ವಿಷಯಕ್ಕೆ ಹೋಗಿ

ಬಾಲ ಪ್ರಪಂಚ - ಕಥೆ - ಚೈತ್ರ ಗೋವರ್ಧನ್ ಬೆಂಗಳೂರು


ಬಾಲ ಪ್ರಪಂಚ

     ಒಂದು ಹೆಸರಾಂತ ನಗರದಲ್ಲಿ ಬಾಲಪ್ರಪಂಚ ಎಂಬ ಒಂದು ಪುಟ್ಟ ಸಂಸ್ಥೆ ಇರುತ್ತದೆ. ಈ ಬಾಲ ಪ್ರಪಂಚದ ವಿಶೇಷತೆ ಏನೆಂದರೆ ಅನಾಥ ಮಕ್ಕಳು,  ಕೆಲವರು ಅನೈತಿಕ ಸಂಬಂಧದಿಂದ ಜನಿಸಿದ, ಬೇಡ ಎಂದು ಬೀದಿಯಲ್ಲಿ ಬಿಟ್ಟು ಹೋದ ಮಕ್ಕಳು, ಇನ್ನು ಕೆಲವರು ತಮ್ಮ ಬಡತನದಿಂದ ಮಕ್ಕಳನ್ನು ಸಾಕಲಾರದವರು ಕೂಡ ಈ ಸಂಸ್ಥೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗುತ್ತಾರೆ.

ಈ ಸಂಸ್ಥೆಯ ಮುಖ್ಯಸ್ಥ ಆಪತ್ಭಾಂದವ ಎಂದು. ಇವರಿಗೆ ಸಹಾಯಕರಾಗಿ ನಂಬಿಕೆ, ಪ್ರೀತಿ ಮತ್ತು ವಿಶ್ವಾಸ ಎಂಬ ಮೂವರು ಕೆಲಸ ನಿರ್ವಹಿಸುತ್ತಿದ್ದರು.ಈ ಸಂಸ್ಥೆಯಲ್ಲಿ ಒಟ್ಟಾರೆ ೨೦೦ರಿಂದ ೨೫೦ ಮಕ್ಕಳಿದ್ದರು. 

ಬಾಲಪ್ರಪಂಚದ ಮಕ್ಕಳೆಲ್ಲ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬೆಳೆಯುತ್ತಿದ್ದರು. ಇಲ್ಲಿ ಮಕ್ಕಳಿಗೆ ಭಗವದ್ಗೀತೆ, ಕುರಾನ್, ಬೈಬಲ್ ಗ್ರಂಥಗಳ ಬಗ್ಗೆ ಬೋಧನೆ ಕೂಡ ಮಾಡುತಿದ್ದರು. ಅದಲ್ಲದೇ ಮಕ್ಕಳಿಗೆ ಜೀವನದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಹೇಳಿಕೊಡುತ್ತಿದ್ದರು. ಈ ಬಾಲ ಪ್ರಪಂಚದಲ್ಲಿ ಮನರಂಜನೆ ಕಾರ್ಯಕ್ರಮಗಳು ಕೂಡ ನಡೆಯುತಿದ್ದವು. ಆದ್ದರಿಂದಲೇ ಇಲ್ಲಿನ ಮಕ್ಕಳು ಎಲ್ಲರೂ ಜಾತಿ, ಧರ್ಮ, ಭಾಷೆ, ಲಿಂಗ ಭೇದವಿಲ್ಲದೆ ಬೆಳೆಯುತ್ತಿದ್ದರು. 

ಹೀಗೆ ಒಂದು ದಿನ ಆಪತ್ಭಾಂದವರು ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರು. ಹೋಗುವ ಮುನ್ನ ನಂಬಿಕೆ, ವಿಶ್ವಾಸ, ಪ್ರೀತಿ ಈ ಮೂವರನ್ನು ಕರೆದು ನಾನು ಮೂರು ದಿನಗಳ ಕಾಲ ಊರಿನಲ್ಲಿ ಇರುವುದಿಲ್ಲ ಎಂದು ಹೇಳಿ ಮಕ್ಕಳೆಲ್ಲರನ್ನೂ ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳುತ್ತೀರಾ ಎಂಬ ಭಾವನೆ ನನಗಿದೆ. ಆ ಧೈರ್ಯದಿಂದ ನಾನು ಹೋಗುತ್ತಿದ್ದೇನೆ ಎಂದು ಹೇಳಿ ಹೊರಟರು.

