ಅವಳೊಂದು ನಿಗೂಢ ಕವಿತೆ
ನಗುತ್ತಿದ್ದಳು ಯಾವಾಗಲೂ
ಮರೆಮಾಚಿ ಅಳುತ್ತಿದ್ದಳು
ಹನಿ ನೀರಿನ ಸದ್ಧಾಗದಂತೆ
ಮೆಲ್ಲಗೆ ರಚ್ಚೆ ಹಿಡಿಯುತ್ತಿದ್ದಳು
ಹಳೆ ನೆನಪುಗಳನ್ನು ಕೆದಕಿದಾಗ!
ತುಂಬಾ ನೊಂದಿದ್ದಳು
ಜಗತ್ತಿನ ಪರಿವೆಯಿಲ್ಲದೆ
ಯಾಂತ್ರಿಕವಾಗಿ ಬದುಕುತ್ತಿದ್ದಳು
ಅಪ್ಪ-ಅಮ್ಮ-ಗೆಳತಿಯರ ಗೊಡವೆಯೇ ಇರಲಿಲ್ಲ
ಎಲ್ಲವೂ ಇದ್ದೂ..
ಇಲ್ಲದಂತಾಗಿತ್ತು ಅವಳ ದಿನಗಳು
ಅದೊಂದು ಸ್ಪರ್ಶವಾಯಿತು
ಪುಸ್ತಕಗಳ ದರ್ಶನವಾಯಿತು
ಅವಳಲ್ಲಿ ಹೊಸ ಚಿಗುರು ಬೇರು ಬಿಟ್ಟಿತು
ನಿಜವಾಗಿಯೂ ನಗಲು ಶುರುಮಾಡಿದಳು
ಜಗತ್ತು ಬೇರೆಯದಾಗಿ ಕಂಡಿತು
ಬದುಕು ಇನ್ನೂ ಬೇಕೆನಿಸಿತು
ಈಗ ಎಲ್ಲರೊಂದಿಗೆ ಬೆರೆಯುತ್ತಾಳೆ
ಓದುತ್ತಾಳೆ, ಹಾಡುತ್ತಾಳೆ, ಕುಣಿಯುತ್ತಾಳೆ
ಉಲ್ಲಾಸದಿಂದ ನನ್ನ ಮುದ್ದಿಸುತ್ತಾಳೆ
ಬೇಸರವಾದಾಗ ಮಾತು ಬಿಟ್ಟು
ಮಾತನಾಡದಿದ್ದರೆ ಚುಚ್ಚುತ್ತಾಳೆ
ಮಾತು ಹೆಚ್ಚಾದಾಗ ಮಲಗುತ್ತಾಳೆ
ಯಾವಾಗಲೂ ತಿನ್ನುತ್ತಲೇ ಇರುತ್ತಾಳೆ
ಅವಳೆಂದರೆ ನನಗೇನೋ ಉತ್ಸಾಹ
ಹೊಸ ಚೈತನ್ಯ ತುಂಬಿದ ನಕ್ಷತ್ರದ ಹೊಳಪು
ಎದೆಗೂಡಲ್ಲಿ ಯಾವಾಗಲೂ ಗುನುಗುತ್ತಾಳೆ
ನಿಗೂಢ ಕವಿತೆಯಾಗಿ ಕಾಡುತ್ತಾಳೆ
ಈಗೀಗ ಜೀವಿಸುವುದನ್ನು ಕಲಿತ್ತಿದ್ದಾಳೆ
ನನಗೂ ಹೇಳಿಕೊಡುತ್ತಾಳೆ
ಕವಿತೆ ಬರೆಯುವುದನ್ನು
ಮತ್ತು
ಒಂಟಿಯಾಗಿ ಜೀವಿಸುವುದನ್ನು!
#ಅನಂತ ಕುಣಿಗಲ್
ನಗುತ್ತಿದ್ದಳು ಯಾವಾಗಲೂ
ಮರೆಮಾಚಿ ಅಳುತ್ತಿದ್ದಳು
ಹನಿ ನೀರಿನ ಸದ್ಧಾಗದಂತೆ
ಮೆಲ್ಲಗೆ ರಚ್ಚೆ ಹಿಡಿಯುತ್ತಿದ್ದಳು
ಹಳೆ ನೆನಪುಗಳನ್ನು ಕೆದಕಿದಾಗ!
