ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೈರಿಸು ಇನ್ನೂ - ವಿವಾಹ ವಾರ್ಷಿಕೋತ್ಸವದ ಕವಿತೆ - ಅಂಜಲಿ ದೇರಾಜೆ

(ಚಿತ್ರ ಕೃಪೆ : ಜಯೀಬ್ ವುಲ್ಲ್ಲಾ ಅಸಾದ್) " ಸೈರಿಸು ಇನ್ನೂ.. "  ಇದ್ದರೆ ಇರಬೇಕು ನಿನ್ನಂಥ ಇನಿಯ ಹುಡುಕಿದರೂ ಸಿಗಬಾರದು ನಿನ್ನಂಥ ಗಂಡು ಜೀವ ಏಳೇಳು ಜನುಮಕೂ ನೀನೇ ನನ್ನ ಜೀವ  ತಂದೆಯಾಗಿ, ತಾಯಿಯಾಗಿ ಅಣ್ಣ-ತಂಗಿ ಎಲ್ಲವೂ ಆಗಿ ನನ್ನ ಸೈರಿಸಿದೆ ಇಷ್ಟು ವರ್ಷ ಇನ್ನೂ ಸೈರಿಸಬೇಕಿದೆ ಇರುವಷ್ಟು ವರ್ಷ ನನ್ನ ಜೊತೆಜೊತೆಗೆ  ಪತಿಯೇ ನಿಜ ದೈವ ನೀ ನನ್ನ ಪರಮ ದೈವ ನಂಬಿ ಬಂದೆ ನಾ ಮನಸಾರೆ ಇಚ್ಚೆಯನ್ನರಿತು ನಡೆಯುತಿರುವೆ ನೀ.. ಹೀಗೇ ಇರಲಿ ಎಂದೆಂದೂ ಬಾಳು ಸುಖಮಯವಾಗಿರಲಿ  ನಾ ಗಂಗೆ ನೀ ನನ್ನ ಹೊತ್ತ ಗಂಗಾಧರ ನಿನ್ನ ಎದೆಯಲಿ ಆರದ ದೀಪ ನಾ.. ನನ್ನ ಮಡಿಲಲಿ ಪುಟ್ಟ ಮಗುವು ನೀ.. ಲಾಲಿಯಾಡುತಾ ಪೂಜಿಸುವೆ ಸದಾ ಸದ್ದುಮಾಡುತಿರು ನನ್ ಅಂತರಾಳದಲಿ ಅಲ್ಲಿಯವರೆಗೂ ಈ ಉಸಿರಿರುವುದು ನಿನಗಾಗಿ  ಈ ದಿನ ಬಲು ಅಚ್ಚರಿಯ ದಿನ ನಿನ್ನನು ಪಡೆದ ಸುದಿನ ಅಂದೇ ನನ್ನ ಮರುಜನ್ಮ ನಿನ್ನ ಬೆರಳ ಹಿಡಿದು ಏಳು ಹೆಜ್ಜೆ ಇಟ್ಟ ದಿನ ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕಾದ ದಿನ (ನನ್ನ ಅತ್ತಿಗೆಯ ಪರವಾಗಿ ನನ್ನ ಅಣ್ಣನಿಗೆ ಮದುವೆಯ ವಾರ್ಷಿಕೋತ್ಸವದ ಪ್ರಯುಕ್ತ ಬರೆದ ಕವಿತೆ) # ಅಂಜಲಿ ದೇರಾಜೆ

