ಕಣ್ಣೀರಿನ ಕಪ್ಪ
ಪ್ರೀತಿಯೆಂಬ
ಘನಘೋರವಾದ ಯುದ್ದದಲ್ಲಿ
ಶಕ್ತಿ ಮೀರಿ ಹೋರಾಡಿ
ಜಾತಿ ಎಂಬ ಆಯುಧದ ಮುಂದೆ
ಭೀಕರವಾಗಿ ಸೋತವನು ನಾನು.
ನನ್ನ ಕನಸಿನ
ಪ್ರೀತಿಯ ಸಾಮ್ರಾಜ್ಯ ಕುಸಿದು ಬಿದ್ದು
ಕ್ರಮೇಣ ಕಣ್ಮರೆಯಾಗಿದೆ
ಆದರೆ
ನೋವು ಮಾಸಿಲ್ಲ ನೆನಪು ಸತ್ತಿಲ್ಲ.
ನಕ್ಕು ನಲಿದ ಆ ದಿನಗಳನ್ನು
ಆಗಾಗ ನೆನೆಯುತ್ತೇನೆ
ನೆನಪಿನಲ್ಲಿ ಸ್ವಲ್ಪ ಕಾಲ ಕಳೆಯುತ್ತೇನೆ
ಸಾಲದ್ದಕ್ಕೆ
ಕಣ್ಣೀರಿನ ಕಪ್ಪ ಕಟ್ಟುತ್ತೇನೆ.
ಆಗೋಮ್ಮ ಈಗೋಮ್ಮೆ
ಪ್ರೀತಿ ಎಂಬ ಯುದ್ದದಲ್ಲಿ
ಸೋತ ನನ್ನನ್ನು
ಮತ್ತೆ ಆಹ್ವಾನಿಸುತ್ತಾರೆ
ಪ್ರೀತಿಸುವ ಮುನ್ಸೂಚನೆ ನೀಡುತ್ತಾರೆ.
ಯಾವುದೇ ಗೊಡವೆಗೆ ಹೋಗದೆ
ನನ್ನ ಪಾಡಿಗೆ ನಾನು
ನಯವಾಗಿ ಹಿಂದೆ ಸರಿದು ಬಿಡುತ್ತೇನೆ
ಸೋಲುತ್ತೇನೆ ಎಂಬ ಭಯಕ್ಕಲ್ಲ
ಮತ್ತಾವುದೋ ಆಯುಧಕ್ಕೆ ಶರಣಾಗಿ
ಕಣ್ಣೀರಿನ ಕಪ್ಪ ತೆರಬೇಕು ಎಂಬ ಆತಂಕಕ್ಕೆ.
ಹುಸೇನಸಾಬ ವಣಗೇರಿ, ಧಾರವಾಡ.
ಗೆಳೆಯ ಅದ್ಬುತ್ ನೀನ್ನ ಬರವಣಿಗೆ ನೀನ್ನ ಇನ್ನೂ ಎತ್ತರವಾದ ಮಟ್ಟಕೆ ಕರೆದುಕೊಂಡು ಹೋಗಲಿ!!!!
ಪ್ರತ್ಯುತ್ತರಅಳಿಸಿಧನ್ಯವಾದಗಳು ಬ್ರದರ್
ಅಳಿಸಿ