ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಟಾಮ್ ಅಂಡ್ ಜೆರ್ರೀಸ್ - ಕವನ - ಅನಂತ ಕುಣಿಗಲ್

(ಟಾಮ್ ಅಂಡ್ ಜೆರ್ರೀಸ್ (ಯಾಶಿಯ ಗೆಳತಿಯರು) ನನ್ನ ಹುಟ್ದಬ್ಬಕ್ಕೆ ಕಳಿಸಿಕೊಟ್ಟ ಉಡುಗೊರೆಗಳು) ಟಾಮ್ ಅಂಡ್ ಜೆರ್ರೀಸ್ ಯಾಶಿಯನ್ನು ಪಡೆಯಲು ಇವರನ್ನು ಗಂಟಿಕ್ಕಿಕೊಂಡೆ ನಿನಗಿಂತ ಅವರೇ ವಾಸಿ ಎನ್ನುವಷ್ಟರಲ್ಲಿ ಯಾಶಿ ಮುನಿಸಿಕೊಂಡಳು ನನ್ನೆದೆ ಬಡಿತ ಜೋರಾಯಿತು ಯಶಿಗೋಸ್ಕರ ಅವರ ಸಂಗ ಹಾಲು ಜೇನು ಸವಿದಾಂಗ ಕಳಸದಾಗಿನ ಹೊಂಬಾಳೆಯಂಗ ತಂಬಿಟ್ಟಿನ ಮ್ಯಾಗಳ ದೀಪದಂಗ ಅದನ್ನು ಹೊತ್ತ ನಾರಿಯರು ಇವರೇ ಸಂಖ್ಯೆಯಲ್ಲಿ ನಾಲ್ವರು ನಾಲ್ಕು ಲೋಕ ಆಳುವರು ನನ್ನವಳನ್ನೇ ಮುಳುಗಿಸಿ ನನ್ನ ಉಸಿರುಕಟ್ಟಿಸುವರು ಅವರ ಮೂಲಕ ಅವಳ ಅವಳ ಮೂಲಕ ಅವರ ವಿಷಯ ಕಲೆಹಾಕುವುದರಲ್ಲಿ ನಿಪುಣನಾದೆನಾ.. ಸಹಿಸದೆ ಕೋಪಿಷ್ಟಳಾದಳು ಯಾಶಿ ಎಲ್ಲ ಬಿಡಬೇಕೆಂದುಕೊಳ್ಳುವಷ್ಟರಲ್ಲಿ ಪರಸ್ಪರ ಹೊಂದಾಣಿಕೆಯಿಂದ ಒಂದು ಕುಟುಂಬವೇ ಆಯಿತು ಎಂದೂ ಬಿಡದಂತೆ ನಿಯಮವಾಯಿತು ನಾನು ಟಾಮ್ ಅವರು ನಾಲ್ಕು ಜನ ಜೆರ್ರೀಸ್ ಅವರಿಗೆ ಯಾಶಿಯೇ ಹೆಡ್ ಜೆರ್ರಿ.. ಅವರನ್ನು ಇವಳು ಎಚ್ಚರಿಸುತ್ತಿದ್ದಳು ಇವಳನ್ನು ನಾನು ತಿವಿಯುತ್ತಿದ್ದೆ ಮುನಿಸು ಆಗಾಗ ಮೂಡುತ್ತಿತ್ತು ಕಣ್ಮುಚ್ಚಿ ಬಿಡುವಷ್ಟರಲ್ಲಿ ಮಾಯವಾಗುತ್ತಿತ್ತು ಸಾಕಷ್ಟು ಖುಷಿ, ನೆನಪುಗಳೊಟ್ಟಿಗೆ ಅಮ್ಮ, ತಂಗಿ, ಪಾಪು, ಅಕ್ಕನ ಸಂಬಂಧಗಳು ಗಟ್ಟಿಯಾದವು ಉಡುಗೊರೆಯಾಗಿ ನೆಮ್ಮದಿ ನೆಲೆಯೂರಿತು ಎಲ್ಲರೂ ಸೌಖ್ಯವಾಗಿದ್ದೇವೆ ಟಾಮ್ ಅಂಡ್ ಜೆರ್ರೀಸ್ ಜಗಳವಂತು ಈ ಜನುಮಕ್ಕೆ ಮುಗಿಯುವುದಿಲ್ಲ! # ಅನಂತ ಕುಣಿ...