ಅವ್ವನ ನೆನಪಾಗುತ್ತದೆ - ಕವಿತೆ - ಹುಸೇನಸಾಬ ವಣಗೇರಿ

ಅವ್ವನ ನೆನಪಾಗುತ್ತದೆ.. ನಾಲ್ಕು ಅಕ್ಷರ ಕಲಿಯಲೆಂದು ಹೊಟ್ಟೆ ಪಾಡಿಗೆ ದುಡಿಯಲೆಂದು ನಾನಾ ಕಾರಣಗಳಿಂದ ಬದುಕ ಬವಣೆಗಳನ್ನು ಮೆಟ್ಟಿ ಹುಟ್ಟಿದೂರು ಬಿಟ್ಟು  ಬಲುದೂರದ ನಗರಗಳಿಗೆ ಕನಸು ಕಟ್ಟಿಕೊಂಡು ಗುಳೆ ಬಂದಿದ್ದೇವೆ. ನಗರಗಳಲ್ಲಿನ ಚೆಂದದ ವೈಭೋಗದ ಜೀವನ ನಮಗಲ್ಲ ನಿತ್ಯ ಪರದಾಡುವುದು ನಮ್ಮಂತ ಬಡವರಿಗೆ ತಪ್ಪಿದ್ದಲ್ಲ. ಅದೇ ಎರಡೊತ್ತಿನ ಊಟ ಅನ್ನ ಸಾರು ಮಿಕ್ಕುಳಿದರೆ ನಾಳೆಗೆ ಚಿತ್ರಾನ್ನ ಇಲ್ಲವೇ ಮೊಸರನ್ನ ಬಿಟ್ಟರೆ ನಿತ್ಯ ಪಲಾವ್ ತಪ್ಪಿದ್ದಲ್ಲ. ರಾಶಿ ರಾಶಿಯಾಗಿ ಬಿದ್ದ ಬಟ್ಟೆಗಳನ್ನು  ಸೋಪ್ ಹಚ್ಚಿ ತೊಳೆಯುವಾಗ, ನಿನ್ನೆ ಮೊನ್ನೆಯ ಪಾತ್ರೆಗಳನೆಲ್ಲಾ  ಒಟ್ಟಿಗೆ ಸೇರಿಸಿ ತಿಕ್ಕುವಾಗ ಅವ್ವನ ನೆನಪಾಗುತ್ತದೆ. ಬಡಜೀವ ಊರ ನೆನೆಯುತ್ತದೆ ನೆನಪು ಕಣ್ಣೀರ ತರಿಸುತ್ತದೆ. ಕೆಲವೊಮ್ಮೆ ಖಾಲಿ ಜೇಬು ಸಣ್ಣಗೆ ಕಣ್ಣೀರು ತರಿಸುತ್ತದೆ ಹಸಿದ ಹೊಟ್ಟೆಯ ನಿಗಿಸಲು ರಾತ್ರಿ ಮಿಕ್ಕುಳಿದ ಬಿಳಿ ಅನ್ನಕ್ಕೆ  ಕಾರದಪುಡಿ ಎಣ್ಣೆ ಕಲಸಿ ಊಟ ಮಾಡುವಾಗ  ಪ್ರೀತಿಯಿಂದ ಬಿಸಿ ರೊಟ್ಟಿಮಾಡಿ ಮೂರೊತ್ತು ಊಟ ಬಡಿಸುತ್ತಿದ್ದ  ಅವ್ವನ ನೆನಪಾಗುತ್ತದೆ ಹುಟ್ಟಿದ ಊರು ಕಣ್ಮುಂದೆ ಬರುತ್ತದೆ.             ಹುಸೇನಸಾಬ ವಣಗೇರಿ, ಧಾರವಾಡ

