ವಿಷಯಕ್ಕೆ ಹೋಗಿ

2021ರ ಅವ್ವ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ - ಅವ್ವ ಪುಸ್ತಕಾಲಯ

ಕುಣಿಗಲ್ ತಾಲ್ಲೂಕಿನ ರೈತ ಶ್ರೀಮಾನ್ ಲೇ. ನರಸಯ್ಯ ಅವರ ಸ್ಮರಣಾರ್ಥ ಅವ್ವ ಪುಸ್ತಕಾಲಯ ಕೊಡುವ ಅವ್ವ ಪ್ರಶಸ್ತಿ 2021ರ ವಿಜೇತರ ಪಟ್ಟಿ ಬಿಡುಗಡೆಯಾಗಿದೆ.

ನಾಡಿನಾದ್ಯಂತ ಲೇಖಕರಿಂದ 'ಅವ್ವ' ಸೃಜನಶೀಲ ಸಾಹಿತ್ಯ ಪ್ರಶಸ್ತಿ - 2021 ಕ್ಕೆ ಸುಮಾರು 75 ಕ್ಕೂ ಹೆಚ್ಚು ಕೃತಿಗಳು ಬಂದಿದ್ದವು. ಅವುಗಳಲ್ಲಿ ಸೃಜನಶೀಲವೆನಿಸುವ ಒಂದಷ್ಟು ಕೃತಿಗಳನ್ನು ತೀರ್ಪುಗಾರರಾಗಿ ಡಾ. ನೇತ್ರಾವತಿ ಹರಿಪ್ರಸಾದ್ (ಪ್ರಾಧ್ಯಾಪಕರು, ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು) ಅವರು ಆಯ್ಕೆ ಮಾಡಿದ್ದರು. ಅಂತಿಮ ಸುತ್ತಿನಲ್ಲಿ ಒಟ್ಟು ಏಳು ಕೃತಿಗಳಿಗೆ ಅವ್ವ ಪುರಸ್ಕಾರ ಬಹುಮಾನ ಮತ್ತು ಒಂದು ಕೃತಿಗೆ ಅವ್ವ ಪ್ರಶಸ್ತಿ ಘೋಷಿಸಲಾಗಿದೆ.


ಶ್ರೀಮತಿ ಶ್ರೀದೇವಿ ಕೆರೆಮನೆ ಅವರ 'ಮೈ ಮುಚ್ಚಲೊಂದು ತುಂಡು ಬಟ್ಟೆ' ಕೃತಿಗೆ 2021ನೇ ಸಾಲಿನ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಮತ್ತು 3000 ರೂಗಳ ಪುಸ್ತಕ ಬಹುಮಾನ ದೊರೆತಿದೆ. ಡಾ. ಪ್ರಿಯಾಂಕ ಎಂ ಜಿ ಅವರ ಅನುಸೃಷ್ಠಿ ಮತ್ತು ಅಕ್ಷಯ ಪಂಡಿತ್ ಅವರ ಬಯಲಲಿ ತೇಲುತ ತಾನು ಕೃತಿಗಳಿಗೆ ಮೆಚ್ಚುಗೆ ಇ ಪ್ರಮಾಣ ಪತ್ರದ ಜೊತೆಗೆ 500 ರೂಗಳ ಪುಸ್ತಕ ಬಹುಮಾನ ಸಿಗಲಿದೆ. ಮತ್ತು ಕೆಳಗಿನ ಐದು ಕೃತಿಗಳಿಗೆ ಸಮಾಧಾನಕರ ಪುಸ್ತಕ ಬಹುಮಾನ ನೀಡಲಾಗುತ್ತದೆ.
* ಇಶ್ಖಿನ ಒರತೆಗಳು - ಮುನವ್ವರ್ ಜೋಗಿಬೆಟ್ಟು
* ಸು - ಡಾ. ಪ್ರಸನ್ನ ಸಂತೇಕಡೂರು
* ಬೈಪಾಸ್ ರಸ್ತೆ - ಡಾ. ಚಂದ್ರಶೇಖರ್ ಜಿ ಆರ್
* ತೆರೆದಂತೆ ಹಾದಿ - ಜಯಶ್ರೀ ಬಿ ಕದ್ರಿ
* ವೈಫ್ ಆಫ್ ಸೋಲ್ಜರ್ - ಎಸ್ ಭಾಗ್ಯ


