಂದು ಬಸುರಾಗಿದೆ
ದಿನವೂ ಎಷ್ಟು ಚೆಂದ
ಶುಭೋದಯ ಶುಭರಾತ್ರಿ ಘಳಿಗೆ
ಲೆಕ್ಕವೇ ಇಲ್ಲ ಶುಭಾಷಯಗಳಿಗೆ
ಈಗ ನನಗೆ ಬೆಳಕಾಗುವುದೇ ಬೇಡ
ಆಕೆಗೆ ಕತ್ತಲೆಂದರೆ ಬಲು ಕೋಪ
ಬೆಳಕಿನಲ್ಲಲ್ಲವೇ ಹೂಗಳು ಅರಳುವುದು!
ಕತ್ತಲಿನಲ್ಲಲ್ಲವೇ ಹೂಗಳು ಹಾಡುವುದು?
ದಾರಿ ಯಾವುದು
ನದಿ ಹರಿವ ದಾರಿ ಯಾವುದು??
ಗೊತ್ತು ಗುರಿ ಇಲ್ಲದ ಕಂಗಳಿಗೂ
ಅತ್ತು.. ಅತ್ತು..
ಈಗ ಹರಿವ ಆಸೆಯಾಗಿದೆ!
ದೂರದಲ್ಲಿನ ತೀರ ಸೇರುವ
ಬಯಕೆಯೊಂದು ಬಸುರಾಗಿದೆ
ದಿನವೂ ಎಷ್ಟು ಚೆಂದ
ಶುಭೋದಯ ಶುಭರಾತ್ರಿ ಘಳಿಗೆ
ಲೆಕ್ಕವೇ ಇಲ್ಲ ಶುಭಾಷಯಗಳಿಗೆ
ಈಗ ನನಗೆ ಬೆಳಕಾಗುವುದೇ ಬೇಡ
ಆಕೆಗೆ ಕತ್ತಲೆಂದರೆ ಬಲು ಕೋಪ
ಬೆಳಕಿನಲ್ಲಲ್ಲವೇ ಹೂಗಳು ಅರಳುವುದು!
ಕತ್ತಲಿನಲ್ಲಲ್ಲವೇ ಹೂಗಳು ಹಾಡುವುದು?
ಜಗಳಕ್ಕೆ ಕೊನೆಯೇ ಇರಲಿಲ್ಲ
ಆದರೆ,
ಗರ್ವಕ್ಕೂ ಬೇಸರ ಬಂತಲ್ಲಾ..
ಅದಕ್ಕೆ,
ಆವ ಸಂಬಂಧಗಳೂ ರುಚಿಸುತ್ತಿಲ್ಲ!
ಇನ್ನೆಷ್ಟು ದಿನ ಬೇಕೋ..?
ಮೊದಲಿನಂತಾಗಲು..
ಬದುಕಿಗಿಂತ ಸಾವು ಎಷ್ಟು ಹತ್ತಿರ
ಒಂದೇ ಕಟು ಮಾತಿಗೆ
ಎದೆಯೊಡೆದು ಚೂರಾಗುವುದು
ನೋವುಗಳಿಂದ ಹಲ್ಲೆಯಾಗುವುದು
ಎದೆಗಾರನ ಮೇಲೆ
ಕರುಣೆಯಿಲ್ಲದೆ ಗುಡುಗುವವು
ಎಲ್ಲವೂ ಸಾಕಾಗಿದೆ
ಬದುಕು ಶೂನ್ಯವಾಗಿ
ಸಾವನ್ನೂ ಸಂಭ್ರವಿಸುವಂತೆ
ಒಲವು ಬಲವಂತಪಡಿಸಿದೆ
ಇಂಥಾ ಹತ್ತಾರು ಅಲೆಗಳಿಗೆ ಸಿಕ್ಕಿ,
ಇನ್ನೇನು ಬೇಡವಾಗಿದೆ
ತ್ಯಾಪೆ ಹಾಕುವವರು ಬೇಕಾಗಿದ್ದಾರೆ ಹೃದಯವನ್ನು
ನಿಮಗ್ಯಾರಾದರೂ ಸಿಕ್ಕರೆ.. ನನ್ನ ವಿಳಾಸ ಕೊಡಿ
ಮನೆಯ ದೀಪ ಹೊತ್ತಿಸುವ
ಮಾಯಾವಿಗಳು ಬೇಕಾಗಿದ್ದಾರೆ!
ಶುಭೋದಯ
💐🙏🥰💐
ಕವಿತೆಯ ಭಾವಾರ್ಥ ಆಪ್ತವಾಗಿದೆ...
ಪ್ರತ್ಯುತ್ತರಅಳಿಸಿ👌
ಪ್ರತ್ಯುತ್ತರಅಳಿಸಿSir, excellent. Thank you for sharing 🙏🙏🙏 thank you
ಪ್ರತ್ಯುತ್ತರಅಳಿಸಿ