ವಿಷಯಕ್ಕೆ ಹೋಗಿ

ನಾನೂ ಅತ್ಯಾಚಾರಿ - ಕವಿತೆ - ದೀಕ್ಷಿತ್ ನಾಯರ್


ನಾನೂ ಅತ್ಯಾಚಾರಿ

ಅತ್ಯಾಚಾರಿ ಎಂದರೆ ಅನಾಮಧೇಯ 
ಜಾಗದಲ್ಲಿ, ಆಕೆಯ ಎದೆಯೊಳಗಿನ ಆರ್ದ್ರತೆಗೆ ಕಿವಿ ಕೊಡದೆ, ವಗರು ವಗರಾಗಿ ಅಂಗಾತ ಮೈ ಮೇಲೆ ಬಿದ್ದು,
ಖೇಚರಕ್ಕೇರಿದ ಅವಳ ದನಿಯ ಲಕ್ಷ್ಯವಿಲ್ಲದೆ,ಉನ್ಮತ್ತ ಬೈರಾಗಿಯಂತೆ ಹೂಂಕರಿಸುತ್ತಾ,
ಬಿಳುಪೇರಿದ ತುಟಿಯ ಕಚ್ಚುತ್ತಾ,
ಮೃಗದ ಲಂಪಟತನ ಬೀರಿ,ಜಿಗುಟುತ್ತಾ ಕೆಂಪು ರಂಗನ್ನು ನೆಲಕ್ಕೆ ಕೆಡವುವವನಂತೆ ಹೌದಾ?

ನೀರಸವೆನಿಸಿದ ರಾತ್ರಿಗಳಲ್ಲಿ
ಬಿನಾಕಾ ಹಲ್ಲ ತೆರೆಯುತ್ತಾ,
ಗೆಳೆಯರೊಂದಿಗೆ ಹರಟುತ್ತಾ,
ಆಗುಂತಕಿ ಸ್ಪುರದ್ರೂಪಿ ಹೆಣ್ಣ
ನೆನೆಯುತ್ತಾ;
ಆಕೆಯ ಉಬ್ಬಿದ ಎದೆ,ಗದಗುಡವ ನಿತಂಬಗಳಿಗೆ
ರೂಪಕ ನೀಡಿ ಮನದೊಳಗೆ
ಆಕೆಯ ನಗ್ನ ದೇಹ ಸೃಷ್ಟಿಸಿ ಇಷ್ಟ ಬಂದಂತೆ ಆಕ್ರಮಿಸುತ್ತೀನಲ್ಲ?
ಹೌದು ನಾನೂ ಅತ್ಯಾಚಾರಿ

ಹೋದಲ್ಲಿ ನಿಂತಲ್ಲಿ ಹೊಕ್ಕುಳ
ಮೇಲಕ್ಕೆ ಪ್ರವಹಿಸುವ ಕಾಮವ
ಅತ್ತಿತ್ತ ಸುಳಿದಾಡುವ ಹೆಣ್ಣ ಮೇಲೆ ಹೇರಿ
ಆಕೆಯನ್ನು ಸ್ಪರ್ಶಿಸದೆ ಕಲ್ಪನೆಯಲ್ಲಿಯೇ ಹಿಂಡಿ ಹಾಕಿ
ನನ್ನ ತೃಷೆ ತೀರಿಸಿಕೊಂಡು ತೃಪ್ತ
ಭಾವದೊಂದಿಗೆ ನಗುತ್ತೀನಲ್ಲ?
ಹೌದು ನಾನೂ ಅತ್ಯಾಚಾರಿ

ಅತ್ಯಾಚಾರವೆಂದರೆ ದೈಹಿಕವಾಗಿ
ತಾಕುವುದೇನಲ್ಲ;
ವಾಂಛೆಯ ಬೀಭತ್ಸತೆಗೆ ಸಿಲುಕಿ
ಗಾವುದ ನಿಂತು ಹೆಣ್ಣೊಬ್ಬಳ
ವ್ಯಕ್ತಿತ್ವವನ್ನೇ ತಲೆ ಕೆಳಗೆ ಮಾಡುವುದಿದೆಯಲ್ಲಾ ಅದೂ ಅತ್ಯಾಚಾರವೇ;
ಮತ್ತೇ ಅವಳದೇ ಗುಂಗಲ್ಲಿ ಅವಳ ಇಡೀ ರೂಪವನ್ನು ಬ್ರಹ್ಮ ರಂಧ್ರಕ್ಕೇರಿಸಿಕೊಂಡು ಭೋಗಿಸುವುದಿದೆಯಲ್ಲಾ? ಅದೂ ಅತ್ಯಾಚಾರವೇ;