ನಿನಗೂ ಸ್ವಾತಂತ್ರವಿದೆ! - ಕವಿತೆ - ಅನಂತ ಕುಣಿಗಲ್

                   (ಚಿತ್ರ ಕೃಪೆ : Pinterest) " ನಿನಗೂ ಸ್ವಾತಂತ್ರವಿದೆ! " ನಿನಗೆ ಸ್ವಾತಂತ್ರವಿದೆ! ಅಭಿವ್ಯಕ್ತಿಸುವ ಅವಕಾಶವಿದೆ ಅಂದುಕೊಂಡಿದ್ದನ್ನು ಹೇಳಬಹುದು ಇಲ್ಲವೇ, ಮಾಡಿ ತೋರಿಸಬಹುದು ಆದರೆ, ನಾಭಿಯಲ್ಲಿ ಹುಟ್ಟಿ ಗಂಟಲಿನ ಮೂಲಕ ಹಾದು ಬಾಯಿಂದ ಹೊರಬರಬೇಕಾದರೆ.. ಒಂದು ಜರಡಿಯ ಅವಶ್ಯಕತೆ ಇದೆ ಜಾತಿ, ಧರ್ಮ ಹಾಗೂ ಲಿಂಗಕ್ಕೆ - ಸಂಬಂಧಿಸಿದ ವಿಷಯಗಳಾದರೆ, ಎರಡು ಜರಡಿಗಳು ಬೇಕಾಗಬಹುದು ಅಷ್ಟು ಗಟ್ಟಿಯಾಗಿ ಪರಿಗಣಿಸುತ್ತಾರೆ ನನ್ನ ಸುತ್ತಲಿನ ಜನ ಯಾವುದಕ್ಕೂ ಇಲ್ಲದ ಪ್ರಾಮುಖ್ಯತೆ ಇವುಗಳಿಗಿದೆ ಒಂಥರಾ ರೂಲ್ಡ್ ಮಾಡೆಲ್ಸ್ ಇದ್ದಂಗೆ! ಅಡ್ಡಡ್ಡ ಮಾತುಗಳನ್ನು ಬರೆದು ವಿವಾದ ಹುಟ್ಟಾಕಿ, ಬೇಗ ಗುರುತಿಸಿಕೊಳ್ಳಬಹುದು ಎಲುಬಿಲ್ಲದವರಿಗೆ ಇದು ಮಂತ್ರಸೂತ್ರ ವಿವಾದದಾಚೆಗಿನ ಬದುಕು ಮುಖ್ಯವಲ್ಲವೇ? ನಗಬಾರದಲ್ಲಾ.. ನಮ್ಮನ್ನ ನೋಡಿ! ಅದಕ್ಕೆ ಇತಿಮಿತಿಯಲ್ಲಿ ಪ್ರತಿಕ್ರಿಯಿಸಬೇಕು ಆದರೂ ನಿನಗೆ ಸ್ವಾತಂತ್ರವಿದೆ ಹಾಗಂತ ಹಕ್ಕೂ ಕೂಡ ಇದೆ ಇನ್ನೂ.. ನಿನಗೆ ಬಿಟ್ಟದ್ದು!!                         # ಅನಂತ ಕುಣಿಗಲ್                            anantha on fb ...