ತುಂಬಾ ನೊಂದಿದ್ದಳು
ಜಗತ್ತಿನ ಪರಿವೆಯಿಲ್ಲದೆ
ಯಾಂತ್ರಿಕವಾಗಿ ಬದುಕುತ್ತಿದ್ದಳು
ಅಪ್ಪ-ಅಮ್ಮ-ಗೆಳತಿಯರ ಗೊಡವೆಯೇ ಇರಲಿಲ್ಲ
ಎಲ್ಲವೂ ಇದ್ದೂ..
ಇಲ್ಲದಂತಾಗಿತ್ತು ಅವಳ ದಿನಗಳು
ಅದೊಂದು ಸ್ಪರ್ಶವಾಯಿತು
ಪುಸ್ತಕಗಳ ದರ್ಶನವಾಯಿತು
ಅವಳಲ್ಲಿ ಹೊಸ ಚಿಗುರು ಬೇರು ಬಿಟ್ಟಿತು
ನಿಜವಾಗಿಯೂ ನಗಲು ಶುರುಮಾಡಿದಳು
ಜಗತ್ತು ಬೇರೆಯದಾಗಿ ಕಂಡಿತು
ಬದುಕು ಇನ್ನೂ ಬೇಕೆನಿಸಿತು
ಈಗ ಎಲ್ಲರೊಂದಿಗೆ ಬೆರೆಯುತ್ತಾಳೆ
ಓದುತ್ತಾಳೆ, ಹಾಡುತ್ತಾಳೆ, ಕುಣಿಯುತ್ತಾಳೆ
ಉಲ್ಲಾಸದಿಂದ ನನ್ನ ಮುದ್ದಿಸುತ್ತಾಳೆ
ಬೇಸರವಾದಾಗ ಮಾತು ಬಿಟ್ಟು
ಮಾತನಾಡದಿದ್ದರೆ ಚುಚ್ಚುತ್ತಾಳೆ
ಮಾತು ಹೆಚ್ಚಾದಾಗ ಮಲಗುತ್ತಾಳೆ
ಯಾವಾಗಲೂ ತಿನ್ನುತ್ತಲೇ ಇರುತ್ತಾಳೆ
ಅವಳೆಂದರೆ ನನಗೇನೋ ಉತ್ಸಾಹ
ಹೊಸ ಚೈತನ್ಯ ತುಂಬಿದ ನಕ್ಷತ್ರದ ಹೊಳಪು
ಎದೆಗೂಡಲ್ಲಿ ಯಾವಾಗಲೂ ಗುನುಗುತ್ತಾಳೆ
ನಿಗೂಢ ಕವಿತೆಯಾಗಿ ಕಾಡುತ್ತಾಳೆ
ಈಗೀಗ ಜೀವಿಸುವುದನ್ನು ಕಲಿತ್ತಿದ್ದಾಳೆ
ನನಗೂ ಹೇಳಿಕೊಡುತ್ತಾಳೆ
ಕವಿತೆ ಬರೆಯುವುದನ್ನು
ಮತ್ತು
ಒಂಟಿಯಾಗಿ ಜೀವಿಸುವುದನ್ನು!
#ಅನಂತ ಕುಣಿಗಲ್
Nice ❤
ಪ್ರತ್ಯುತ್ತರಅಳಿಸಿ❤👌✌👍
ಪ್ರತ್ಯುತ್ತರಅಳಿಸಿSuper ri but yaru nimma yashi
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ 👌👌👌👌👌 ಸರ್ ನಿಮ್ಮ ಯಾಶಿ ನಿಮಗೆ ಸ್ಪೂರ್ತಿ
ಪ್ರತ್ಯುತ್ತರಅಳಿಸಿ❤❤❤😂❤
ಪ್ರತ್ಯುತ್ತರಅಳಿಸಿ👌👌🌹🌹😍
ಪ್ರತ್ಯುತ್ತರಅಳಿಸಿGood
ಪ್ರತ್ಯುತ್ತರಅಳಿಸಿಬಹಳ ಚೆನ್ನಾಗಿದೆ ! ☺
ಪ್ರತ್ಯುತ್ತರಅಳಿಸಿTumba chanagide.....when i start reading thin i went through of my life
ಪ್ರತ್ಯುತ್ತರಅಳಿಸಿ