'ಅವ್ವ' ಯುವ ಸಾಹಿತ್ಯ ಪುರಸ್ಕಾರ 2021 ಕ್ಕೆ ಸುಮಾರು 15 ಹಸ್ತಪ್ರತಿಗಳು ಬಂದಿದ್ದು ಅವುಗಳಲ್ಲಿ ಐದು ಪ್ರತಿಗಳನ್ನು ತೀರ್ಪುಗಾರರಾದ ಚಂದ್ರಪ್ಪ ಬೆಲವತ್ತ (ಹಿರಿಯ ಕವಿಗಳು, ಉಪನ್ಯಾಸಕರು & ಪ್ರಾಧ್ಯಾಪಕರು, ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರು) ಅವರು ಆಯ್ಕೆ ಮಾಡಿದ್ದರು. ಅವುಗಳಲ್ಲಿ ಒಂದು ಕೃತಿಗೆ ಪ್ರಶಸ್ತಿ ಕೊಡಲು ನಿರ್ಧರಿಸಿದ್ದೆವು. ಆದರೆ ಲೇಖಕರು ಅವ್ವ ಪುಸ್ತಕಾಲಯದ ನಿಬಂಧನೆಗಳಿಗೆ ಒಪ್ಪದ ಕಾರಣ ಈ ಬಾರಿಯ ಅವ್ವ ಯುವ ಸಾಹಿತ್ಯ ಪುರಸ್ಕಾರವನ್ನು ತಡೆಹಿಡಿಯಲಾಗಿದೆ.

"ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಮತ್ತು ಬಹುಮಾನ ವಿಜೇತರಿಗೆಲ್ಲರಿಗೂ ಅವ್ವ ಪುಸ್ತಕಾಲಯ ಅಭಿನಂದನೆಗಳನ್ನು ತಿಳಿಸಲಾಗಿದೆ"

ಪಟ್ಟಿಯಾಗಿರುವ ಎಂಟು ಜನ ಲೇಖಕರು ತಮ್ಮ ಪೂರ್ಣ ಅಂಚೆ ವಿಳಾಸವನ್ನು avvapustakaalaya@gmail.com ಗೆ  ಈ ಕೂಡಲೆ ಕಳಿಸಿಕೊಡಲು ಕೋರಿದೆ. ಅಕ್ಟೋಬರ್ ತಿಂಗಳಲ್ಲಿ ಎಲ್ಲರಿಗೂ ಬಹುಮಾನವನ್ನು ಅಂಚೆ ಮೂಲಕ ತಲುಪಿಸಲಾಗುತ್ತದೆ. ನವೆಂಬರ್ ತಿಂಗಳಿನಲ್ಲಿ ಅಭಿನಂದನಾ ಕಾರ್ಯಕ್ರಮದ ವೀಡಿಯೋ ರಚಿಸಿ ಬಿಡುಗಡೆ ಮಾಡಲಾಗುತ್ತದೆ.
- ಅವ್ವ ಪುಸ್ತಕಾಲಯ


ಅವ್ವ ಪುಸ್ತಕಾಲಯ ಜಾಲತಾಣಕ್ಕೆ ಭೇಟಿ ಕೊಡಿ :
http://avvapustakaalaya.blogspot.com

ಅವ್ವ ಪುಸ್ತಕಾಲಯ ತಂಡ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://www.facebook.com/groups/3344469948953030/?ref=share

ಅವ್ವ ಪುಸ್ತಕಾಲಯ ಸಂಪರ್ಕಕ್ಕಾಗಿ :
avvapustakaalaya@gmail.com

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಆಕೆಗೆ ಅದು ಮೊದಲ ರಾತ್ರಿಯಲ್ಲ! - ಕವಿತೆ - ಅನಂತ ಕುಣಿಗಲ್