ಸೈರಿಸು ಇನ್ನೂ - ವಿವಾಹ ವಾರ್ಷಿಕೋತ್ಸವದ ಕವಿತೆ - ಅಂಜಲಿ ದೇರಾಜೆ

(ಚಿತ್ರ ಕೃಪೆ : ಜಯೀಬ್ ವುಲ್ಲ್ಲಾ ಅಸಾದ್) " ಸೈರಿಸು ಇನ್ನೂ.. "  ಇದ್ದರೆ ಇರಬೇಕು ನಿನ್ನಂಥ ಇನಿಯ ಹುಡುಕಿದರೂ ಸಿಗಬಾರದು ನಿನ್ನಂಥ ಗಂಡು ಜೀವ ಏಳೇಳು ಜನುಮಕೂ ನೀನೇ ನನ್ನ ಜೀವ  ತಂದೆಯಾಗಿ, ತಾಯಿಯಾಗಿ ಅಣ್ಣ-ತಂಗಿ ಎಲ್ಲವೂ ಆಗಿ ನನ್ನ ಸೈರಿಸಿದೆ ಇಷ್ಟು ವರ್ಷ ಇನ್ನೂ ಸೈರಿಸಬೇಕಿದೆ ಇರುವಷ್ಟು ವರ್ಷ ನನ್ನ ಜೊತೆಜೊತೆಗೆ  ಪತಿಯೇ ನಿಜ ದೈವ ನೀ ನನ್ನ ಪರಮ ದೈವ ನಂಬಿ ಬಂದೆ ನಾ ಮನಸಾರೆ ಇಚ್ಚೆಯನ್ನರಿತು ನಡೆಯುತಿರುವೆ ನೀ.. ಹೀಗೇ ಇರಲಿ ಎಂದೆಂದೂ ಬಾಳು ಸುಖಮಯವಾಗಿರಲಿ  ನಾ ಗಂಗೆ ನೀ ನನ್ನ ಹೊತ್ತ ಗಂಗಾಧರ ನಿನ್ನ ಎದೆಯಲಿ ಆರದ ದೀಪ ನಾ.. ನನ್ನ ಮಡಿಲಲಿ ಪುಟ್ಟ ಮಗುವು ನೀ.. ಲಾಲಿಯಾಡುತಾ ಪೂಜಿಸುವೆ ಸದಾ ಸದ್ದುಮಾಡುತಿರು ನನ್ ಅಂತರಾಳದಲಿ ಅಲ್ಲಿಯವರೆಗೂ ಈ ಉಸಿರಿರುವುದು ನಿನಗಾಗಿ  ಈ ದಿನ ಬಲು ಅಚ್ಚರಿಯ ದಿನ ನಿನ್ನನು ಪಡೆದ ಸುದಿನ ಅಂದೇ ನನ್ನ ಮರುಜನ್ಮ ನಿನ್ನ ಬೆರಳ ಹಿಡಿದು ಏಳು ಹೆಜ್ಜೆ ಇಟ್ಟ ದಿನ ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕಾದ ದಿನ (ನನ್ನ ಅತ್ತಿಗೆಯ ಪರವಾಗಿ ನನ್ನ ಅಣ್ಣನಿಗೆ ಮದುವೆಯ ವಾರ್ಷಿಕೋತ್ಸವದ ಪ್ರಯುಕ್ತ ಬರೆದ ಕವಿತೆ) # ಅಂಜಲಿ ದೇರಾಜೆ

