ನಾನೂ ಅತ್ಯಾಚಾರಿ
ಅತ್ಯಾಚಾರಿ ಎಂದರೆ ಅನಾಮಧೇಯ
ಜಾಗದಲ್ಲಿ, ಆಕೆಯ ಎದೆಯೊಳಗಿನ ಆರ್ದ್ರತೆಗೆ ಕಿವಿ ಕೊಡದೆ, ವಗರು ವಗರಾಗಿ ಅಂಗಾತ ಮೈ ಮೇಲೆ ಬಿದ್ದು,
ಖೇಚರಕ್ಕೇರಿದ ಅವಳ ದನಿಯ ಲಕ್ಷ್ಯವಿಲ್ಲದೆ,ಉನ್ಮತ್ತ ಬೈರಾಗಿಯಂತೆ ಹೂಂಕರಿಸುತ್ತಾ,
ಬಿಳುಪೇರಿದ ತುಟಿಯ ಕಚ್ಚುತ್ತಾ,
ಮೃಗದ ಲಂಪಟತನ ಬೀರಿ,ಜಿಗುಟುತ್ತಾ ಕೆಂಪು ರಂಗನ್ನು ನೆಲಕ್ಕೆ ಕೆಡವುವವನಂತೆ ಹೌದಾ?
ನೀರಸವೆನಿಸಿದ ರಾತ್ರಿಗಳಲ್ಲಿ
ಬಿನಾಕಾ ಹಲ್ಲ ತೆರೆಯುತ್ತಾ,
ಗೆಳೆಯರೊಂದಿಗೆ ಹರಟುತ್ತಾ,
ಆಗುಂತಕಿ ಸ್ಪುರದ್ರೂಪಿ ಹೆಣ್ಣ
ನೆನೆಯುತ್ತಾ;
ಆಕೆಯ ಉಬ್ಬಿದ ಎದೆ,ಗದಗುಡವ ನಿತಂಬಗಳಿಗೆ
ರೂಪಕ ನೀಡಿ ಮನದೊಳಗೆ
ಆಕೆಯ ನಗ್ನ ದೇಹ ಸೃಷ್ಟಿಸಿ ಇಷ್ಟ ಬಂದಂತೆ ಆಕ್ರಮಿಸುತ್ತೀನಲ್ಲ?
ಹೌದು ನಾನೂ ಅತ್ಯಾಚಾರಿ
ಹೋದಲ್ಲಿ ನಿಂತಲ್ಲಿ ಹೊಕ್ಕುಳ
ಮೇಲಕ್ಕೆ ಪ್ರವಹಿಸುವ ಕಾಮವ
ಅತ್ತಿತ್ತ ಸುಳಿದಾಡುವ ಹೆಣ್ಣ ಮೇಲೆ ಹೇರಿ
ಆಕೆಯನ್ನು ಸ್ಪರ್ಶಿಸದೆ ಕಲ್ಪನೆಯಲ್ಲಿಯೇ ಹಿಂಡಿ ಹಾಕಿ
ನನ್ನ ತೃಷೆ ತೀರಿಸಿಕೊಂಡು ತೃಪ್ತ
ಭಾವದೊಂದಿಗೆ ನಗುತ್ತೀನಲ್ಲ?