ಆಪತ್ಭಾಂದವ ಹೋದ ಮಾರನೇ ದಿನವೇ ಬಾಲಪ್ರಪಂಚ ಇದ್ದ ಏರಿಯಾದಲ್ಲಿ ಒಬ್ಬ ರೌಡಿ ಇರುತ್ತಾನೆ. ಈ ರೌಡಿಗೆ ಈ ಬಾಲಪ್ರಪಂಚದ ಜಾಗವನ್ನು ತನ್ನದಾಗಿ ಮಾಡಿಕೊಳ್ಳಬೇಕೆಂಬ ಹೆಬ್ಬಯಕೆ ಇತ್ತು. ಆದರೆ ಆಪತ್ಭಾಂದವರು ರೌಡಿ ಗೆ ಜಾಗವನ್ನು ತನ್ನದಾಗಿ ಮಾಡಿಕೊಳ್ಳಲು ಅವಕಾಶ ನೀಡಿರಲಿಲ್ಲ. ಏಕೆಂದರೆ ಆ ಜಾಗ ಆಪತ್ಭಾಂದವರ ಪಿತ್ರಾರ್ಜಿತ ಆಸ್ತಿ. ಆಪತ್ಭಾಂದವರಿಗೆ ತನ್ನವರು ಯಾರು ಇಲ್ಲದ ಕಾರಣ ಈ ರೀತಿ ಸಮಾಜ ಸೇವೆ ಮಾಡುತ್ತಿದ್ದರು. 

ಆಪತ್ಭಾಂದವರೆಂದರೆ ಸಮಾಜದಲ್ಲಿ ಒಂದು ಗೌರವ ಇತ್ತು. ಆದಕಾರಣ ರೌಡಿಗೆ ಈ ಬಾಲ ಪ್ರಪಂಚದ ಜಾಗವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹೀಗೆ ಆಪತ್ಭಾಂದವರು ಇಲ್ಲದ ಸಮಯ ನೋಡಿ ರೌಡಿ ಮತ್ತು ಅವನ ಸಹಚರರು ಬಾಲಪ್ರಪಂಚದ ಒಳಗೆ ಬಂದು ಬಾಲಪ್ರಪಂಚದ ಮಕ್ಕಳನ್ನು ಮತ್ತು ಆಪತ್ಭಾಂದವರ ಸಹಾಯಕರನ್ನು ಜೀವಂತವಾಗಿ ಸುಟ್ಟು ಹಾಕಲು ಯೋಜನೆ ಮಾಡುತ್ತಿರುವಾಗ, ಅಲ್ಲಿಗೆ ಬಾಲಪ್ರಪಂಚದ ಒಬ್ಬ ಚತುರ, ಹಾಗೂ ಚುರುಕು ಬುದ್ಧಿ ಇರುವ ಶೌರ್ಯ ಎಂಬ ಎಂಟು ವರ್ಷದ ಬಾಲಕ ಬಂದು ಇವರ ಮಾತುಗಳನ್ನು ಕೇಳಿಸಿಕೊಂಡ. ತಕ್ಷಣವೇ ಇವನು ಓಡಿ ಹೋಗಿ ನಂಬಿಕೆ ಯ ಮೊಬೈಲ್ ತೆಗೆದುಕೊಂಡು, ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದ.

ಬಾಲಪ್ರಪಂಚದ ಕಾಂಪೌಂಡ್ ನ ಒಳಗೆ  ಮಾತಾನಾಡುತ್ತಾ ನಿಂತಿದ್ದ ರೌಡಿಯ ಸಹಚರರನೊಬ್ಬನಿಗೆ ನೇಚರ್ ಕಾಲ್ ಗೆ ಹೋಗಲು ಅವಸರವಾಗಿ ಅಲ್ಲಿಯೇ ಇದ್ದ ಶೌಚಾಲಯದ ಒಳಗೆ ಹೋದ. ಇದನ್ನು ಗಮನಿಸಿದ ಶೌರ್ಯನ ಸ್ನೇಹಿತರು ಅವನು ಹೋಗಿದ್ದ ಶೌಚಾಲಯದ ಕೋಣೆಯ ಬಾಗಿಲ ಚಿಲಕ ಹಾಕಿದರು.