ಅವ್ವನ ನೆನಪಾಗುತ್ತದೆ - ಕವಿತೆ - ಹುಸೇನಸಾಬ ವಣಗೇರಿ

ಅವ್ವನ ನೆನಪಾಗುತ್ತದೆ.. ನಾಲ್ಕು ಅಕ್ಷರ ಕಲಿಯಲೆಂದು ಹೊಟ್ಟೆ ಪಾಡಿಗೆ ದುಡಿಯಲೆಂದು ನಾನಾ ಕಾರಣಗಳಿಂದ ಬದುಕ ಬವಣೆಗಳನ್ನು ಮೆಟ್ಟಿ ಹುಟ್ಟಿದೂರು ಬಿಟ್ಟು  ಬಲುದೂರದ ನಗರಗಳಿಗೆ ಕನಸು ಕಟ್ಟಿಕೊಂಡು ಗುಳೆ ಬಂದಿದ್ದೇವೆ. ನಗರಗಳಲ್ಲಿನ ಚೆಂದದ ವೈಭೋಗದ ಜೀವನ ನಮಗಲ್ಲ ನಿತ್ಯ ಪರದಾಡುವುದು ನಮ್ಮಂತ ಬಡವರಿಗೆ ತಪ್ಪಿದ್ದಲ್ಲ. ಅದೇ ಎರಡೊತ್ತಿನ ಊಟ ಅನ್ನ ಸಾರು ಮಿಕ್ಕುಳಿದರೆ ನಾಳೆಗೆ ಚಿತ್ರಾನ್ನ ಇಲ್ಲವೇ ಮೊಸರನ್ನ ಬಿಟ್ಟರೆ ನಿತ್ಯ ಪಲಾವ್ ತಪ್ಪಿದ್ದಲ್ಲ. ರಾಶಿ ರಾಶಿಯಾಗಿ ಬಿದ್ದ ಬಟ್ಟೆಗಳನ್ನು  ಸೋಪ್ ಹಚ್ಚಿ ತೊಳೆಯುವಾಗ, ನಿನ್ನೆ ಮೊನ್ನೆಯ ಪಾತ್ರೆಗಳನೆಲ್ಲಾ  ಒಟ್ಟಿಗೆ ಸೇರಿಸಿ ತಿಕ್ಕುವಾಗ ಅವ್ವನ ನೆನಪಾಗುತ್ತದೆ. ಬಡಜೀವ ಊರ ನೆನೆಯುತ್ತದೆ ನೆನಪು ಕಣ್ಣೀರ ತರಿಸುತ್ತದೆ. ಕೆಲವೊಮ್ಮೆ ಖಾಲಿ ಜೇಬು ಸಣ್ಣಗೆ ಕಣ್ಣೀರು ತರಿಸುತ್ತದೆ ಹಸಿದ ಹೊಟ್ಟೆಯ ನಿಗಿಸಲು ರಾತ್ರಿ ಮಿಕ್ಕುಳಿದ ಬಿಳಿ ಅನ್ನಕ್ಕೆ  ಕಾರದಪುಡಿ ಎಣ್ಣೆ ಕಲಸಿ ಊಟ ಮಾಡುವಾಗ  ಪ್ರೀತಿಯಿಂದ ಬಿಸಿ ರೊಟ್ಟಿಮಾಡಿ ಮೂರೊತ್ತು ಊಟ ಬಡಿಸುತ್ತಿದ್ದ  ಅವ್ವನ ನೆನಪಾಗುತ್ತದೆ ಹುಟ್ಟಿದ ಊರು ಕಣ್ಮುಂದೆ ಬರುತ್ತದೆ.             ಹುಸೇನಸಾಬ ವಣಗೇರಿ, ಧಾರವಾಡ

