“ನಮ್ಮ ರಾಜಕಾರಣಿಗಳು”
ಹಸಿದ ಮಕ್ಕಳೆಡೆ
ತಿನಿಸುಗಳ ಬುತ್ತಿಯ ತೆರೆದಂತೆ
ವಿದ್ಯೆಯಿದ್ದೂ ಬದುಕಿನಿಂದ ಹಸಿದವರ ಪಾಲಿಗೆ
ಆಶ್ವಾಸನೆಗಳ ತೋರಿ ಗೆಲುವು ಪಡೆದು
ಅಸೆಂಬ್ಲಿ ಹೆಬ್ಬಾಗಿಲಲಿ ಮರೆಯಾಗುವರು.!
ಓಟುಗಾಗಿ ಓಟೀ, ಐವಡ್ಸ್ ಪ್ಯಾಕೆಟ್ಗಳ
ದಾಸೋಹಿಕರನ್ನ ರಾತ್ರೋರಾತ್ರಿ ಮತ್ತಿಗಿಳಿಸಿ
ಜಯಿಸಿ ಪದವಿ ಗಳಿಸಿ
ಕಣ್ಮರೆಯಾದವರ ದರ್ಶನ
ಮತ್ತೆ ಮುಂದಿನ ಐದುವರ್ಷಕ್ಕೆ.!
ಕಿತ್ತು ಗುಣಿ ಬಿದ್ದ ಕಲ್ಲು ದಾರಿ
ಡಾಂಬರ್ ರಸ್ತೆಯಾಗುತ್ತೆ
ಕಾಮಗಾರಿಗೆ ನಿಂತ ಅರ್ದ ಕಾಲಾಮು
ಪೂರ್ಣ ಬ್ರಿಡ್ಜ್ ಆಗುತ್ತದೆ
ಬಳಲುತ್ತಿರುವವರು ಅಚಾನಕ್ಕಾಗಿ ಪಿಳಿಪಿಳಿ ಎಂದು ಕಣ್ಣಿಗೆ ಬೀಳುತ್ತಾರೆ
ಇಷ್ಟು ಜ್ಞಾನೋದಯ ಇವರಿಗೆ ಅಧಿಕಾರಾವಧಿಯ
ಕೊನೆ ವರ್ಷದಲ್ಲಿ ಎಲೆಕ್ಷನ್ ತಂದುಬಿಡುತ್ತದೆ.!
ಅಧಿಕಾರಪಕ್ಷ, ಪ್ರತಿಪಕ್ಷಗಳೆಂದು
ಬಾಹ್ಯವಾಗಿ ತೆಗಳುತ್ತಿದ್ದರೂ,
ಆಂತರಿಕವಾಗಿ ಅನ್ಯೂನ್ಯ ಬೇರುಗಳ ಹೆಣೆದುಕೊಂಡಿರುವರು,
ತಮ್ಮ ತಮ್ಮ ಒಳಿತಿಗಾಗಿ ಕಾನೂನು ರೂಪಿಸಿ
ಕೈ ಬೀಸಿ ಸಾಮಾನ್ಯರ ಮರಳು ಮಾಡುವರು.!
ಅಕ್ಷರ ಜ್ಞಾನವಿಲ್ಲದಿದ್ದರು ಹಣವ್ಯಯದಲ್ಲಿ
ಗೆಲುವು ಮೋಕ್ಷ ಸಾಧಿಸಿ
ಪರದೇಶಗಳ ಬ್ಯಾಂಕ್ ಅಕೌಂಟಿನಲ್ಲಿ
ಹಣವ ಬ್ಯಾಲೆನ್ಸ್ ಮಾಡುವಷ್ಟು
ಚತುರತೆ ಉಳ್ಳವರು ನಮ್ಮ ರಾಜಕಾರಣಿಗಳು.!
# ಬಾಲಕೃಷ್ಣ ಎಸ್ ಬಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