ಶೌರ್ಯ ಆ ರೌಡಿ ಸಹಚರ ಮಾತಾನಾಡುವ ಹಾಗೆ ಧ್ವನಿ ಬದಲಿಸಿ, ಗುರುಗಳೇ ಮತ್ತೊಮ್ಮೆ ನಮ್ಮ ಪ್ಲಾನ್ ಬಗ್ಗೆ ಹೇಳಿ ಎಂದು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡ. ನಂತರ ನಿಧಾನವಾಗಿ ಆ ಬಾಗಿಲಿನ ಚಿಲಕ ತೆಗೆದು ತಮ್ಮ ಸ್ಥಳಗಳಿಗೆ ಹಿಂದಿರುಗಿದರು. ರೌಡಿಯ ಸಹಚರ ಹೊರಗೆ ಬಂದ ಅಷ್ಟರಲ್ಲಿ ಬಾಲಪ್ರಪಂಚದ ಒಳಗೆ ಯಾರೋ ಕರೆಂಟ್ಗಳನೆಲ್ಲಾ ಆನ್ ಮಾಡಿದರು. ರೌಡಿ ಮತ್ತವನ ಸಹಚರರು ಇಂದು ನಾವು ಬಂದ ಕೆಲಸ ಕೈಗೂಡಲಿಲ್ಲ ಎಂದು ಪೆಚ್ಚು ಮೋರೆ ಹಾಕಿಕೊಂಡು ನಾಳೆಯಾದರು ನಮ್ಮ ಕೆಲಸ ಮುಗಿಸಬೇಕು ಇಲ್ಲ ಎಂದರೆ ಆಪತ್ಭಾಂದವರು ಬಂದು ಬಿಡುತ್ತಾರೆ ಎಂದು ಅವರವರೇ ಮಾತಾನಾಡಿಕೊಂಡು ಹೊರಟು ಹೋದರು.

ಮರು ದಿನ ಅದೇ ಸಮಯಕ್ಕೆ ರೌಡಿ ಮತ್ತು ಅವನ ಸಹಚರರು ಬಂದು ಸಮಯ ವ್ಯರ್ಥ ಮಾಡದೆ ಕೆಲಸ ಮಾಡಿ ಮುಗಿಸೋಣ ಎಂದು ಬಾಲಪ್ರಪಂಚದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಂತಸ ಪಡುತ್ತಾರೆ. ಇವರ ಪೂರ್ವಯೋಜನೆ ಅರಿತಿದ್ದ ಶೌರ್ಯ ಮತ್ತವನ ಗೆಳೆಯರು, ನಂಬಿಕೆ ವಿಶ್ವಾಸ ಪ್ರೀತಿ ಮೂವರಿಗೂ ಏನೋ ಒಂದು ನೆಪ ಹೇಳಿ ಉಳಿದವರನ್ನು ಕರೆದುಕೊಂಡು ಸರ್ಕಸ್ ನೋಡಲು ತೆರಳಿರುತ್ತಾರೆ. 

ಸರ್ಕಸ್ ನೋಡಿ ಮರಳಿದ ನಂಬಿಕೆ ವಿಶ್ವಾಸ ಪ್ರೀತಿ ಮತ್ತು ಮಕ್ಕಳಿಗೆ ತುಂಬಾ ದುಃಖವಾಯಿತು. ಆದರೆ ಏನು ಮಾಡುವುದು. ತಮ್ಮ ಪ್ರೀತಿ ಪಾತ್ರರಾದ ಆಪತ್ಭಾಂದವರು ತುಂಬಾ ಕಷ್ಟ ಪಟ್ಟು ಈ ಸಂಸ್ಥೆ ನಡೆಸುತ್ತಿದ್ದರು. ಇಂದು ಇದು ಸುಟ್ಟು ಹೋಗಿದೆ ಏನು ಮಾಡುವುದು ಎಂದು ಅಳುತ್ತಾ ಇರುವಾಗ ಶೌರ್ಯ ಮುಂದೆ ಬಂದು ಅಳಬೇಡಿ ನೀವು. ಈ ಕೆಲಸ ಮಾಡಿರುವ ಪಾಪಿಗಳಿಗೆ ತಕ್ಕ ಶಾಸ್ತಿ ಮಾಡಿಸುವೆ. ನಾವೆಲ್ಲರೂ ಬದುಕಿ ಉಳಿದಿದ್ದೇವೆ, ನಾಳೆ ಆಪತ್ಭಾಂದವರು ಬರಲಿ ಆಮೇಲೆ ಮುಂದಿನದರ ಬಗ್ಗೆ ಯೋಚಿಸೋಣ ಎಂದು ಬಾಲಪ್ರಪಂಚದ ಹೊರಾಂಗಣದಲ್ಲಿ ಎಲ್ಲರು ಕುಳಿತರು. 