ಜಾಣ ಕುರುಡರ ಜಾತ್ರೆ - ಕವಿತೆ - ಸಿದ್ದುಮೂರ್ತಿ ತುಮಕೂರು

ಜಾಣ ಕುರುಡರ ಜಾತ್ರೆ ಕಾಣ ಹೊರಟೆವು ದೇವರ ಗುಡಿ ಚರ್ಚು ಮಸೀದಿ ಯಲ್ಲಿ ಹಾರ ತುರಾಯಿ ಧೂಪ ಗಂಧಗಳಲಿ ಉರಿವ ಕರ್ಪೂರದಾರತಿಯಲಿ., ದ್ವೇಷ, ಈರ್ಷೆ ಗಳ  ಸ್ವಾರ್ಥ ಕರ್ಮಗಳ ನೆಲೆಯಲ್ಲಿ ಸೋಗಿನ ಭಕ್ತಿ ಪರಾಕಾಷ್ಠೆಯಲಿ ಕಾಣ ಹೊರಟೆವು ಕಾಣದ ದೇವರ..!! ಹಸಿದ ಹೊಟ್ಟೆಯ ವೇದನೆಗೆ ಮುರುಕ ಹುಟ್ಟದು ಅಳಿದ ಬದುಕ ಅನಾಥರೊಡಲಿಗೆ ಸಲ್ಲದ ಸಾಂತ್ವನವು ಎದೆಯೊಡಲ ಕಂಗಳು ನೋಡಿ ನೋಡದೆಯೇ ನಡೆದ ಹಾದಿಯೊಳು  ಸ್ವಾರ್ಥ ಚಿಂತೆಗಳ ಲೋಭ ಸಂತೆಯೊಳಗೆ ಬೀಡು ಬಿಟ್ಟಿದೆ.. ಮಹಲಿನೊಳಗೆ ದೇವತಾರಾಧನೆ ಸೂರಿಲ್ಲದ ಬೀದಿ ಬದಿಯ  ಬದುಕುಗಳ ನಿತ್ಯ ರೋಧನೆ ಬಿಕ್ಕುವ ಬೆತ್ತಲು ಬದುಕ ಕಂಡು ಕಾಣದ ಜಾಣ ಕುರುಡರ ನಿತ್ಯ ಜಾತ್ರೆಯು  ಆತ್ಮ ಸಾಕ್ಷಿಗಳ ಕಗ್ಗೊಲೆಯು.., ತೆರೆಯದರಿವು ಕಣ್ಣುಗಳ ಮುಂದೆ ಹರಿದು ಮಣ್ಣಾಗಿ ಹೋದ ಕ್ಷೀರಾಭಿಷೇಕ ನಿಜದ ಹಸಿವು ಗಳ ನೀಗಿಸದ ನೈವೇದ್ಯ ಎತ್ತ ಸಾರ್ಥಕ ..??? ಹಸಿದೊಡಲಿಗೆ ತುತ್ತಾಗು ಹರಿವ ಕಣ್ಣೀರ ಒರೆಸೊ ಬೆರಳುಗಳಿಂದ ಉಸಿರ ಬಲಗೊಳಿಸು ಉಕ್ಕುವ ದು:ಖಗಳ ಬಳಸಿ ಅಪ್ಪಿ ಸಂತೈಸು ದೀನರಿಗೆ ದಯೆಯಾಗು.. ಅರಿವಿನ ಅನುಕಂಪ ಪಣತಿಯಂತೆ ಉರಿದು ದಾರಿದೀಪವಾಗಲು ದೈವದ ಮುಂದಿನ ಹಣತೆಯಂತೆ ನಮ್ಮೊಳಗಿನ ದೈವಾಂಶ ನಿತ್ಯ ಪ್ರಕಾಶ ಆಗ..                     ಸಿದ್ದು ಮೂರ್ತಿ, ತುಮಕೂರು

ಕಣ್ಣೀರಿನ ಕಪ್ಪ - ಕವಿತೆ - ಹುಸೇನಸಾಬ ವಣಗೇರಿ

ಕಣ್ಣೀರಿನ ಕಪ್ಪ ಪ್ರೀತಿಯೆಂಬ ಘನಘೋರವಾದ ಯುದ್ದದಲ್ಲಿ ಶಕ್ತಿ ಮೀರಿ ಹೋರಾಡಿ ಜಾತಿ ಎಂಬ ಆಯುಧದ ಮುಂದೆ ಭೀಕರವಾಗಿ ಸೋತವನು ನಾನು. ನನ್ನ ಕನಸಿನ ಪ್ರೀತಿಯ ಸಾಮ್ರಾಜ್ಯ ಕುಸಿದು ಬಿದ್ದು ಕ್ರಮೇಣ ಕಣ್ಮರೆಯಾಗಿದೆ ಆದರೆ  ನೋವು ಮಾಸಿಲ್ಲ ನೆನಪು ಸತ್ತಿಲ್ಲ. ನಕ್ಕು ನಲಿದ ಆ ದಿನಗಳನ್ನು ಆಗಾಗ ನೆನೆಯುತ್ತೇನೆ ನೆನಪಿನಲ್ಲಿ ಸ್ವಲ್ಪ ಕಾಲ ಕಳೆಯುತ್ತೇನೆ ಸಾಲದ್ದಕ್ಕೆ  ಕಣ್ಣೀರಿನ ಕಪ್ಪ ಕಟ್ಟುತ್ತೇನೆ. ಆಗೋಮ್ಮ ಈಗೋಮ್ಮೆ ಪ್ರೀತಿ ಎಂಬ ಯುದ್ದದಲ್ಲಿ ಸೋತ ನನ್ನನ್ನು ಮತ್ತೆ ಆಹ್ವಾನಿಸುತ್ತಾರೆ ಪ್ರೀತಿಸುವ ಮುನ್ಸೂಚನೆ ನೀಡುತ್ತಾರೆ. ಯಾವುದೇ ಗೊಡವೆಗೆ ಹೋಗದೆ ನನ್ನ ಪಾಡಿಗೆ ನಾನು ನಯವಾಗಿ ಹಿಂದೆ ಸರಿದು ಬಿಡುತ್ತೇನೆ ಸೋಲುತ್ತೇನೆ ಎಂಬ ಭಯಕ್ಕಲ್ಲ ಮತ್ತಾವುದೋ ಆಯುಧಕ್ಕೆ ಶರಣಾಗಿ ಕಣ್ಣೀರಿನ ಕಪ್ಪ ತೆರಬೇಕು ಎಂಬ ಆತಂಕಕ್ಕೆ.             ಹುಸೇನಸಾಬ ವಣಗೇರಿ, ಧಾರವಾಡ.