ಜಾಣ ಕುರುಡರ ಜಾತ್ರೆ - ಕವಿತೆ - ಸಿದ್ದುಮೂರ್ತಿ ತುಮಕೂರು

ಜಾಣ ಕುರುಡರ ಜಾತ್ರೆ ಕಾಣ ಹೊರಟೆವು ದೇವರ ಗುಡಿ ಚರ್ಚು ಮಸೀದಿ ಯಲ್ಲಿ ಹಾರ ತುರಾಯಿ ಧೂಪ ಗಂಧಗಳಲಿ ಉರಿವ ಕರ್ಪೂರದಾರತಿಯಲಿ., ದ್ವೇಷ, ಈರ್ಷೆ ಗಳ  ಸ್ವಾರ್ಥ ಕರ್ಮಗಳ ನೆಲೆಯಲ್ಲಿ ಸೋಗಿನ ಭಕ್ತಿ ಪರಾಕಾಷ್ಠೆಯಲಿ ಕಾಣ ಹೊರಟೆವು ಕಾಣದ ದೇವರ..!! ಹಸಿದ ಹೊಟ್ಟೆಯ ವೇದನೆಗೆ ಮುರುಕ ಹುಟ್ಟದು ಅಳಿದ ಬದುಕ ಅನಾಥರೊಡಲಿಗೆ ಸಲ್ಲದ ಸಾಂತ್ವನವು ಎದೆಯೊಡಲ ಕಂಗಳು ನೋಡಿ ನೋಡದೆಯೇ ನಡೆದ ಹಾದಿಯೊಳು  ಸ್ವಾರ್ಥ ಚಿಂತೆಗಳ ಲೋಭ ಸಂತೆಯೊಳಗೆ ಬೀಡು ಬಿಟ್ಟಿದೆ.. ಮಹಲಿನೊಳಗೆ ದೇವತಾರಾಧನೆ ಸೂರಿಲ್ಲದ ಬೀದಿ ಬದಿಯ  ಬದುಕುಗಳ ನಿತ್ಯ ರೋಧನೆ ಬಿಕ್ಕುವ ಬೆತ್ತಲು ಬದುಕ ಕಂಡು ಕಾಣದ ಜಾಣ ಕುರುಡರ ನಿತ್ಯ ಜಾತ್ರೆಯು  ಆತ್ಮ ಸಾಕ್ಷಿಗಳ ಕಗ್ಗೊಲೆಯು.., ತೆರೆಯದರಿವು ಕಣ್ಣುಗಳ ಮುಂದೆ ಹರಿದು ಮಣ್ಣಾಗಿ ಹೋದ ಕ್ಷೀರಾಭಿಷೇಕ ನಿಜದ ಹಸಿವು ಗಳ ನೀಗಿಸದ ನೈವೇದ್ಯ ಎತ್ತ ಸಾರ್ಥಕ ..??? ಹಸಿದೊಡಲಿಗೆ ತುತ್ತಾಗು ಹರಿವ ಕಣ್ಣೀರ ಒರೆಸೊ ಬೆರಳುಗಳಿಂದ ಉಸಿರ ಬಲಗೊಳಿಸು ಉಕ್ಕುವ ದು:ಖಗಳ ಬಳಸಿ ಅಪ್ಪಿ ಸಂತೈಸು ದೀನರಿಗೆ ದಯೆಯಾಗು.. ಅರಿವಿನ ಅನುಕಂಪ ಪಣತಿಯಂತೆ ಉರಿದು ದಾರಿದೀಪವಾಗಲು ದೈವದ ಮುಂದಿನ ಹಣತೆಯಂತೆ ನಮ್ಮೊಳಗಿನ ದೈವಾಂಶ ನಿತ್ಯ ಪ್ರಕಾಶ ಆಗ..                     ಸಿದ್ದು ಮೂರ್ತಿ, ತುಮಕೂರು

ಕಣ್ಣೀರಿನ ಕಪ್ಪ - ಕವಿತೆ - ಹುಸೇನಸಾಬ ವಣಗೇರಿ

ಕಣ್ಣೀರಿನ ಕಪ್ಪ ಪ್ರೀತಿಯೆಂಬ ಘನಘೋರವಾದ ಯುದ್ದದಲ್ಲಿ ಶಕ್ತಿ ಮೀರಿ ಹೋರಾಡಿ ಜಾತಿ ಎಂಬ ಆಯುಧದ ಮುಂದೆ ಭೀಕರವಾಗಿ ಸೋತವನು ನಾನು. ನನ್ನ ಕನಸಿನ ಪ್ರೀತಿಯ ಸಾಮ್ರಾಜ್ಯ ಕುಸಿದು ಬಿದ್ದು ಕ್ರಮೇಣ ಕಣ್ಮರೆಯಾಗಿದೆ ಆದರೆ  ನೋವು ಮಾಸಿಲ್ಲ ನೆನಪು ಸತ್ತಿಲ್ಲ. ನಕ್ಕು ನಲಿದ ಆ ದಿನಗಳನ್ನು ಆಗಾಗ ನೆನೆಯುತ್ತೇನೆ ನೆನಪಿನಲ್ಲಿ ಸ್ವಲ್ಪ ಕಾಲ ಕಳೆಯುತ್ತೇನೆ ಸಾಲದ್ದಕ್ಕೆ  ಕಣ್ಣೀರಿನ ಕಪ್ಪ ಕಟ್ಟುತ್ತೇನೆ. ಆಗೋಮ್ಮ ಈಗೋಮ್ಮೆ ಪ್ರೀತಿ ಎಂಬ ಯುದ್ದದಲ್ಲಿ ಸೋತ ನನ್ನನ್ನು ಮತ್ತೆ ಆಹ್ವಾನಿಸುತ್ತಾರೆ ಪ್ರೀತಿಸುವ ಮುನ್ಸೂಚನೆ ನೀಡುತ್ತಾರೆ. ಯಾವುದೇ ಗೊಡವೆಗೆ ಹೋಗದೆ ನನ್ನ ಪಾಡಿಗೆ ನಾನು ನಯವಾಗಿ ಹಿಂದೆ ಸರಿದು ಬಿಡುತ್ತೇನೆ ಸೋಲುತ್ತೇನೆ ಎಂಬ ಭಯಕ್ಕಲ್ಲ ಮತ್ತಾವುದೋ ಆಯುಧಕ್ಕೆ ಶರಣಾಗಿ ಕಣ್ಣೀರಿನ ಕಪ್ಪ ತೆರಬೇಕು ಎಂಬ ಆತಂಕಕ್ಕೆ.             ಹುಸೇನಸಾಬ ವಣಗೇರಿ, ಧಾರವಾಡ.

