ವಿಷಯಕ್ಕೆ ಹೋಗಿ

ಅವ್ವ ಪ್ರಶಸ್ತಿ 2021 ಕಿರುಪಟ್ಟಿ ಪ್ರಕಟ - ಅವ್ವ ಪುಸ್ತಕಾಲಯ


ಕುಣಿಗಲ್ ತಾಲ್ಲೂಕಿನ ರೈತ ಶ್ರೀಮಾನ್ ಲೇ. ನರಸಯ್ಯ ಅವರ ಸ್ಮರಣಾರ್ಥ ಅವ್ವ ಪುಸ್ತಕಾಲಯ ಕೊಡುವ ಅವ್ವ ಪ್ರಶಸ್ತಿ 2021ರ ಕಿರುಪಟ್ಟಿ ಬಿಡುಗಡೆಯಾಗಿದೆ.

ನಾಡಿನಾದ್ಯಂತ ಲೇಖಕರಿಂದ 'ಅವ್ವ' ಸೃಜನಶೀಲ ಸಾಹಿತ್ಯ ಪ್ರಶಸ್ತಿ - 2021 ಕ್ಕೆ ಸುಮಾರು 75 ಕ್ಕೂ ಹೆಚ್ಚು ಕೃತಿಗಳು ಬಂದಿದ್ದವು. ಅವುಗಳಲ್ಲಿ ಸೃಜನಶೀಲವೆನಿಸುವ ಒಂದಷ್ಟು ಕೃತಿಗಳನ್ನು ತೀರ್ಪುಗಾರರಾಗಿ ಡಾ. ನೇತ್ರಾವತಿ ಹರಿಪ್ರಸಾದ್ (ಪ್ರಾಧ್ಯಾಪಕರು, ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ.

ಯಾವುದೇ ಕ್ರಮಾಂಕವಿಲ್ಲದೆ ಕೃತಿ ಮತ್ತು ಲೇಖಕರ ಹೆಸರು :

* ತೇಜಸ್ವಿ ನೆನಪಲ್ಲಿ ಅಲ್ಮೆರಾ ರಿಪೇರಿ - ಮಲ್ಲಿಕಾರ್ಜುನ ಹೊಸಪಾಳ್ಯ
* ಕಂದೀಲಿನ ಕುಡಿ - ರೇಣುಕಾ ಕೋಡಗುಂಟಿ
* ಅರಿವಿನ ಬೆಳಕು - ಸಂತೋಷ್ ರಾವ್ ಪೆರ್ಮುಡ
* ಪ್ರಕೃತಿ - ಭಾರ್ಗವ ಎ ಆರ್
* ಸೂರ್ಯನಿಗೊಂದು ಗೂಡಗು - ಕೋಳಾಲಪ್ಪ ಹೆಚ್
* ಮೌನ ಧ್ವನಿಸಿತು - ದಿವ್ಯಾ ಶ್ರೀಧರ್ ರಾವ್
* ತೆರೆದಂತೆ ಹಾದಿ - ಜಯಶ್ರೀ ಬಿ ಕದ್ರಿ
* ಅನುಸೃಷ್ಠಿ - ಡಾ. ಪ್ರಿಯಾಂಕ ಎಂ ಜಿ
* ತಿಳಿದ ನೋಟ - ವಿ ಅರ್ಪಿತ
* ಹಳ್ಳದ ದಂಡಿ ಮತ್ತು ಕಳ್ಳಿ ಸಾಲು - ಧೀರೇಂದ್ರ ನಾಗರಹಳ್ಳಿ
* ಒಳಿತು ಕೆಡುಕುಗಳ ಸಂತೆ ಮಾಲ್ ಗಳಲ್ಲಿ ಮಾರಾಟಕ್ಕಿದೆ - ರವಿಕುಮಾರ ಜಾಧವ
* ಸಾಂವಿ - ಸುರೇಶ ಮದ್ದಾರ
* ಬಂಜೆತನ ಬಯಸಿದವಳು - ಎನ್ನೇಬಿ ಮೊಗ್ರಾಲ್ ಪುತ್ತೂರು
* ಮೈ ಮುಚ್ಚಿಲೊಂದು ತುಂಡು ಬಟ್ಟೆ - ಶ್ರೀದೇವಿ ಕೆರೆಮನೆ
* ಬಯಲಲಿ ತೇಲುತ ತಾನು - ಅಕ್ಷಯ ಪಂಡಿತ್
* ಶಯ್ಯಾಗೃಹದ ಸುದ್ಧಿಗಳು - ಶೋಭಾ ನಾಯಕ
* ಸು - ಡಾ. ಪ್ರಸನ್ನ ಸಂತೇಕಡೂರು
* ಆ ಮೂರು ಹೆಜ್ಜೆಗಳು - ಶಂಕರರಾವ ಉಭಾಳೆ ದೇವದುರ್ಗ
* ಮೌನದೊಳಗಣ ಭಾವ - ನಾರಾಯಣಸ್ವಾಮಿ ವಿ
* ಬಿಳಿ ಜುಮುಕಿ ಮತ್ತು ಹರಳುಗಳು - ಸಿಂಧು ಚಂದ್ರ ಹೆಗಡೆ
* ಸುಮ್ಮನೆ ಬಿದ್ದಿರುವ ಬಿಕ್ಕುಗಳು - ಮೌಲ್ಯ ಸ್ವಾಮಿ
* ಬೈಪಾಸ್ ರಸ್ತೆ - ಡಾ. ಚಂದ್ರಶೇಖರ್ ಜಿ ಆರ್
* ನವನೀನು ಪರಿವರ್ತನೆಯ ಪಯಣ - ಕಾಂಚನಾ ಆನಂದ
* ಆರ್ತ - ಸಂತೋಷ ನಾಯಿಕ
* ಕೂರ್ಗ್ ರೆಜಿಮೆಂಟ್ - ಮೇಜರ್ ಡಾ. ಕುಷ್ವಂತ್ ಕೋಳಿಬೈಲು
* ಸ್ಕೆಚ್ - ನಂದಾದೀಪ
* ಮೌನಯಾನ - ರಾಹು ಅಲಂದಾರ
* ಆರಕ್ಷಕನ ಅಂತರಾಳ - ಶಾಂತಮಿತ್ರ
* ಭೂರಮೆ ವಿಲಾಸ - ಕಗ್ಗೆರೆ ಪ್ರಕಾಶ್
* ಕನಸಿನ ದನಿ - ಡಾ. ಅಜಿತ್ ಹರೀಶಿ
* ಇಶ್ಖಿನ ಒರತೆಗಳು - ಮುನವ್ವರ್ ಜೋಗಿಬೆಟ್ಟು
* ವೈಫ್ ಆಫ್ ಸೋಲ್ಜರ್ - ಎಸ್ ಭಾಗ್ಯ
* ನಮ್ಮೂರ ಸಂತೆ - ವಿರೂಪಾಕ್ಷ ಎಂ ಯಲಿಗಾರ

ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಒಂದು ಕೃತಿಗೆ 2021ನೇ ಸಾಲಿನ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಮತ್ತು 3000 ರೂಗಳ ಪುಸ್ತಕ ಬಹುಮಾನ, ಇಬ್ಬರಿಗೆ ಪ್ರಮಾಣ ಪತ್ರದ ಜೊತೆಗೆ 500 ರೂಗಳ ಪುಸ್ತಕ ಬಹುಮಾನ ಮತ್ತು ಮೆಚ್ಚುಗೆ ಪಡೆದ ಐದು ಕೃತಿಗಳಿಗೆ ಸಮಾಧಾನಕರ ಪುಸ್ತಕ ಬಹುಮಾನ ನೀಡಲಾಗುತ್ತದೆ. ಅಂತಿಮ ಪಟ್ಟಿಯನ್ನು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಮಾಡಲಾಗುತ್ತದೆ.

'ಅವ್ವ' ಯುವ ಸಾಹಿತ್ಯ ಪುರಸ್ಕಾರ 2021 ಕ್ಕೆ ಸುಮಾರು 15 ಹಸ್ತಪ್ರತಿಗಳು ಬಂದಿದ್ದು ಅವುಗಳಲ್ಲಿ ಐದು ಪ್ರತಿಗಳನ್ನು ತೀರ್ಪುಗಾರರಾದ ಚಂದ್ರಪ್ಪ ಬೆಲವತ್ತ (ಹಿರಿಯ ಕವಿಗಳು, ಉಪನ್ಯಾಸಕರು & ಪ್ರಾಧ್ಯಾಪಕರು, ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ.

ಯಾವುದೇ ಕ್ರಮಾಂಕವಿಲ್ಲದೆ ಹಸ್ತಪ್ರತಿ ಮತ್ತು ಲೇಖಕರ ಹೆಸರು :

* ಆತ್ಮಾನುಬಂಧದ ಸಖಿಃ - ರಾಘವೇಂದ್ರ ದೇವಪ್ಪ ತಳವಾರ
* ಸೂಜು ಮಲ್ಲಿಗೆ ನನ್ನವ್ವ - ಮಾಲ ಮ ಅಕ್ಕಿಶೆಟ್ಟಿ
* ಬತ್ತಿಹೋಯಿತು ಬಾಲ್ಯ - ಸುಚಿತ್ರಾ ಹೆಚ್ ಬಿ
* ನಾನು ಹೊರಗಿನವನು - ದೀಕ್ಷಿತ್ ಕುಮಾರ್ ಕೆ ಎಂ
* ಬಿಟ್ಟು ಬಿಡಿ ನನ್ನಾ! - ಸಂತೋಷ್ ಕುಮಾರ್ ಸಿ

ಆಯ್ಕೆಯಾದ ಒಂದು ಹಸ್ತಪ್ರತಿಗೆ 2500 ರೂಗಳ ನಗದು ಬಹುಮಾನ, ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

" ಎಲ್ಲರಿಗೂ ಅಭಿನಂದನೆಗಳು, ಶುಭವಾಗಲಿ "
- ಅವ್ವ ಪುಸ್ತಕಾಲಯ

ಇ - ಅವ್ವ ಪುಸ್ತಕಾಲಯಕ್ಕೆ ಭೇಟಿ ಕೊಡಿ :
avvapustakaalaya.blogspot.com

ಅವ್ವ ಪುಸ್ತಕಾಲಯ ತಂಡ ಸೇರಲು ಇಲ್ಲಿ ಕ್ಲಿಕ್ ಮಾಡಿ :

ಅವ್ವ ಪುಸ್ತಕಾಲಯ ಸಂಪರ್ಕಕ್ಕಾಗಿ :

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...