ಅಪ್ಪು.. ಇನ್ನು ಬರೀ ನೆನಪು! - ಅನಂತ ಕುಣಿಗಲ್

01. ಅಂಗಳದಾಗ ಆಟ ಕಲಿತು ಆಡುತ್ತಿದ್ದ ಬಯಲಿನಾಗ ಬೇಸರ ತರಿಸಿ, ಆಟವ ನಿಲ್ಲಿಸಿ ಉಳಿದ ಎಲ್ಲರ ಮನದಾಗ 02. ಅಪ್ಪನ ಹಾಗೆ ಹಾಡು, ಕುಣಿತ, ನಗೆಯ ಪಾಠ ಒಪ್ಪಿಗೆ ಇಲ್ಲದೆ ಅಪ್ಪುವ ಅವಕಾಶ ತಪ್ಪಿಹೋಯಿತಾ.. 03. ಅಂಬರದಾಗ ಮನೆಯ ಹುಡುಕಿ ಕೈಲಾಸ ಸೇರಿದನು ಭುವಿಯೊಳು ನೆನಪಿನ ಬುಗ್ಗೆ ಎಬ್ಬಿಸಿ ಮಾಯವಾದನು 04. ಲೋಹಿತನೆಂಬ ಅಶ್ವ ಓಡಿ ಓಡಿಯೂ ಪುನೀತನಾಗದೆ ಲೋಹಿತಾಶ್ವನೇ ಆದ ಕೊನೆಯ ಚರಣವ ಹಾಡಿ ಮುಗಿಸದೆ ಉಸಿರು ನಿಲ್ಲಿಸಿದ 05. ಪ್ರಾರ್ಥನೆಗೂ ಕರುಣೆ ಇಲ್ಲ ಪಾಪಿಗಳ ಲೋಕದಲ್ಲಿ ಪಾಪದವರಿಗಿಲ್ಲ ಜಾಗ ನಲವತ್ತಾರಕ್ಕೆ ತೆರೆಯ ಎಳೆದು ಮೃದು ಹೃದಯಗಳೊಳು ಲೀನವಾದ 06. ಪವರ್ ಪಟ್ಟಕ್ಕೆ ಸ್ಪೋಟಕ ಆಘಾತ ರಾಜನ ಮನೆಗೆ ನೋವಿನ ಸಂತಾಪ 07. ಇನ್ನೆಲ್ಲಿಯ ಭರವಸೆ ಕನಸುಗಳು ಚೂರಾಗಿ ಮನಗಳು ರೆಕ್ಕೆಯ ಮುದುಡಿವೆ ಬರೆಯಲು ಸಾವಿರ ಇದ್ದರೂ.. ಇಂಕು ಮಂಕಾಗಿ ಬರೆಯುವುದನ್ನೇ ಮರೆತಿದೆ! #ಅನಂತ ಕುಣಿಗಲ್