ಅಪ್ಪು.. ಇನ್ನು ಬರೀ ನೆನಪು! - ಅನಂತ ಕುಣಿಗಲ್

01. ಅಂಗಳದಾಗ ಆಟ ಕಲಿತು ಆಡುತ್ತಿದ್ದ ಬಯಲಿನಾಗ ಬೇಸರ ತರಿಸಿ, ಆಟವ ನಿಲ್ಲಿಸಿ ಉಳಿದ ಎಲ್ಲರ ಮನದಾಗ 02. ಅಪ್ಪನ ಹಾಗೆ ಹಾಡು, ಕುಣಿತ, ನಗೆಯ ಪಾಠ ಒಪ್ಪಿಗೆ ಇಲ್ಲದೆ ಅಪ್ಪುವ ಅವಕಾಶ ತಪ್ಪಿಹೋಯಿತಾ.. 03. ಅಂಬರದಾಗ ಮನೆಯ ಹುಡುಕಿ ಕೈಲಾಸ ಸೇರಿದನು ಭುವಿಯೊಳು ನೆನಪಿನ ಬುಗ್ಗೆ ಎಬ್ಬಿಸಿ ಮಾಯವಾದನು 04. ಲೋಹಿತನೆಂಬ ಅಶ್ವ ಓಡಿ ಓಡಿಯೂ ಪುನೀತನಾಗದೆ ಲೋಹಿತಾಶ್ವನೇ ಆದ ಕೊನೆಯ ಚರಣವ ಹಾಡಿ ಮುಗಿಸದೆ ಉಸಿರು ನಿಲ್ಲಿಸಿದ 05. ಪ್ರಾರ್ಥನೆಗೂ ಕರುಣೆ ಇಲ್ಲ ಪಾಪಿಗಳ ಲೋಕದಲ್ಲಿ ಪಾಪದವರಿಗಿಲ್ಲ ಜಾಗ ನಲವತ್ತಾರಕ್ಕೆ ತೆರೆಯ ಎಳೆದು ಮೃದು ಹೃದಯಗಳೊಳು ಲೀನವಾದ 06. ಪವರ್ ಪಟ್ಟಕ್ಕೆ ಸ್ಪೋಟಕ ಆಘಾತ ರಾಜನ ಮನೆಗೆ ನೋವಿನ ಸಂತಾಪ 07. ಇನ್ನೆಲ್ಲಿಯ ಭರವಸೆ ಕನಸುಗಳು ಚೂರಾಗಿ ಮನಗಳು ರೆಕ್ಕೆಯ ಮುದುಡಿವೆ ಬರೆಯಲು ಸಾವಿರ ಇದ್ದರೂ.. ಇಂಕು ಮಂಕಾಗಿ ಬರೆಯುವುದನ್ನೇ ಮರೆತಿದೆ! #ಅನಂತ ಕುಣಿಗಲ್

ಅನುಸಂಧಾನ ಕವನ ವಾಚನ ಸ್ಪರ್ಧೆಯ ಫಲಿತಾಂಶ - ಅವ್ವ ಪುಸ್ತಕಾಲಯ

ಹಿರಿಯ ಸಾಹಿತಿಗಳಾದ ರಾಜೇಂದ್ರ ಬಿ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಅವ್ವ ಪುಸ್ತಕಾಲಯ ನಡೆಸಿದ "ಅನುಸಂಧಾನ : ಕವನ ವಾಚನ ಸ್ಪರ್ಧೆ  - ಅಕ್ಟೋಬರ್/2021 ರ ವಿಜೇತರ ಪಟ್ಟಿ" ಅವ್ವ ಪುಸ್ತಕಾಲಯ ಎಲ್ಲರಿಗೂ ಅಭಿನಂದನೆ ತಿಳಿಸಿದೆ. ವಿಜೇತ ಐದು ಜನರು ತಮ್ಮ ಪೂರ್ಣ ಹೆಸರು, ಅಂಚೆ ವಿಳಾಸ ಮತ್ತು ಇತ್ತೀಚಿನ ತಮ್ಮ ಭಾವಚಿತ್ರವನ್ನು 8548948660 ನಂಬರಿಗೆ ವಾಟ್ಸಾಪ್ ಮಾಡಲು ತಿಳಿಸಿದೆ. ಮೆಚ್ಚುಗೆ ಪಡೆದ ಐದು ಜನರಿಗೆ ವಾಟ್ಸಪ್ ಗ್ರೂಪಿನ ಮೂಲಕ ಈ ಪ್ರಮಾಣ ಪತ್ರ ಹಂಚಲಾಗುತ್ತದೆ. ಇನ್ನಷ್ಟು ಸಾಹಿತ್ಯ ಸ್ಪರ್ಧೆಗಳಿಗಾಗಿ ನಮ್ಮ ತಂಡಗಳನ್ನು ಸೇರಿರಿ.. https://www.facebook.com/groups/3344469948953030/?ref=share avvapustakaalaya.blogspot.com https://youtube.com/channel/UCEvSlHKHjYmcVln8QN-MEpw

