(ಚಿತ್ರ ಕೃಪೆ : ಜಯೀಬ್ ವುಲ್ಲ್ಲಾ ಅಸಾದ್)
ಇದ್ದರೆ ಇರಬೇಕು
ನಿನ್ನಂಥ ಇನಿಯ
ಹುಡುಕಿದರೂ ಸಿಗಬಾರದು
ನಿನ್ನಂಥ ಗಂಡು ಜೀವ
ಏಳೇಳು ಜನುಮಕೂ
ನೀನೇ ನನ್ನ ಜೀವ
ತಂದೆಯಾಗಿ, ತಾಯಿಯಾಗಿ
ಅಣ್ಣ-ತಂಗಿ ಎಲ್ಲವೂ ಆಗಿ
ನನ್ನ ಸೈರಿಸಿದೆ ಇಷ್ಟು ವರ್ಷ
ಇನ್ನೂ ಸೈರಿಸಬೇಕಿದೆ
ಇರುವಷ್ಟು ವರ್ಷ ನನ್ನ ಜೊತೆಜೊತೆಗೆ
ಪತಿಯೇ ನಿಜ ದೈವ
ನೀ ನನ್ನ ಪರಮ ದೈವ
ನಂಬಿ ಬಂದೆ ನಾ ಮನಸಾರೆ
ಇಚ್ಚೆಯನ್ನರಿತು ನಡೆಯುತಿರುವೆ ನೀ..
ಹೀಗೇ ಇರಲಿ ಎಂದೆಂದೂ
ಬಾಳು ಸುಖಮಯವಾಗಿರಲಿ
ನಾ ಗಂಗೆ
ನೀ ನನ್ನ ಹೊತ್ತ ಗಂಗಾಧರ
ನಿನ್ನ ಎದೆಯಲಿ ಆರದ ದೀಪ ನಾ..
ನನ್ನ ಮಡಿಲಲಿ ಪುಟ್ಟ ಮಗುವು ನೀ..
ಲಾಲಿಯಾಡುತಾ ಪೂಜಿಸುವೆ
ಸದಾ ಸದ್ದುಮಾಡುತಿರು ನನ್ ಅಂತರಾಳದಲಿ
ಅಲ್ಲಿಯವರೆಗೂ ಈ ಉಸಿರಿರುವುದು ನಿನಗಾಗಿ
ಈ ದಿನ
ಬಲು ಅಚ್ಚರಿಯ ದಿನ
ನಿನ್ನನು ಪಡೆದ ಸುದಿನ
ಅಂದೇ ನನ್ನ ಮರುಜನ್ಮ
ನಿನ್ನ ಬೆರಳ ಹಿಡಿದು ಏಳು ಹೆಜ್ಜೆ ಇಟ್ಟ ದಿನ
ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕಾದ ದಿನ
(ನನ್ನ ಅತ್ತಿಗೆಯ ಪರವಾಗಿ ನನ್ನ ಅಣ್ಣನಿಗೆ ಮದುವೆಯ ವಾರ್ಷಿಕೋತ್ಸವದ ಪ್ರಯುಕ್ತ ಬರೆದ ಕವಿತೆ)
#ಅಂಜಲಿ ದೇರಾಜೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