(ಚಿತ್ರ ಕೃಪೆ : Pinterest)
" ನಿನಗೂ ಸ್ವಾತಂತ್ರವಿದೆ! "
ನಿನಗೆ ಸ್ವಾತಂತ್ರವಿದೆ!
ಅಭಿವ್ಯಕ್ತಿಸುವ ಅವಕಾಶವಿದೆ
ಅಂದುಕೊಂಡಿದ್ದನ್ನು ಹೇಳಬಹುದು
ಇಲ್ಲವೇ, ಮಾಡಿ ತೋರಿಸಬಹುದು
ಆದರೆ,
ನಾಭಿಯಲ್ಲಿ ಹುಟ್ಟಿ
ಗಂಟಲಿನ ಮೂಲಕ ಹಾದು
ಬಾಯಿಂದ ಹೊರಬರಬೇಕಾದರೆ..
ಒಂದು ಜರಡಿಯ ಅವಶ್ಯಕತೆ ಇದೆ
ಜಾತಿ, ಧರ್ಮ ಹಾಗೂ ಲಿಂಗಕ್ಕೆ
- ಸಂಬಂಧಿಸಿದ ವಿಷಯಗಳಾದರೆ,
ಎರಡು ಜರಡಿಗಳು ಬೇಕಾಗಬಹುದು
ಅಷ್ಟು ಗಟ್ಟಿಯಾಗಿ ಪರಿಗಣಿಸುತ್ತಾರೆ
ನನ್ನ ಸುತ್ತಲಿನ ಜನ
ಯಾವುದಕ್ಕೂ ಇಲ್ಲದ ಪ್ರಾಮುಖ್ಯತೆ ಇವುಗಳಿಗಿದೆ
ಒಂಥರಾ ರೂಲ್ಡ್ ಮಾಡೆಲ್ಸ್ ಇದ್ದಂಗೆ!
ಅಡ್ಡಡ್ಡ ಮಾತುಗಳನ್ನು ಬರೆದು
ವಿವಾದ ಹುಟ್ಟಾಕಿ, ಬೇಗ ಗುರುತಿಸಿಕೊಳ್ಳಬಹುದು
ಎಲುಬಿಲ್ಲದವರಿಗೆ ಇದು ಮಂತ್ರಸೂತ್ರ
ವಿವಾದದಾಚೆಗಿನ ಬದುಕು ಮುಖ್ಯವಲ್ಲವೇ?
ನಗಬಾರದಲ್ಲಾ.. ನಮ್ಮನ್ನ ನೋಡಿ!
ಅದಕ್ಕೆ ಇತಿಮಿತಿಯಲ್ಲಿ ಪ್ರತಿಕ್ರಿಯಿಸಬೇಕು
ಆದರೂ ನಿನಗೆ ಸ್ವಾತಂತ್ರವಿದೆ
ಹಾಗಂತ ಹಕ್ಕೂ ಕೂಡ ಇದೆ
ಇನ್ನೂ.. ನಿನಗೆ ಬಿಟ್ಟದ್ದು!!
# ಅನಂತ ಕುಣಿಗಲ್
ತುಂಬಾ ಅರ್ಥ ಪೂರ್ಣವಾಗಿದೆ
ಪ್ರತ್ಯುತ್ತರಅಳಿಸಿSuper ಮೈದ್ನ
ಪ್ರತ್ಯುತ್ತರಅಳಿಸಿಹೌದು ಸ್ವಾತಂತ್ರ್ಯವಿದೆ ಎಂದು ದುರುಪಯೋಗ ಮಾಡಿಕೊಳ್ಳಬಾರದು
ಪ್ರತ್ಯುತ್ತರಅಳಿಸಿಇದ್ದರೂ ಇಲ್ಲದಿರುವ ಸ್ವಾತಂತ್ರ..
ಪ್ರತ್ಯುತ್ತರಅಳಿಸಿ