ನಮ್ಮ ರಾಜಕಾರಣಿಗಳು - ಕವಿತೆ - ಬಾಲಕೃಷ್ಣ ಎಸ್ ಬಿ

“ ನಮ್ಮ ರಾಜಕಾರಣಿಗಳು ” ಹಸಿದ ಮಕ್ಕಳೆಡೆ  ತಿನಿಸುಗಳ ಬುತ್ತಿಯ ತೆರೆದಂತೆ ವಿದ್ಯೆಯಿದ್ದೂ ಬದುಕಿನಿಂದ ಹಸಿದವರ ಪಾಲಿಗೆ ಆಶ್ವಾಸನೆಗಳ ತೋರಿ ಗೆಲುವು ಪಡೆದು ಅಸೆಂಬ್ಲಿ ಹೆಬ್ಬಾಗಿಲಲಿ ಮರೆಯಾಗುವರು.! ಓಟುಗಾಗಿ ಓಟೀ, ಐವಡ್ಸ್ ಪ್ಯಾಕೆಟ್ಗಳ  ದಾಸೋಹಿಕರನ್ನ ರಾತ್ರೋರಾತ್ರಿ ಮತ್ತಿಗಿಳಿಸಿ  ಜಯಿಸಿ ಪದವಿ ಗಳಿಸಿ  ಕಣ್ಮರೆಯಾದವರ ದರ್ಶನ  ಮತ್ತೆ ಮುಂದಿನ ಐದುವರ್ಷಕ್ಕೆ.! ಕಿತ್ತು ಗುಣಿ ಬಿದ್ದ ಕಲ್ಲು ದಾರಿ  ಡಾಂಬರ್ ರಸ್ತೆಯಾಗುತ್ತೆ  ಕಾಮಗಾರಿಗೆ ನಿಂತ ಅರ್ದ ಕಾಲಾಮು ಪೂರ್ಣ ಬ್ರಿಡ್ಜ್ ಆಗುತ್ತದೆ ಬಳಲುತ್ತಿರುವವರು ಅಚಾನಕ್ಕಾಗಿ ಪಿಳಿಪಿಳಿ ಎಂದು ಕಣ್ಣಿಗೆ ಬೀಳುತ್ತಾರೆ  ಇಷ್ಟು ಜ್ಞಾನೋದಯ ಇವರಿಗೆ ಅಧಿಕಾರಾವಧಿಯ ಕೊನೆ ವರ್ಷದಲ್ಲಿ ಎಲೆಕ್ಷನ್ ತಂದುಬಿಡುತ್ತದೆ.!  ಅಧಿಕಾರಪಕ್ಷ, ಪ್ರತಿಪಕ್ಷಗಳೆಂದು  ಬಾಹ್ಯವಾಗಿ ತೆಗಳುತ್ತಿದ್ದರೂ,  ಆಂತರಿಕವಾಗಿ ಅನ್ಯೂನ್ಯ ಬೇರುಗಳ ಹೆಣೆದುಕೊಂಡಿರುವರು, ತಮ್ಮ ತಮ್ಮ ಒಳಿತಿಗಾಗಿ ಕಾನೂನು ರೂಪಿಸಿ ಕೈ ಬೀಸಿ ಸಾಮಾನ್ಯರ ಮರಳು ಮಾಡುವರು.! ಅಕ್ಷರ ಜ್ಞಾನವಿಲ್ಲದಿದ್ದರು ಹಣವ್ಯಯದಲ್ಲಿ ಗೆಲುವು ಮೋಕ್ಷ ಸಾಧಿಸಿ  ಪರದೇಶಗಳ ಬ್ಯಾಂಕ್ ಅಕೌಂಟಿನಲ್ಲಿ ಹಣವ ಬ್ಯಾಲೆನ್ಸ್ ಮಾಡುವಷ್ಟು  ಚತುರತೆ ಉಳ್ಳವರು ನಮ್ಮ ರಾಜಕಾರಣಿಗಳು.! # ಬಾಲಕೃಷ್ಣ ಎಸ್ ಬಿ