ಹೌದು ನಾನೂ ಅತ್ಯಾಚಾರಿ
ಈಗ ನಾನು ಬದಲಾಗ ಬೇಕಿದೆ
ಜಗತ್ತು ತನ್ನಿಂತಾನೆ ಬದಲಾಗುತ್ತದೆ


                           ದೀಕ್ಷಿತ್ ನಾಯರ್
         ಯುವ ಬರಹಗಾರ, ವಾಗ್ಮಿ ಮತ್ತು ನಿರೂಪಕ

ಕಾಮೆಂಟ್‌ಗಳು

  1. ಹೌದು ನಾನು ಅತ್ಯಾಚಾರಿಯೇ, ಎಂಬ ಮಾತಿನಿಂದಲೇ ಪ್ರತಿಯೊಬ್ಬರೂ ಹೆಣ್ಣಿನ ಮನ ನೋಯಿಸಿದವರೇ ಅದರಲ್ಲೂ ಹೆಣ್ಣನ್ನು ಮನದಲ್ಲಿಯೇ ಹಿಂಸಿಸುವ ಕಲ್ಪನೆ ಅದ್ಭುತ ಗೆಳೆಯ 👌🥰- ಆನಂದ್

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿದೆ ಸರ್ ಸಾಮಾಜಿಕ ಜೀವನದಲ್ಲಿನ ಮಾನಸಿಕ ಭಾವನೆಗಳ ತೊಳಲಾಟ ಮನಸ್ಸಿನಿಂದಲೆ ತೊರೆದಾಗ ಹತ್ಯಾಚಾರಕೆ ಕೊನೆ ಇದೆ ಎಂಬುದು ಸೊಗಸಾಗಿ ಮುಡಿಬಂದಿದೆ.ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಮನದ ಭಾವನೆಗಳ ತೊಳಲಾಟವನ್ನು ನಿಗ್ರಹಿಸಿದಾಗ ಯಾವುದೇ ರೀತಿಯಲ್ಲೂ ಹೆಣ್ಣಿನ ಜೊತೆ ಆಟವಾಡುವ ಮನಸು ಮಾಡುವುದಿಲ್ಲ ಎಂಬುದಾಗಿ ಕವನವು ಪ್ರಸ್ತುತ ಪಡಿಸುತ್ತಿದೆ ತುಂಬಾ ಚೆನ್ನಾಗಿದೆ ಸರ್ 🙏 🙏

    ಪ್ರತ್ಯುತ್ತರಅಳಿಸಿ
  4. ಉತ್ತಮ..ಕವಿತೆ. ಕವಿತೆ ಹರಿದಾಡಬೇಕಿದೆ ಎಲ್ಲರ ಎದೆಯಾಳದವರೆಗೆ ಎದೆಯಿಂದಲೆದೆಗೆ ಸತತ. 👌

    ಪ್ರತ್ಯುತ್ತರಅಳಿಸಿ
  5. Tumba Adbhutha vada salugali..hindendu kelariyada bhavane yannu torisi kottidira..obba gandu jivi yagi hennina prashamse galannu tumba chennagi mudisiddira..Hats off sir..keep writing and motivating always

    ಪ್ರತ್ಯುತ್ತರಅಳಿಸಿ
  6. ದೈಹಿಕವಾಗಿ ಹಿಂಸಿಸಿದರಷ್ಟೇ ಅತ್ಯಾಚಾರವಲ್ಲ, ವಿಕೃತ ಮನಸು & ಹೆಣ್ಣೊಬ್ಬಳ ಮನದಲಿ ಭಾವನೆ ಚಿಗುರಿಸಿ, ಚಿವುಟುವುದು ಅತ್ಯಾಚಾರವೇ. ಒಳ್ಳೆ ಪ್ರಯತ್ನ 👌👏👏

    ಪ್ರತ್ಯುತ್ತರಅಳಿಸಿ
  7. ಅತ್ಯಾಚಾರ ಎಂದರೆ ಬರೀ ದೈಹಿಕವಾದದ್ದಲ್ಲ.
    ಹೆಣ್ಣನ್ನ ತನ್ನದೇ ಆದ ಭೋಗವಸ್ತುವಿನಂತೆ ಕಲ್ಪಿಸಿಕೊಳ್ಳುವುದೂ ಅತ್ಯಾಚಾರವೇ! ಸುಂದರ ಕವನ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...