" ಆಕೆಗೆ ಅದು ಮೊದಲ ರಾತ್ರಿಯಲ್ಲ! " ಆಕೆಗೆ ಅದು ಮೊದಲ ರಾತ್ರಿಯಲ್ಲ ಯಾಕೆಂದರೆ, ಅವಳು ಮದುವೆಯೇ ಆಗಿರಲಿಲ್ಲ!! ಇಪ್ಪತ್ತೆರೆಡು ವರ್ಷದ ಆ ಬಾಲಕಿ ಹೆಚ್ಚು ಓದಲಾಗಲಿಲ್ಲ, ಕಾರಣ ನೂರಾರು  ಅಪ್ಪ ಕುಡಿದು ಕುಡಿದು ಸತ್ತ ಇಲ್ಲ, ಮಗನಿಂದಲೇ ಕೊಲೆಯಾದ ಅಪರಾಧಿ ತಮ್ಮ ಜೈಲಿಗೆ ಹೋದ ಅಮ್ಮ ಒಬ್ಬಳೇ ಹಾಸಿಗೆ ಮೇಲೆ ದಿನ ಎಣಿಸುತ್ತಿದ್ದಾಳೆ ಹಾಳಾದ ಕ್ಯಾನ್ಸರ್ ರೋಗ ಆರು ವರ್ಷಗಳಿಂದ ಅವಳ ನಗು ಕಿತ್ತುಕೊಂಡಿದೆ  ಈಗಲೂ ಅವಳು ಸ್ವಾರ್ಥಿಯಾದರೆ..? ಆ ಬದುಕಿಗೆ ಅರ್ಥವುಂಟೆ?! ಓದಿಗೆ ತಕ್ಕನಾದ ಕೆಲಸವಿಲ್ಲ ತನ್ನವರು ಅಂತ ಯಾರೂ ಇಲ್ಲ ಒಬ್ಬಳಿಗೊಬ್ಬಳೇ.. ಒನಕೆ ಓಬವ್ವನೂ ಅಲ್ಲ  ಮದುವೆಯಾದರೆ ಸರಿಯಾಗುವುದೇ ಎಲ್ಲ? ನಂತರವೂ ಎಲ್ಲ ಹೀಗೆ ಇದ್ದರೆ.. ಮದುವೆ ಅನರ್ಥ ಹೀಗೇ ಇದ್ದುಬಿಡೋಣ.. ಅದೊಂದು ಗಟ್ಟಿ ನಿರ್ಧಾರ  ಎಷ್ಟು ದುಡಿಯಬಹುದು? ಎರಡೇ ಎರಡು ಕೈಗಳು?! ಪಾಪ ಪುಟ್ಟ ಕೈಗಳು ಸೂರ್ಯನಿಗೂ ಸಮಯದ ಅರಿವಿಲ್ಲ ಬೇಗ ಬಂದು ಬೇಗ ಹೋಗುತ್ತಾನೆ ಸಿಗುವುದು ಚಿಲ್ಲರೆ ರೂಪಾಯಿಗಳಷ್ಟೇ ಅದರಿಂದ ಅವಳ ಹೊಟ್ಟೆ ತುಂಬೀತೇ?? ಹೆತ್ತಾಕೆಯ ರೋಗ ಹೋದೀತೇ?? ಮತ್ತೆ ಎಲ್ಲವೂ.. ಹಾಗೇ!!  ಇನ್ನೊಂದು ನಿರ್ಧಾರವಾಗಬೇಕಿದೆ ಹಳ್ಳಿ ಬಿಟ್ಟು ಪಟ್ಟಣ ಸೇರುವುದು ಅದೂ ಆಯ್ತು.. ಕೆಲಸಕ್ಕಾಗಿ ಅಲೆದಲೆದು ಸಾಕಾಯ್ತು ಕಣ್ಣಿನಲ್ಲಡಗಿರುವ ನೋವು ನೋಡಿದವರಿಗಿಂತ ಅವಳೆದೆಯ ಉಬ್ಬು ಸವಿದವರೇ ಹೆಚ್ಚು ಅವರ ಕಣ್ಣಿನ ದಾಹಕ್ಕೆ ಎದೆಯೇ ಹಿಂಗುತ್ತಿವೆ ದಿನವೂ ...