ಆಪತ್ಭಾಂದವರು ಬಂದರು, ಬಾಲಪ್ರಪಂಚದ ಅವಸ್ಥೆ ನೋಡಿ ಕಂಗಾಲಾಗಿ ಕಣ್ಣೀರು ಸುರಿಸಿದರು. ತಮ್ಮ ಮಕ್ಕಳನ್ನು ತಬ್ಬಿಕೊಂಡು, ಅವರಿಗೆ ಸಮಾಧಾನ ಮಾಡಿದರು. ನಂತರ ಹೇಗಾಯಿತು ಇದೆಲ್ಲ ಎಂದು ವಿಚಾರಿಸಿದರು. ಆವಾಗ ಶೌರ್ಯ ನಡೆದ ಘಟನೆ ಬಗ್ಗೆ ಹೇಳಿ ಪೋಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು ರೌಡಿ ಮತ್ತು ಅವನ ಸಹಚರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನಂತರ ಶೌರ್ಯ ಮತ್ತು ಅವನ ಗೆಳೆಯರು ಸೇರಿ ಮಾಡಿದ ವಿಡಿಯೋ ತುಣುಕುಗಳನ್ನು ನ್ಯಾಯಾಲಯದಲ್ಲಿ ಬಿತ್ತರಿಸುವ ಹಾಗೆ ಮನವಿ ಮಾಡಿದರು. ನ್ಯಾಯಾಧೀಶರು ಇದನ್ನೆಲ್ಲ ನೋಡಿ ರೌಡಿ ಮತ್ತು ಅವನ ಸಹಚರರು ಮಾಡಿದ್ದು ಘೋರ ಅಪರಾಧ ಎಂದು ಪರಿಗಣಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.

ನಂತರ ಪತ್ರಿಕಾ ಮಾಧ್ಯಮ ಮತ್ತು ದೂರದರ್ಶನದವರು ಶೌರ್ಯ ಮತ್ತು ಅವನ ಗೆಳೆಯರ ಸಾಹಸವನ್ನು ಮೆಚ್ಚಿ ಎಲ್ಲಾ ಕಡೆ ಇವರ ಬಗ್ಗೆ ಸುದ್ದಿ ಹಬ್ಬಿಸಿದರು. ಇದನ್ನು ನೋಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಪತ್ಭಾಂದವರನ್ನು ಭೇಟಿ ಮಾಡಿ, ಬಾಲಪ್ರಪಂಚವನ್ನು ಮರು ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಭರವಸೆ ನೀಡಿದ ನಾಲ್ಕು ತಿಂಗಳೊಳಗೆ ಬಾಲಪ್ರಪಂಚ ಮತ್ತೇ ಎಂದಿನಂತೆ ಆಯಿತು. ಶೌರ್ಯ ಮತ್ತು ಅವನ ಸ್ನೇಹಿತರ ಸಾಹಸ ಮೆಚ್ಚಿ ಸರ್ಕಾರ ಆ ಮಕ್ಕಳಿಗೆಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಾಲಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು.

ಹೀಗೆ ಶೌರ್ಯ ಪುಟ್ಟ ಬಾಲಕನಾದರೂ ಅವನ ಸಮಯಪ್ರಜ್ಞೆಯಿಂದ ತನ್ನ ಗೆಳೆಯರ ಜೊತೆ ಸೇರಿ ತಮಗೆ ಒಂದು ಒಳ್ಳೆಯ ಜೀವನ ಕಲ್ಪಿಸುತ್ತಿರುವ ಹಾಗೂ ಆಪತ್ಭಾಂದವರ ಕನಸು ಆಗಿರುವ ಬಾಲಪ್ರಪಂಚ ಮತ್ತು  ಅದರ ಮೂರು ಸದಸ್ಯರಾದ ನಂಬಿಕೆ,ವಿಶ್ವಾಸ, ಪ್ರೀತಿ ಮತ್ತು ಮಿಕ್ಕ ಮಕ್ಕಳ ಪ್ರಾಣ ಉಳಿಸಿದರು.

- ಚೈತ್ರ ಗೋವರ್ಧನ್, ಬೆಂಗಳೂರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...