ಹೌದು ನಾನೂ ಅತ್ಯಾಚಾರಿ
ಅತ್ಯಾಚಾರವೆಂದರೆ ದೈಹಿಕವಾಗಿ
ತಾಕುವುದೇನಲ್ಲ;
ವಾಂಛೆಯ ಬೀಭತ್ಸತೆಗೆ ಸಿಲುಕಿ
ಗಾವುದ ನಿಂತು ಹೆಣ್ಣೊಬ್ಬಳ
ವ್ಯಕ್ತಿತ್ವವನ್ನೇ ತಲೆ ಕೆಳಗೆ ಮಾಡುವುದಿದೆಯಲ್ಲಾ ಅದೂ ಅತ್ಯಾಚಾರವೇ;
ಮತ್ತೇ ಅವಳದೇ ಗುಂಗಲ್ಲಿ ಅವಳ ಇಡೀ ರೂಪವನ್ನು ಬ್ರಹ್ಮ ರಂಧ್ರಕ್ಕೇರಿಸಿಕೊಂಡು ಭೋಗಿಸುವುದಿದೆಯಲ್ಲಾ? ಅದೂ ಅತ್ಯಾಚಾರವೇ;
ಹೌದು ನಾನೂ ಅತ್ಯಾಚಾರಿ
ಈಗ ನಾನು ಬದಲಾಗ ಬೇಕಿದೆ
ಜಗತ್ತು ತನ್ನಿಂತಾನೆ ಬದಲಾಗುತ್ತದೆ
ದೀಕ್ಷಿತ್ ನಾಯರ್
ಯುವ ಬರಹಗಾರ, ವಾಗ್ಮಿ ಮತ್ತು ನಿರೂಪಕ
ಹೌದು ನಾನು ಅತ್ಯಾಚಾರಿಯೇ, ಎಂಬ ಮಾತಿನಿಂದಲೇ ಪ್ರತಿಯೊಬ್ಬರೂ ಹೆಣ್ಣಿನ ಮನ ನೋಯಿಸಿದವರೇ ಅದರಲ್ಲೂ ಹೆಣ್ಣನ್ನು ಮನದಲ್ಲಿಯೇ ಹಿಂಸಿಸುವ ಕಲ್ಪನೆ ಅದ್ಭುತ ಗೆಳೆಯ 👌🥰- ಆನಂದ್
ಪ್ರತ್ಯುತ್ತರಅಳಿಸಿSooper brooo keep going
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ ಸರ್ ಸಾಮಾಜಿಕ ಜೀವನದಲ್ಲಿನ ಮಾನಸಿಕ ಭಾವನೆಗಳ ತೊಳಲಾಟ ಮನಸ್ಸಿನಿಂದಲೆ ತೊರೆದಾಗ ಹತ್ಯಾಚಾರಕೆ ಕೊನೆ ಇದೆ ಎಂಬುದು ಸೊಗಸಾಗಿ ಮುಡಿಬಂದಿದೆ.ಧನ್ಯವಾದಗಳು
ಪ್ರತ್ಯುತ್ತರಅಳಿಸಿಮನದ ಭಾವನೆಗಳ ತೊಳಲಾಟವನ್ನು ನಿಗ್ರಹಿಸಿದಾಗ ಯಾವುದೇ ರೀತಿಯಲ್ಲೂ ಹೆಣ್ಣಿನ ಜೊತೆ ಆಟವಾಡುವ ಮನಸು ಮಾಡುವುದಿಲ್ಲ ಎಂಬುದಾಗಿ ಕವನವು ಪ್ರಸ್ತುತ ಪಡಿಸುತ್ತಿದೆ ತುಂಬಾ ಚೆನ್ನಾಗಿದೆ ಸರ್ 🙏 🙏
ಪ್ರತ್ಯುತ್ತರಅಳಿಸಿಉತ್ತಮ..ಕವಿತೆ. ಕವಿತೆ ಹರಿದಾಡಬೇಕಿದೆ ಎಲ್ಲರ ಎದೆಯಾಳದವರೆಗೆ ಎದೆಯಿಂದಲೆದೆಗೆ ಸತತ. 👌
ಪ್ರತ್ಯುತ್ತರಅಳಿಸಿ👌👌👌
ಪ್ರತ್ಯುತ್ತರಅಳಿಸಿTumba Adbhutha vada salugali..hindendu kelariyada bhavane yannu torisi kottidira..obba gandu jivi yagi hennina prashamse galannu tumba chennagi mudisiddira..Hats off sir..keep writing and motivating always
ಪ್ರತ್ಯುತ್ತರಅಳಿಸಿದೈಹಿಕವಾಗಿ ಹಿಂಸಿಸಿದರಷ್ಟೇ ಅತ್ಯಾಚಾರವಲ್ಲ, ವಿಕೃತ ಮನಸು & ಹೆಣ್ಣೊಬ್ಬಳ ಮನದಲಿ ಭಾವನೆ ಚಿಗುರಿಸಿ, ಚಿವುಟುವುದು ಅತ್ಯಾಚಾರವೇ. ಒಳ್ಳೆ ಪ್ರಯತ್ನ 👌👏👏
ಪ್ರತ್ಯುತ್ತರಅಳಿಸಿ👌👌ಮನ ಮುಟ್ಟುವ ಕವನ..
ಪ್ರತ್ಯುತ್ತರಅಳಿಸಿಅತ್ಯಾಚಾರ ಎಂದರೆ ಬರೀ ದೈಹಿಕವಾದದ್ದಲ್ಲ.
ಪ್ರತ್ಯುತ್ತರಅಳಿಸಿಹೆಣ್ಣನ್ನ ತನ್ನದೇ ಆದ ಭೋಗವಸ್ತುವಿನಂತೆ ಕಲ್ಪಿಸಿಕೊಳ್ಳುವುದೂ ಅತ್ಯಾಚಾರವೇ! ಸುಂದರ ಕವನ